ಕರ್ನಾಟಕದಲ್ಲಿ 5 ಸಾವಿರಕ್ಕೆ ಕುಸಿದ ದೈನಂದಿನ ಕೊರೊನಾ ಸೋಂಕು.. ಬೆಂಗಳೂರಲ್ಲಿ ಸಾವಿರಕ್ಕಿಂತಲೂ ಕಡಿಮೆ..!

ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ಸೋಂಕು ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ.ಕಳೆದ 24 ಗಂಟೆಗಳಲ್ಲಿ (ಮಂಗಳವಾರ) 5041 ಜನರಿಗೆ ಸೋಂಕು ತಗುಲಿರುವುದು ವರದಿಯಾಗಿದೆ. ಕರ್ನಾಟಕ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ಬಿಡುಗಡೆ ಮಾಡಿರುವ ವರದಿಗಳ ಪ್ರಕಾರ, ಕಳೆದ 24 ಗಂಟೆಗಳಲ್ಲಿ ರಾಜ್ಯದಲ್ಲಿ 5 115 ಮಂದಿ ಮೃತಪಟ್ಟಿದ್ದಾರೆ. ರಾಜ್ಯದಲ್ಲಿಂ ಕಳೆದ 24 ಗಂಟೆಗಳಲ್ಲಿ 14785 ಸೋಂಕಿತರು ಗುಣಮುಖರಾಗಿ … Continued

ಗೋಕರ್ಣ ಕೋಟಿತೀರ್ಥ ಸ್ವಚ್ಛತೆ, ಅಭಿವೃದ್ಧಿ ಕಾರ್ಯಕ್ಕೆ ಸಚಿವ ಈಶ್ವರಪ್ಪ ಚಾಲನೆ

ಗೋಕರ್ಣ: ಗೋಕರ್ಣದ ಕೋಟಿತೀರ್ಥವು ಉತ್ತರದ ವಾರಣಾಸಿಯ ಪವಿತ್ರ ಗಂಗೆಯ ಸ್ಥಾನವನ್ನು ಪಡೆದಿದ್ದು, ಇದರ ಪುನರುಜ್ಜೀವನಗೊಳಿಸಲು ರಾಜ್ಯದ ಬಿಜೆಪಿ ಸರ್ಕಾರ ಹಣ ಮಂಜೂರಿ ಮಾಡಿದ್ದು, ಅದರ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಗೋಕರ್ಣದ ಕೋಟಿತೀರ್ಥದ  ಸ್ವಚ್ಛತೆ ಹಾಗೂ ಅಭಿವೃದ್ಧಿಯಿಂದ ದೇಶಕ್ಕೆ ಒಳಿತಾಗಲಿದೆ ಎಂದು ಸಚಿವ ಈಶ್ವರಪ್ಪ ಹೇಳಿದರು. ಅವರು ಮಂಗಳವಾರ ಸಂಜೆ ಗೋಕರ್ಣ ದಲ್ಲಿ ಕೋಟಿತೀರ್ಥ ಅಭಿವೃದ್ಧಿ ಯೋಜನೆಗೆ … Continued

ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಸಚಿವ ಸಭೆ ಕರೆದಿದ್ದಕ್ಕೆ ವಿಶ್ಲೇಷಣೆ ಅಗತ್ಯವಿಲ್ಲ 

ಬೆಂಗಳೂರು : ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಅವರು ಸಚಿವರ ಸಭೆ ಕರೆದಿರುವುದಕ್ಕೆ ಬೇರೆ ಯಾವುದೇ ತರದ ವಿಶ್ಲೇಷಣೆ ಮಾಡುವ ಅಗತ್ಯವಿಲ್ಲ ಎಂದು ಗೃಹ ಖಾತೆ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು ಮಂಗಳವಾರ ಬೆಂಗಳೂರಿನ ತಮ್ಮ ನಿವಾಸದ ಬಳಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಅರುಣ ಸಿಂಗ್‌ ಅವರು ಬಿಜೆಪಿಯ ಕರ್ನಾಟಕದ ಉಸ್ತುವಾರಿಯಾಗಿದ್ದು, ಹಿಗಾಗಿಯೇ ಅವರು … Continued

