ಬೆಂಗಳೂರು, ಅಫ್ಜಲಪುರದಲ್ಲಿ ಕೋವಿಡ್‌ ರೋಗಿಗಳ ಸಾವು: ಆಮ್ಲಜನಕ ಕೊರತೆ ಕೂಗು

ಬೆಂಗಳೂರು: ಚಾಮರಾಜನಗರ ಜಿಲ್ಲೆಯ ದುರಂತ ಘಟನೆ ಬೆನ್ನಲ್ಲೇ ರಾಜ್ಯದಲ್ಲಿ ಮತ್ತೆ ಆಮ್ಲಜನಕದ ಕೊರತೆಯಿಂದ ಕೋವಿಡ್‌ ರೋಗಿಗಳು ಮೃತಪಟ್ಟ ಬಗ್ಗೆ ವರದಿಯಾಗಿದೆ. ಬೆಂಗಳೂರಿನ ಯಲಹಂಕದಲ್ಲಿರುವ ಆರ್ಕ್ ಆಸ್ಪತ್ರೆಯಲ್ಲಿ ಇಬ್ಬರು ಪ್ರಾಣ ಕಳೆದುಕೊಂಡಿದ್ದಾರೆ. ಆಸ್ಪತ್ರೆಯಲ್ಲಿ ಆಮ್ಲಜನಕದ ಕೊರತೆಯಿಂದಾಗಿ ಮೃತಪಟ್ಟಿದ್ದಾರೆ ಎಂದು ಮೃತರ ಸಂಬಂಧಿಕರು ಆರೋಪಿಸಿದ್ದಾರೆ. ಆದರೆ, ಆಸ್ಪತ್ರೆ ಆಡಳಿತ ಮಂಡಳಿ, ಕೋವಿಡ್ ಸೋಂಕಿನಿಂದ ಮೃತ ಪಟ್ಟಿದ್ದಾರೆ ಎಂದು ಹೇಳಿದೆ. … Continued

ಚಾಮರಾಜನಗರ ಆಸ್ಪತ್ರೆಯಲ್ಲಿ ದುರಂತ: ಶಿವಯೋಗಿ ಕಳಸದ ವಿಚಾರಣಾಧಿಕಾರಿ

ಬೆಂಗಳೂರು: ಚಾಮರಾಜನಗರ ಜಿಲ್ಲೆಯಲ್ಲಿ 24 ಗಂಟೆಯಲ್ಲಿ ಸಂಭವಿಸಿದ 23 ಮಂದಿಯ ಸಾವಿನ ಪ್ರಕರಣಗಳ ಬಗ್ಗೆ ಉನ್ನತ ಮಟ್ಟದ ತನಿಖೆಗೆ ಆದೇಶಿಸಿರುವ ರಾಜ್ಯ ಸರ್ಕಾರ, ಕೆಎಸ್‍ಆರ್‍ಟಿಸಿ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಕಳಸದ ಅವರನ್ನು ವಿಚಾರಣಾಧಿಕಾರಿಯನ್ನಾಗಿ ನೇಮಿಸಿದೆ. ಮೂರು ದಿನಗಳ ಒಳಗಾಗಿ ಸರ್ಕಾರಕ್ಕೆ ವರದಿ ನೀಡಬೇಕು ಎಂದು ಮುಖ್ಯಮಂತ್ರಿ ಅವರ ಸೂಚನೆ ಆಧರಿಸಿ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ … Continued

ಸತ್ತಿದ್ದಾನೆಂದು ದೇಹ ಕೊಟ್ಟ ಆಸ್ಪತ್ರೆ, ಅಂತ್ಯಸಂಸ್ಕಾರದ ನಂತರ ಗೊತ್ತಾಯಿತು ವಾಸ್ತವ..!

