ದೆಹಲಿಯಲ್ಲಿ ದೇವೇಂದ್ರ ಫಡ್ನವೀಸ್ -ರಮೇಶ ಜಾರಕಿಹೊಳಿ ಭೇಟಿ ಮರ್ಮವೇನು..?

ಬೆಂಗಳೂರು:ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪ ಸಂಪುಟಕ್ಕೆ ಸೇರ್ಪಡೆಯಾಗಲು ಕಸರತ್ತು ನಡೆಸಿರುವ ಮಾಜಿ ಸಚಿವ ರಮೇಶ ಜಾರಕಿಹೊಳಿ ಅವರು ದಿಢೀರ್‌ ದೆಹಲಿಗೆ ತೆರಳಿದ್ದಾರೆ. ಅವರು ಬಿಜೆಪಿ ಹೈಕಮಾಂಡ್ ನಾಯಕರ ಭೇಟಿಗಾಗಿ ದೆಹಲಿಗೆ ತೆರಳಿದ್ದಾರೆ ಎಂದು ಹೇಳಲಾಗುತ್ತಿದೆ. ದೆಹಲಿ ಭೇಟಿ ಬಗ್ಗೆ ಪ್ರತಿಕ್ರಿಯಿಸಲು ಏನನ್ನೂ ಹೇಳಲು ರಮೇಶ್​ ಜಾರಕಿಹೊಳಿ ನಿರಾಕರಿಸಿದ್ದಾರೆ. ರಮೇಶ ಜಾರಕಿಹೊಳಿ ಸೋಮವಾರ ರಾಷ್ಟ್ರ ರಾಜಧಾನಿಯಲ್ಲಿ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ … Continued

ಜುಲೈ 1ರಿಂದ ಬೆಂಗಳೂರು ಬನ್ನೇರುಘಟ್ಟ ಮೃಗಾಲಯ ಮತ್ತೆ ಓಪನ್‌

ಬೆಂಗಳೂರು: ಕೋವಿಡ್‌-19 ರ ಎರಡನೇ ಅಲೆಯಿಂದ ಜಾರಿಯಾದ ಲಾಕ್‌ಡೌನ್‌ನಿಂದಾಗಿ ಸುಮಾರು 90 ದಿನಗಳ ಕಾಲ ಸ್ಥಗಿತಗೊಂಡ ನಂತರ, ಮೃಗಾಲಯ ಮತ್ತು ಪ್ರಾಣಿ ಸಫಾರಿ ಸೇರಿದಂತೆ ಬೆಂಗಳೂರು ಬನ್ನೇರುಘಟ್ಟ ಜೈವಿಕ ಉದ್ಯಾನ (ಬಿಬಿಪಿ) ಜುಲೈ 1 ರಿಂದ ಸಂದರ್ಶಕರಿಗೆ ಮತ್ತೆ ತೆರೆಯಲು ಸಿದ್ಧವಾಗಿದೆ. ರಾಜ್ಯ ಆರೋಗ್ಯ ಇಲಾಖೆಯೊಂದಿಗೆ ಸಮಾಲೋಚಿಸಿ ಬಿಬಿಪಿ ತನ್ನ ಪ್ರಮಾಣಿತ ಕಾರ್ಯಾಚರಣಾ ಕಾರ್ಯವಿಧಾನಗಳನ್ನು (ಎಸ್‌ಒಪಿ) … Continued

ದನದ ಮಾಂಸ ಸಾಗಾಟ: ಒಬ್ಬನ ಬಂಧನ

ಕುಮಟಾ; ಅನಧಿಕೃತವಾಗಿ ದನದ ಮಾಂಸ ಸಾಗಿಸುತ್ತಿದ್ದ ಲಾರಿ ಮತ್ತು ವ್ಯಕ್ತಿಯೊಬ್ಬನನ್ನು ಕುಮಟಾ ಪೊಲೀಸರು ಮಂಗಳವಾರ ವಶಕ್ಕೆ ಪಡೆದಿದ್ದಾರೆ. ಖಚಿತ ಮಾಹಿತಿಯ ಆಧಾರದಲ್ಲಿ ತಾಲೂಕಿನ ಹೊಳೆಗದ್ದೆಯ ರಾಷ್ಟ್ರೀಯ ಹೆದ್ದಾರಿ ೬೬ ರ ಟೋಲ್ ನಾಕಾ ಹತ್ತಿರ ಅಪರಾಧ ವಿಭಾಗದ ಪಿಎಸ್‌ಐ ಗಿರಿರಡ್ಡಿ ನೇತೃತ್ವದ ತಂಡವು ಲಾರಿಯೊಂದನ್ನು ತಡೆದು ತನಿಖೆ ನಡೆಸಿದಾಗ ಮಾಂಸ ಸಗಾಟದ ಜಾಲ ಪತ್ತೆಯಾಗಿದೆ. ಲಾರಿಯಲ್ಲಿ … Continued