ದ್ವಿತೀಯ ಪಿಯು ಉತ್ತೀರ್ಣರೆಲ್ಲ ಸಿಇಟಿ ಬರೆಯಬಹುದು, ಅಕ್ಟೋಬರ್ ಮೊದಲ ವಾರ ಪದವಿ ತರಗತಿಗೆ ದಾಖಲಾತಿ

ಬೆಂಗಳೂರು: ಈ ವರ್ಷ ದ್ವಿತೀಯ ಪಿಯುಸಿ ಪಾಸಾದವರೆಲ್ಲರೂ ಸಿಇಟಿ ಬರೆಯಬಹುದು, ಅಕ್ಟೋಬರ್‌ನಿಂದ ಪದವಿ ತರಗತಿಗಳ ಹೊಸ ಶೈಕ್ಷಣಿಕ ವರ್ಷ ಆರಂಭವಾಗಲಿದ್ದು, ಬಿಎಸ್ಸಿ ಕೋರ್ಸ್‌ಗೆ ಈ ಬಾರಿ ಸಿಇಟಿ ಅಂಕ ಪರಿಗಣಿಸುವುದಿಲ್ಲ ಎಂದು ಉಪಮುಖ್ಯಮಂತ್ರಿ ಹಾಗೂ ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥ ನಾರಾಯಣ ​ ತಿಳಿಸಿದ್ದಾರೆ. 2021-22ನೇ ಸಾಲಿನ ಶೈಕ್ಷಣಿಕ ಚಟುವಟಿಕೆಗಳ ಬಗ್ಗೆ ಎಲ್ಲ ಕುಲಪತಿಗಳ ಜತೆ … Continued

ರಜೆ ಘೋಷಿಸಿದರೆ ಬಿಬಿಎಂಪಿ ಹಾಸ್ಟೆಲ್‌/ ಪಿಜಿ ವಿದ್ಯಾರ್ಥಿಗಳಿಗೆ ಮನೆಗೆ ತೆರಳುವಂತೆ ಬಿಬಿಎಂಪಿ ಸೂಚನೆ

ಬೆಂಗಳೂರು: ಕೋವಿಡ್‌-19 ಪ್ರಕರಣಗಳನ್ನು ಗಮನದಲ್ಲಿಟ್ಟುಕೊಂಡು ತಮ್ಮ ಸಂಸ್ಥೆಗಳು ರಜಾದಿನಗಳನ್ನು ಘೋಷಿಸಿದರೆ ಪಿಜಿಗಳು ಅಥವಾ ಹಾಸ್ಟೆಲ್‌ಗಳಲ್ಲಿ ವಾಸಿಸುವ ಬೆಂಗಳೂರಿನ ಹೊರಗಿನ ವಿದ್ಯಾರ್ಥಿಗಳು ನಗರವನ್ನು ತೊರೆಯುವಂತೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಸೋಮವಾರ ಕೇಳಿಕೊಂಡಿದೆ. ಕೋಣೆಗಳ ದಟ್ಟಣೆಯನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ ಎಂದು ಸಲಹಾ ಹೇಳಿದೆ. “110 ಚದರ ಅಡಿ ವಾಸಿಸುವ ಸ್ಥಳವು ಉಲ್ಬಣ ಕಡಿಮೆಯಾಗುವವರೆಗೂ ಇಬ್ಬರು ವ್ಯಕ್ತಿಗಳಿಗಿಂತ … Continued

