ಭೀಕರ ಅಪಘಾತ : ನಾಲೆಗೆ ಕಾರು ಬಿದ್ದು ನಾಲ್ವರು ಮಹಿಳೆಯರು ಸಾವು

ಮಂಡ್ಯ : ಜಿಲ್ಲೆಯಲ್ಲಿ ತಡೆಗೋಡೆಯಿಲ್ಲದ ನಾಲೆಗೆ ಕಾರು ಬಿದ್ದ ಘಟನೆಯಲ್ಲಿ ನಾಲ್ವರು ಮಹಿಳೆಯರು ಮೃತಪಟ್ಟ ಘಟನೆ ಶ್ರೀರಂಗಪಟ್ಟಣ ತಾಲೂಕಿನ ಗಾಮನಹಳ್ಳಿ ಬಳಿ ಶನಿವಾರ ರಾತ್ರಿ ಸಂಭವಿಸಿದೆ. ಶ್ರೀರಂಗಪಟ್ಟಣ ತಾಲೂಕು ಗಾಮನಹಳ್ಳಿ ಗ್ರಾಮದ ಹೊರವಲಯದ ತುರುಗನೂರು ಬ್ರಾಂಚ್‌ನ ವಿಶ್ವೇಶ್ವರಯ್ಯ ಉಪ ನಾಲೆಗೆ ಕಾರು ಉರುಳಿ ಬಿದ್ದು ಈ ನಾಲ್ಕು ಮಂದಿ ಅಸುನೀಗಿದ್ದಾರೆ. ದೊಡ್ಡಮುಲಗೂಡು ಮತ್ತು ಗಾಮನಹಳ್ಳಿ ನಡುವೆ … Continued

ಬೆಂಗಳೂರು- ಮೈಸೂರು ಎಕ್ಸ್ ಪ್ರೆಸ್ ಹೆದ್ದಾರಿಯಲ್ಲಿ 158.81 ಕೋಟಿ ರೂ.ಗಳ ವೆಚ್ಚದಲ್ಲಿ ಸುರಕ್ಷತಾ ಕಾಮಗಾರಿ : ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಬೆಂಗಳೂರು- ಮೈಸೂರು ಎಕ್ಸ್ ಪ್ರೆಸ್ ಹೆದ್ದಾರಿಯಲ್ಲಿ 158.81 ಕೋಟಿ ರೂ.ಗಳ ವೆಚ್ಚದಲ್ಲಿ ಹೆಚ್ಚುವರಿ ಕಾಮಗಾರಿಗಳನ್ನು ಕೈಗೊಳ್ಳಲಿದ್ದು, ನವೆಂಬರ್ ನಂತರ ಕೆಲಸ ಆರಂಭವಾಗಲಿದೆ ಎಂದರು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಶನಿವಾರ ಬೆಂಗಳೂರು- ಮೈಸೂರು ಎಕ್ಸ್ ಪ್ರೆಸ್ ಹೆದ್ದಾರಿ ಪರಿಶೀಲಿಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಎಕ್ಸ್ ಪ್ರೆಸ್ ವೇ ನಲ್ಲಿ ಕೆಲವು ಸುರಕ್ಷಾ ಕ್ರಮಗಳನ್ನು ಕೈಗೊಳ್ಳಬೇಕಿದ್ದು … Continued

