ಗಮನಿಸಿ.. ನಾಳೆಯಿಂದ ‘4-ಅಂಕಿಯ ಭದ್ರತಾ ಕೋಡ್’ ಹೊಸ ವೈಶಿಷ್ಟ್ಯ ಪರಿಚಯಿಸುವ ಕೋವಿನ್ ವ್ಯವಸ್ಥೆ

ಕೋವಿನ್ ವ್ಯವಸ್ಥೆಯು ಮೇ 8 ರಿಂದ ಕೋವಿನ್ ಅಪ್ಲಿಕೇಶನ್‌ನಲ್ಲಿ “4 ಅಂಕಿಯ ಭದ್ರತಾ ಕೋಡ್” ನ ಹೊಸ ವೈಶಿಷ್ಟ್ಯ ಪರಿಚಯಿಸುತ್ತಿದೆ. ಪರಿಶೀಲನೆಯ ನಂತರ ಫಲಾನುಭವಿಯು ಅರ್ಹರೆಂದು ಕಂಡುಬಂದಲ್ಲಿ, ಲಸಿಕೆ ಪ್ರಮಾಣವನ್ನು ನೀಡುವ ಮೊದಲು, ವೆರಿಫೈಯರ್ / ವ್ಯಾಕ್ಸಿನೇಟರ್ ಅವನ/ ಅವಳ 4 ಅಂಕಿಯ ಕೋಡ್ ಬಗ್ಗೆ ಫಲಾನುಭವಿಗಳನ್ನು ಕೇಳುತ್ತದೆ ಮತ್ತು ನಂತರ ಲಸಿಕೆ ಸ್ಥಿತಿಯನ್ನು ಸರಿಯಾಗಿ … Continued

ಕರ್ನಾಟಕದ ಕೆಲವೆಡೆ ಮೂರು ದಿನಗಳ ಮಳೆ ಮುನ್ಸೂಚನೆ

ಬೆಂಗಳೂರು: ಕರ್ನಾಟಕದ ಕೆಲ ಭಾಗಗಳಲ್ಲಿ ಮುಂದಿನ ಮೂರು ದಿನಗಳ ಕಾಲ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ರಾಜಧಾನಿ ಬೆಂಗಳೂರು ಸೇರಿದಂತೆ ಕರಾವಳಿ, ಮಲೆನಾಡಿನಲ್ಲಿ ಮಳೆಯಾಗುವ ನಿರೀಕ್ಷೆ ಇದೆ ಎಂಬುದಾಗಿ ಹವಾಮಾನು ಇಲಾಖೆ ಮುನ್ಸೂಚನೆ ನೀಡಿದೆ. ಕೇಂದ್ರ ಹವಾಮಾನ ಇಲಾಖೆ ಮಾಹಿತಿ ಬಿಡುಗಡೆ ಮಾಡಿದ್ದು, ರಾಜ್ಯದ ಕರಾವಳಿ ಹಾಗೂ ಮಲೆನಾಡು ಪ್ರದೇಶದಲ್ಲಿ ಮುಂದಿನ ಮೂರು … Continued

ಮೇ 16ರ ವರೆಗೆ ಕರ್ನಾಟಕಕ್ಕೆ 2.62 ಲಕ್ಷ ರೆಮ್ಡೆಸಿವಿರ್ ಇಂಜೆಕ್ಷನ್

ನವ ದೆಹಲಿ: ಕೊರೊನಾ ಸೋಂಕಿತರ ಅಗತ್ಯದ ರೆಮ್ಡೆಸಿವಿರ್ ಮರು ಹಂಚಿಕೆ ಮಾಡಿರುವ ಕೇಂದ್ರ ಸರ್ಕಾರ ಕರ್ನಾಟಕಕ್ಕೆ ಮೇ 1ರಿಂದ 16ರ ವರೆಗೆ 2.62 ಲಕ್ಷ ಇಂಜೆಕ್ಷನ್ ಗಳನ್ನು ಪೂರೈಕೆ ಮಾಡಲಿದೆ. ಈ ಬಗ್ಗೆ ಮಾಹಿತಿ ನೀಡಿರುವ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ, ಕರ್ನಾಟಕದ ರೆಮ್ಡೆಸಿವಿರ್ ಹಂಚಿಕೆಯನ್ನು ಮೇ 1ರಿಂದ ಮೇ 16ರವರೆಗೆ 2,62,346ಕ್ಕೆ … Continued