ಬೆಳಗಾವಿ: ಬದುಕಿದ್ದ ಕೋವಿಡ್ -19 ರೋಗಿಯೊಬ್ಬನನ್ನು ಮೃತಪಟ್ಟರೆಂದು ಘೋಷಿಸಿ ಎಡವಟ್ಟು ಮಾಡಿದ ಬೆಳಗಾವಿ ಖಾಸಗಿ ಆಸ್ಪತ್ರೆಯೊಂದು ಇನ್ನೊಬ್ಬ ವ್ಯಕ್ತಿಯ ಶವವನ್ನು ಅವರ ಸಂಬಂಧಿಗಳಿಗೆ ಹಸ್ತಾಂತರಿಸಿ ಮತ್ತೊಂದು ಎಡವಟ್ಟು ಮಾಡಿದ ಘಟನೆ ವರದಿಯಾಗಿದೆ. ಅಥಣಿ ತಾಲೂಕಿನ ಮೋಲೆ ಗ್ರಾಮದ ಪಯಪ್ಪ ಸತ್ಯಪ್ಪ ಹಲಗಲಿ ಅವರನ್ನು ಕೋವಿಡ್ -19 ಚಿಕಿತ್ಸೆಗಾಗಿ ಮೇ 1 ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ … Continued

ನನ್ನ ತಾಯಿ ಕೊರೊನಾದಿಂದ ಗಂಭೀರ ಸ್ಥಿತಿಯಲ್ಲಿದ್ದಾರೆ..ಆಸ್ಪತ್ರೆಗಳು ಬೆಡ್ ಇಲ್ಲ ಎನ್ನುತ್ತಿವೆ; ಕಾಂಗ್ರೆಸ್‌ ಸಭೆಯಲ್ಲಿ ಕಣ್ಣೀರಿಟ್ಟ ಶಾಸಕಿ

ಬೆಂಗಳೂರು: ಕೊರೊನಾ ಸೋಂಕಿನಿಂದ ಜನಪ್ರತಿನಿಧಿಗಳೇ ತಮ್ಮ ಕುಟುಂಬ ಸದಸ್ಯರಿಗೆ ಆಸ್ಪತ್ರೆಗಳಲ್ಲಿ ಬೆಡ್ ಒದಗಿಸಲಾಗದೇ ಕಣ್ಣೀರು ಹಾಕುತ್ತಿದ್ದಾರೆ. ತನ್ನ ತಾಯಿ ಕೊರೊನಾ ಸೋಂಕಿನಿಂದ ಪರದಾಡುತ್ತಿದ್ದಾರೆ. ಯಾವುದೇ ಆಸ್ಪತ್ರೆಗಳಿಗೆ ಕೇಳಿದರೂ ಬೆಡ್ ಇಲ್ಲ ಎಂದು ಹೇಳುತ್ತಿದ್ದಾರೆ. ಏನು ಮಾಡಬೇಕೆಂದೇ ತೋಚುತ್ತಿಲ್ಲ ಎಂದು ಧಾರವಾಡ ಜಿಲ್ಲೆಯ ಕುಂದಗೋಳ ಮತಕ್ಷೇತ್ರದ ಕಾಂಗ್ರೆಸ್ ಶಾಸಕಿ ಕುಸುಮಾ ಶಿವಳ್ಳಿ ಕಣ್ಣೀರು ಹಾಕಿರುವ ಘಟನೆ ನಡೆದಿದೆ. … Continued

ಕರ್ನಾಟಕದಲ್ಲಿ ಸೋಮವಾರ ಮತ್ತೆ 40 ಸಾವಿರಕ್ಕೂ ಹೆಚ್ಚು ಕೊರೊನಾ ಪ್ರಕರಣಗಳು ದಾಖಲು

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಎರಡನೇ ಅಲೆ ಅಬ್ಬರ ಮುಂದುವರೆದಿದ್ದು ಕಳೆದ 24 ಗಂಟೆಯಲ್ಲಿ 44,438 ಏಕದಿನದ ಕೊರೊನಾ ಪ್ರಕರಣಗಳು ವರದಿಯಾಗಿದೆ.ಇದೇ ಸಮಯದಲ್ಲಿ ರಾಜ್ಯದಲ್ಲಿ 239 ಮಂದಿ ಸೋಂಕಿಗೆ ಮೃತಪಟ್ಟಿದ್ದಾರೆ. ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 16,46,303ಕ್ಕೆ ಏರಿಕೆಯಾಗಿದೆ. ಸಾವಿನ ಸಂಖ್ಯೆ 16,250ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ. ಬೆಂಗಳೂರಿನಲ್ಲಿ ಸೋಮವಾರ … Continued

