ಭವಾನಿ ರೇವಣ್ಣಗೆ ಬಿಜೆಪಿಯಿಂದ ಟಿಕೆಟ್ ಆಫರ್ ಕೊಟ್ಟ ಸಿ.ಟಿ.ರವಿ..!

ಚಿಕ್ಕಮಗಳೂರು : ಹಾಸನ ಕ್ಷೇತ್ರದಿಂದ ಟಿಕೆಟ್ ಬಯಸಿದ್ದ ಭವಾನಿ ರೇವಣ್ಣ ಅವರಿಗೆ ಈಗಾಗಲೇ ಟಿಕೆಟ್ ನೀಡುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಸ್ಪಷ್ಟನೆ ನೀಡಿದ ಬೆನ್ನಲ್ಲೇ ಭವಾನಿ ರೇವಣ್ಣ ಅವರಿಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಬಿಜೆಪಿಯಿಂದ ಟಿಕೆಟ್ ಆಫರ್ ನೀಡಿದ್ದಾರೆ..! ಹಾಸನದಿಂದ ಸ್ಪರ್ಧಿಸಲು ಜೆಡಿಎಸ್‌ನಿಂದ ಭವಾನಿ ರೇವಣ್ಣರಿಗೆ ಟಿಕೆಟ್ ನಿರಾಕರಿಸಿದ … Continued

ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ ಸಿಂಗ್ ಸುರ್ಜೇವಾಲರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ ಎಚ್. ವಿಶ್ವನಾಥ…!

ಮೈಸೂರು: ಈಗಾಗಲೇ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾಗುವ ಬಗ್ಗೆ ಸುಳಿವು ನೀಡಿರುವ ವಿಧಾನ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಇಂದು, ಶುಕ್ರವಾರ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲರನ್ನು ಭೇಟಿಯಾಗಿ ಚರ್ಚೆ ನಡೆಸಿದ್ದಾರೆ. ಮೈಸೂರಿನ ಖಾಸಗಿ ಹೊಟೇಲ್‌ನಲ್ಲಿ ರಣದೀಪ್ ಸಿಂಗ್ ಸುರ್ಜೇವಾಲ ಅವರನ್ನು ಭೇಟಿಯಾಗಿರುವ ವಿಧಾನ ಪರಿಷತ್‌ ಸದಸ್ಯ ಹೆಚ್.ವಿಶ್ವನಾಥ್ ಮಾತುಕತೆ ನಡೆಸುವ ವೇಳೆ ಕೆಪಿಸಿಸಿ … Continued

ಇಂದು ಹುಬ್ಬಳ್ಳಿಗೆ ಅಮಿತ್‌ ಶಾ ಆಗಮನ, ನಾಳೆ ಹುಬ್ಬಳ್ಳಿ-ಧಾರವಾಡ, ಕುಂದಗೋಳ, ಎಂ.ಕೆ.ಹುಬ್ಬಳ್ಳಿ ಕಾರ್ಯಕ್ರಮದಲ್ಲಿ ಭಾಗಿ

ಹುಬ್ಬಳ್ಳಿ : ಬಿಜೆಪಿ ರೋಡ್‌ ಶೋ ಸೇರಿದಂತೆ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಕೇಂದ್ರ ಗೃಹ ಸಚಿವ ಅಮಿತ್ ಶಾ ಜನವರಿ 28 ರಂದು ಹುಬ್ಬಳ್ಳಿ-ಧಾರವಾಡ ಮತ್ತು ಬೆಳಗಾವಿಗೆ ಭೇಟಿ ನೀಡಲಿದ್ದಾರೆ. ಒಂದು ತಿಂಗಳ ಅವಧಿಯಲ್ಲಿ ಕಿತ್ತೂರು ಕರ್ನಾಟಕ (ಮುಂಬೈ-ಕರ್ನಾಟಕ) ಪ್ರದೇಶಕ್ಕೆ ಇದು ಅವರ ಎರಡನೇ ಭೇಟಿಯಾಗಿದೆ. ಜನವರಿ 27ರಂದು ಅಮಿತ ಶಾ ಹುಬ್ಬಳ್ಳಿಗೆ ಆಗಮಿಸಿ ವಾಸ್ತವ್ಯ … Continued

