ಧಾರವಾಡ:ಜೆಎಸ್‌ಎಸ್ ಹುಕ್ಕೇರಿಕರ್ ಕಾಲೇಜಿನ ಐವರು ವಿದ್ಯಾರ್ಥಿಗಳು ಜಿಲ್ಲೆಗೆ ಟಾಪರ್

ಧಾರವಾಡ: ಧಾರವಾಡದ ಜೆಎಸ್ಎಸ್‌ ಸಂಸ್ಥೆಯ ಆರ್.ಎಸ್.ಹುಕ್ಕೇರಿಕರ ಪದವಿಪೂರ್ವ ಮಹಾವಿದ್ಯಾಲಯವು ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿಒಟ್ಟು ಹಾಜರಾದ ೭೭೫ ವಿದ್ಯಾರ್ಥಿಗಳಲ್ಲಿ ೬೨೬ ವಿದ್ಯಾರ್ಥಿಗಳು ಉತ್ತೀರ್ಣರಾಗಿ ಒಟ್ಟು ೮೦.೭೭% ಫಲಿತಾಂಶ ಪಡೆದಿದೆ.ಜಿಲ್ಲೆಯ ಟಾಪ್ ೧೦ ರಲ್ಲಿ ಐದು ವಿದ್ಯಾರ್ಥಿಗಳು ಈ ಕಾಲೇಜಿನವರಾಗಿದ್ದಾರೆ. ವಾಣಿಜ್ಯ ವಿಭಾಗ ೧. ಅನನ್ಯ ಭಟ್(೯೮.೩೩) ಜಿಲ್ಲೆಗೆ ೨ನೇ ಸ್ಥಾನ, ೨ ಸಾಕ್ಷಿ ಕುಲಕರ್ಣಿ ಜಿಲ್ಲೆಗೆ … Continued

ಕುಮಟಾ : ದ್ವಿತೀಯ ಪಿಯು ವಿಜ್ಞಾನ, ಸರಸ್ವತಿ ಪಿಯು ಕಾಲೇಜು ರಾಜ್ಯಮಟ್ಟದ ರ‍್ಯಾಂಕ್‌ನೊಂದಿಗೆ ನೂರಕ್ಕೆ ನೂರು ಫಲಿತಾಂಶ

ಕುಮಟಾ: ಕುಮಟಾದ ಕೊಂಕಣ ಎಜ್ಯುಕೇಶ್ಯನ್ ಟ್ರಸ್ಟಿನ ವಿಧಾತ್ರಿ ಅಕಾಡೆಮಿ ಸಂಯೋಗದ ಬಿ.ಕೆ. ಭಂಡಾರ‍್ಕರ್ ಸರಸ್ವತಿ ಪದವಿ ಪೂರ್ವ ಕಾಲೇಜಿನ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳು ದ್ವಿತೀಯ ಪಿಯು ಪರೀಕ್ಷೆಯಲ್ಲಿ ನೂರಕ್ಕೆ ನೂರು ಸಾಧನೆ ಮಾಡಿದೆ. ಈ ಬಾರಿಯು ರಾಜ್ಯ ಮಟ್ಟದ ರ‍್ಯಾಂಕ್‌ನೊಂದಿಗೆ ಶೇಕಡಾ ೧೦೦ಕ್ಕೆ ನೂರು ಫಲಿತಾಂಶ ದಾಖಲಿಸಿದೆ. ಕಾಲೇಜಿನ ವಿದ್ಯಾರ್ಥಿಗಳಾದ ರುಚಿತಾ ಮಂಜುನಾಥ ನಾಯಕ ೯೮.೩೩% … Continued

ದ್ವಿತೀಯ ಪಿಯು ಫಲಿತಾಂಶ: ಧಾರವಾಡ ಜೆಎಸ್‌ಎಸ್‌ ಎಸ್‌ಎಂಪಿಯು ಕಾಲೇಜಿನ ವಿದ್ಯಾರ್ಥಿಗಳ ಉತ್ತಮ ಸಾಧನೆ