ಸರ್ಕಾರದಿಂದ ಖಾಸಗಿ ಆಸ್ಪತ್ರೆಗಳಲ್ಲಿ ಸಿಟಿ ಸ್ಕ್ಯಾನಿಂಗ್‌ಗೆ ದರ ನಿಗದಿ

ಬೆಂಗಳೂರು: ಖಾಸಗಿ ಆಸ್ಪತ್ರೆಗಳಲ್ಲಿ ಸಿ.ಟಿ. ಸ್ಕ್ಯಾನಿಂಗ್ ದರ ನಿಗದಿಪಡಿಸಿ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ ಆದೇಶಿಸಿದ್ದಾರೆ. ಕೆಲ ಆಸ್ಪತ್ರೆಗಳಲ್ಲಿ ರೋಗಿಗಳಿಂದ ಹೆಚ್ಚಿನ ಹಣ ವಸೂಲಿ ಮಾಡಲಾಗುತ್ತಿದೆ ಎಂಬ ದೂರುಗಳ ಹಿನ್ನೆಲೆಯಲ್ಲಿ ಈ ಆದೇಶ ಹೊರಡಿಸಲಾಗಿದೆ. ಇನ್ನು ಮುಂದೆ ಖಾಸಗಿ ಆಸ್ಪತ್ರೆಗಳಲ್ಲಿ ಸಿ.ಟಿ.ಸ್ಕ್ಯಾನಿಂಗ್ ಗಾಗಿ 1500 ರೂಪಾಯಿ ನಿಗದಿ ಪಡಿಸಲಾಗಿದೆ. ಒಂದು ವೇಳೆ ನಿಗದಿಪಡಿಸಿರುವುದಕ್ಕಿಂತ … Continued

ಜನರು ಸಹಕರಿಸದಿದ್ದರೆ ಮೇ 12ರ ನಂತರ ಕರ್ನಾಟಕದಲ್ಲಿ ಲಾಕ್ ಡೌನ್ :ಸುಳಿವು ನೀಡಿದ ಸಿಎಂ ಬಿಎಸ್‌ವೈ

ಬೆಂಗಳೂರು: ಜನರು ಸಹಕರಿಸದಿದ್ದರೆ ಮತ್ತು ಕೋವಿಡ್ -19 ಸುರಕ್ಷತಾ ಪ್ರೋಟೋಕಾಲ್‌ಗಳನ್ನು ಉಲ್ಲಂಘಿಸಿದರೆ ರಾಜ್ಯದಲ್ಲಿ ಲಾಕ್‌ಡೌನ್ ವಿಧಿಸಲಾಗುತ್ತದೆ ಎಂದು ಕರ್ನಾಟಕ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಶುಕ್ರವಾರ ಸುಳಿವು ನೀಡಿದ್ದಾರೆ. ಜನರು ಜನತಾ ಕರ್ಫ್ಯೂವನ್ನು ಸರಿಯಾಗಿ ಅನುಸರಿಸುತ್ತಿಲ್ಲ. ಅವರು ನಮ್ಮ ಎಚ್ಚರಿಕೆ ನಿಯಮಗಳನ್ನು ಪಾಲಿಸುತ್ತಿಲ್ಲ. ಆದ್ದರಿಂದ ಲಾಕ್ ಡೌನ್ ಅನಿವಾರ್ಯವಾಗಬಹುದು” ಎಂದು ಮುಖ್ಯಮಂತ್ರಿ ಯಡಿಯೂರಪ್ಪತಿಳಿಸಿದರು. ಅವರು ಅವರು … Continued