ಕೇಶವ ಹೆಗಡೆ ಕೊಳಗಿಗೆ ನೆಬ್ಬೂರು ನಾರಾಯಣ ಭಾಗವತ ಪ್ರಶಸ್ತಿ : ಜನವರಿ 29ರಂದು ಪ್ರದಾನ

ಶಿರಸಿ: ನೆಬ್ಬೂರು ನಾರಾಯಣ ಭಾಗವತ ಪ್ರತಿಷ್ಠಾನದಿಂದ ಯಕ್ಷಗಾನದ ಬಡಗುತಿಟ್ಟಿನ ಖ್ಯಾತ ಭಾಗವತರಾಗಿದ್ದ ದಿ.ನಾರಾಯಣ ಭಾಗವತರ ಹೆಸರಿನಲ್ಲಿ ಕೊಡಮಾಡುವ ಪ್ರಥಮ ಪ್ರಶಸ್ತಿಯನ್ನು ಪ್ರಸಿದ್ಧ ಭಾಗವತ ಕೇಶವ ಹೆಗಡೆ ಕೊಳಗಿ ಅವರಿಗೆ ಪ್ರಕಟಿಸಲಾಗಿದೆ. ಸುಮಾರು 40 ವರ್ಷಗಳಿಂದ ಯಕ್ಷಗಾನದ ಭಾಗವತರಾಗಿರುವ ಕೇಶವ ಹೆಗಡೆ ಕೊಳಗಿ ಅವರಿಗೆ ಪ್ರಶಸ್ತಿ ಪ್ರಕಟಿಸಲಾಗಿದೆ ಎಂದು ಪ್ರತಿಷ್ಠಾನದ ಅಧ್ಯಕ್ಷ ಜಿ.ಎನ್.ಹೆಗಡೆ ಹಾವಳಿಮನೆ ತಿಳಿಸಿದ್ದಾರೆ. ಪ್ರಶಸ್ತಿಯನ್ನು … Continued

ಯಡಿಯೂರಪ್ಪ ಜೊತೆಗಿನ ರಾಜಕೀಯ ಸಂಘರ್ಷಕ್ಕೆ ಇನ್ಮುಂದೆ ಪೂರ್ಣ ವಿರಾಮ : ಯತ್ನಾಳ

ವಿಜಯಪುರ: ಯಡಿಯೂರಪ್ಪ ಬಗ್ಗೆ ನನ್ನನ್ನು ಇನ್ಮೇಲೆ ಏನು ಕೇಳಬೇಡಿ. ಯಡಿಯೂರಪ್ಪ ಬಗ್ಗೆ ನಾನು ಏನು ಪ್ರತಿಕ್ರಿಯೆ ನೀಡುವುದಿಲ್ಲ. ಪಕ್ಷದ ಹಿರಿಯರ ಸಲಹೆ ಮೇರೆಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಜೊತೆಗೆ ರಾಜಕೀಯ ಸಂಘರ್ಷಕ್ಕೆ ವಿರಾಮ ನೀಡಲು ನಿರ್ಧರಿಸಿದ್ದೇನೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದ್ದಾರೆ. ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪ ಅವರ ಕುರಿತು ಮಾತನಾಡದಂತೆ … Continued

ನಿರೀಕ್ಷಿಸಿರಲಿಲ್ಲ, ಪದ್ಮವಿಭೂಷಣ ನನಗೆ ಬಯಸದೆ ಬಂದ ಭಾಗ್ಯ, ಪ್ರಶಸ್ತಿಯನ್ನು ಕರ್ನಾಟಕದ ಜನತೆಗೆ ಅರ್ಪಿಸುವೆ : ಎಸ್.ಎಂ.ಕೃಷ್ಣ

