ಕರ್ನಾಟಕದ ವಿವಿಧೆಡೆ 7 ಅಧಿಕಾರಿಗಳ ಕಚೇರಿ, ಮನೆ ಮೇಲೆ ಲೋಕಾಯುಕ್ತ ದಾಳಿ

ಬೆಂಗಳೂರು : ರಾಜ್ಯಾದ್ಯಂತ ಬೆಳ್ಳಂಬೆಳಗ್ಗೆ ಗದಗ, ಬಾಗಲಕೋಟೆ, ಹಾವೇರಿ, ಬಳ್ಳಾರಿ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಳಿ (Karnataka lokayukta raid) ನಡೆಸಿ ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ. ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಕೆ ಆರೋಪದ ಮೇಲೆ ಹಲವು ಅಧಿಕಾರಿಗಳ ಮನೆ, ಕಚೇರಿಗಳ ಮೇಲೆ ಲೋಕಾಯುಕ್ತ ದಾಳಿ ನಡೆದಿದ್ದು, ಧಾರವಾಡ, ಬಾಗಲಕೋಟೆ, ಗದಗ, ಹುನಗುಂದ, … Continued

ಕರ್ನಾಟಕದಲ್ಲಿ ಇನ್ನೂ ಮೂರು ದಿನ ಭಾರೀ ಮಳೆ ಮುನ್ಸೂಚನೆ ; 5 ಜಿಲ್ಲೆಗಳಿಗೆ ರೆಡ್ ಅಲರ್ಟ್​

ಬೆಂಗಳೂರು : ರಾಜ್ಯದ ಬಹುತೇಕ ಕಡೆಗಳಲ್ಲಿ ಸುರಿಯುತ್ತಿದ್ದು, ಕೆಲವು ಜಿಲ್ಲೆಗಳಲ್ಲಿ ಅಮಾಹುತಕ್ಕೆ ಕಾರಣವಾಗುದೆ. ರಾಜ್ಯದಲ್ಲಿ ಇನ್ನೂ ಮೂರು ದಿನಗಳ ಕಾಲ ಭಾರೀ ಮಳೆಯಾಗಲಿದೆ (Heavy Rain) ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕೆಲ ಜಿಲ್ಲೆಗಳಿಗೆ ರೆಡ್​ ಅಲರ್ಟ್ (red alert) ಘೋಷಣೆ ಮಾಡಿದ್ದು, ಕೆಲ ಜಿಲ್ಲೆಗಳಲ್ಲಿ ಶಾಲೆ-ಕಾಲೇಜುಗಳೀಗೂ ರಜೆ ಘೋಷಿಲಾಗಿದೆ. ಉಡುಪಿ, ದಕ್ಷಿಣ ಕನ್ನಡ, … Continued

ಅತಿಥಿ ಉಪನ್ಯಾಸಕರಿಗೆ 5 ಲಕ್ಷ ರೂ. ಇಡುಗಂಟು ನೀಡಲು ರಾಜ್ಯ ಸರ್ಕಾರ ಆದೇಶ

ಬೆಂಗಳೂರು: ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರಾಗಿ (Guest Lecturers) ಸೇವೆ ಸಲ್ಲಿಸಿ 60 ವರ್ಷ ಪೂರೈಸಿದವರಿಗೆ ಮತ್ತು ಮರಣ ಹೊಂದಿದ ಅತಿಥಿ ಉಪನ್ಯಾಸಕರ ಕುಟುಂಬಕ್ಕೆ 5 ಲಕ್ಷ ಇಡುಗಂಟು ನೀಡಲು ರಾಜ್ಯ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ. ವಿವಿಧ ಸೌಲಭ್ಯಗಳು 2024ರ ಜನವರಿ 1ರಿಂದ ಜಾರಿಗೆ ಬರುವಂತೆ ಮಂಜೂರಾಗಲಿದ್ದು, ಕನಿಷ್ಠ ಒಂದು ವರ್ಷ … Continued

ಪರೀಕ್ಷೆ ಮುಗಿದ ಒಂದು ಗಂಟೆಯಲ್ಲೇ 50 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳ ಫಲಿತಾಂಶ ಪ್ರಕಟ ; ವಿಟಿಯು ಹೊಸ ದಾಖಲೆ…!

ಬೆಳಗಾವಿ : ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (VTU) ಅಂತಿಮ ಸೆಮಿಸ್ಟರ್ ಬಿ.ಇ./ಬಿ.ಟೆಕ್/ಬಿ.ಪ್ಲಾನ್/ಬಿ.ಆರ್ಕ್/ಬಿ.ಎಸ್ಸಿ (ಆನರ್ಸ್) ಪರೀಕ್ಷೆಯ ಫಲಿತಾಂಶಗಳನ್ನು ಪರೀಕ್ಷೆ ಮುಗಿದ ಕೇವಲ ಒಂದು ಗಂಟೆಯೊಳಗೆ ಪ್ರಕಟಿಸಿ ಹೊಸ ದಾಖಲೆ ಸ್ಥಾಪಿಸಿದೆ…! ಪರೀಕ್ಷೆ ಶುಕ್ರವಾರ (ಮೇ 30) ಸಂಜೆ 5:30ಕ್ಕೆ ಮುಗಿದ್ದು, ಸಂಜೆ 6:30 ಕ್ಕೆ ಪ್ರಕಟಿಸುವ ಮೂಲಕ ಹೊಸ ದಾಖಲೆ ಸ್ಥಾಪಿಸಿದೆ. ವಿಟಿಯು ಈ ಹಿಂದೆ … Continued

