ಕರ್ನಾಟಕದಲ್ಲಿ 1,798 ದೈನಂದಿನ ಕೊರೊನಾ ಸೋಂಕು..ಎರಡನೇ ಅಲೆ ಎಚ್ಚರಿಕೆ

ಬೆಂಗಳೂರು: ಕಳೆದ 24 ಗಂಟೆಯಲ್ಲಿ ( ಶನಿವಾರ) ರಾಜ್ಯದಲ್ಲಿ 1,798 ಕೊರೊನಾ ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ. ಕೊರೋನಾ ಸೋಂಕಿನಿಂದ ಏಳು ಸೋಂಕಿತರು ಮೃತಪಟ್ಟಿದ್ದಾರೆ. ಒಟ್ಟು ಸೋಂಕಿತರ ಸಂಖ್ಯೆ 9,68,487ಕ್ಕೆ ಏರಿಕೆಯಾಗಿದೆ. ಸಾವಿನ ಸಂಖ್ಯೆ 12,432ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ. ಇನ್ನು 12,828 ಸಕ್ರೀಯ ಪ್ರಕರಣಗಳಿದ್ದು, ಈ ಪೈಕಿ … Continued

ಟಿಸಿಎಸ್ ಟೆಕ್‌ಬೈಟ್ಸ್‌‌ ಹುಬ್ಬಳ್ಳಿ ಆವೃತ್ತಿಯ ಪ್ರಶಸ್ತಿ ಬಾಚಿಕೊಂಡ ಧೀರಜ್

ಹುಬ್ಬಳ್ಳಿ: ಜಾಗತಿಕ ಐಟಿ ಸೇವೆ, ಸಲಹೆ ಮತ್ತು ಉದ್ದಿಮೆ ವಹಿವಾಟು ಪರಿಹಾರ ಸಂಘಟನೆಯಾಗಿರುವ ಟಾಟಾ ಕನ್ಸಲ್ಟನ್ಸಿ ಸರ್ವಿಸಸ್ (ಟಿಸಿಎಸ್), ಮತ್ತು ಕರ್ನಾಟಕ ಸರ್ಕಾರ ರಚಿಸಿರುವ ಐಟಿ ಶಿಕ್ಷಣ ಗುಣಮಟ್ಟ ಮಂಡಳಿಯ (ಬಿಐಟಿಇಎಸ್) ಜಂಟಿ ಆಶ್ರಯದಲ್ಲಿ ಎಂಜಿನಿಯರಿಂಗ್ ಕಾಲೇಜ್ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ್ದ ಟಿಸಿಎಸ್ ಟೆಕ್‌ಬೈಟ್ಸ್ ೧೨ನೇ ಆವೃತ್ತಿಯ ಐಟಿ ರಸಪ್ರಶ್ನೆ ಸ್ಪರ್ಧೆಯ ಹುಬ್ಬಳ್ಳಿ ಪ್ರಾದೇಶಿಕ ವಲಯದ ಅಂತಿಮ … Continued

ಕಾಂಗ್ರೆಸ್‌: ಮಸ್ಕಿಯಲ್ಲಿ 29, ಬಸವ ಕಲ್ಯಾಣ 30ರಂದು ನಾಮಪತ್ರ ಸಲ್ಲಿಕೆ

ಬೆಂಗಳೂರು : ಮುಂದಿನ ತಿಂಗಳು ಉಪಚುನಾವಣೆ ನಡೆಯಲಿರುವ ಮಸ್ಕಿಯಲ್ಲಿ ಮಾ. 29 ರಂದು ಹಾಗೂ ಬಸವ ಕಲ್ಯಾಣದಲ್ಲಿ ಮಾ.30 ರಂದು ಕಾಂಗ್ರೆಸ್ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಲಿದ್ದಾರೆ. ಶನಿವಾರ ಪಕ್ಷದ ಕಚೇರಿಯಲ್ಲಿ ನಡೆದ ಮುಖಂಡರ ಸಭೆಯ ನಂತರ ಮಾಧ್ಯಮಗಳಿಗೆ ಶನಿವಾರ ಮಾಹಿತಿ ನೀಡಿದಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ , ಬೆಳಗಾವಿ ಲೋಕಸಭೆ ಕ್ಷೇತ್ರಕ್ಕೆ ಒಬ್ಬರೇ ಅಭ್ಯರ್ಥಿ ಹೆಸರು … Continued

ಇಂದು ವಿಶ್ವ ಗುಬ್ಬಚ್ಚಿ ದಿನ : ಮರೆಯಾಗುತ್ತಿರುವ ಚಿಂವ್‌ಚಿಂವ್ ಗುಬ್ಬಚ್ಚಿಗಳು..!