ಚಾಮರಾಜನಗರ ಆಸ್ಪತ್ರೆ ದುರಂತ: ಆಮ್ಲಜನಕದ ಕೊರತೆಯಿಂದ ಸತ್ತಿದ್ದು 23ರಲ್ಲಿ ಮೂವರು ಮಾತ್ರ

ಬೆಂಗಳೂರು: ಚಾಮರಾಜನಗರ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಆಮ್ಲಜನಿಕ ಕೊರತೆಯಿಂದ 24 ರೋಗಿಗಳು ಮೃತಪಟ್ಟಿರುವ ಘಟನೆ ಬಗ್ಗೆ ಎಲ್ಲಿ ಲೋಪವಾಗಿದೆ ಎಂದು ಸೂಕ್ತ ತನಿಖೆ ನಡೆಸುತ್ತೇವೆ. ಈ ಬಗ್ಗೆ ತನಿಖೆಯಲ್ಲಿ ಸತ್ಯಸತ್ಯತೆ ಹೊರಬರಲಿದೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿದ ಅವರು, ನಿನ್ನೆ ಬೆಳಗ್ಗೆ 7 ಗಂಟೆಯಿಂದ ಮಧ್ಯರಾತ್ರಿ ವರೆಗೆ 14 … Continued

ಚಾಮರಾಜನಗರ ರೋಗಿಗಳ ಸಾವಿನ ಪ್ರಕರಣ: ವರದಿ ನೀಡುವಂತೆ ಸೂಚನೆ

ಬೆಂಗಳೂರು: ಚಾಮರಾಜನಗರ ಆಸ್ಪತ್ರೆಯಲ್ಲಿ ರೋಗಿಗಳ ಸಾವಿನ ಪ್ರಕರಣ ಕುರಿತು ಸಮಗ್ರ ತನಿಖೆ ಮಾಡಿ ವರದಿ ನೀಡುವಂತೆ ರಾಜ್ಯ ಪೊಲೀಸ್ ಮಹಾನಿರ್ದೇಶಕ ರಿಗೆ ಸೂಚನೆ ನೀಡಿರುವುದಾಗಿ ಗೃಹ ಖಾತೆ ಸಚಿವರಾದ ಬಸವರಾಜ ಬೊಮ್ಮಾಯಿ ತಿಳಿಸಿದರು. ಬೆಂಗಳೂರಿನಲ್ಲಿ ಸೋಮವಾರ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆ ಹಮ್ಮಿಕೊಂಡಿದ್ದ ರಾಸಾಯನಿಕ ಸಿಂಪರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬಳಿಕ ಅವರು ಸುದ್ದಿಗಾರರಿಗೆ ಈ … Continued

ಕೆಲವೇ ಗಂಟೆಗಳ ಆಮ್ಲಜನಕ ಉಳಿದಿದೆ: ಎರಡು ಬೆಂಗಳೂರು ಆಸ್ಪತ್ರೆಗಳಿಂದ ಎಸ್‌ಒಎಸ್‌ಗೆ ಎಚ್ಚರಿಕೆ ಕರೆಗಂಟೆ

ಬೆಂಗಳೂರು: ಕಳೆದ ಕೆಲವು ದಿನಗಳಿಂದ ತುರ್ತು ಆಮ್ಲಜನಕವನ್ನು ಪೂರೈಸಬೇಕೆಂದು ಕೋರಿ ಬೆಂಗಳೂರಿನ ಆಸ್ಪತ್ರೆಗಳು ಕರೆಗಳನ್ನು ಹೆಚ್ಚಿಸಿವೆ. ಮೇ 3 ರಂದು, ಬೆಂಗಳೂರಿನ ಆರ್‌ಟಿ ನಗರದಲ್ಲಿರುವ ಖಾಸಗಿ ಆಸ್ಪತ್ರೆ ಮೆಡಾಕ್ಸ್ ಆಸ್ಪತ್ರೆ ಮತ್ತು ಮೈಸೂರು ರಸ್ತೆಯಲ್ಲಿರುವ ರಾಜರಾಜೇಶ್ವರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ, ಆಮ್ಲಜನಕದ ಪೂರೈಕೆ ಕೆಲವೇ ಗಂಟೆಗಳಿರುತ್ತದೆ ಎಂದು ಹೇಳಿವೆ. . ಮೇ 3 ರ … Continued

ಹೌಸ್‌ ಫುಲ್‌.. : ಶವಗಳ ಸಂಖ್ಯೆ ಹೆಚ್ಚಳದಿಂದ ಶವಾಗಾರದ ಗೇಟಿಗೆ ಈ ಫಲಕ..!