ದಾವಣಗೆರೆ : ಖಾಸಗಿ ಕ್ಷಣದ ವೀಡಿಯೊ ವೈರಲ್ ; ಮನನೊಂದು ವಿದ್ಯಾರ್ಥಿಗಳಿಬ್ಬರ ಆತ್ಮಹತ್ಯೆ

ದಾವಣಗೆರೆ: ವಿದ್ಯಾರ್ಥಿಗಳಿಬ್ಬರ ಖಾಸಗಿ ಕ್ಷಣಗಳ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ನಂತರ ಮನನೊಂದ ವಿದ್ಯಾರ್ಥಿಗಳಿಬ್ಬರು ಸಾವಿನ ಹಿಡಿದ ಘಟನೆ ದಾವಣಗೆರೆಯಲ್ಲಿ ನಡೆದ ವರದಿಯಾಗಿದೆ. ಮೃತರನ್ನು ಆಲೂರಟ್ಟಿ ತಾಂಡಾದ ರತನ್ (20) ಮತ್ತು ಜಗಳೂರು ತಾಲೂಕಿನ ಗ್ರಾಮವೊಂದರ ಯುವತಿ ಎಂದು ಹೇಳಲಾಗಿದೆ. ಇಬ್ಬರೂ ದಾವಣಗೆರೆಯ ಕಾಲೇಜಿನಲ್ಲಿ ದ್ವಿತೀಯ ವರ್ಷದ ಬಿಕಾಂ ವಿದ್ಯಾರ್ಥಿಗಳಾಗಿದ್ದರು ಹಾಗೂ ಪರಸ್ಪರ ಪ್ರೀತಿಸುತ್ತಿದ್ದರು ಎನ್ನಲಾಗಿದೆ. … Continued

ಉಡುಪಿ ವೀಡಿಯೊ ಚಿತ್ರೀಕರಣ ಪ್ರಕರಣ ; ತನಿಖಾಧಿಕಾರಿ ಬದಲಾವಣೆ

ಉಡುಪಿ : ಉಡುಪಿಯ ಖಾಸಗಿ ಕಾಲೇಜಿನ ಶೌಚಾಲಯದಲ್ಲಿ ವೀಡಿಯೊ ಚಿತ್ರೀಕರಣ ಮಾಡಲಾಗಿದೆ ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣದ ತನಿಖಾಧಿಕಾರಿಯನ್ನು ಬದಲಾವಣೆ ಮಾಡಲಾಗಿದೆ. ಮಲ್ಪೆ ಇನ್ ಸ್ಪೆಕ್ಟರ್ ಮಂಜುನಾಥ್ ಗೌಡ ಅವರ ಬದಲು ಕುಂದಾಪುರ ಡಿವೈಎಎಸ್‌ಪಿ ಬೆಳ್ಳಿಯಪ್ಪ ಅವರನ್ನು ತನಿಖಾಧಿಕಾರಿಯಾಗಿ ನೇಮಕ ಮಾಡಲಾಗಿದೆ ಎಂದು ವರದಿಯಾಗಿದೆ. ಈ ಹಿಂದಿನ ತನಿಖಾಧಿಕಾರಿಯಾಗಿದ್ದ ಮಲ್ಪೆ ಠಾಣೆಯ ಇನ್ ಸ್ಪೆಕ್ಟರ್ ಮಂಜುನಾಥ … Continued

ಗ್ರಾಪಂ ಅಧ್ಯಕ್ಷ ಸ್ಥಾನ ವಿಚಾರವಾಗಿ ಬಡಿದಾಡಿಕೊಂಡ ಸದಸ್ಯರು; ಓರ್ವ ಅಸ್ವಸ್ಥ

ಹಾಸನ: ಹಳೇಬೀಡು ಗ್ರಾಮ ಪಂಚಾಯತ ಅಧ್ಯಕ್ಷ ಚುನಾವಣೆ ಬಳಿಕ ವಿಜಯೋತ್ಸವದ ವೇಳೆ ಬಿಜೆಪಿ ಹಾಗೂ ಜೆಡಿಎಸ್​ ಬೆಂಬಲಿತ ಸದಸ್ಯರ ನಡುವೆ ಗಲಾಟೆಯಾದ ಘಟನೆ ಜಿಲ್ಲೆಯ ಹಳೇಬೀಡು ಗ್ರಾಮದ ಹೋಯ್ಸಳ ವೃತ್ತದಲ್ಲಿ ನಡೆದ ವರದಿಯಾಗಿದೆ. ಗಲಾಟೆಯಲ್ಲಿ ಓರ್ವ ಸದಸ್ಯನಿಗೆ ಗಾಯಗಳಾಗಿದ್ದು, ಸ್ಥಳದಲ್ಲೇ ಕುಸಿದು ಬಿದ್ದಿದ್ದಾರೆ ಎನ್ನಲಾಗಿದೆ. ಹಿಂದುಳಿದ (ಎ) ವರ್ಗಕ್ಕೆ ಮೀಸಲಾಗಿದ್ದ ಗ್ರಾಮ ಪಂಚಾಯತ ಅಧ್ಯಕ್ಷ ಸ್ಥಾನಕ್ಕೆ … Continued

