ಕರ್ನಾಟಕ ಬಜೆಟ್‌ 2023-24: ಪದವಿ ವರೆಗೆ ಎಲ್ಲ ವಿದ್ಯಾರ್ಥಿಗಳಿಗೆ ಶುಲ್ಕ ಇಲ್ಲ, ಸಿಎಂ ವಿದ್ಯಾಶಕ್ತಿ ಯೋಜನೆ ಘೋಷಣೆ; `ಮಕ್ಕಳ ಬಸ್ಸು’ ಎಂಬ ಯೋಜನೆ ಆರಂಭ

ಬೆಂಗಳೂರು: ಶಿಕ್ಷಣ ಇಲಾಖೆ ಹೆಚ್ಚಿನ ಆದ್ಯತೆ ನೀಡಿರುವ ರಾಜ್ಯ ಸರ್ಕಾರವು ಮುಖ್ಯಮಂತ್ರಿ ವಿದ್ಯಾಶಕ್ತಿ ಯೋಜನೆಯನ್ನು ಪ್ರಕಟಿಸಿದೆ. ಸರ್ಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ಪದವಿ ಹಂತದವರೆಗೂ ಎಲ್ಲ ಮಕ್ಕಳಿಗೂ ಸಂಪೂರ್ಣ ಶುಲ್ಕ ವಿನಾಯ್ತಿ ನೀಡಲಾಗಿದೆ. ಶಾಲೆ, ಕಾಲೇಜು, ಶಿಕ್ಷಣ ಸಂಸ್ಥೆಗಳ ಅಭಿವೃದ್ಧಿಗಾಗಿ ಹೆಚ್ಚಿನ ಅನುದಾನ ನಿಗದಿಪಡಿಸಲಾಗಿದೆ. `ಮುಖ್ಯಮಂತ್ರಿ ವಿದ್ಯಾಶಕ್ತಿ’ ಯೋಜನೆಯನ್ನು ಪ್ರಾರಂಭಿಸಲಾಗುತ್ತಿದೆ. ಇದರಡಿಯಲ್ಲಿ ಸರ್ಕಾರಿ ಪದವಿಪೂರ್ವ ಮತ್ತು ಸರ್ಕಾರಿ … Continued

ಕರ್ನಾಟಕ ಬಜೆಟ್‌ 2023-24 : ₹3.1 ಲಕ್ಷ ಕೋಟಿ ಗಾತ್ರದ ಬಜೆಟ್‌ ಮಂಡಿಸಿದ ಬೊಮ್ಮಾಯಿ, ಕೃಷಿ, ಜಲಸಂಪನ್ಮೂಲ, ಕೃಷಿ, ಮಹಿಳೆಯರಿಗೆ ಆದ್ಯತೆ

ಬೆಂಗಳೂರು: ಚುನಾವಣೆಗೂ ಮುನ್ನ 2023-24ನೇ ಸಾಲಿನ ಬಜೆಟ್‌ ಮಂಡಿಸಿರುವ ಬಸವರಾಜ ಬೊಮ್ಮಾಯಿ 3 ಲಕ್ಷ ಕೋಟಿ ರೂ.ಗಳಿಗೂ ಹೆಚ್ಚಿನ ಗಾತ್ರದ ಭಾರೀ ಆಯವ್ಯಯವನ್ನು ಮಂಡಿಸಿದ್ದಾರೆ. ಇದರಲ್ಲಿ 77,750 ಕೋಟಿ ರೂ. ಸಾಲವನ್ನು ಪಡೆಯಲಿರುವುದಾಗಿ ತಿಳಿಸಿದ್ದಾರೆ.ಸಾಲಿನಲ್ಲಿ ಒಟ್ಟು 3,03,910 ಕೋಟಿ ರೂ. ಹಣ ಜಮೆಯಾಗಲಿದೆ ಎಂದು ಅಂದಾಜು ಮಾಡಿದ್ದು, 3,09,182 ಕೋಟಿ ರೂ. ವೆಚ್ಚವನ್ನು ಅಂದಾಜು ಮಾಡಲಾಗಿದೆ. … Continued