ತಂತ್ರಜ್ಞಾನ ಬೆಳೆದಂತೆ , ಮನುಷ್ಯನ ಕೈಯಲ್ಲಿ ಮೊಬೈಲ್‌ ಬಂದ ಮೇಲೆ ಗುಬ್ಬಚ್ಚಿಗಳ ಚಿಂವ್‌ಚಿಂವ್ ಮರೆಯಾಗುತ್ತಿದೆ. ಗ್ರಾಮೀಣ ಭಾಗದ ಹಳೆ ಮನೆಗಳ ಮಾಳಿಗೆಯ ಸೂರಿನ ಅಸುಪಾಸಿನಲ್ಲಿ ಮತ್ತು ಗಿಡಮರಗಳಲ್ಲಿ ಗೂಡುಕಟ್ಟಿ ಚಿಲಿಪಿಲಿಗುಟ್ಟುತ್ತಿದ್ದ ಗುಬ್ಬಚ್ಚಿಗಳಿಂದು ಸೂಕ್ತ ನೆಲೆ ಇಲ್ಲದೆ ಅಳಿವಿನ ಅಂಚಿನಲ್ಲಿವೆ ಎಂದರೆ ತಪ್ಪಾಗಲಿಕ್ಕಿಲ್ಲ. ಪಕ್ಷಿ ತಜ್ಞರ ಪ್ರಕಾರ ಅತಿಯಾದ ಮೊಬೈಲ್ ಸ್ಥಾವರಗಳಿಂದ ಹೊರಹೊಮ್ಮುತ್ತಿರುವ ತರಂಗಳಿಂದಲೂ ಗುಬ್ಬಚ್ಚಿಗಳ ಸಂತತಿಗೆ … Continued

ಬಿಜೆಪಿ ಕೋರ್‌ ಕಮಿಟಿ ಸಭೆ: ಉಪಚುನಾವಣೆ ಅಭ್ಯರ್ಥಿಗಳ ಆಯ್ಕೆ ಚರ್ಚೆ

ಬೆಂಗಳೂರು: ಮೂರೂ ಕ್ಷೇತ್ರಗಳ ಉಪಚುನಾವಣೆ ಗೆಲ್ಲಲೇಬೇಕೆಂದು ಬಿಜೆಪಿ ರಣತಂತ್ರ ರೂಪಿಸುತ್ತಿದೆ. ಪಕ್ಷದ ಕಚೇರಿಯಲ್ಲಿ ಶನಿವಾರ ರಾಜ್ಯ ಉಸ್ತುವಾರಿ ಅರುಣ್‍ಸಿಂಗ್, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್, ಸಹ ಉಸ್ತುವಾರಿ ಡಾ.ಅರುಣಾ, ಕೇಂದ್ರ ಸಚಿವರಾದ ಡಿ.ವಿ.ಸದಾನಂದಗೌಡ, ಪ್ರಹ್ಲಾದ್ ಜೋಷಿ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಸೇರಿದಂತೆ ಮತ್ತಿತರರ ನೇತೃತ್ವದಲ್ಲಿ ಕೋರ್ ಕಮಿಟಿ ಸಭೆ ನಡೆಯಿತು. ಸಭೆಯಲ್ಲಿ ಬೆಳಗಅವಿ … Continued

ಮೂರನೇ ಜಂಟಿ ಉಪಗ್ರಹ ಕಾರ್ಯಾಚರಣೆಗಾಗಿ ಭಾರತ-ಫ್ರಾನ್ಸ್ ಕಾರ್ಯನಿರ್ವಹಣೆ: ಇಸ್ರೋ ಅಧ್ಯಕ್ಷ ಕೆ.ಶಿವನ್