ಧಾರವಾಡ: ವಿದ್ಯಾಗಿರಿಯ ಜೆಎಸ್ಎಸ್ ಶ್ರೀ ಮಂಜುನಾಥೇಶ್ವರ ಸ್ವತಂತ್ರ ವಿಜ್ಞಾನ ಮತ್ತು ವಾಣಿಜ್ಯ ಪಿಯು ಕಾಲೇಜಿನ ವಿದ್ಯಾರ್ಥಿಗಳು ವಿಜ್ಞಾನ ಹಾಗೂ ವಾಣಿಜ್ಯ ವಿಭಾಗದಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ. ವಿಜ್ಞಾನ ವಿಭಾಗದಲ್ಲಿ ವಿದ್ಯಾರ್ಥಿಗಳಾದ ರೋಹಿಣಿ ಬಿದ್ನೂರಮಠ 600/570 (95%), ತೇಜಶ್ವಿನಿ ನಿಂಗೊಲ್ಲಿ 600/570 (95%) ಅಂಕಗಳನ್ನು ಪಡೆದು ಕಾಲೇಜಿಗೆ ಪ್ರಥಮರಾಗಿದ್ದಾರೆ. ನಂತರದಲ್ಲಿ ಕ್ರಮವಾಗಿ ನಮನ ಭಟ್ 600/558 (93%), … Continued

ಕುಮಟಾ:  ದ್ವಿತೀಯ ಪಿಯು ಫಲಿತಾಂಶ, ಬಾಳಿಗಾ ವಾಣಿಜ್ಯ ಕಾಲೇಜಿಗೆ ಮೇಘಾ ಹೆಗಡೆ ಪ್ರಥಮ

ಕುಮಟಾ: ಉತ್ತರ ಕನ್ನಡ ಜಿಲ್ಲೆಯ ಕುಮಟಾದ ಬಾಳಿಗಾ ವಾಣಿಜ್ಯ ಕಾಲೇಜಿನ ಪಿಯುಸಿ ದ್ವಿತೀಯ ವರ್ಷದ ವಿದ್ಯಾರ್ಥಿಗಳ ಫಲಿತಾಂಶ ಬಂದಿದ್ದು ಪರೀಕ್ಷೆ ಎದುರಿಸಿದ ಒಟ್ಟೂ ೧೧೦ ವಿದ್ಯಾರ್ಥಿಗಳಲ್ಲಿ ೨೬ ವಿದ್ಯಾರ್ಥಿಗಳು ಡಿಸ್ಟಿಂಕ್ಷನ್‌ನಲ್ಲಿ ಉತ್ತೀರ್ಣರಾಗಿದ್ದಾರೆ. ಮೇಘಾ ದತ್ತಾತ್ರಯ ಹೆಗಡೆ ಶೇ. ೯೬.೮೩ (೫೮೧/೬೦೦) ಅಂಕ ಗಳಿಸಿ ಕಾಲೇಜಿಗೆ ಪ್ರಥಮ ಸ್ಥಾನ ಪಡೆದಿದ್ದಾರೆ. ರವಿ ಗೋವಿಂದರಾಯ ಪ್ರಭು ಶೇ. ೯೬.೬೬ … Continued

ಹುಬ್ಬಳ್ಳಿ: ಇಂದು ಯೋಗ ಕಹಳೆ ಕಾರ್ಯಕ್ರಮ

ಹುಬ್ಬಳ್ಳಿ: ಉಡುಪಿ ಜಿಲ್ಲೆಯ ಸಾಲಿಗ್ರಾಮದ ಡಿವೈನ ಪಾರ್ಕ್‌ನ ವಿವೇಕ ಜಾಗೃತ ಬಳಗಗಳ ಆಶ್ರಯದಲ್ಲಿ ಸರ್ವೋತೊಮುಖ ಪ್ರಗತಿಗೆ ಪೂರಕವಾದ ‘ಯೋಗ ಕಹಳೆ’ ಕಾರ್ಯಕ್ರಮ ಭಾನುವಾರ ಮೇ ೮ರಂದು ಬೆಳಿಗ್ಗೆ ೧೦:೩೦ ರಿಂದ ವಿದ್ಯಾನಗರದ ಕೆಎಲ್‌ಇ ತಾಂತ್ರಿಕ ವಿಶ್ವವಿದ್ಯಾಲಯದ ಬಯೋಟೆಕ್ನಾಲಜಿ ಸಭಾ ಭವನದಲ್ಲಿ ನಡೆಯಲಿದೆ. ಯೋಗ ಕಹಳೆ ಕಾರ್ಯಕ್ರಮದಲ್ಲಿ ಕೋಟದ ಮೂಡುಗಿಳಿಯಾರು ಯೋಗಬನ ವೈದ್ಯಕೀಯ ನಿರ್ದೇಶಕರು ಮತ್ತು  ಸರ್ವಕ್ಷೇಮ … Continued

