ಪ್ರಜಾರಾಜ್ಯೋತ್ಸವ ಕಪ್ ಕ್ರಿಕೆಟ್ ಪಂದ್ಯಾವಳಿ ಆರಂಭ

ಅಂಕೋಲಾ : ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ಆಯೋಜಿಸಿರುವ ಅಂಕೋಲಾ ಪ್ರಜಾರಾಜ್ಯೋತ್ಸವ ಕಪ್ ಕ್ರಿಕೆಟ್ ಪಂದ್ಯಾವಳಿ ಸೋಮವಾರ ಜೈಹಿಂದ ಕ್ರೀಡಾಂಗೆಣದಲ್ಲಿ ಆರಂಭವಾಯಿತು. ಒಟ್ಟಾರೆ 16 ತಂಡಗಳು ಈ ಪಂದ್ಯಾವಳಿಯಲ್ಲಿ ಆಡುತ್ತಿದ್ದಾರೆ. ಪುರಸಭೆಯ ಮುಖ್ಯಾಧಿಕಾರಿ ಶೃತಿ ಗಾಯಕವಾಡ್ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿ, ವಿವಿಧ ಇಲಾಖೆಗಳ ಮಧ್ಯೆ ಸಮನ್ವಯ ಸಾಧಿಸಲು ಇಂತಹ ಪಂದ್ಯಾವಳಿ ಅಗತ್ಯ ಎಂದರು. ಪತ್ರಕರ್ತ ವಿಠ್ಠಲದಾಸ … Continued

ಚಾಲಕರು ಮಾಡುತ್ತಿರುವ ಜನಸಾಮಾನ್ಯರ ಸೇವೆಗೆ ಬೆಲೆಕಟ್ಟಲಾಗದು: ಡಾ.ಅಜಿತ ಪ್ರಸಾದ

ಧಾರವಾಡ: ಜನಸಾಮಾನ್ಯರ ಮತ್ತು ಪ್ರತಿಯೊಬ್ಬರ ಜೀವನದ ರಥ ಎಂದೇ ಕರೆಯಲ್ಪಡುವ ಚಾಲಕರ ಮಹತ್ವ ಅರಿಯಬೇಕು. ಹಾಗೆಯೇ ಈ ಚಾಲಕರು ಮಾಡುತ್ತಿರುವ ಜನಸಾಮಾನ್ಯರ ಸೇವೆಗೆ ಬೆಲೆಕಟ್ಟಲಾಗದು .ಅದೇರೀತಿ ಪ್ರಯೋಗಾಲಯದಲ್ಲಿ ಕಾರ್ಯಮಾಡುವವರ ಸೇವೆಯು ಅಷ್ಟೇ ಮಹತ್ವದ್ದು ಎಂದು ಜೆ.ಎಸ್.ಎಸ್ ನ ವಿತ್ತಾಧಿಕಾರಿಗಳಾದ ಡಾ. ಅಜಿತ ಪ್ರಸಾದ ಹೇಳಿದರು. ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ೧೦೦ ವರ್ಷಗಳನ್ನು ಪೂರೈಸಿದ ಸಂದರ್ಭದಲ್ಲಿ ಭಾರತೀಯ … Continued

ಮುರ್ಡೇಶ್ವರದ ಸಾರ್ವಜನಿಕ ಮಹಾರಥೋತ್ಸವ ಇಲ್ಲ: ಒಳಾಂಗಣ ಪೂಜೆಗಷ್ಟೇ ಸೀಮಿತ

ಭಟ್ಕಳ: ರಾಜ್ಯದಲ್ಲಿ ಕೋವಿಡ್ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜನೆವರಿ 20 ರಂದು ನಡೆಯಲಿರುವ ಮುರ್ಡೇಶ್ವರದ ಮಹಾರಥೋತ್ಸವ ಕಾರ್ಯಕ್ರಮಕ್ಕೆ ಸರ್ಕಾರದ ಕೋವಿಡ್ ನಿಯಮಗಳ ಪ್ರಕಾರ ಅನುಮತಿ ನೀಡಿಲ್ಲ.ಜಾತ್ರೆ ಕೇವಲ ದೇವಾಲಯದ ಒಳಾಂಗಣದ ಪೂಜೆ ಪುರಸ್ಕಾರಗಳಿಗೆ ಮಾತ್ರ ಸೀಮಿತವಾಗಿರಲಿದೆ ಟ್ಕಳ ಸಹಾಯಕ ಆಯುಕ್ತೆ ಮಮತಾ ದೇವಿ ತಿಳಿಸಿದ್ದಾರೆ. ಹೀಗಾಗಿ ಸಾರ್ವಜನಿಕರು ಮತ್ತು ಭಕ್ತಾರು ಕೋವಿಡ್ ಮಾರ್ಗಸೂಚಿಗಳ ಉಲ್ಲಂಘನೆ ಆಗದಂತೆ … Continued