ಭಾರತ ಮತ್ತು ಫ್ರಾನ್ಸ್ ತಮ್ಮ ಮೂರನೇ ಜಂಟಿ ಉಪಗ್ರಹ ಕಾರ್ಯಾಚರಣೆಗಾಗಿ ಕೆಲಸ ಮಾಡುತ್ತಿವೆ, ದ್ವಿಪಕ್ಷೀಯ ಬಾಹ್ಯಾಕಾಶ ಸಹಯೋಗವು ಮಾನವ ಬಾಹ್ಯಾಕಾಶ ಹಾರಾಟ ಕಾರ್ಯಕ್ರಮ ಸೇರಿದಂತೆ ಅನೇಕ ಕ್ಷೇತ್ರಗಳಿಗೆ ಪ್ರವೇಶಿಸುತ್ತಿದೆ ಎಂದು ಇಸ್ರೋ ಅಧ್ಯಕ್ಷ ಕೆ.ಶಿವನ್ ಹೇಳಿದ್ದಾರೆ. ಬಾಹ್ಯಾಕಾಶ ಇಲಾಖೆಯ ಕಾರ್ಯದರ್ಶಿಯೂ ಆಗಿರುವ ಶಿವನ್, ಸರ್ಕಾರವು ಇತ್ತೀಚೆಗೆ ಬಾಹ್ಯಾಕಾಶ ಕ್ಷೇತ್ರದಲ್ಲಿ ಮಾಡಿದ ಸುಧಾರಣೆಗಳಿಂದಾಗಿ ಅನೇಕ ಫ್ರೆಂಚ್ ಕಂಪನಿಗಳು … Continued

ಬೇಡ್ತಿ, ಅಘನಾಶಿನಿ-ವರದಾ ನದಿ ಜೋಡಣೆ ಯೋಜನೆ ಬಗ್ಗೆ ಆತಂಕ:24ರಂದು ಶಿರಸಿಯಲ್ಲಿ ವಿಶೇಷ ಸಮಾಲೋಚನಾ ಕಾರ್ಯಾಗಾರ

ಶಿರಸಿ: ಬೇಡ್ತಿ, ಅಘನಾಶಿನಿ-ವರದಾ ನದಿ ಜೋಡಣೆ ಯೋಜನೆ”ಗಳ ಕುರಿತು  ವಿಶೇಷ ಸಮಾಲೋಚನಾ ಕಾರ್ಯಾಗಾರ ಮಾ.24ರಂದು ಬೆಳಗ್ಗೆ 10ರಿಂದ ಸಂಜೆ 5 ಗಂಟೆ ವರೆಗೆ ನಗರದ ಹೊಸ ಮಾರುಕಟ್ಟೆ ಬಡಾವಣೆಯಲ್ಲಿರುವ ತೋಟಗಾರರ ಗ್ರಾಮೀಣ ಪತ್ತಿನ  ಸಹಕಾರಿ ಸಂಘದ (ಟಿಆರ್ಸಿ ಬ್ಯಾಂಕ್) ಸಭಾಭವನದಲ್ಲಿ ನಡೆಯಲಿದೆ. ಸ್ವರ್ಣವಲ್ಲೀ ಶ್ರೀ ಗಂಗಾಧರೇಂದ್ರ ಸರಸ್ವತಿ ಸ್ವಾಮಿಗಳ ಉಪಸ್ಥಿತಿಯಲ್ಲಿ ಈ ವಿಶೇಷ ಸಮಾಲೋಚನಾ ಕಾರ್ಯಾಗಾರ … Continued

