ಕುಮಟಾ: ಗೋ ಗ್ರೀನ್‌ನಲ್ಲಿ ಹವ್ಯಕ ಸೇವಾ ಪ್ರತಿಷ್ಠಾನದ ಸಮಾವೇಶ: ತಮ್ಮತನ ಉಳಿಸಿಕೊಳ್ಳಲು ಸಂಘಟನೆ ಬೇಕು- ಕಾಗೇರಿ

ಕುಮಟಾ: ನಮ್ಮ ಬದುಕಿನ ಮಧ್ಯೆ ಬರುವ ಸಮಸ್ಯೆ ನಿವಾರಣೆಗೆ  ಹಾಗೂ ತಮ್ಮತನ ಉಳಿಸಿಕೊಳ್ಳಲು ಸಂಘಟನೆ ಬೇಕು ಎಂದು ವಿಧಾಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು. ಉತ್ತರ ಕನ್ನಡ ಜಿಲ್ಲೆ ಕುಮಟಾ ತಾಲೂಕಿನ ಬಡಗಣಿಯ ಗೊ ಗ್ರೀನ್ ಮೈದಾನದಲ್ಲಿ ನಡೆದ ಹವ್ಯಕ ಸೇವಾ ಪ್ರತಿಷ್ಠಾನ ಸಮಾವೇಶದಲ್ಲಿ ಮಾತನಾಡಿದ ಅವರು, ಪ್ರತಿಯೊಬ್ಬರು ವ್ಯವಹಾರಿಕ ಜಂಜಾಟದಲ್ಲಿ ಇರುತ್ತಾರೆ. ಇದರ ಮಧ್ಯೆ … Continued

ಕುಮಟಾ: ನಿವೃತ್ತ ತಹಶೀಲ್ದಾರ ಮೇಘರಾಜ ನಾಯ್ಕ ನಿಧನ

ಕುಮಟಾ: ನಗರದ ಪೋಸ್ಟಲ್ ಕಾಲೋನಿ ಸಮೀಪದ ನಿವಾಸಿ ನಿವೃತ್ತ ತಹಸೀಲ್ದಾರ ಮೇಘರಾಜ್ ನಾಯ್ಕ್ (62) ಗುರುವಾರ ಮುಂಜಾನೆ ನಿಧನರಾದರು. ಅವರು ಕುಮಟಾದಲ್ಲಿ ತಹಸೀಲ್ದಾರ ಆಗಿದ್ದಾಗ ನೆರೆ ಹಾವಳಿ ಹಾಗೂ ಕೊರೊನಾ ಸಾಂಕ್ರಾಮಿಕ ರೋಗದಿಂದ ಉದ್ಭವಿಸಿದ ಪರಿಸ್ಥಿತಿಯ ನಿರ್ವಹಣೆಯಲ್ಲಿ ಹಗಲು ರಾತ್ರಿ ಕೆಲಸ ಮಾಡಿದ್ದರು. ಮೂಲತಃ ಕುಮಟಾ ತಾಲೂಕಿನ ಕಾಗಾಲ ಗ್ರಾಮದವರಾಗಿದ್ದ ಮೇಘರಾಜ ನಾಯ್ಕ ಅವರು ವಿಧಾನ … Continued