ಧಾರವಾಡ: ಜೆಎಸ್ಎಸ್ ಕನ್ನಡ ಶಾಲೆಯಲ್ಲಿ ವಿದ್ಯಾರ್ಥಿಗಳಿಂದ ಕರಕುಶಲ ವಸ್ತುಗಳ ಪ್ರದರ್ಶನ

ಧಾರವಾಡ: ೨೦೨೨ನೇ ಹೊಸವರ್ಷದ ಪ್ರಯುಕ್ತ ಧಾರವಾಡದ ವಿದ್ಯಾಗಿರಿಯ ಜೆ.ಎಸ್.ಎಸ್ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳಿಂದ ಕರಕುಶಲ (ಕ್ರಾಫ್ಟ್‌) ವಸ್ತುಗಳ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು. ಮಕ್ಕಳು ವಿವಿಧ ವಸ್ತುಗಳ ಮಾದರಿಗಳನ್ನು ಕಡಿಮೆ ಖರ್ಚಿನಲ್ಲಿ ಮಾಡಿ ಪ್ರದರ್ಶಿಸಿದರು. ಇದು ಮಕ್ಕಳ ಪ್ರತಿಭೆ ಬಿಂಬಿಸುವ ಪ್ರದರ್ಶನವಾಗಿತ್ತು. ಈ ಕಾರ್ಯಕ್ರಮವನ್ನು ಜೆ.ಎಸ್.ಎಸ್ ಸಂಸ್ಥೆಯ ಐ.ಟಿ.ಐ ಕಾಲೇಜಿನ ಪ್ರಾಚಾರ್ಯರಾದ ಮಹಾವೀರ ಉಪಾಧ್ಯೆಯವರು ಉದ್ಘಾಟಿಸಿದರು. … Continued

ಕುಮಟಾ: ನಾಗೇಶ ಭಟ್ಟರ ಮುಕ್ತಾಯ ಕಥಾಸಂಕಲನ ಲೋಕಾರ್ಪಣೆ

ಕುಮಟಾ: ಭಾರತೀಯ ದೂರ ಸಂಚಾರ ನಿಗಮ(ಬಿಎಸ್ಎನ್ಎಲ್)ದ ನಿವೃತ್ತ ಉದ್ಯೋಗಿಗಳಾದ ನಾಗೇಶ ಭಟ್ಟ ಅವರು ಬರೆದ ‘ಮುಕ್ತಾಯ’ ಕಥಾಸಂಕಲನ ಲೋಕಾರ್ಪಣೆಗೊಂಡಿತು. ಇದು ಹತ್ತು ಚಿಕ್ಕ ಕಥೆಗಳ ಸಂಕಲನವಾಗಿದೆ. ಖ್ಯಾತ ಸಾಹಿತಿ ಶ್ರೀಧರ ಬಳಿಗಾರ ಅವರು ಪುಸ್ತಕವನ್ನು ಲೋಕಾರ್ಪಣೆಗೊಳಿಸಿದರು. ಹೊನ್ನಾವರದ ನಾಗರಿಕ ಪತ್ರಿಕೆಯ ಸಂಪಾದಕ ಹಾಗೂ ಸರಸ್ವತಿ ಪ್ರಕಾಶನದ ಪ್ರಕಾಶಕ ಕೃಷ್ಣಮೂರ್ತಿ ಹೆಬ್ಬಾರರು ಅಧ್ಯಕ್ಷತೆ ವಹಿಸಿದ್ದರು. ಸಾಹಿತಿ ಗಜಾನನ … Continued