ಬೆಂಗಳೂರು: ನನಗೆ ನಿಜವಾಗಿಯೂ ಸಂತೋಷವಾಗಿದೆ. ನನಗೆ ಈ ದೊಡ್ಡ ಗೌರವವನ್ನು ನೀಡಿದ ಪ್ರಧಾನಿ ಮೋದಿ ಅವರಿಗೆ ನಾನು ತುಂಬಾ ಕೃತಜ್ಞನಾಗಿದ್ದೇನೆ. ಈ ಪ್ರಶಸ್ತಿಯನ್ನು ಕರ್ನಾಟಕದ ಜನತೆಗೆ ಅರ್ಪಿಸುತ್ತೇನೆ ಎಂದು ಎಸ್‌ಎಂ ಕೃಷ್ಣ ಹೇಳಿದ್ದಾರೆ. ಕರ್ನಾಟಕದ ಮಾಜಿ ಮುಖ್ಯಮಂತ್ರಿ ಹಾಗೂ ಮಾಜಿ ವಿದೇಶಾಂಗ ಸಚಿವ ಎಸ್‌.ಎಂ. ಕೃಷ್ಣ ಅವರಿಗೆ ಈ ಬಾರಿಯ ಪದ್ಮವಿಭೂಷಣ ಪ್ರಶಸ್ತಿ ಘೋಷಿಸಲಾಗಿದ್ದು, ಈ … Continued

ಸಪ್ತಪದಿ ತುಳಿದ ಕನ್ನಡ ನಟರಾದ ಹರಿಪ್ರಿಯಾ-ವಸಿಷ್ಠ ಸಿಂಹ

ಕನ್ನಡ ಚಿತ್ರರಂಗದ ಖ್ಯಾತ ನಟರಾದ ವಸಿಷ್ಠ ಸಿಂಹ (Vasishta Simha) ಹಾಗೂ ಹರಿಪ್ರಿಯಾ (Haripriya) ಅವರು ಸಪ್ತಪದಿ ತುಳಿದಿದ್ದಾರೆ. ವಸಿಷ್ಠ ಸಿಂಹ ಅವರ ಆಶಯದಂತೆ ಮೈಸೂರಿನ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಅವರು ಸಪ್ತಪದಿ ತುಳಿದಿದ್ದಾರೆ. ಹರಿಪ್ರಿಯಾ ಮತ್ತು ವಸಿಷ್ಠ ಸಿಂಹ ಅವರು ಹಲವು ತಿಂಗಳಿಂದ ಪ್ರೀತಿಸುತ್ತಿದ್ದರು. ಅವರ ಪ್ರೀತಿಗೆ ಕುಟುಂಬದವರ ಒಪ್ಪಿಗೆ ಸಿಕ್ಕಿತು. ಗುರು-ಹಿರಿಯರ ಆಶೀರ್ವಾದದೊಂದಿಗೆ … Continued

ಮಂಡ್ಯ ಬಿಜೆಪಿಯಲ್ಲಿ ಭಿನ್ನಮತ ಬಯಲಿಗೆ: ಗೋ ಬ್ಯಾಕ್​ ಆರ್​.ಅಶೋಕ’​ ಎಂಬ ಭಿತ್ತಿಪತ್ರ ಅಂಟಿಸಿ ಆಕ್ರೋಶ

ಮಂಡ್ಯ : ಮಂಡ್ಯ ಜಿಲ್ಲಾ ಉಸ್ತುವಾರಿ ಬದಲಾವಣೆಯಾದ ಬೆನ್ನಲ್ಲೇ ಮಂಡ್ಯ ಜಿಲ್ಲಾ ಬಿಜೆಪಿಯಲ್ಲಿ ಅವರ ನೇಮಕಕ್ಕೆ ಅಸಮಾಧಾನ ಸ್ಪೋಟಗೊಂಡಿದೆ. ಮಂಡ್ಯದ ವಿವಿ ರಸ್ತೆ, ಸುಭಾಷ್​​ ರಸ್ತೆ ಗೋಡೆ ಮೇಲೆ ‘ಗೋ ಬ್ಯಾಕ್​ ಆರ್​.ಅಶೋಕ್’​ ಮಂಡ್ಯ ಬಿಟ್ಟು ಹೋಗಿ ಅಶೋಶ ಎಂಬ ಭಿತ್ತಿಪತ್ರ ಅಂಟಿಸಿ ಆಕ್ರೋಶ ವ್ಯಕ್ತಪಡಿಸಲಾಗಿದೆ. ಮಂಡ್ಯ ಜಿಲ್ಲಾ ಉಸ್ತುವಾರಿ ಸ್ಥಾನದಿಂದ ಗೋಪಾಲಯ್ಯ ಅವರನ್ನು ದಿಢೀರ್ … Continued