ಕುಮಟಾ: ಬಾಳಿಗಾ ಕಾಲೇಜಿನಲ್ಲಿ ರಾಜ್ಯಮಟ್ಟದ ಫ್ಲೋರ್ ಬಾಲ್ ಪಂದ್ಯಾವಳಿ ಉದ್ಘಾಟನೆ

ಕುಮಟಾ: ಡಾ. ಎ. ವಿ. ಬಳಿಗಾ ವಾಣಿಜ್ಯ ಮಹಾವಿದ್ಯಾಯದ ಕ್ರೀಡಾಂಗಣದಲ್ಲಿ ಭಾನುವಾರ ಪದವಿ ಪೂರ್ವ ಕಾಲೇಜುಗಳ ರಾಜ್ಯ ಮಟ್ಟದ ಫ್ಲೋರ್ ಬಾಲ್ ಪಂದ್ಯಾವಳಿಯ ಉದ್ಘಾಟನೆ ನಡೆಯಿತು. ಶಾಸಕ ದಿನಕರ್ ಶೆಟ್ಟಿ ಪಂದ್ಯಾವಳಿ ಉದ್ಘಾಟಿಸಿದರು. ದೇಶದಲ್ಲಿ ಕ್ರಿಕೆಟ್ ಜನಪ್ರಿಯತೆ ಹೆಚ್ಚಿದೆ. ಆದರೂ ಇತರ ಕ್ರೀಡೆಗೆ ಮಹತ್ವ ಬರುತ್ತಿದೆ. ಫ್ಲೋರ್ ಬಾಲ್ ಒಂದು ನೂತನ ಕ್ರೀಡೆ. ರಾಜ್ಯ ಮಟ್ಟದ … Continued

ಬಿ.ಇಡಿ. ಪರೀಕ್ಷೆಯಲ್ಲಿ ಧಾರವಾಡ ಜೆಎಸ್ಎಸ್ ವಿದ್ಯಾರ್ಥಿಗಳ ಉತ್ತಮ ಸಾಧನೆ

ಧಾರವಾಡ : ೨೦೨೧-೨೨ ನೇ ಸಾಲಿನ ಬಿ.ಇಡಿ.-೧ ನೇ ಸೆಮಿಸ್ಟರ್ ಪರೀಕ್ಷೆಯಲ್ಲಿ ಧಾರವಾಡ ವಿದ್ಯಾಗಿರಿಯ ಶ್ರೀ ಮಂಜುನಾಥೇಶ್ವರ ಶಿಕ್ಷಣ ಮಹಾವಿದ್ಯಾಲಯರ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ. ಮಂದಸ್ಮಿತ ರಾಘುನವರ (೯೧.೮೩%), ಸಂಗೀತ ಹೆಚ್. ಆರ್. (೯೧.೩೩%) ಮತ್ತು ಸಾನುಬಾರ ಹಿತ್ತಲಮನಿ (೯೧%) ಅಂಕಗಳನ್ನು ಪಡೆದು ಉತ್ತಮ ಸಾಧನೆ ಮಾಡಿದ್ದಾರೆ. ಉಳಿದೆಲ್ಲ ವಿದ್ಯಾರ್ಥಿಗಳು ಉನ್ನತ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. … Continued

ಜೆಎಸ್ಎಸ್  ಸಂಸ್ಥೆಯ ಶಾಲೆಯ ಮಕ್ಕಳು ರಾಷ್ಟ್ರಮಟ್ಟದ ಜಿಮ್ನಾಸ್ಟಿಕ್ ಸ್ಪರ್ಧೆಗೆ ಆಯ್ಕೆ

ಧಾರವಾಡ: ಜನತಾ ಶಿಕ್ಷಣ ಸಮಿತಿಯ ಶ್ರೀ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆ ಹಾಗೂ ಕನ್ನಡ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ರಾಜ್ಯ ಮಟ್ಟದ ಜಿಮ್ನಾಸ್ಟಿಕ್ಸ್ ಸ್ಪರ್ಧೆಗಳಲ್ಲಿ ಭಾಗವಹಿಸಿ ವೈಯಕ್ತಿಕ ವೀರಾಗ್ರಣಿ ಮತ್ತು ಚಿನ್ನ ಮತ್ತು ಬೆಳ್ಳಿಯ ಪದಕ ಪಡೆದು ರಾಷ್ಟ್ರಮಟ್ಟಕ್ಕೆ ಆಯ್ಕೆ ಆಗಿದ್ದಾರೆ. ಹಾಗೂ ಸಂಸ್ಥೆಗೆ ಹಾಗೂ ಶಾಲೆಗೆ ಅಪಾರ ಕೀರ್ತಿ ತಂದಿದ್ದಾರೆ. ಎಲ್ಲ ವಿದ್ಯಾರ್ಥಿಗಳ ಸಾಧನೆಯನ್ನು … Continued

ರ‍್ಯಾಪಿಡ್ ಸಂಸ್ಥೆ-ಜೆಎಸ್‌ಎಸ್ ಮಂಜುನಾಥೇಶ್ವರ ಸ್ನಾತಕ-ಸ್ನಾತಕೋತ್ತರ ಅಧ್ಯಯನ ಸಂಸ್ಥೆ ಒಡಂಬಡಿಕೆ