ಬೆಂಗಳೂರು; ಕೋವಿಡ್ -19 ಸೋಂಕುಗಳ ಉಲ್ಬಣವು ಆಸ್ಪತ್ರೆಗಳು ಮತ್ತು ಶವಾಗಾರಗಳನ್ನು ಮುಳುಗಿಸಿದೆ, ಕುಟುಂಬಗಳು ತಮ್ಮ ಪ್ರೀತಿಪಾತ್ರರನ್ನು ಅಂತ್ಯಸಂಸ್ಕಾರ ಮಾಡಲು ಸ್ಥಳವನ್ನು ಹುಡುಕಲು ಪರದಾಡುತ್ತಿವೆ. ಕೋವಿಡ್ -19 ರ ಕಾರಣ ಹೆಚ್ಚಿನ ಸಂಖ್ಯೆಯ ಸಾವುನೋವುಗಳಿಂದಾಗಿ ದೇಹಗಳು ರಾಶಿಯಾಗಿರುವುದರಿಂದ, ಹಲವಾರು ಸ್ಮಶಾನಗಳು ಸ್ಥಳಾವಕಾಶದ ಕೊರತೆಯನ್ನು ಎದುರಿಸುತ್ತಿವೆ. ಅಂತಹ ಒಂದು ಪ್ರಕರಣದಲ್ಲಿ, ಕರ್ನಾಟಕದ ಚಾಮರಾಜ ಪೇಟೆಯ ಸ್ಮಶಾನವೊಂದರ ಅಧಿಕಾರಿಗಳು ಮೃತ … Continued

ಚಾಮರಾಜನಗರಕ್ಕೆ 250 ಆಮ್ಲಜನಕ ಸಿಲಿಂಡರ್‌ ಕಳುಹಿಸಲಾಗಿದೆ: ಮೈಸೂರು ಜಿಲ್ಲಾಡಳಿತ

ಮೈಸೂರು: ಚಾಮರಾಜನಗರಕ್ಕೆ ಅಧಿಕೃತವಾಗಿ 250 ಆಮ್ಲಜನಕ ಸಿಲಿಂಡರ್‌ ಗಳನ್ನು ಭಾನುವಾರ ಮಧ್ಯರಾತ್ರಿಯ ವೇಳೆಗೆ ಕಳುಹಿಸಲಾಗಿದ್ದು, ಯಾವುದೇ ವಿಳಂಬವಾಗಿಲ್ಲ ಎಂದು ಮೈಸೂರು ಜಿಲ್ಲಾಡಳಿತ ತಿಳಿಸಿದೆ‌. ದ್ರವ ಆಮ್ಲಜನಕ ಬಳ್ಳಾರಿಯಿಂದ ಚಾಮರಾಜನಗರಕ್ಕೆ ಬರಬೇಕಿತ್ತು. ಅದು ಸರಿಯಾದ ಸಮಯದಲ್ಲಿ ಬಂದಿದ್ದೇಯೋ, ಇಲ್ಲವೋ ಗೊತ್ತಿಲ್ಲ. ಆದರೆ ಚಾಮರಾಜನಗರದ ಜಿಲ್ಲಾಡಳಿತದ ಬೇಡಿಕೆಯಂತೆ ಮಾನವೀಯ ದೃಷ್ಟಿಯಿಂದ ಆಮ್ಲಜನಕ ಸಿಲಿಂಡರ್ ಗಳನ್ನು ಕಳುಹಿಸಲಾಗಿದೆ. ಈ ವಿಚಾರದಲ್ಲಿ … Continued