ಕುಮಟಾ; ಕುಡಿಯುವ ನೀರಿನ ಯೋಜನೆಗೆ 120 ಕೋಟಿ ರೂ ಮಂಜೂರು: .ಶಾಸಕ  ದಿನಕರ ಶೆಟ್ಟಿ

ಕುಮಟಾ; ತಾಲೂಕಿನ ಹೆಗಡೆ ಜಿಲ್ಲಾ ಪಂಚಾಯತವ್ಯಾಪ್ತಿಯ ೯ ಗ್ರಾ.ಪಂ ಸಂಬಂಧಿಸಿದಂತೆ ಪ್ರತ್ಯೇಕ ಕುಡಿಯುವ ನೀರಿನ ಯೋಜನೆಗೆ 120 ಕೋಟಿ ಮಂಜೂರಾಗಿದ್ದು ಸದ್ಯದಲ್ಲೇ ಟೆಂಡರ್ ಕರೆಯಲಾಗುತ್ತಿದೆ ಎಂದು ಶಾಸಕ ದಿನಕರ ಶೆಟ್ಟಿ ತಿಳಿಸಿದರು. ಅವರು ಹಾಳಾಗಿರುವ ಬರ್ಸಗುಣಿ ರಸ್ತೆಯನ್ನು ಕಾಂಕ್ರೀಟ್‌ ರಸ್ತೆ ನಿರ್ಮಾಣಕ್ಕಾಗಿ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಹಾಳಾಗಿರುವ ರಸ್ತೆಯ ೧೨೦ ಮೀಟರ್‌ ಉದ್ದದ … Continued

ಕುಮಟಾ: ಜಿಪಂ ಸದಸ್ಯ, ವಕೀಲರ ಸಂಘದ ಅಧ್ಯಕ್ಷರು ಪ್ರಯಾಣಿಸುತ್ತಿದ್ದ ಕಾರು ಅಪಘಾತ, ಆಸ್ಪತ್ರೆಗೆ ದಾಖಲು, ಪ್ರಾಣಾಪಾಯದಿಂದ ಪಾರು

ಕುಮಟಾ; ತಾಲೂಕಿನ ಬಾಡದವರಾದ ಜಿಲ್ಲಾಪ ಪಂಚಾಯತ ಸದಸ್ಯ ರತ್ನಾಕರ ನಾಯ್ಕ ಮತ್ತು ಕುಮಟಾದ ವಕೀಲರ ಸಂಘದ ಅಧ್ಯಕ್ಷರಾದ ಆರ್.ಜಿ.ನಾಯ್ಕ ಅವರು ಪ್ರಯಾಣಿಸುತ್ತಿರುವ ಕಾರು ಅಪಘಾತಕ್ಕೀಡಾಗಿದ್ದು, ಇಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ. ಭಾನುವಾರ ಸಂಜೆ ಕುಂದಾಪುರದ ಸಮೀಪದ ನಾವುಂದದಲ್ಲಿ ಕಾರು ಡಿವೈಡರಿಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಇಬ್ಬರನ್ನು ತಕ್ಷಣ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದ್ದು, ವಕೀಲರಾದ … Continued

ಕುಮಟಾ ಡಾ.ಬಾಳಿಗಾ ವಾಣಿಜ್ಯ ಕಾಲೇಜ್ ಮುಖ್ಯ ಗ್ರಂಥಪಾಲಕ‌ ಡಾ. ಶಿವಾನಂದ ಬುಳ್ಳಾಗೆ ಸೋಶಿಯಲ್ ಸೈಂಟಿಸ್ಟ್ ಪ್ರಶಸ್ತಿ

