ವಾಟ್ಸಾಪ್ ನಲ್ಲಿ ಮಹಿಳೆಯರಿಗೆ ಅಶ್ಲೀಲ ಮೆಸೇಜ್​ ಕಳುಹಿಸುತ್ತಿದ್ದವನ ತಲೆ ಬೋಳಿಸಿದ ಗ್ರಾಮಸ್ಥರು..!

ಬೆಳಗಾವಿ: ವಾಟ್ಸಾಪ್​ ಮೂಲಕ ಮಹಿಳೆಯರಿಗೆ ಅಶ್ಲೀಲ ಮೆಸೇಜ್​ ಕಳುಹಿಸುತ್ತಿದ್ದ ಯುವಕನಿಗೆ ಗ್ರಾಮಸ್ಥರೇ ಸೇರಿ ತಲೆ ಬೋಳಿಸಿದ ಘಟನೆ ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಮಹೇಶವಾಡಗಿ ಗ್ರಾಮದಲ್ಲಿ ನಡೆದಿದೆ ಎಂದು ವರದಿಯಾಗಿದೆ. ಸುಧಾಕರ್ ಡುಮ್ಮಗೋಳ ಎಂಬಾತನೇ ತನ್ನ ಮೊಬೈಲ್​ನಿಂದ ಮಹಿಳೆಯರಿಗೆ ವಾಟ್ಸಾಪ್​ ಮೂಲಕ ಅಶ್ಲೀಲ ಮೆಸೇಜ್​ ಕಳುಹಿಸುತ್ತಿದ್ದ ಎಂಬ ಆರೋಪ ಎದುರಿಸುತ್ತಿದ್ದಾನೆ. ಇಂಥದ್ದೇ ಘಟನನೆ ಗ್ರಾಮಸ್ಥರಿಗೆ ಗೊತ್ತಾಗಿ … Continued

ರಾಜ್ಯದ ನೀರಾವರಿ ಯೋಜನೆಗಾಗಿ ಜೆಡಿಎಸ್ ಪಾದಯಾತ್ರೆ; ಹೋರಾಟದ ಮೂಲಕವೇ ಜೆಡಿಎಸ್‌ ಅಧಿಕಾರಕ್ಕೆ ತರಲು ಪ್ರಯತ್ನ;ದೇವೇಗೌಡ ಘೋಷಣೆ

ಬೆಂಗಳೂರು: ಮೇಕೆದಾಟು ಹಾಗೂ ಮಹದಾಯಿ ಯೋಜನೆ ಅನುಷ್ಠಾನಕ್ಕಾಗಿ ಜೆಡಿಎಸ್ ಪಾದಯಾತ್ರೆ ನಡೆಸಲಿದೆ ಎಂದು ಜೆಡಿಎಸ್​ ವರಿಷ್ಠ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ತಿಳಿಸಿದರು. ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಧಾನ ಮಂಡಲ ಅಧಿವೇಶನ ಮುಗಿದ ಬಳಿಕ ಈ ಪಾದಯಾತ್ರೆ ನಡೆಸಲು ನಿರ್ಧರಿಸಲಾಗಿದೆ. ಇದರ ಜೊತೆ ಆಲಮಟ್ಟಿ ನದಿ ನೀರು ಹಂಚಿಕೆ ಕುರಿತುಗಮನ ಸೆಳೆಯಲಾಗುವುದು. ನೀರೌರಿ ಯೋಜನೆಗಳಿಗಾಗಿ … Continued