ಸಹಕಾರಿ ಬ್ಯಾಂಕುಗಳಿಗೆ ಮಹತ್ವದ್ದು.. ಕೋರ್ ನಿರ್ವಹಣೆ ಹೊರಗುತ್ತಿಗೆ ಮಾಡಬೇಡಿ: ಸಹಕಾರಿ ಬ್ಯಾಂಕುಗಳಿಗೆ ಆರ್‌ಬಿಐ ನಿರ್ದೇಶನ

ಮುಂಬೈ: ನೀತಿ ನಿರೂಪಣೆ, ಆಂತರಿಕ ಲೆಕ್ಕಪರಿಶೋಧನೆ ಮತ್ತು ಅನುಸರಣೆ, ಕೆವೈಸಿ ಮಾನದಂಡಗಳ ಅನುಸರಣೆ, ಸಾಲ ಮಂಜೂರಾತಿ ಮತ್ತು ಹೂಡಿಕೆ ಬಂಡವಾಳದ ನಿರ್ವಹಣೆಯಂತಹ ಪ್ರಮುಖ ನಿರ್ವಹಣಾ ಕಾರ್ಯಗಳನ್ನು ಹೊರಗುತ್ತಿಗೆ ಮಾಡದಂತೆ ಭಾರತೀಯ ರಿಸರ್ವ್ ಬ್ಯಾಂಕ್ ಸೋಮವಾರ ಸಹಕಾರಿ ಬ್ಯಾಂಕುಗಳಿಗೆ ನಿರ್ದೇಶನ ನೀಡಿದೆ. ಸಹಕಾರಿ ಬ್ಯಾಂಕುಗಳಿಂದ ಹಣಕಾಸು ಸೇವೆಗಳ ಹೊರಗುತ್ತಿಗೆ ಅಪಾಯವನ್ನು ನಿರ್ವಹಿಸಲು ಮಾರ್ಗಸೂಚಿಗಳನ್ನು ನೀಡುವ ಕೇಂದ್ರ ಬ್ಯಾಂಕ್, … Continued

ಲಸಿಕೆ ಪಡೆಯಲು ಹಿಂಜರಿಕೆ ಬೇಡ :ಡಾ.ಅಜಿತಪ್ರಸಾದ

ಧಾರವಾಡ: ಕೋವಿಡ್ ಸಾಂಕ್ರಾಮಿಕ ರೋಗ ತಡೆಯಲು ಲಸಿಕೆ ರಾಮಬಾಣವಾಗಿದೆ. ಸಾಂಕ್ರಾಮಿಕ ರೋಗದಿಂದ ಶೈಕ್ಷಣಿಕ ಪ್ರಗತಿಗೆ ಕುಂಠಿತಗೊಂಡಿದೆ. ಶಿಕ್ಷಣ ವ್ಯವಸ್ಥೆ ಮತ್ತೆ ಮೊದಲನೆ ಸ್ಥಿತಿಗೆ ಮರಳಬೇಕಾದರೆ ಎಲ್ಲ ವಿದ್ಯಾರ್ಥಿಗಳು ಲಸಿಕೆ ಹಾಕಿಸಿಕೊಂಡು ತರಗತಿಗಳಿಗೆ ಹಾಜರಾಗಿ ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಎಂದು ಜೆಎಸ್‌ಎಸ್ ವಿತ್ತಾಧಿಕಾರಿ ಡಾ.ಅಜಿತ ಪ್ರಸಾದ ಹೇಳಿದರು. ನಗರದ ಜೆಎಸ್‌ಎಸ್ ಸಂಸ್ಥೆಯಲ್ಲಿ ವಿದ್ಯಾರ್ಥಿಗಳಿಗೆ ಆಯೋಜಸಿದ್ದ ಕೋವಿಡ್ ಲಸಿಕಾ … Continued

ನ್ಯಾಯಮೂರ್ತಿ ರವಿ ವಿಜಯಕುಮಾರ್ ಮಳಿಮಠ ಹಿಮಾಚಲ ಪ್ರದೇಶದ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕ

ನವದೆಹಲಿ: ನ್ಯಾಯಮೂರ್ತಿ ರವಿ ವಿಜಯಕುಮಾರ್ ಮಳಿಮಠ್ ಅವರನ್ನು ಸೋಮವಾರ ಹಿಮಾಚಲ ಪ್ರದೇಶ ಹೈಕೋರ್ಟ್‌ನ ಮುಖ್ಯ ನ್ಯಾಯಾಧೀಶರನ್ನಾಗಿ ನೇಮಕ ಮಾಡಲಾಗಿದೆ ಎಂದು ಕಾನೂನು ಸಚಿವಾಲಯ ತಿಳಿಸಿದೆ. ಮೂಲತಃ ಕರ್ನಾಟಕದವರಾದ  ಹಿಮಾಚಲ ಪ್ರದೇಶ ಹೈಕೋರ್ಟ್‌ನ ಹಿರಿಯ-ನ್ಯಾಯಾಧೀಶರಾದ ನ್ಯಾಯಮೂರ್ತಿ ಮಳಿಮಠ ಅವರು ಜುಲೈ 1 ರಿಂದ ಜಾರಿಗೆ ಬರುವಂತೆ ಹಿಮಾಚಲ ಪ್ರದೇಶದ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳ ಕಚೇರಿಯ ಕರ್ತವ್ಯಗಳನ್ನು ನಿರ್ವಹಿಸಲಿದ್ದಾರೆ … Continued

ಕಾಸರಗೋಡು ಜಿಲ್ಲೆ ಗ್ರಾಮಗಳ ಮರುನಾಮಕರಣದ ಸುದ್ದಿ ಸುಳ್ಳು ಎಂದ ಕೇರಳ

ಕಾಸರಗೋಡು ಜಿಲ್ಲೆಯ ಹಳ್ಳಿಗಳ ಹೆಸರನ್ನು ಕನ್ನಡದ ಹೆಸರಿನಿಂದ ಮಲಯಾಳಂನಲ್ಲಿ ಹೊಸ ಹೆಸರುಗಳಿಗೆ ಬದಲಾಯಿಸಲು ಕೇರಳ ಸರ್ಕಾರ ಯೋಜಿಸುತ್ತಿದೆ ಎಂಬ ಹೇಳಿಕೆಯನ್ನು ಕಾಸರ್‌ಗೋಡ್ ಜಿಲ್ಲಾಧಿಕಾರಿ ಸಜಿತ್ ಬಾಬು ಕಚೇರಿ ಮತ್ತು ಮಂಜೇಶ್ವರ ಶಾಸಕ ಎಕೆಎಂ ಅಶ್ರಫ್ ನಿರಾಕರಿಸಿದ್ದಾರೆ. ಕರ್ನಾಟಕದರಾಜಕಾರಣಿಗಳು ಕಾಸರಗೋಡು ಜಿಲ್ಲೆಯ ಹಳ್ಳಿಗಳ ಹೆಸರನ್ನು ಅದರ ಕನ್ನಡ ಹೆಸರಿನಿಂದ ಮಲಯಾಳಂನಲ್ಲಿ ಹೊಸ ಹೆಸರುಗಳಿಗೆ ಬದಲಾಯಿಸುವುದನ್ನು ವಿರೋಧಿಸಿದ ನಂತರ … Continued