ಕೇಂದ್ರದಿಂದ ಕರ್ನಾಟಕಕ್ಕೆ 1200 ಮೆ.ಟನ್ ಆಮ್ಲಜನಕ ಪೂರೈಕೆ ಮಾಡಿ ಎಂದ ಹೈಕೋರ್ಟ್‌ ಆದೇಶಕ್ಕೆ ತಡೆ ನೀಡಲು ಸುಪ್ರೀಂಕೋರ್ಟ್‌ ನಿರಾಕರಣೆ

ನವ ದೆಹಲಿ: ಕರ್ನಾಟಕಕ್ಕೆ 1,200 ಮೆಟ್ರಿಕ್ ಟನ್ ಆಮ್ಲಜನಕವನ್ನು ಕಳುಹಿಸುವಂತೆ ಕೇಳಿದ ಹೈಕೋರ್ಟ್ ಆದೇಶದ ವಿರುದ್ಧ ಕೇಂದ್ರವು ಸಲ್ಲಿಸಿದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ತಿರಸ್ಕರಿಸಿದೆ. ಕರ್ನಾಟಕ ಹೈಕೋರ್ಟ್ ಆದೇಶವು ಎಚ್ಚರಿಕೆಯಿಂದ, ಮಾಪನಾಂಕ ನಿರ್ಣಯಿಸಿ ಮಾಡಿದ ತೀರ್ಮಾನವಾಗಿದೆ ಮತ್ತು ಕೇಂದ್ರದ ಮನವಿಯನ್ನು ಪುರಸ್ಕರಿಸಲು ನಮಗೆ ಯಾವುದೇ ಕಾರಣ ಕಾಣುವುದಿಲ್ಲ” ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಕೋವಿಡ್‌-19 … Continued

ಮೂರನೇ ಕೋವಿಡ್ ಅಲೆ ಮಕ್ಕಳನ್ನೂ ತೀವ್ರವಾಗಿ ಬಾಧಿಸಬಹುದು:ಎಚ್ಚರಿಕೆ

ಬೆಂಗಳೂರು: ಮುಂದಿನ ಮತ್ತು ಮೂರನೆಯ ಕೋವಿಡ್ ಅಲೆಯು ಮಕ್ಕಳಿಗೆ ಹೆಚ್ಚು ಅಪಾಯಕಾರಿಯಾಗಲಿದೆ ಎಂದು ಮಕ್ಕಳಲ್ಲಿ ಹೆಚ್ಚುತ್ತಿರುವ ಸೋಂಕುಗಳ ವಿರುದ್ಧ ಸಲಹೆ ನೀಡುವಾಗ ಮಾತೃತ್ವ ಆಸ್ಪತ್ರೆಗಳಿಗೆ ಎಚ್ಚರಿಕೆ ನೀಡಲಾಗಿದೆ. ಡಬಲ್ ಮ್ಯುಟೆಂಟ್ಸ್, ಹೆಚ್ಚು ಸಾಂಕ್ರಾಮಿಕವಾಗಿದ್ದು, 0-16 ವರ್ಷದೊಳಗಿನವರಿಗೂ ಸೋಂಕು ತಗುಲಿದೆ ಎಂದು ಅದು ಹೇಳಿದೆ . ಪೋಷಕರು ಜಾಗರೂಕರಾಗಿರಬೇಕು ಮತ್ತು ಅವರ ಕಾಪಾಡುವುದಕ್ಕೆ ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು … Continued