ಜಿಲ್ಲಾ ಉಸ್ತುವಾರಿ ಸಚಿವರ ನೇಮಕ: ಈಗ ಸಿಎಂ ಬೊಮ್ಮಾಯಿ ಮುಂದಿರುವ ಮತ್ತೊಂದು ಸವಾಲು

ಬೆಂಗಳೂರು: ಸಚಿವ ಸಂಪುಟ ಹಾಗೂ ಖಾತೆಗಳನ್ನು ಹಂಚಿಕೆ ಮಾಡಿದ್ದಕ್ಕೆ ಅಸಮಾಧಾನ ಎದುರಿಸುತ್ತಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಈಗ ಜಿಲ್ಲಾ ಉಸ್ತುವಾರಿ ಸಚಿವರನ್ನು ನೇಮಿಸುವುದು ಸವಾಲಾಗಿದೆ. ಈವರೆಗೂ ಕೋವಿಡ್ ಮತ್ತು ಕೆಲವು ಜಿಲ್ಲೆಗಳಲ್ಲಿ ಉಂಟಾದ ಪ್ರವಾಹ ಪರಿಸ್ಥಿತಿ ಮತ್ತು ಆಗಸ್ಟ್‌ 15ರ ಸ್ವಾತಂತ್ರ್ಯ ದಿನಾಚರಣೆ ಧ್ವಜಾರೋಹಣದ ಕಾರಣಕ್ಕಾಗಿ ಉಸ್ತುವಾರಿಗಳನ್ನು ತಾತ್ಕಾಲಿಕವಾಗಿ ನೇಮಿಸಲಾಗಿತ್ತು. ಈಗ ಜಿಲ್ಲಾ ಉಸ್ತುವಾರಿ … Continued

ಹೇರ್‌ಬ್ಯಾಂಡ್‌ನಲ್ಲಿ ಚಿನ್ನ ಸಾಗಾಟ : ಏರ್‌ಪೋರ್ಟ್‌ನಲ್ಲಿ ವಶ

ಮಂಗಳೂರು : ಹೇರ್‌ಬ್ಯಾಂಡ್‌ನಲ್ಲಿ ಚಿನ್ನ ಸಾಗಾಟ ಮಾಡುವವನನ್ನು ಮಂಗಳೂರಲ್ಲಿ ಕಸ್ಟಮ್ಸ್‌ ಅಧಿಕಾರಿಗಳು ಬಂಧಿಸಿದ್ದಾರೆ. ಮತ್ತೊಂದು ಪ್ರಕರಣವನ್ನೂ ಭೇದಿಸಿದ್ದಾರೆ. ಎರಡು ಪ್ರಕರಣಗಳಿಂದ ಬರೋಬ್ಬರಿ 21 ಲಕ್ಷ ಮೌಲ್ಯದ ಚಿನ್ನವನ್ನು ವಶಕ್ಕೆ ಪಡೆದಿದ್ದಾರೆ. ದುಬೈನಿಂದ ಬಂದಿದ್ದ ಮುರುಡೇಶ್ವರದ ವ್ಯಕ್ರಿಯೋರ್ವರು ಮಹಿಳೆಯ ಹೇರ್‌ಬ್ಯಾಂಡ್‌ನಲ್ಲಿ ಚಿನ್ನ ಸಾಗಾಟ ಮಾಡುತ್ತಿರುವ ಕುರಿತು ಮಂಗಳೂರಿನ ಕಸ್ಟಮ್ಸ್‌ ಅಧಿಕಾರಿಗಳು ಮಾಹಿತಿಯ ಮೇರೆಗೆ ವ್ಯಕ್ತಿಯನ್ನು ಪತ್ತೆ ಹಚ್ಚಿದ್ದಾರೆ. … Continued

ಅಫಘಾನಿಸ್ತಾನದಲ್ಲಿ ಸಿಲುಕಿದ ಕರ್ನಾಟಕದ ಐಪಿಎಸ್‌ ಅಧಿಕಾರಿ ಸವಿತಾ ಹಂದೆ

ಬೆಂಗಳೂರು: ಕರ್ನಾಟಕದ ಐಪಿಎಸ್‌ ಆಫೀಸರ್‌ ಸವಿತಾ ಹಂದೆ ಅವರು ಅಫಘಾನಿಸ್ತಾನದ ಕಾಬೂಲ್‌ನಲ್ಲಿ ಸಿಲುಕಿಕೊಂಡಿದ್ದಾರೆ. ಸವಿತಾ ಅವರು ಕಾಬೂಲ್‌ನಲ್ಲಿ ವಿಶ್ವಸಂಸ್ಥೆ ಹಿರಿಯ ಭದ್ರತಾ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದರು. ತಾಲಿಬಾನಿಗಳಿಂದಾಗಿ ಕಾಬೂಲ್‌ನಲ್ಲಿ ನಿರ್ಮಾಣವಾಗಿರುವ ಪ್ರಕ್ಷುಬ್ದ ವಾತಾವರಣದಲ್ಲಿ ಸಿಲುಕಿದ್ದಾರೆ ಎಂದು ಹೇಳಲಾಗಿದೆ. ಸವಿತಾ ಅವರು ಸುರಕ್ಷಿತವಾಗಿದ್ದಾರೆ. ಸುರಕ್ಷಿತವಾಗಿ ಬರಲಿʼ ಎಂದು ಅವರ ಬ್ಯಾಚ್‌ಮೇಟ್‌ ಬೆಂಗಳೂರು ಕಮಿಷನರ್‌ ಕಮಲ್‌ ಪಂತ್‌ ಪ್ರಾರ್ಥಿಸಿದ್ದಾರೆ. … Continued