ಕೌಶಲ್ಯಭರಿತ ತರಬೇತಿ ಇಂದಿನ ಅಗತ್ಯ:ಡಾ. ಅಜಿತ ಪ್ರಸಾದ

ಧಾರವಾಡ: ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಒಳ್ಳೆಯ ಉದ್ಯೋಗ ಅಥವಾ ಸ್ವ ಉದ್ಯೋಗ ಪ್ರಾರಂಭಿಸಬೇಕಾದರೆ ಕೌಶಲ್ಯಭರಿತ ತರಬೇತಿ ಅತಿ ಅವಶ್ಯವಾಗಿದೆ. ಎಲ್ಲ ರಂಗಗಳಲ್ಲೂ ವಿದ್ಯಾರ್ಥಿಗಳಿಗೆ ವಿಫುಲ ಅವಕಾಶವಿದ್ದು, ತಂತ್ರಜ್ಞಾನ, ಮಾರುಕಟ್ಟೆ ಜ್ಞಾನ, ಸಾಮಾನ್ಯ ಜ್ಞಾನ ಮುಂತಾದವುಗಳ ಬಗ್ಗೆ ಮಾಹಿತಿ ಇದ್ದವರು ಮಾತ್ರ ಉನ್ನತ ಹುದ್ದೆ ಅಲಂಕರಿಸಲು ಸಾಧ್ಯ ಎಂದು ಪ್ರಾಚಾರ್ಯರಾದ ಡಾ. ಅಜಿತ್ ಪ್ರಸಾದ ಹೇಳಿದರು. ಜೆ.ಎಸ್.ಎಸ್ … Continued

ಕೂಜಳ್ಳಿಯಲ್ಲಿ ನಡೆದ ಪಂ.ಷಡಕ್ಷರಿ ಗವಾಯಿಗಳ ಪುಣ್ಯಸ್ಮರಣೆ ಕಾರ್ಯಕ್ರಮ

ಕುಮಟಾ: ಸಂಗೀತ ಕೇವಲ ಮನಸ್ಸಿಗೆ ನೆಮ್ಮದಿಯನ್ನಷ್ಟೇ ನೀಡುವುದಿಲ್ಲ, ಜೊತೆಗೆ ಮಹಾದಾನಂದವನ್ನೂ ನೀಡುತ್ತದೆ ಎಂದು ಎಂಟಿಎನ್ಎಲ್ ನಿವೃತ್ತ ಜಿಡಿಎಂ ರಮೇಶ ಎಸ್. ಹೆಗಡೆ ಹೇಳಿದರು. ಪಂ.ಷಡಕ್ಷರಿ ಗವಾಯಿ ಅಕಾಡೆಮಿ ವತಿಯಿಂದ ಕುಮಟಾ ತಾಲೂಕಿನ ಕೂಜಳ್ಳಿ ಕುಳಿಹಕ್ಕಲ ಶ್ರೀ ಶಾಂತಿಕಾ ಪರಮೇಶ್ವರಿ ದೇವಸ್ಥಾನದ ಸಭಾಭವನದಲ್ಲಿ ನಡೆದ ಪಂ. ಷಡಕ್ಷರಿ ಗವಾಯಿಗಳ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಸಂಗೀತ ಆಸ್ವಾದನೆಯೂ ಒಂದು … Continued