ದ್ವಿತೀಯ ಪಿಯು ವಿದ್ಯಾರ್ಥಿಗಳ ಫಲಿತಾಂಶಕ್ಕೆ ಹೈಕೋರ್ಟ್ ತಡೆ

ಬೆಂಗಳೂರು: ಕೊರೊನಾ ಹೆಚ್ಚಳದ ಕಾರಣಕ್ಕೆ ದ್ವಿತೀಯ ಪಿಯು ಪರೀಕ್ಷೆ ರದ್ದುಗೊಳಿಸಿ, ಎಲ್ಲ ವಿದ್ಯಾರ್ಥಿಗಳನ್ನು ಪಾಸು ಮಾಡಿ ಆದೇಶ ಹೊರಡಿಸಿದ್ದ ಸರ್ಕಾರಕ್ಕೆ ಗುರುವಾರದ ವರೆಗೆ ಫಲಿತಾಂಶ ಪ್ರಕಟಿಸದಂತೆ ಹೈಕೋರ್ಟ್‌ ತಡೆ ನೀಡಿದೆ. ರಿಪೀಟರ್ಸ್​​ಗೆ ಪರೀಕ್ಷೆ ಇರುತ್ತದೆ ಎಂದು ಹೇಳಿದ್ದ ಸರ್ಕಾರದ ನಿರ್ಧಾರಕ್ಕೆ ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ ಎಂದು ನ್ಯೂಸ್‌18 ಕನ್ನಡ.ಕಾಮ್‌ ವರದಿ ಮಾಡಿದೆ. ದ್ವಿತೀಯ ಪಿಯು ವಿದ್ಯಾರ್ಥಿಗಳನ್ನು … Continued

ಪೊಲೀಸ್ ಗೌರವಗಳೊಂದಿಗೆ ಇಂದು ಪಂಚನಹಳ್ಳಿಯಲ್ಲಿ ಸಂಚಾರಿ ವಿಜಯ ಅಂತ್ಯಕ್ರಿಯೆ

ಚಿಕ್ಕಮಗಳೂರು: ರಸ್ತೆ ಅಪಘಾತದಲ್ಲಿ ಮೃತಪಟ್ಟ ಕನ್ನಡ ಚಲನಚಿತ್ರ ನಟ ಸಂಚಾರಿ ವಿಜಯ ಅವರ ಅಂತ್ಯ ಸಂಸ್ಕಾರ ಸ್ವಗ್ರಾಮ ಪಂಚನಹಳ್ಳಿಯಲ್ಲಿ ಇಂದು (ಮಂಗಳವಾರ) ನಡೆಯಲಿದ್ದು, ಸಿದ್ಧತೆ ನಡೆಸಲಾಗುತ್ತಿದೆ. ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಪಂಚನಹಳ್ಳಿ ಗ್ರಾಮದಲ್ಲಿ ವಿಜಯ ಸ್ನೇಹಿತ ರಘು ತೋಟದಲ್ಲಿ ಅಂತ್ಯ ಸಂಸ್ಕಾರದ ನಡೆಯಲಿದೆ. ಲಿಂಗಾಯತ ಸಮುದಾಯದ ವಿಧಿ ವಿಧಾನದಂತೆ ಅಂತ್ಯಸಂಸ್ಕಾರ ನಡೆಯಲಿದ್ದು, ಅಂತಿಮ ವಿಧಿ … Continued

ಸಿಇಟಿ 2021: ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭ

ಬೆಂಗಳೂರು: ರಾಜ್ಯದ ಸಂಸ್ಥೆಗಳಲ್ಲಿ ವಿವಿಧ ವೃತ್ತಿಪರ ಕೋರ್ಸ್​​ಗಳಿಗೆ ಸೇರ ಬಯಸುವ ವಿದ್ಯಾರ್ಥಿಗಳು ಅಧಿಕೃತ ಪೋರ್ಟಲ್​​ನಲ್ಲಿ ಸಿಇಟಿಗೆ ಜೂನ್​ 15ರಿಂದ ಅರ್ಜಿ ಸಲ್ಲಿಸಬಹುದಾಗಿದೆ. 2021ರ ಸಿಯಟಿ​ ಪರೀಕ್ಷೆ ಆಗಸ್ಟ್​ 28 ಮತ್ತು 29ರಂದು ನಡೆಯಲಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಂಗಳವಾರದಿಂದ (ಜೂನ್‌ ೧೫) ಜುಲೈ 10ರ ವರೆಗೆ ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಎಂಜಿನಿಯರಿಂಗ್, … Continued