ಮಹಿಳಾ ಸಬಲೀಕರಣಕ್ಕಾಗಿ ಮಹಿಳೆಯರಿಗಾಗಿ ವಿವಿಧ ಕ್ಷೇತಗಳಲ್ಲಿ ಪರಸ್ಪರ ಸಹಾಯ ಮಾಡಲು ಧಾರವಾಡದ ರ‍್ಯಾಪಿಡ್ ಸಂಸ್ಥೆ, ಜೆ.ಎಸ್.ಎಸ್ ಶ್ರೀ ಮಂಜುನಾಥೇಶ್ವರ ಸ್ನಾತಕ ಮತ್ತು ಸ್ನಾತಕೋತ್ತರ ಅಧ್ಯಯನ ಸಂಸ್ಥೆಯೊಂದಿಗೆ ಒಡಂಬಡಿಕೆ ಮಾಡಿಕೊಂಡಿತು. ಈ ಸಂದರ್ಭದಲ್ಲಿ ಜನತಾ ಶಿಕ್ಷಣ ಸಮಿತಿಯ ಕಾರ್ಯದರ್ಶಿಗಳಾದ ಡಾ. ಅಜಿತ ಪ್ರಸಾದ, ಮಾಳವಿಕಾ ಕಡಕೋಳ, ಸ್ನೇಹಾ ದೇಶಪಾಂಡೆ ಮಹಾವೀರ ಉಪಾದ್ಯೆ ಉಪಸ್ಥಿತರಿದ್ದರು.

ಜೈನ ವಿದ್ಯಾರ್ಥಿಗಳಿಂದ ಧಾರವಾಡದ ಜೈನ ಮಿಲನ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ

ಧಾರವಾಡ: ಧಾರವಾಡ ಜಿಲ್ಲೆಯಲ್ಲಿ 2022-23ನೇ ಸಾಲಿನ ಪ್ರಥಮ ವರ್ಷ ಪಿಯುಸಿ/ ಐಟಿಐ/ ಡಿಪ್ಲೋಮಾ/ಬಿ.ಎ/ ಬಿ.ಕಾಂ/ ಬಿಎಸ್ಸಿ /ಬಿಬಿಎ/ಬಿಸಿಎ ಪದವಿಯಲ್ಲಿ ವ್ಯಾಸಂಗ ಮಾಡುತ್ತಿರುವ ಜೈನ ಸಮುದಾಯದ ಬಡ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಂದ ಧಾರವಾಡ ಜೈನ ಮಿಲನ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನಿಸಿದೆ. ಸಂಪರ್ಕ ಸಂಖ್ಯೆ, ಪಾಲಕರ ಉದ್ಯೋಗ ಇತ್ಯಾದಿ ವಿವರಗಳನ್ನೊಳಗೊಂಡ ವಿನಂತಿ ಅರ್ಜಿಯೊಂದಿಗೆ, ಶುಲ್ಕ ಪಾವತಿಸಿದ ರಶೀದಿ, … Continued

ಕರ್ನಾಟಕ ವಿದ್ಯಾವರ್ಧಕ ಸಂಘದಿಂದ ಡಾ ಅಜಿತ ಪ್ರಸಾದರಿಗೆ ಸನ್ಮಾನ

ಧಾರವಾಡ: ವಿದ್ಯಾಕಾಶಿ ಎಂದು ಕರೆಯಲ್ಪಡುವ ಧಾರವಾಡದ ಶೈಕ್ಷಣಿಕ ಬೆಳವಣಿಗೆಗೆ ಪ್ರೊ. ನ. ವಜ್ರಕುಮಾರ ಅವರ ಕೊಡುಗೆ ಅಪಾರ. ಅವರು ಧಾರವಾಡಕ್ಕೆ ಬರದೇ ಇದ್ದಿದ್ದರೆ ಧಾರವಾಡದ ಶೈಕ್ಷಣಿಕ ಕ್ಷೇತ್ರ ಬಡವಾಗುತ್ತಿತ್ತು ಎಂದು ಕರ್ನಾಟಕ ವಿದ್ಯಾವರ್ಧಕ ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಹೇಳಿದರು. ಕರ್ನಾಟಕ ವಿದ್ಯಾ ವರ್ಧಕ ಸಂಘದ ವತಿಯಿಂದ ಡಾ.ಅಜಿತ ಪ್ರಸಾದ ಅವರನ್ನು ಸನ್ಮಾನಿಸು ಕಾರ್ಯಕ್ರಮದಲ್ಲಿ … Continued