ಜಿಲ್ಲಾ ಮಟ್ಟದ ದೇಶಭಕ್ತಿ -ರಾಷ್ಟ್ರ ನಿರ್ಮಾಣದ ಘೋಷಣೆ ಸ್ಪರ್ಧೆಯಲ್ಲಿ ಪ್ರಥಮ

ಧಾರವಾಡ: ಇಲ್ಲಿನ ವಿದ್ಯಾಗಿರಿಯ ಜೆ.ಎಸ್.ಎಸ್ ಶ್ರೀ ಮಂಜುನಾಥೇಸ್ವರ ಸ್ನಾತಕ ಮತ್ತು ಸ್ನಾತಕೋತ್ತರ ಅಧ್ಯಯನ ಸಂಸ್ಥೆಯ ಎಂ.ಎ ಇಂಗ್ಲೀಷ್ ೩ನೇ ಸೆಮಿಸ್ಟರ್ ನಲ್ಲಿ ಓದುತ್ತಿರುವ ವಿದ್ಯಾರ್ಥಿನಿ ಗ್ಲೋರಿಯಾ ಡಿಸೋಜಾ ಭಾರತ ಸರ್ಕಾರದ ನೆಹರು ಯುವ ಕೇಂದ್ರವು ಆಯೋಜಿಸಿದ್ದ ಜಿಲ್ಲಾ ಮಟ್ಟದ ದೇಶಭಕ್ತಿ ಮತ್ತು ರಾಷ್ಟ್ರ ನಿರ್ಮಾಣದ ಘೋಷಣೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ. ಅವರನ್ನು ಜನತಾ ಶಿಕ್ಷಣ … Continued

ರಣವ್ಯೂಹಗಳ ನಿಪುಣ ಜನರಲ್‌ ಬಿಪಿನ್‌ ರಾವತ್‌ ನಿಧನಕ್ಕೆ ಧಾರವಾಡ ಜೆಎಸ್ಎಸ್‌ನಿಂದ ಶ್ರದ್ಧಾಂಜಲಿ

ಧಾರವಾಡ: ಭಾರತದ ಸೇನಾ ಇತಿಹಾಸದಲ್ಲಿಯೇ ಕಂಡು ಕೇಳರಿಯದ ಘನಘೋರ ದುರಂತ ಬುಧವಾರ ಸಂಭವಿಸಿದೆ. ಹೆಲಿಕಾಪ್ಟರ್ ದುರಂತದಲ್ಲಿ ಭಾರತೀಯ ಸೇನಾ ಪಡೆಗಳ ಮುಖ್ಯಸ್ಥ (ಸಿಡಿಎಸ್) ಬಿಪಿನ್ ರಾವತ್‌ ಅವರನ್ನು ದೇಶ ಕಳೆದುಕೊಂಡಿದೆ ಎಂದು ಧಾರವಾಡದ ಜೆ.ಎಸ್.ಎಸ್ ಸಮೂಹ ಶಿಕ್ಷಣ ಸಂಸ್ಥೆಗಳ ವಿತ್ತಾಧಿಕಾರಿ ಡಾ. ಅಜಿತ ಪ್ರಸಾದ ಹೇಳಿದರು. ಧಾರವಾಡದ ಜೆ.ಎಸ್.ಎಸ್ ಸಮೂಹ ಶಿಕ್ಷಣ ಸಂಸ್ಥೆಗಳ ಶಿಕ್ಷಣ ವತಿಯಿಂದ … Continued

ಕೆನರಾ ಕ್ರೆಡಿಟ್ ಸೌಹಾರ್ದ ಸಂಘಕ್ಕೆ ೧.೨೯ ಲಕ್ಷ ರೂ. ಲಾಭ

ಕುಮಟಾ: ಕೆನರಾ ಕ್ರೆಡಿಟ್ ಸೌಹಾರ್ದ ಸಹಕಾರಿ ನಿಯಮಿತದ ವಾರ್ಷಿಕ ಸಭೆಯು ಬಗ್ಗೋಣದ ಲಯನ್ಸ್ ಭವನದಲ್ಲಿ ನಡೆಯಿತು. ಸಹಕಾರಿ ಸಂಘದ ಅಧ್ಯಕ್ಷರಾದ ಡಾ.ಜಿ.ಜಿ.ಹೆಗಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸಂಘವು ೨೦೨೦-೨೧ ರಲ್ಲಿ ೧೨೯೭೦೧ ರೂ.ಗಳಷ್ಟು ಲಾಭ ಮಾಡಿದೆ. ಲಾಕ್ ಡೌನ್ ಇತ್ಯಾದಿ ಸಮಸ್ಯೆಯ ಮಧ್ಯೆಯೂ ಸಂಘವು ಲಾಭಗಳಿಸಿದ್ದು ಸಂತಸದ ವಿಷಯವಾಗಿದೆ. ಜನರು ಆರ್ಥಿಕ ಅಭಿವೃದ್ಧಿ ಹೊಂದಬೇಕಾದರೆ ಹಣಕಾಸು … Continued