ರಾಜ್ಯಪಾಲ ಗೆಹ್ಲೋಟ್‌ ಅವರನ್ನೇ ಬಿಟ್ಟು ಹಾರಿದ ಏರ್ ಏಷ್ಯಾ ವಿಮಾನ ; ನಂತರ ಕ್ಷಮೆಯಾಚನೆ

ಬೆಂಗಳೂರು: ಹೈದರಾಬಾದಿಗೆ ತೆರಳಬೇಕಿದ್ದ ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ಅವರನ್ನು ಏರ್ ಏಷ್ಯಾ ವಿಮಾನ ಬಿಟ್ಟು ಹೋದ ಘಟನೆ ಶುಕ್ರವಾರ ನಡೆದಿದೆ. ರಾಜ್ಯಪಾಲರನ್ನು ಬಿಟ್ಟು ಹಾರಿದ್ದ ವಿಮಾನಯಾನ ಸಂಸ್ಥೆ ವಿರುದ್ಧ ರಾಜ್ಯಪಾಲರ ಕಚೇರಿ “ಶಿಷ್ಟಾಚಾರ ಉಲ್ಲಂಘನೆ” ಪ್ರಕರಣ ದಾಖಲಿಸಿದ ಬೆನ್ನಲ್ಲೇ ವಿಮಾನಯಾನ ಸಂಸ್ಥೆ ಇದಕ್ಕೆ ವಿಷಾದಿಸಿದೆ. ರಾಜ್ಯಪಾಲರ ಕಚೇರಿ ಅಧಿಕಾರಿಗಳು ಏರ್‌ಪೋರ್ಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, … Continued

ಸಿಎಂ ಕುಟುಂಬದ ಮಹಿಳೆಯರ ಕುರಿತು ಆಕ್ಷೇಪಾರ್ಹ ಟ್ವೀಟ್ ಮಾಡಿದ ಆರೋಪ: ಬಂಧಿಸಿದ್ದ ಬಿಜೆಪಿ ಕಾರ್ಯಕರ್ತೆಯ ಬಿಡುಗಡೆ

ಬೆಂಗಳೂರು: ಉಡುಪಿ ಕಾಲೇಜಿನ ಶೌಚಾಲಯದಲ್ಲಿ ವಿದ್ಯಾರ್ಥಿನಿಯ ವೀಡಿಯೊ ಸೆರೆ ಹಿಡಿದ ವಿವಾದದ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಕುಟುಂಬದ ಮಹಿಳೆಯರ ಕುರಿತು  ಆಕ್ಷೇಪಾರ್ಹ ಪೋಸ್ಟ್ ಮಾಡಿದ್ದ ಆರೋಪದ ಮೇಲೆ ಇಂದು, ಶುಕ್ರವಾರ ಬೆಳಿಗ್ಗೆ ಬಂಧಿತರಾಗಿದ್ದ ಬಿಜೆಪಿ ಕಾರ್ಯಕರ್ತೆ ಶಕುಂತಲ ನಟರಾಜ ಅವರನ್ನು ಬೆಂಗಳೂರು ಪೊಲೀಸರು ಬಿಡುಗಡೆ ಮಾಡಿದ್ದಾರೆ. ಬೆಂಗಳೂರಿನ ಹೈಗ್ರೌಂಡ್ಸ್ ಪೊಲೀಸರು ಠಾಣಾ ಜಾಮೀನಿನ ಮೇಲೆ ಬಿಡುಗಡೆ … Continued

ಆಗಸ್ಟ್‌ 1ರಂದು ವಿಟಿಯು ಘಟಿಕೋತ್ಸವ : ಚಿನ್ಮಯ ವಿಕಾಸಗೆ ೧೩ ಚಿನ್ನದ ಪದಕ, ಡಾ. ನಿರ್ಮಲಾನಂದ ಸ್ವಾಮೀಜಿ ಸೇರಿದಂತೆ ಮೂವರಿಗೆ ಡಾಕ್ಟರ್ ಆಫ್ ಸೈನ್ಸ್ ಗೌರವ ಪ್ರದಾನ