ಜೆಎಸ್ಎಸ್‌ನ ನೂತನ ಐಟಿಐ ಉದ್ಘಾಟನೆ : ಶೈಕ್ಷಣಿಕ ಹರಿಕಾರ ಡಾ. ನ. ವಜ್ರಕುಮಾರ ಹೆಸರು ನಾಮಕರಣ

ಧಾರವಾಡ : ಕೌಶಲ್ಯ ತರಬೇತಿಗಳಿಗೆ ಈಗ ಅಪಾರ ಬೇಡಿಕೆಯಿದೆ ನಿಷ್ಠೆ, ಪ್ರಾಮಾಣಿಕತೆಯಿಂದ ದುಡಿಯುವ ಕಾರ್ಮಿಕ ವರ್ಗದವರನ್ನು ಇಂದು ಗುರುತಿಸುವ ಅಗತ್ಯವಿದೆ ಎಂದು ಧರ್ಮಸ್ಥಳ ಧರ್ಮಾಧಿಕಾರಿ ಹಾಗೂ ರಾಜ್ಯಸಭಾ ಸದಸ್ಯ ಡಾ. ಡಿ ವೀರೇಂದ್ರ ಹೆಗ್ಗಡೆ ಹೇಳಿದರು. ಇಲ್ಲಿಯ ಮೃತ್ಯುಂಜಯ ನಗರದಲ್ಲಿ ಆರಂಭಗೊಂಡ ನೂತನ ಐ.ಟಿ.ಐ ಕಾಲೇಜು ಉದ್ಘಾಟಿಸಿ ಮಾತನಾಡಿದ ಅವರು, ನೂತನ ಐಟಿಐಗೆ ಡಾ. ವಜ್ರಕುಮಾರ … Continued

ಧಾರವಾಡ: ನಾಳೆ ಜೆಎಸ್‌ಎಸ್‌ನ ನೂತನ ಐಟಿಐ ಕಾಲೇಜ್‌ ಉದ್ಘಾಟನೆ

ಧಾರವಾಡ: ಧಾರವಾಡದ ಸವದತ್ತಿ ರಸ್ತೆಯಲ್ಲಿರುವ ಮೃತ್ಯುಂಜಯನಗರದಲ್ಲಿ ಜನತಾ ಶಿಕ್ಷಣ ಸಮಿತಿ ಅಡಿಯಲ್ಲಿ ನೂತನವಾಗಿ ನಿರ್ಮಾಣವಾಗಿರುವ ಐಟಿಐ ಕಾಲೇಜಿನ ಉದ್ಘಾಟನೆ ಹಾಗೂ ನಾಮಕರಣ ಸಮಾರಂಭ ಅಕ್ಟೋಬರ್‌ 19ರಂದು ಬೆಳಿಗ್ಗೆ 10 ಗಂಟೆಗೆ ನೂತನ ಐಟಿಐ ಆವರಣದಲ್ಲಿ ಆಯೋಜಿಸಲಾಗಿದೆ. ಧಾರವಾಡದ ಮುರುಘಾಮಠದ ಶ್ರೀ ಮಲ್ಲಿಕಾರ್ಜುನ ಮಹಾಸ್ವಾಮಿಗಳು ಸಮಾರಂಭದ ಸಾನಿಧ್ಯ ವಹಿಸಲಿದ್ದಾರೆ. ರಾಜ್ಯಸಭಾ ಸದಸ್ಯ ಹಾಗೂ ಧರ್ಮಸ್ಥಳ ಧರ್ಮಾಧಿಕಾರಿ ಡಾ.ವೀರೇಂದ್ರ … Continued