ಕುಮಟಾ : ಉತ್ತರ ಕನ್ನಡ ಜಿಲ್ಲೆಯ ಕುಮಟಾದ ಡಾ. ಎ.ವಿ.ಬಾಳಿಗಾ ವಾಣಿಜ್ಯ ಮಹಾವಿದ್ಯಾಲಯದ ಮುಖ್ಯ ಗ್ರಂಥಪಾಲಕರಾದ ಡಾ. ಶಿವಾನಂದ ಬುಳ್ಳಾ ಅವರ ಪಿ.ಎಚ್.ಡಿ ಪ್ರಬಂಧ ಹಾಗೂ ಗ್ರಂಥಾಲಯ ವಿಜ್ಞಾನಕ್ಕೆ ನೀಡಿದ ಅಮೂಲ್ಯ ವೈಜ್ಞಾನಿಕ ಕೊಡುಗೆಗಾಗಿ, ಅತ್ಯಂತ ಪ್ರತಿಷ್ಠಿತ ಪ್ರಶಸ್ತಿಗಳಲ್ಲಿ ಒಂದಾದ “ಗ್ರಾಬ್ಸ್ ಬೆಸ್ಟ್ ಸೋಶಿಯಲ್ ಸೈಂಟಿಸ್ಟ್ ಪ್ರಶಸ್ತಿ” ನೀಡಲಾಗಿದೆ. ಚೆನ್ನೈನ ಆನಂದಭವನ ಸಭಾಂಗಣದಲ್ಲಿ ಅಸೋಸಿಯೇಶನ್ ಆಫ್ … Continued

ಮಲ್ಲಾಪುರದಲ್ಲಿ ಏಪ್ರಿಲ್‌ 30ರಂದು ಭಾವಗೀತೆ-ಭಕ್ತಿಗೀತೆಗಳ ಪ್ರಸ್ತುತಿ ಭಾವಧಾರಾ ಕಾರ್ಯಕ್ರಮ

ಕುಮಟಾ: ಕೂಜಳ್ಳಿಯ ಷಡಕ್ಷರಿ ಗವಾಯಿಗಳ ಅಕಾಡೆಮಿ ವತಿಯಿಂದ ಭಾವಗೀತೆ ಹಾಗೂ ಭಕ್ತಿಗೀತೆಗಳ ಕಾರ್ಯಕ್ರಮ ಭಾವಧಾರಾ ಏಪ್ರಿಲ್‌  30ರಂದು ಕೂಜಳ್ಳಿ ಸಮೀಪದ ಮಲ್ಲಾಪುರದ ಗುರುಮಠದಲ್ಲಿ ನಡೆಯಲಿದೆ. ಏಪ್ರಿಲ್‌ 30ರಂದು ಮಧ್ಯಾಹ್ನ 3ರಿಂದ ರಾತ್ರಿ 8ರ ವರೆಗೆ ಕಾರ್ಯಕ್ರಮ ನಡೆಯಲಿದ್ದು ಅನೇಕ ಹಿರಿಯ-ಕಿರಿಯ ಕಲಾವಿದರು ಪಾಲ್ಗೊಳ್ಳಲಿದ್ದಾರೆ. ಶ್ರೀಲತಾ ಗುರುರಾಜ ಆಡುಕಳ, ಗಣೇಶ ಭಟ್‌ ಕಡತೋಕ, ಅಶ್ವಿನಿ ಕುಮಟಾ, ಧನ್ಯಾ … Continued

ಏಪ್ರಿಲ್‌ ೨೫ರಂದು ಜಿಲ್ಲಾಮಟ್ಟದ ಹೆಬ್ಬಾರ ಟ್ರೋಫಿ ಕಬಡ್ಡಿ ಪಂದ್ಯಾವಳಿ

ಯಲ್ಲಾಪುರ: ಉತ್ತರ ಕನ್ನಡ ಜಿಲ್ಲೆಯ ತಾಲೂಕಿನ ನಂದೊಳ್ಳಿಯ ಶ್ರೀ ಸಿದ್ಧಿವಿನಾಯಕ ಗೆಳೆಯರ ಬಳಗ (ಕಬಡ್ಡಿ) ಸಮಿತಿಯ ಆಶ್ರಯದಲ್ಲಿ ಏಪ್ರಿಲ್‌ ೨೫ ರಂದು ನಂದೊಳ್ಳಿಯ ಪ್ರೌಢಶಾಲಾ ಮೈದಾನದಲ್ಲಿ ಜಿಲ್ಲಾ ಮಟ್ಟದ ಮ್ಯಾಟ್ ಹೆಬ್ಬಾರ ಟ್ರೋಫಿ ಕಬಡ್ಡಿ ಪಂದ್ಯಾವಳಿ ನಡೆಯಲಿದೆ. ಪ್ರಥಮ ಬಹುಮಾನ ೨೫೦೦೧, ದ್ವಿತೀಯ ಬಹುಮಾನ ೧೫೦೦೧, ತೃತೀಯ ೧೦೦೦೧, ಚತುರ್ಥ ಬಹುಮಾನ ೭೦೦೧ ರೂ.ಗಳ ಬಹುಮಾನವಿದೆ. … Continued