ನಿಸರ್ಗ ರಮಣೀಯ ಸ್ಥಳದಲ್ಲಿ ಸಂಸ್ಕೃತಿಯೊಂದಿಗೆ ಶಿಕ್ಷಣ ಧ್ಯೇಯದ ಕೆನರಾ ಎಕ್ಸಲೆನ್ಸ್‌ ಪಿಯು ಕಾಲೇಜ್‌ ಪ್ರವೇಶ ಆರಂಭ

ಕುಮಟಾ; ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ನಿಸರ್ಗ ರಮಣೀಯ ಗೋರೆ ಗುಡ್ಡದ ಮೇಲೆ ಸ್ಥಾಪಿತವಾಗಿರುವ ಶಿಕ್ಷಣ ಸಂಸ್ಥೆ ಕೆನರಾ ಎಕ್ಸಲೆನ್ಸ್‌ ಪದವಿ ಪೂರ್ವ ಕಾಲೇಜು ವಿಭಿನ್ನ ದೃಷ್ಠಿಕೊನ, ಸಂಹವನ ಶಿಕ್ಷಣ, ಉತ್ಕೃಷ್ಟ ಅಧ್ಯಯನ, ಗುಣಮಟ್ಟದ ಪಾಠ ಧ್ಯೇಯದೊಂದಿಗೆ ಈ ವರ್ಷದಿಂದಲೇ ಆರಂಭವಾಗಿದೆ. ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರಿಗೆ ಪ್ರತ್ಯೆಕ ಆಧುನಿಕ ಹಾಸ್ಟೇಲ್ ಸೌಲಭ್ಯದೊಂದಿಗೆ ಜಿಲ್ಲೆಯಲ್ಲಿಯೇ ಈ … Continued

ಮಹತ್ವದ ಸುದ್ದಿ.. ಕೋವಿಡ್‌ ಪಾಸಿಟಿವಿಟಿ ದರ 2 %ಕ್ಕಿಂತ ಕಡಿಮೆಯಿರುವ ಜಿಲ್ಲೆಗಳಲ್ಲಿ ಶಾಲೆ ಆರಂಭಿಸಲು ನಿರ್ಧಾರ, ಜಿಲ್ಲಾವಾರು ಕೊವಿಡ್ ತಡೆ ಯೋಜನೆ: ಸಿಎಂ ಬೊಮ್ಮಾಯಿ

ಬೆಂಗಳೂರು : ರಾಜ್ಯದಲ್ಲಿ ಕೊರೋನಾ ಸೋಂಕಿನ ನಿಯಂತ್ರಣ ಕ್ರಮಗಳೊಂದಿಗೆ, ಯಾವ ಜಿಲ್ಲೆಗಳಲ್ಲಿ ಕೊರೋನಾ ಸೋಂಕಿನ ಪ್ರಕರಣಗಳ ಸಂಖ್ಯೆ ಕಡಿಮೆ ಇದೆಯೋ, ಆ ಜಿಲ್ಲೆಗಳಲ್ಲಿ ಶಾಲೆಗಳನ್ನು ಆರಂಭಿಸಲಾಗುತ್ತದೆ. ಒಂದು ವೇಳೆ ಕೋವಿಡ್ ಪ್ರಕರಣಗಳ ಸಂಖ್ಯೆ ವರದಿಯಾದಂತ ಶಾಲೆಗಳನ್ನು ಕ್ಲೋಸ್ ಮಾಡಿ, ಮುಂಜಾಗ್ರಾತಾ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಶಾಲೆಗಳ … Continued

ಹು-ಧಾ ಪಾಲಿಕೆ ಚುನಾವಣೆ: ಸಚಿವ ಮುನೇನಕೊಪ್ಪ, ಟೆಂಗಿನಕಾಯಿಗೆ ಬಿಜೆಪಿ ಉಸ್ತುವಾರಿ ಹೊಣೆ, ನಾಳೆ ಕಟೀಲು ಆಗಮನ