ಕಪ್ಪು ಶಿಲೀಂಧ್ರ ಸೋಂಕು ಪತ್ತೆಗೆ ಕರ್ನಾಟಕದ ಸರ್ಕಾರಿ ಆಸ್ಪತ್ರೆಗಳಲ್ಲಿ ಸ್ಕ್ಯಾನಿಂಗ್‌ ಉಚಿತ

ಬೆಂಗಳೂರು: ಕೋವಿಡ್‌-19 ರೋಗಿಗಳಲ್ಲಿ ಮ್ಯೂಕೋರ್ಮೈಕೋಸಿಸ್ (ಕಪ್ಪು ಶಿಲೀಂಧ್ರ) ಸೋಂಕನ್ನು ಪತ್ತೆಹಚ್ಚಲು ಸಿಟಿ (CT) ಮತ್ತು ಎಂಆರ್‌ಐ (MRI) ಸ್ಕ್ಯಾನ್ ಅನ್ನು ಸರ್ಕಾರಿ ಆಸ್ಪತ್ರೆಗಳು ಮತ್ತು ವೈದ್ಯಕೀಯ ಕಾಲೇಜುಗಳಲ್ಲಿ ಉಚಿತವಾಗಿ ಮಾಡಲಾಗುತ್ತದೆ ಎಂದು ರಾಜ್ಯ ಸರ್ಕಾರ ಸೋಮವಾರ ಪ್ರಕಟಿಸಿದೆ. ಖಾಸಗಿ ಆಸ್ಪತ್ರೆಗಳು ಮತ್ತು ಪ್ರಯೋಗಾಲಯಗಳಲ್ಲಿನ ಸ್ಕ್ಯಾನ್‌ಗಳ ವೆಚ್ಚವನ್ನು ಸರ್ಕಾರವು ಮಿತಿ ಹಾಕಿದೆ. ಖಾಸಗಿ ಆಸ್ಪತ್ರೆಗಳು ಮತ್ತು ಪ್ರಯೋಗಾಲಯಗಳಲ್ಲಿ, … Continued

ಕನಿಷ್ಠ ಬೆಂಬಲ ಬೆಲೆ ಶಾಸನ ಬದ್ಧ ಬೆಲೆಯಾಗಿಸಲು ಶಿಫಾರಸು:ಕೃಷಿ ಬೆಲೆ ಆಯೋಗದ ಅಧ್ಯಕ್ಷ

ಹುಬ್ಬಳ್ಳಿ: ಕೃಷಿ ಉತ್ಪನಗಳಿಗೆ ನೀಡಲಾಗುವ ಕನಿಷ್ಠ ಬೆಂಬಲ ಬೆಲೆಯನ್ನು ಶಾಸನ ಬದ್ದ ಬೆಲೆಯಾಗಿಸುವಂತೆ ರೈತರು ಒತ್ತಾಯಿಸಯತ್ತಿದ್ದಾರೆ. ಈ ಕುರಿತು ಸರ್ಕಾರಕ್ಕೆ ಕೃಷಿ ಬೆಲೆ ಆಯೋಗದ ವಾರ್ಷಿಕ ವರದಿಯಲ್ಲಿ ಶಿಫಾರಸ್ಸು ಮಾಡಲಾಗುವುದು ಎಂದು ಕರ್ನಾಟಕ ಕೃಷಿ ಬೆಲೆ ಆಯೋಗದ ಅಧ್ಯಕ್ಷ ಹನುಮನಗೌಡ ಬೆಲಗುರ್ಕಿ ಹೇಳಿದ್ದಾರೆ. ಸೋಮವಾರ ಹುಬ್ಬಳ್ಳಿಯ ಎಪಿಎಂಸಿ ಕಾರ್ಯಾಲಯದಲ್ಲಿ ಎಪಿಎಂಸಿ ಸದಸ್ಯರು ಹಾಗೂ ಅಧಿಕಾರಿಗಳ ಸಭೆಯಲ್ಲಿ … Continued

18 ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾದ ಖತರನಾಕ್‌ ಕಳ್ಳರ ಬಂಧನ, ಬಂಗಾರ ಸೇರಿದಂತೆ 19 ಲಕ್ಷಕ್ಕೂಅಧಿಕ ಮೌಲ್ಯದ ಸ್ವತ್ತು ವಶ

ಗೋಕರ್ಣ: ಉತ್ತರ ಕನ್ನಡ ಜಿಲ್ಲೆಯ ವಿವಿಧೆಡೆ ನಡೆದ ಮನೆಗಳ್ಳತನ ಮತ್ತಿತರ ಕಳ್ಳತನ ಪ್ರಕರಣಗಳಿಗೆ ಸಂಬಂಧಿಸಿದಂತೆ ಎಂಟು ಜನ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಅವರಿಂದ 19 ಲಕ್ಷ ರೂ.ಗಳ ಮೌಲ್ಯದ ಚಿನ್ನಾಭರಣ ಮತ್ತು ಇತರ ಸ್ವತ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಜನವಸತಿ ಇರದ ಮನೆಗಳನ್ನೇ ಹೆಚ್ಚಾಗಿ ಗುರಿಯಾಗಿಸಿಕೊಂಡು ಜಿಲ್ಲೆಯ ವಿವಿಧೆಡೆ ಕಳ್ಳತನ ನಡೆಸುತ್ತಿದ್ದ ತಂಡವನ್ನು ಬಂಧಿಸಿರುವ ಪೊಲೀಸರು ಒಂಟಿ ಮನೆಗಳ … Continued