ಉತ್ತರ ಕರ್ನಾಟಕದವರಿಗೆ ಅಪೇಕ್ಷಿತ ಸುದ್ದಿ ನೀಡಿದ ಸಿಎಂ: ಸುವರ್ಣಸೌಧ ಶಕ್ತಿ ಕೇಂದ್ರವಾಗಿಸಲು ಬದ್ಧ ಎಂದ ಬೊಮ್ಮಾಯಿ

ಬೆಳಗಾವಿ: ಡಿಸೆಂಬರ್​ನಲ್ಲಿ ಸುವರ್ಣಸೌಧದಲ್ಲಿ ಅಧಿವೇಶನ ನಡೆಸಲಾಗುವುದು ಹಾಗೂ ಸುವರ್ಣಸೌಧಕ್ಕೆ ಸಕ್ಕರೆ ಆಯುಕ್ತಾಲಯ ವರ್ಗಾಯಿಸಲಾಗುವುದು ಎಂದು ಬೆಳಗಾವಿ ಸುವರ್ಣಸೌಧದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಬೆಳಗಾವಿ ಸುವರ್ಣ ಸೌಧದಲ್ಲಿ ನೆರೆ ಹಾಗೂ ಕೊವಿಡ್19 ಪರಿಸ್ಥಿತಿ ಪರಿಶೀಲನೆ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸುವರ್ಣ ವಿಧಾನಸೌಧವನ್ನು ಆಡಳಿತದ ಶಕ್ತಿಕೇಂದ್ರವಾಗಿಸಲು ಬದ್ಧರಿದ್ದೇವೆ. ಡಿಸೆಂಬರ್​ನಲ್ಲಿ ಚಳಿಗಾಲದ ಅಧಿವೇಶನವನ್ನೂ ನಡೆಸಲಿದ್ದೇವೆ … Continued

ಸಾಮಾಜಿಕ ಜಾಲತಾಣಗಳಲ್ಲಿ ತಾಲಿಬಾನ್ ಪರ ಪೋಸ್ಟ್‌ ಮಾಡಿದ್ದ ವ್ಯಕ್ತಿ ಬಂಧನ

ಬಾಗಲಕೋಟೆ : ಇಲ್ಲಿನ ಪೊಲೀಸರು ತಾಲಿಬಾನ್ ಉಗ್ರ ಸಂಘಟನೆಗೆ ಸಹಾನುಭೂತಿ ತೋರಿ ಫೇಸ್‌ಬುಕ್ ಪೋಸ್ಟ್‌ ಕಾಮೆಂಟ್ ಮಾಡಿದ ವ್ಯಕ್ತಿಯನ್ನು ಬಂಧಿಸಿದ್ದಾರೆ. ಆಸಿಫ್ ಗಲಗಲಿ ಎಂದು ಗುರುತಿಸಲಾಗಿರುವ ಈ ಯುವಕ ಜಮಖಂಡಿ ಪಟ್ಟಣದ ನಿವಾಸಿಯಾಗಿದ್ದು, ತಾಲಿಬಾನ್ ಕುರಿತ ಪೋಸ್ಟ್ ಕೆಳಗೆ ಬೇರೆಯವರು ಹಂಚಿಕೊಂಡಿದ್ದಾರೆ. ವೈರಲ್ ಆದ ನಂತರ ಅವರ ಕಾಮೆಂಟ್ ‘ಐ ಲವ್ ತಾಲಿಬಾನಿ ಎಂಬುದು’ ಜನರನ್ನು … Continued

ಹೆಬ್ಬಾವನು ಕಾಳಿಂಗ ಸರ್ಪ ನುಂಗಿತ್ತಾ…!