ಯಕ್ಷಗಾನದ ಮೇರು ಭಾಗವತ ಬಲಿಪ ನಾರಾಯಣ ಭಾಗವತರು ಇನ್ನಿಲ್ಲ

ಮಂಗಳೂರು: ಯಕ್ಷಗಾನದ ತೆಂಕುತಿಟ್ಟಿನ ಮೇರು ಭಾಗವತ ಬಲಿಪ ನಾರಾಯಣ ಭಾಗವತ ಅವರು ಇಂದು, ಗುರುವಾರ ನಿಧನರಾಗಿದ್ದಾರೆ. ಅವರಿಗೆ ೮೫ ವರ್ಷ ವಯಸ್ಸಾಗಿತ್ತು. ಬಲಿಪ ನಾರಾಯಣ ಭಾಗವತರು ಮೂಲತಃ ಕಾಸರಗೋಡು ಜಿಲ್ಲೆಯ ಪಡ್ರೆ ಗ್ರಾಮದವರು. ಇವರ ತಂದೆ ಬಲಿಪ ಮಾಧವ ಭಟ್ ಮತ್ತು ತಾಯಿ ಸರಸ್ವತಿ. ಅವರು ತಮ್ಮ ಅಜ್ಜ ದಿ.ಬಲಿಪ ನಾರಾಯಣ ಭಾಗವತರಿಂದ ಭಾಗವತಿಕೆ ಕಲಿತು … Continued

ಸೇತುವೆ ತಡೆಗೋಡೆಗೆ ಕಾರು ಡಿಕ್ಕಿ: ನಾಲ್ವರು ಸ್ಥಳದಲ್ಲೇ ಸಾವು

ಕೊಪ್ಪಳ : ಸೇತುವೆ ತಡೆಗೋಡೆಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ನಾಲ್ವರು ಸ್ಥಳದಲ್ಲೇ ಸಾವಿಗೀಡಾಗಿರುವ ಘಟನೆ ಕೊಪ್ಪಳ ಜಿಲ್ಲೆಯ ಕೂಕುನೂರು ತಾಲೂಕಿನ ಬನ್ನಿಕೊಪ್ಪ ಬಳಿ ನಡೆದಿದೆ. ಇಬ್ಬರು ಪುರುಷರು ಇಬ್ಬರು ಮಹಿಳೆಯರು ಘಟನೆಯಲ್ಲಿ ಮೃತಪಟ್ಟಿದ್ದಾರೆ. ಕಾರಿನಲ್ಲಿದ್ದ ಮೃತರು ತೆಲಂಗಾಣ ಮೂಲದವರು ಎಂಬ ಮಾಹಿತಿ ಲಭ್ಯವಾಗಿದೆ. ಕೊಪ್ಪಳ ಮಾರ್ಗವಾಗಿ ಗದಗ ಕಡೆಗೆ ತೆರಳುತ್ತಿದ್ದಾಗ ಕಾರು ಚಾಲಕನ … Continued

ಕಾಂಗ್ರೆಸ್​ನಲ್ಲಿ 10 ಮಂದಿ ಸಿಎಂ ರೇಸ್ ನಲ್ಲಿದ್ದಾರೆ, ಅವರಲ್ಲಿ ನಾನೂ ಒಬ್ಬ: ಡಾ ಜಿ ಪರಮೇಶ್ವರ

ತುಮಕೂರು: ಕಾಂಗ್ರೆಸ್​ನಲ್ಲಿ ಮುಖ್ಯಮಂತ್ರಿ ಹುದ್ದೆ ಆಕಾಂಕ್ಷಿಗಳ ಪಟ್ಟಿ ಬೆಳೆಯುತ್ತಲೇ ಇದೆ, ಈ ರೇಸ್​ಗೆ ಈಗ ಡಾ ಜಿ ಪರಮೇಶ್ವರ ಅವರು ಸೇರ್ಪಡೆಯಾಗಿದ್ದಾರೆ. ತುಮಕೂರು ‌ಜಿಲ್ಲೆಯ ಮಧುಗಿರಿಯಲ್ಲಿ ಮಾತನಾಡಿ ಡಾ.ಪರಮೇಶ್ವರ ಅವರು ಕಾಂಗ್ರೆಸ್​ನಲ್ಲಿ 10 ಮಂದಿ ಮುಖ್ಯಮಂತ್ರಿಗಳಾಗುವ ಅಪೇಕ್ಷೆ ಇದ್ದವರಿದ್ದಾರೆ. ಆ ಹತ್ತು ಮಂದಿಯಲ್ಲಿ ನಾನೂ ಒಬ್ಬ ಎಂದು ಹೇಳಿದ್ದು, ಆ ಮೂಲಕ ಮುಖ್ಯಮಂತ್ರಿ ಸ್ಥಾನಕ್ಕೆ ತಾನೂ … Continued