ಭಾರೀ ಮಳೆ: ದಕ್ಷಿಣ ಕನ್ನಡದಲ್ಲಿ ಶಾಲಾ, ಪಿಯು ಕಾಲೇಜುಗಳಿಗೆ ಮೇ 31ರಂದು ರಜೆ ಘೋಷಣೆ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಶನಿವಾರ (ಮೇ 31) ರಂದು ಎಲ್ಲ ಅಂಗನವಾಡಿಗಳು, ಶಾಲೆಗಳು ಹಾಗೂ ಪಿಯು ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ವಿದ್ಯಾರ್ಥಿಗಳ ಸುರಕ್ಷತಾ ದೃಷ್ಟಿಯಿಂದ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಅಂಗನವಾಡಿ ಕೇಂದ್ರಗಳಿಗೆ, ಪ್ರಾಥಮಿಕ, ಪ್ರೌಢಶಾಲೆ, (ಸಿಬಿಎಸ್​ಸಿ, ಐಸಿಎಸ್ಇ ಸೇರಿದಂತೆ), ಪದವಿ ಪೂರ್ವ ಸರ್ಕಾರಿ ಅನುದಾನಿತ ಮತ್ತು ಖಾಸಗಿ ವಿದ್ಯಾಸಂಸ್ಥೆಗಳಿಗೆ … Continued

ರೆಸಾರ್ಟ್‌ ರಿಸೆಪ್ಶನಿಸ್ಟ್‌ ಅಂಕಿತಾ ಭಂಡಾರಿ ಕೊಲೆ ಪ್ರಕರಣ : ಬಿಜೆಪಿಯ ನಾಯಕನ ಪುತ್ರ, ಇತರ ಇಬ್ಬರಿಗೆ ಜೀವಾವಧಿ ಶಿಕ್ಷೆ

ಡೆಹ್ರಾಡೂನ್: ಅಂಕಿತಾ ಭಂಡಾರಿ ಕೊಲೆ ಪ್ರಕರಣದ ಮೂವರು ಆರೋಪಿಗಳಿಗೆ ಉತ್ತರಾಖಂಡದ ನ್ಯಾಯಾಲಯ ಶುಕ್ರವಾರ ಜೀವಾವಧಿ ಶಿಕ್ಷೆ ವಿಧಿಸಿದೆ. ಕೋಟ್ವಾರ್‌ನ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ಆರೋಪಿಗಳಾದ ಪುಲ್ಕಿತ್ ಆರ್ಯ, ಸೌರಭ ಭಾಸ್ಕರ ಮತ್ತು ಅಂಕಿತ ಗುಪ್ತಾ ಅವರನ್ನು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 302 (ಕೊಲೆ), 201 (ಸಾಕ್ಷ್ಯ ನಾಶಪಡಿಸುವುದು), 120 ಬಿ (ಕ್ರಿಮಿನಲ್ … Continued

ಮಂಗಳೂರು | ಗುಡ್ಡ ಕುಸಿದು ಅನಾಹುತ ; ಬಾಲಕಿ ಸೇರಿ ಇಬ್ಬರು ಸಾವು, ಅವಶೇಷಗಳಡಿ ಸಿಲುಕಿರುವ ಮೂವರ ರಕ್ಷಣೆಗೆ ಪ್ರಯತ್ನ

ಮಂಗಳೂರು: ನಿರಂತರವಾಗಿ ಸುರಿಯುತ್ತಿರುವ ಭಾರೀ ಮಳೆಗೆ ದಕ್ಷಿಣ ಕನ್ನಡದ ಹಲvew ಅನಾಹುತಗಳು ಸಂಭವಿಸಿವೆ. ಕೆಲವೆಡೆ ಗುಡ್ಡ ಕುಸಿತ (Landslide) ಉಂಟಾಗಿದೆ. ಮಳೆ ಸಂಬಂಧಿ ಅನಾಹುತದಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ದೇರಳಕಟ್ಟೆ ಮೊಂಟೆಪದವಿನ ಪಂಬದ ಹಿತ್ಲುವಿನಲ್ಲಿ ಗುಡ್ಡ ಕುಸಿದು ಮಣ್ಣು ಮನೆಗಳ ಮೇಲೆ ಬಿದ್ದಿದೆ. ಮನೆಗಳ ಅಡಿಯಲ್ಲಿ ಒಂದೇ ಕುಟುಂಬದ ಸಿಲುಕಿಕೊಂಡಿದ್ದಾರೆ. ಅವರಲ್ಲಿ ಓರ್ವ ಮಹಿಳೆ ಸಾವಿಗೀಡಾಗಿದ್ದಾರೆ. ಓರ್ವರನ್ನು … Continued