ಕಾರವಾರ:ಸಣ್ಣ ಹಾವುಗಳು ದೊಡ್ಡ ಹಾವುಗಳು ನುಂಗುವುದು ಸಾಮಾನ್ಯ. ಅದೇರೀತಿ ಹೆಬ್ಬಾವುಗಳು ಬೇರೆ ಬೇರೆ ಪ್ರಾಣಿಗಳನ್ನು ನುಂಗವುದು ಸಾಮಾನ್ಯ. ಆದರೆ ಅಂಥ ದೊಡ್ಡ ಹಾವನ್ನೇ ಮತ್ತೊಂದು ಹಾವು ನುಂಗಲು ಮುಂದಾದರೆ..! ಇಂಥದ್ದೇ ಒಂದು ಘಟನೆ ಕಾರವಾರದ ಹರಿದೇವ ನಗರದಲ್ಲಿ ನಡೆದದು ವರದಿಯಾಗಿದೆ. ಇಲ್ಲಿ ವಿಷಯಕ್ಕೆ ಹೆಸರುವಾಸಿಯಾದ ಕಾಳಿಂಗ ಸರ್ಪ ಮಮತ್ತೊಂದು ದೊಡ್ಡಹಾವನ್ನು ನುಂಗಲು ಮುಂದಾಗಿದೆ. ಸರಿ ಸುಮಾರು … Continued

ಗೋಕರ್ಣ: ಓಂ ಬೀಚ್‍ನಲ್ಲಿ ಸೆಲ್ಫಿ ತೆಗೆಯಲು ಹೋಗಿ ಸಮುದ್ರದಲ್ಲಿ ಕೊಚ್ಚಿ ಹೋದ ವ್ಯಕ್ತಿ

ಕುಮಟಾ: ಉತ್ತರ ಕನ್ನಡ ಜಿಲ್ಲೆಯ  ಗೋಕರ್ಣ ಓಂ ಬೀಚಿನಲ್ಲಿ ಸೆಲ್ಫಿ ಹುಚ್ಚಿಗೆ ವ್ಯಕ್ತಿಯೊಬ್ಬ ಸಮುದ್ರದಲ್ಲಿ ಕೊಚ್ಚಿ ಹೋಗಿದ್ದಾನೆ. ಕಲ್ಲು ಬಂಡೆಯ ಮುಂದೆ ಸೆಲ್ಫಿ ತೆಗಿಯಲು ಹೋದ  ಕಾಲುಜಾರಿ ಬಿದ್ದ ಯುವಕ ಅಲೆಗಳ ಹೊಡೆತಕ್ಕೆ ಸಿಕ್ಕಿ  ಸಮುದ್ರ ಪಾಲಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಗೋಕರ್ಣದ ಓಂ ಬೀಚ್‍ನಲ್ಲಿ ಇಂದು (ಶನಿವಾರ) ಮಧ್ಯಾಹ್ನ ನಡೆದಿದೆ. … Continued

ಇಡಿ ಸಮನ್ಸ್, ದೆಹಲಿಗೆ ತೆರಳಿದ ಮಾಜಿ ಸಚಿವ ಜಮೀರ್ ಅಹಮ್ಮದ್‌

ಬೆಂಗಳೂರು:ಇಡಿ ಸಮನ್ಸ್ ಹಿನ್ನೆಲೆಯಲ್ಲಿ ಮಾಜಿ ಸಚಿವ ಇಂದು (ಶನಿವಾರ) ಬೆಳಿಗ್ಗೆ ಮಾಜಿ ಸಚಿವ ಜಮೀರ್ ಅಹಮ್ಮದ್ ಖಾನ್ ದೆಹಲಿಗೆ ಹೊರಟಿದ್ದಾರೆ. ಇಂದು ಬೆಳಗ್ಗೆ 11 ಗಂಟೆಗೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದೆಹಲಿಗೆ ತೆರಳಿರುವ ಜಮೀರ್ ಸಂಜೆ ಇಡಿ ಕಚೇರಿಯಲ್ಲಿ ವಿಚಾರಣೆಗೆ ಹಾಜರಾಗಲಿದ್ದಾರೆ. ನಿನ್ನೆ ರಾತ್ರಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿ ಚರ್ಚೆ … Continued