ಟಿಪ್ಪು ಹೊಡೆದಂತೆ ಸಿದ್ದರಾಮಯ್ಯ ಅವರನ್ನೂ ಹೊಡೆಯಬೇಕು ಎಂದ ಸಚಿವ ಅಶ್ವತ್ಥ ನಾರಾಯಣ: ಹೊಡೆಯಲು ನೀವೇ ಕೋವಿ ಹಿಡಿದು ಬನ್ನಿ ಎಂದ ಸಿದ್ದರಾಮಯ್ಯ

ಮಂಡ್ಯ/ಬೆಂಗಳೂರು: ಬಿಜೆಪಿ ನಾಯಕ ಹಾಗೂ ಉನ್ನತ ಶಿಕ್ಷಣ ಸಚಿವ ಅಶ್ವತ್ಥ ನಾರಾಯಣ ಅವರು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಕುರಿತು ಆಕ್ಷೇಪಾರ್ಹವಾಗಿ ಮಾತನಾಡಿ ಈಗ ಟೀಕೆಗೆ ಒಳಗಾಗಿದ್ದಾರೆ. ಮಂಡ್ಯದಲ್ಲಿ ಮತ ಬೇಟೆ ಆರಂಭಿಸಿರುವ ಬಿಜೆಪಿ ಸಚಿವ ಅಶ್ವತ್ಥ ನಾರಾಯಣ ‘ಟಿಪ್ಪುವನ್ನು ಹೊಡೆದು ಹಾಕಿದ ಹಾಗೆ ಸಿದ್ದರಾಮಯ್ಯನನ್ನು ಹೊಡೆದು ಹಾಕಬೇಕು’ ಎಂದು ಹೇಳಿ ಚರ್ಚೆಗೆ ಗ್ರಾಸವಾಗಿದ್ದಾರೆ. ಮಂಡ್ಯದಲ್ಲಿ … Continued

ರಾಜಕೀಯ ಸೇರುವ ಬಗ್ಗೆ ಮೌನ ಮುರಿದ ನಟ ಕಿಚ್ಚ ಸುದೀಪ

ಬೆಂಗಳೂರು : ರಾಜಕೀಯ ಪ್ರವೇಶ ಕುರಿತು ಕೊನೆಗೂ ಕನ್ನಡದ ಖ್ಯಾತ ನಟ ಕಿಚ್ಚ ಸುದೀಪ ಮೌನ ಮುರಿದಿದ್ದಾರೆ. ಇತ್ತೀಚೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ ಅವರು ನಟ ಸುದೀಪ ಅವರನ್ನ ಭೇಟಿಯಾಗಿದ್ದು ಸಾಕಷ್ಟು ಸುದ್ದಿಯಾಗಿ ನಟ ಸುದೀಪ ರಾಜಕೀಯ ಪ್ರವೇಶಿಸುತ್ತಾರೆಯೇ ಎಂಬ ಕುತೂಹಲ ಉಂಟಾಗಿತ್ತು. ಈಗ ಈ ಕುರಿತು ಪ್ರತಿಕ್ರಿಯಿಸಿರುವ ನಟ ಸುದೀಪ ಬಿಜೆಪಿ ಹಾಗೂ … Continued