ಮುಂದಿನ ಮೂರು ವರ್ಷದಲ್ಲಿ ದೇಶದ ಎಲ್ಲ ಮಂಡಲದಲ್ಲಿ ಆರ್‌ಎಸ್‌ಎಸ್‌ ಶಾಖೆ ಆರಂಭ

ಬೆಂಗಳೂರು; ಮುಂದಿನ ಮೂರು ವರ್ಷದಲ್ಲಿ ದೇಶದ ಎಲ್ಲಾ ಮಂಡಲದಲ್ಲಿ ಆರ್‌ಎಸ್‌ಎಸ್‌ ಶಾಖೆ ಆರಂಭಿಸಲಾಗುವುದು ಎಂದು ಆರ್‌ಎಸ್‌ಎಸ್‌ನ ಡಾ. ಮನಮೋಹನ ವೈದ್ಯ ಹೇಳಿದ್ದಾರೆ. ಬೆಂಗಳೂರಿನ ಚನ್ನೇನಹಳ್ಳಿಯ ಜನಸೇವಾ ವಿದ್ಯಾಕೇಂದ್ರದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ವಾರ್ಷಿಕ ಸಭೆ ಎಬಿಪಿಎಸ್ ಉದ್ಘಾಟಿಸಿ ಮಾತನಾಡಿದರು. ಕೊರೊನಾ ಲಾಕ್ ಡೌನ್ ನ ಸಂದರ್ಭದಲ್ಲಿ ಮಾರ್ಚ್ ನಿಂದ ಜೂನ್ ವರೆಗೆ ಆರೆಸ್ಸೆಸ್ ನ ಶಾಖೆಗಳು … Continued

ರಾತ್ರಿ ಮೈಕ್‌ ನಿರ್ಬಂಧ; ವಕ್ಫ್ ಬೋರ್ಡ್‌ ಸೂಚನೆ ಪಾಲಿಸುತ್ತಾರೆಂಬ ವಿಶ್ವಾಸವಿಲ್ಲ

ಕಾರವಾರ: “ಕೇವಲ ಮಸೀದಿಗಳಲ್ಲಿ ಮೈಕ್‌ಗಳಿಗೆ ನಿರ್ಬಂಧಿಸುವುದು ಮಾತ್ರವಲ್ಲ, ಸಾಮಾನ್ಯ ನಾಗರಿಕರ ಶಾಂತಿ, ಸೌಹಾರ್ದಕ್ಕೆ ತೊಂದರೆಯಾಗುವ ಯಾವುದೇ ಶಬ್ದ ಮಾಲಿನ್ಯವಿದ್ದರೂ ತಡೆಯಬೇಕು. ಚರ್ಚ್‌ಗಳಿಗೂ ಇದನ್ನು ಅನ್ವಯಿಸಬೇಕು” ಎಂದು ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಆಗ್ರಹಿಸಿದರು. ಕಾರವಾರ ಜಿಲ್ಲಾ ಪತ್ರಿಕಾ ಭವನದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ವಕ್ಫ್ ಬೋರ್ಡ್ ಕರ್ನಾಟಕದಲ್ಲಿ ನೋಂದಾವಣೆಗೊಂಡಿರುವ 32 ಸಾವಿರ … Continued

ಸಿಡಿ ಪ್ರಕರಣ ಬಯಲಾದ 24 ತಾಸಿನೊಳಗೆ ನೈತಿಕವಾಗಿ ರಾಜೀನಾಮೆ ಪಡೆಯುವುದು ಬಿಜೆಪಿ ಮಾತ್ರ

ಬೆಂಗಳೂರು: ಸಿಡಿ ಪ್ರಕರಣ ಬಯಲಾದ 24 ಗಂಟೆಯೊಳಗೆ ಬಿಜೆಪಿಯಲ್ಲಿ ಮಾತ್ರ ನೈತಿಕವಾಗಿ ರಾಜೀನಾಮೆ ಪಡೆಯಲಾಗುತ್ತದೆ. ಆರೋಪ ಬಂದಾಗ ನೈತಿಕವಾಗಿ ಸ್ವತಃ ರಮೇಶ್ ಜಾರಕಿಹೊಳಿ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದಾರೆ. ಇದು ಬಿಜೆಪಿಯಲ್ಲಿ ಮಾತ್ರ ಸಾಧ್ಯ ಎಂದು ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಹೇಳಿದ್ದಾರೆ. ಮೂರು ಕ್ಷೇತ್ರಗಳಿಗೆ ಉಪಚುನಾವಣೆ ಹಿನ್ನೆಲೆಯಲ್ಲಿ ರಾಜ್ಯಕ್ಕೆ ಆಗಮಿಸಿರುವ ಅರುಣ್ ಸಿಂಗ್ … Continued