ಕರ್ನಾಟಕದಲ್ಲಿ ಗುರುವಾರವೂ 50 ಸಾವಿರ ಸಮೀಪ ದೈನಂದಿನ ಕೊರೊನಾ ಸೋಂಕು

ಬೆಂಗಳೂರು : ರಾಜ್ಯದಲ್ಲಿ ಕೊರೋನಾ 2ನೇ ಅಲೆ ಆರ್ಭಟ ಮುಂದುವರೆದಿದ್ದು ಗುರುವಾರ ರಾಜ್ಯಾದ್ಯಂತ 49058 ಜನರಲ್ಲಿ ಸೋಂಕು ಪತ್ತೆಯಾಗಿದೆ. ಇದೇ ಸಮಯದಲ್ಲಿ 328 ಜನ ಮೃತಪಟ್ಟಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 1790104ಕ್ಕೆ ಏರಿಕೆಯಾಗಿದೆ ಹಾಗೂ ಒಟ್ಟು ಸಾವಿನ ಸಂಖ್ಯೆ 17212ಕ್ಕೆ ಏರಿಕೆಯಾಗಿದೆ. ಬೆಂಗಳೂರಿನಲ್ಲಿ ಗುರುವಾರ 23706 ಜನರಿಗೆ ಕೊರೊನಾ ತಗುಲಿದ್ದು, 139 ಮಂದಿ … Continued

ಕೋವಿಡ್ ಸೋಂಕಿತರ ಚಿಕಿತ್ಸೆಯ ದರಗಳ ಪರಿಷ್ಕರಿಸಿದ ರಾಜ್ಯ ಸರ್ಕಾರ

ಬೆಂಗಳೂರು : ಆಸ್ಪತ್ರೆಗಳಲ್ಲಿ ಹಾಸಿಗೆ ಸೌಲಭ್ಯದ ಕೊರತೆ ಹಾಗೂ ಹಾಸಿಗೆಗಳಿಗೆ ದುಬಾರಿ ಬೆಲೆಯನ್ನು ಹೇಳುವಂತಹ ಪ್ರಕರಣಗಳು ಸಾಕಷ್ಟು ಬೆಳಕಿಗೆ ಬಂದ ಹಿನ್ನೆಲೆಯಲ್ಲಿ, ರಾಜ್ಯ ಸರ್ಕಾರ ಕೋವಿಡ್ ರೋಗಿಗಳ ಚಿಕಿತ್ಸೆಗಾಗಿ ಖಾಸಗಿ ಆರೋಗ್ಯ ಸೇವೆಗೆ ನೀಡುತ್ತಿರುವ ಪ್ಯಾಕೇಜ್ ದರಗಳನ್ನು ಪರಿಷ್ಕರಿಸಿ ಆದೇಶ ಹೊರಡಿಸಿದೆ. ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ನೇತೃತ್ವದಲ್ಲಿ ಖಾಸಗಿ ಆಸ್ಪತ್ರೆಗಳು ಕೈಗೊಂಡಿರುವ ಸಭೆಯಲ್ಲಿ, ಮಾನವ … Continued

ಬಿಡುಗಡೆಯಾಗುವ ರೋಗಿಗಳು-ಖಾಲಿ ಬೆಡ್ ಬಗ್ಗೆ ಪ್ರತಿದಿನ ಮಾಹಿತಿ ನೀಡಿ; ಖಾಸಗಿ ವೈದ್ಯಕೀಯ ಕಾಲೇಜಿನವರಿಗೆ ಸೂಚನೆ

ಬೆಂಗಳೂರು: ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿ  ಚಿಕಿತ್ಸೆ ಪಡೆದು ಬಿಡುಗಡೆ ಹೊಂದುವ ಕೋವಿಡ್ ಸೋಂಕಿತರು ಮತ್ತು ಖಾಲಿ ಆಗುವ ಹಾಸಿಗೆಗಳ ಸ್ಟೇಟಸ್ ಅನ್ನು ಇನ್ನು ಮುಂದೆ ಪ್ರತಿದಿನ ಕೋವಿಡ್ ವಾರ್ ರೂಂ  ಮತ್ತು ಆಪ್ತಮಿತ್ರ ಪೋರ್ಟಲ್ ಗೆ ನೀಡುವಂತೆ ಖಾಸಗಿ ಆಸ್ಪತ್ರೆಗಳ ಮಾಲೀಕರಿಗೆ ಕಟ್ಟು ನಿಟ್ಟಿನ‌ ಸೂಚನೆ ನೀಡಲಾಗಿದೆ ಎಂದು ಕೋವಿಡ್ ಚಿಕಿತ್ಸಾ ಹಾಸಿಗೆ ಉಸ್ತುವಾರಿ ಹಾಗೂ ಗೃಹ … Continued