ಹುಬ್ಬಳ್ಳಿಯಲ್ಲಿ ತಪ್ಪಿದ ಅವಘಡ: ಟೈರ್‌ನಲ್ಲಿ ದೋಷ; ಹಾರ್ಡ್‌ ಲ್ಯಾಂಡಿಂಗ್‌ ಆದ ವಿಮಾನ

ಹುಬ್ಬಳ್ಳಿ:ಕಣ್ಣೂರುನಿಂದ ಆಗಮಿಸಿದ್ದ ಇಂಡಿಗೋ ವಿಮಾನ, ಇಲ್ಲಿನ ವಿಮಾನ ನಿಲ್ದಾಣದಲ್ಲಿ ಹಾರ್ಡ್‌ ಲ್ಯಾಂಡಿಂಗ್‌ ಆಗಿದೆ. ಸೋಮವಾರ ರಾತ್ರಿ 8:30ರ ಸುಮಾರಿಗೆ ನಡೆದಿದೆ, ಅದೃಷ್ಟವಶಾತ್ ಯಾವುದೇ ಅನಾಹುತ ನಡೆದಿಲ್ಲ. ಪ್ರಯಾಣಿಕರನ್ನು ಹೊತ್ತುಕೊಂಡು ಬಂದಿದ್ದ ವಿಮಾನವನ್ನು, ಪೈಲಟ್‌ ಮೊದಲು ರನ್ ವೇ ದಲ್ಲಿ ಇಳಿಸಲು ಪ್ರಯತ್ನಿಸಿದ್ದಾನೆ. ಅದು ಆಗಿದಿದ್ದಾಗ ಎರಡನೇ ಬಾರಿ ಇಳಿಸಲು ಯತ್ನಿಸಿದಾಗ ಹಾರ್ಡ್‌ ಲ್ಯಾಂಡಿಂಗ್‌ ಆಗಿ ಟೈರ್‌ … Continued

ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೆಸರಲ್ಲಿ ಸುಳ್ಳು ನೋಟಿಸ್‌ ಕಳುಹಿಸಿ ವಿಧವೆಯಿಂದ 80 ಲಕ್ಷ ರೂ. ಎಗರಿಸಿದ ನಕಲಿ ವೈದ್ಯ..!

ಬೆಂಗಳೂರು: ಹೃದಯ ತಜ್ಞ ಎಂದು ಹೇಳಿಕೊಂಡು ನಕಲಿ ವೈದ್ಯನೊಬ್ಬ ಬೆಂಗಳೂರಿನ ಮಹಿಳೆಯೊಬ್ಬರಿಗೆ ಮೋಸ ಮಾಡಿರುವ ಘಟನೆ ವರದಿಯಾಗಿದೆ. ಹೃದಯ ಸಂಬಂಧಿ ಕಾಯಿಲೆ ಇರುವ ಕಾರಣ ಹೃದಯ ತಜ್ಞರಿಗಾಗಿ ಇನ್​ಸ್ಟಾಗ್ರಾಂನಲ್ಲಿ ಹುಡುಕಾಟ ನಡೆಸಿದ್ದ ಮಹಿಳೆ ಈ ನಕಲಿ ವೈದ್ಯನಿಂದ 80 ಲಕ್ಷ ರೂ.ಗಳನ್ನು ಕಳೆದುಕೊಂಡಿದ್ದಾರೆ. ಈ ಮಹಿಳೆ ತನಗೆ ಚಿಕಿತ್ಸೆಗಾಗಿ ಇನ್​ಸ್ಟಾಗ್ರಾಂನಲ್ಲಿ ವೈದ್ಯರನ್ನು ಹುಡುಕುವ ವೇಳೆ ಮಾಬಿಸ್ … Continued