ಕನ್ನಡದ ಖ್ಯಾತ ಸಾಹಿತಿ ಎಚ್‌.ಎಸ್. ವೆಂಕಟೇಶಮೂರ್ತಿ ಇನ್ನಿಲ್ಲ

ಬೆಂಗಳೂರು: ಕನ್ನಡದ ಖ್ಯಾತ ಕವಿ, ನಾಟಕ ರಚನೆ ಕಾರರು, ಸಾಹಿತಿಯಾಗಿರುವ ಎಚ್‌ ಎಸ್ ವೆಂಕಟೇಶ ಮೂರ್ತಿ ನಿಧನರಾಗಿದ್ದಾರೆ. ಕವಿ, ನಾಟಕಕಾರ, ವಿಮರ್ಶಕ, ಪ್ರಾಧ್ಯಾಪಕ, ಭಾವಗೀತ ರಚನಕಾರ, ಚಲನಚಿತ್ರ ನಿರ್ದೇಶಕ, ಕತೆಗಾರ, ಚಿತ್ರಗೀತ ರಚನೆಕಾರ ಆಗಿದ್ದ ಅವರು ಅಲ್ಪಕಾಲದ ಅಸೌಖ್ಯದ ಬಳಿಕ ಇಂದು, ಶುಕ್ರವಾರ (ಮೇ 30) ನಿಧನರಾಗಿದ್ದಾರೆ. 81 ವರ್ಷ ವಯಸ್ಸಿನ ಎಚ್‌ಎಸ್‌ವಿ ಎಂದೇ ಕರೆಯಲ್ಪಡುತ್ತಿದ್ದ … Continued

ಭಾರೀ ಮಳೆ : ಮೇ 30 ರಂದು ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯ ಅಂಗನವಾಡಿಗಳು, ಶಾಲೆಗಳಿಗೆ ರಜೆ

ಮಂಗಳೂರು/ಉಡುಪಿ : ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಹೆಚ್ಚಿನ ಮಳೆಯಾಗುತ್ತಿರುವುದರಿಂದ ಆರೆಂಜ್ ಅಲರ್ಟ್ ಘೋಷಿಸಲಾಗಿದ್ದು, ಮೇ 30 ರಂದು ಈ ಎರಡು ಜಿಲ್ಲೆಗಳ ಅಂಗನವಾಡಿಗಳು ಮತ್ತು ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಕಳೆದ ಕೆಲವು ದಿನಗಳಿಂದ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುತ್ತಿರುವುದರಿಂದ ವಿಪತ್ತು ನಿರ್ವಹಣಾ ಪ್ರಾಧಿಕಾರವು ಕೆಲವು ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡಿದೆ. ದಕ್ಷಿಣ ಕನ್ನಡ ಜಿಲ್ಲೆಯ ಅಂಗನವಾಡಿಗಳು, ಪ್ರಾಥಮಿಕ … Continued

ರಾಜ್ಯ ಸರ್ಕಾರದ ವಿರುದ್ಧ ಅಸಮಾಧಾನ; ಕಾಂಗ್ರೆಸ್‌ ಹುದ್ದೆಗಳಿಗೆ ದಕ್ಷಿಣ ಕನ್ನಡ ಮುಸ್ಲಿಂ ನಾಯಕರ ಸಾಮೂಹಿಕ ರಾಜೀನಾಮೆ

ಮಂಗಳೂರು : ಅಬ್ದುಲ್ ರಹೀಂ ಅಲಿಯಾಸ್ ಇಮ್ತಿಯಾಜ್ ಹತ್ಯೆಯನ್ನು ಸರ್ಕಾರ ನಿರ್ವಹಿಸುತ್ತಿರುವ ರೀತಿಯನ್ನು ವಿರೋಧಿಸಿ ದಕ್ಷಿಣ ಕನ್ನಡ ಜಿಲ್ಲೆಯ ಕಾಂಗ್ರೆಸ್ಸಿನ  ಮುಸ್ಲಿಂ ನಾಯಕರು ಪಕ್ಷದ ಹುದ್ದೆಗಳಿಗೆ ಸಾಮೂಹಿಕ ರಾಜೀನಾಮೆ ನೀಡಿದ್ದಾರೆ. ರಾಜೀನಾಮೆ ನೀಡಿದವರಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಪ್ರಧಾನ ಕಾರ್ಯದರ್ಶಿ ಎಂ.ಎಸ್. ಮುಹಮ್ಮದ್ ಮತ್ತು ದಕ್ಷಿಣ ಕನ್ನಡ ಅಲ್ಪಸಂಖ್ಯಾತ ವಿಭಾಗದ ಜಿಲ್ಲಾಧ್ಯಕ್ಷ ಶಾಹುಲ್ … Continued