ಬೆಳಗಾವಿ : ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು)ದ ೨೩ ನೇ ಘಟಿಕೋತ್ಸವ ಆಗಸ್ಟ್‌ ೧ರಂದು, ಮಂಗಳವಾರ ವಿಟಿಯು ಜ್ಞಾನ ಸಂಗಮ ಆವರಣದ ಡಾ.ಎ.ಪಿ.ಜೆ ಅಬ್ದುಲ್ ಕಲಾಂ ಸಭಾಂಗಣದಲ್ಲಿ ಆಯೋಜಿಸಲಾಗಿದ್ದು, ಮೂವರಿಗೆ ಡಾಕ್ಟರ್ ಆಫ್ ಸೈನ್ಸ್ ಗೌರವ ಪದವಿ ಪ್ರದಾನ ಮಾಡಲಾಗುತ್ತದೆ ಎಂದು ವಿಟಿಯು ಕುಲಪತಿ ಪ್ರೊ. ವಿದ್ಯಾಶಂಕರ ತಿಳಿಸಿದ್ದಾರೆ. ವಿಟಿಯು ಸೆನೆಟ್ ಸಭಾಂಗಣದಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ … Continued

ಬುರ್ಖಾ ಧರಿಸಿ ಬಸ್​ ಹತ್ತುವಂತೆ ವಿದ್ಯಾರ್ಥಿನಿಗೆ ಒತ್ತಾಯ ಮಾಡಿದ ಆರೋಪ : ಬಸ್ ಚಾಲಕ ಅಮಾನತು

ಕಲಬುರಗಿ: ಬುರ್ಖಾ ಧರಿಸಿ ಬಸ್ ಹತ್ತುವಂತೆ ವಿದ್ಯಾರ್ಥಿನಿಯರಿಗೆ ತಾಕೀತು ಮಾಡಿದ್ದ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಕೆಕೆಆರ್‌ಟಿಸಿಯ ಬಸ್ ಚಾಲಕನನ್ನು ಅಮಾನತು ಮಾಡಲಾಗಿದೆ ಎಂದು ವರದಿಯಾಗಿದೆ. ಮಂಗಳವಾರ ಕಲಬುರಗಿ-ಬಸವಕಲ್ಯಾಣ ಮಾರ್ಗದ ಕಮಲಾಪುರ ಬಸ್ ನಿಲ್ದಾಣದಲ್ಲಿ ಈ ಘಟನೆ ನಡೆದಿತ್ತು. ವಿದ್ಯಾರ್ಥಿನಿಯೊಬ್ಬಳು ಬಸವಕಲ್ಯಾಣಕ್ಕೆ ಹೋಗುವ ಬಸ್ ಹತ್ತಿದ್ದ ವೇಳೆ ಹಿಜಾಬ್ ಧರಿಸಿದ್ದ ವಿದ್ಯಾರ್ಥಿನಿಯರನ್ನು ಬುರ್ಖಾ ಧರಿಸಿ ಬಾ.. ಆಗ … Continued

ಉಡುಪಿ : ಕಾಲೇಜಿನ ಶೌಚಾಲಯದಲ್ಲಿ ವೀಡಿಯೊ ಪ್ರಕರಣ; ಮೂವರು ವಿದ್ಯಾರ್ಥಿನಿಯರಿಗೆ ನಿರೀಕ್ಷಣಾ ಜಾಮೀನು

ಉಡುಪಿ: ಉಡುಪಿಯ ಪ್ಯಾರಾ ಮೆಡಿಕಲ್ ಕಾಲೇಜಿನ ಶೌಚಾಲಯದಲ್ಲಿ ವಿದ್ಯಾರ್ಥಿನಿಯೊಬ್ಬರ ವೀಡಿಯೊ ರೆಕಾರ್ಡ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಉಡುಪಿ ನ್ಯಾಯಾಲಯ ಶುಕ್ರವಾರ ಮೂವರು ವಿದ್ಯಾರ್ಥಿನಿಯರಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ. ಶೌಚಾಲಯದಲ್ಲಿ ವಿದ್ಯಾರ್ಥಿನಿಯೊಬ್ಬರ ವೀಡಿಯೊ ಮಾಡಿದ ಆರೋಪದ ಮೇಲೆ ಶಬನಾಜ್, ಆಲ್ಫಿಯಾ, ಆಲಿಮಾತುಲ್ ಶಾಫಿಯಾ ವಿರುದ್ಧ ಮಲ್ಪೆ ಪೊಲೀಸರು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ … Continued