ಯಾದಗಿರಿ: ಕಲುಷಿತ ನೀರು ಸೇವಿಸಿ ಮಹಿಳೆ ಸಾವು, 30ಕ್ಕೂ ಹೆಚ್ಚು ಮಂದಿ ಆಸ್ಪತ್ರೆಗೆ ದಾಖಲು

ಯಾದಗಿರಿ: ಕಲುಷಿತ ನೀರು ಸೇವಿಸಿ ಮಹಿಳೆಯೊಬ್ಬರು ಮೃತಪಟ್ಟ ಘಟನೆ ಯಾದಗಿರಿ ಜಿಲ್ಲೆಯಲ್ಲಿ ನಡೆದ ವರದಿಯಾಗಿದೆ. ಕಲುಷಿತ ನೀರು ಸೇವಿಸಿದ ನಂತರ ತೀವ್ರವಾಗಿ ಅಸ್ವಸ್ಥಗೊಂಡಿದ್ದ ಗುರುಮಠಕಲ್‌ ತಾಲೂಕಿನ ಅನಪುರ ಗ್ರಾಮದ ನಿವಾಸಿ 35 ವರ್ಷದ ಸಾವಿತ್ರಮ್ಮ ಎಂಬ ಮಹಿಳೆ ತೆಲಂಗಾಣದ ನಾಯಾಯಣಪೇಟೆ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಬುಧವಾರ ನಸುಕಿನ ಜಾವ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಅಲ್ಲದೆ, … Continued

ಅಡಿಕೆ ಆಮದು : ಕನಿಷ್ಠ ದರ ಕೆಜಿಗೆ 351 ರೂ.ಗಳಿಗೆ ಹೆಚ್ಚಿಸಿದ ಕೇಂದ್ರ ಸರ್ಕಾರ

ನವ​ದೆ​ಹ​ಲಿ: ಅಡಕೆ ಆಮದು ಮೇಲಿನ ಕನಿಷ್ಠ ದರ​ವನ್ನು ಕೇಂದ್ರ ಸರ್ಕಾರ ಕೆ.ಜಿ.ಗೆ 100 ರೂಪಾ​ಯಿ​ಯಷ್ಟು ಹೆಚ್ಚಿಸಿ ಆದೇಶ ಹೊರ​ಡಿ​ಸಿ​ದೆ. ಈ ಹಿಂದೆ ಕೆ.ಜಿ.ಗೆ 251 ರೂಪಾಯಿ ಕನಿಷ್ಠ ಆಮದು ದರ ಇತ್ತು. ಈಗ ಅದನ್ನು ಕೇಂದ್ರ ಸರ್ಕಾರ ಅದನ್ನು 351 ರೂಪಾ​ಯಿ​ಗ​ಳಿಗೆ ಹೆಚ್ಚಿ​ಸಿದೆ. ಕೇಂದ್ರ ಸರ್ಕಾ​ರದ ಈ ನಡೆ​ಯನ್ನು ಕ್ಯಾಂಪ್ಕೋ ಸ್ವಾಗ​ತಿ​ಸಿ​ದೆ. ವಿದೇಶದಿಂದ ಭಾರತಕ್ಕೆ ಅಡಕೆ … Continued

ಫೆಬ್ರವರಿ 18ರಿಂದ ಎರಡು ದಿನಗಳ ಮಂಗಳೂರು ಲಿಟ್‌ಫೆಸ್ಟ್‌

ಮಂಗಳೂರು: ಭಾರತ ಫೌಂಡೇಶನ್‌ ಆಶ್ರಯದಲ್ಲಿ ಫೆಬ್ರವರಿ 18-19 ರಂದು ಎರಡು ದಿನಗಳ ಕಾಲ ಮಂಗಳೂರಿನ ಟಿಎಂಎ ಪೈ ಇಂಟರ್‌ನ್ಯಾಷನಲ್‌ ಕನ್ವೆನ್ಷನ್‌ ಸೆಂಟರ್‌ನಲ್ಲಿ ಮಂಗಳೂರು ಲಿಟ್‌ ಫೆಸ್ಟ್‌ನ ಐದನೇ ಆವೃತ್ತಿ ಮಂಗಳೂರು ಸಾಹಿತ್ಯ ಸಮ್ಮೇಳನ ನಡೆಯಲಿದೆ. ಎರಡು ದಿನಗಳ ಈ ಸಮ್ಮೇಳನ ʼಭಾರತದ ಪರಿಕಲ್ಪನೆʼ (ʼThe Idea of Bharath) ಎಂಬ ಥೀಮ್‌ನಡಿಯಲ್ಲಿ ನಡೆಯಲಿದೆ. ಈ ಕುರಿತು … Continued