ಮೋದಿ ಪ್ರಧಾನಿ ಆಗಿದ್ದಕ್ಕೆ ನನಗೆ ಪ್ರಶಸ್ತಿ ಬಂದಿದೆ: ಸಾಹಿತಿ ಎಸ್.ಎಲ್. ಭೈರಪ್ಪ

ಮೈಸೂರು: ಮೋದಿ ಪ್ರಧಾನಿ ಆದ ಕಾರಣದಿಂದಲೇ ನನಗೆ ಪದ್ಮಭೂಷಣ ಪ್ರಶಸ್ತಿ ಬಂದಿದೆ. ಅವರು ಪ್ರಧಾನಿ ಆಗಿರದಿದ್ದರೆ ನನಗೆ ಪ್ರಶಸ್ತಿ ಬರುತ್ತಿರಲಿಲ್ಲ ಎಂದು ಖ್ಯಾತ ಸಾಹಿತಿ ಎಸ್‌.ಎಲ್‌.ಭೈರಪ್ಪ ಹೇಳಿದ್ದಾರೆ. ಭೈರಪ್ಪ ಅವರಿಗೆ ಪದ್ಮಭೂಷಣ ಪ್ರಶಸ್ತಿ ಪ್ರಕಟವಾದ ಮೈಸೂರಿನ ಕುವೆಂಪು ನಗರದಲ್ಲಿರುವ ಎಸ್.ಎಲ್. ಭೈರಪ್ಪ ಅವರ ನಿವಾಸದಲ್ಲಿ ಶಾಸಕ ರಾಮದಾಸ ಅವರು ಮಾಡಿದ ಸನ್ಮಾನ ಸ್ವೀಕರಿಸಿದ ಬಳಿಕ ಮಾಧ್ಯಮದವರೊಂದಿಗೆ … Continued

ದೆಹಲಿ ಗಣರಾಜ್ಯೋತ್ಸವʼದ ಪರೇಡ್‌ನಲ್ಲಿ ಎಲ್ಲರ ಗಮನ ಸೆಳೆದ ಕರ್ನಾಟಕದ ʻನಾರಿಶಕ್ತಿʼ ಸ್ತಬ್ಧಚಿತ್ರ

ನವದೆಹಲಿ: ನವದೆಹಲಿಯ ರಾಷ್ಟ್ರಪತಿ ಭವನದ ಕರ್ತವ್ಯಪಥದಲ್ಲಿ ಗುರುವಾರ ನಡೆದ ಗಣರಾಜ್ಯೋತ್ಸವ ಪರೇಡ್​​ನಲ್ಲಿ ಕರ್ನಾಟಕದಿಂದ ‘ನಾರಿ ಶಕ್ತಿ’ ಸ್ತಬ್ಧಚಿತ್ರ (Nari shakti Tableau) ಪ್ರದರ್ಶನವಾಗಿದೆ. ಈ ಮೂಲಕ ಸತತ 14 ವರ್ಷಗಳಿಂದ ಪಥಸಂಚಲನದಲ್ಲಿ ಪಾಲ್ಗೊಂಡ ದೇಶದ ಏಕೈಕ ರಾಜ್ಯವಾಗಿ ಕರ್ನಾಟಕ ಹೊರಹೊಮ್ಮಿದೆ. ಸ್ತಬ್ಧಚಿತ್ರದಲ್ಲಿ ಈ ಬಾರಿ ಆದರ್ಶ ಮಹಿಳೆಯರ ಸಾಧನೆಯಗಳು ಅನಾವರಣಗೊಂಡಿವೆ. ಕರ್ನಾಟಕದ ಮೂವರು ಸಾಧಕ ಮಹಿಳೆಯರ … Continued