ಹುಬ್ಬಳ್ಳಿ : ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಸತತವಾಗಿ ಮೂರನೇ ಬಾರಿಗೆ ಅಧಿಕಾರ ಹಿಡಿಯಲುಸಿದ್ಧತೆ ನಡೆಸಿರುವ ಬಿಜೆಪಿ ಪಾಲಿಕೆಗೆ ಚುನಾವಣಾ ಉಸ್ತುವಾರಿಗಳನ್ನು ನೇಮಿಸಿದೆ. ಜವಳಿ ಸಚಿವ ಶಂಕರಪಾಟೀಲ ಮುನೇನಕೊಪ್ಪ, ಹಾಗೂ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ ಅವರನ್ನುಉಸ್ತುವಾರಿಗಳನ್ನಾಗಿ ನೇಮಿಸಿದ್ದು ಸ್ವತಃ ರಾಜ್ಯಾಧ್ಯಕ್ಷ ನಳೀನಕುಮಾರ ಕಟೀಲ ನಾಳೆ ಸಂಜೆ ನಂತರ ಹುಬ್ಬಳ್ಳಿಗೆ ಆಗಮಿಸಲಿದ್ದಾರೆ. ಟಿಕೆಟ್ … Continued

ಶಾಸಕರ ಕಾರುಗಳಿಗೆ ಬೆಂಕಿಯಿಟ್ಟ ಪ್ರಕರಣ: ಮೂವರು ಆರೋಪಿಗಳ ತೀವ್ರ ವಿಚಾರಣೆ

ಬೆಂಗಳೂರು: ಬೊಮ್ಮನಹಳ್ಳಿ ಶಾಸಕ ಸತೀಶ್ ರೆಡ್ಡಿ ಅವರ ಕಾರುಗಳಿಗೆ ಬೆಂಕಿ ಹಚ್ಚಿ ಪರಾರಿಯಾಗಿದ್ದ ಮೂವರು ಆರೋಪಿಗಳನ್ನು ಬೊಮ್ಮನಹಳ್ಳಿ ಠಾಣೆ ಪೊಲೀಸರು ಬಂಧಿಸಿ ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಈ ಪ್ರಕರಣದಲ್ಲಿ ಸೂತ್ರಧಾರನಿದ್ದಾನೆಯೇ ಎಂಬ ಬಗ್ಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಕಾರುಗಳಿಗೆ ಬೆಂಕಿ ಹಚ್ಚಿ ಪರಾರಿಯಾಗಿದ್ದ ಸಾಗರ್, ನವೀನ್, ಶ್ರೀಧರ ಎಂಬವರನ್ನು ಬಂಧಿಸಿದ್ದು, ಇಂದು ಪೊಲೀಸರು ನ್ಯಾಯಾಲಯದ ಮುಂದೆ … Continued

ಗುತ್ತಲ: ಕಸಾಯಿ ಖಾನೆಗೆ ಸಾಗಿಸುತ್ತಿದ್ದ 32 ಜಾನುವಾರುಗಳ ರಕ್ಷಣೆ

ಹಾವೇರಿ: ಜಿಲ್ಲೆಯ ಗುತ್ತಲದ ಬಳಿ ಕಂಟೇನರ್ ಲಾರಿಯಲ್ಲಿ ಕಸಾಯಿ ಖಾನೆಗೆ ಸಾಗಿಸುತ್ತಿದ್ದ 32 ಜಾನುವಾರುಗಳನ್ನು ರಕ್ಷಿಸಲಾಗಿದೆ ಎಂದು ವರದಿಯಾಗಿದೆ. ರಾಣೆಬೆನ್ನೂರ ಕಡೆಯಿಂದ ಗುತ್ತಲ ಮಾರ್ಗವಾಗಿ ವಾಹನ ಬರುತ್ತಿತ್ತು. ಇದು ಆಂಧ್ರಪ್ರದೇಶದ ಅನಂತಪುರ ನಗರದ ಕಸಾಯಿ ಖಾನೆಗೆ ಹೊರಟಿದ್ದ ಲಾರಿಯನ್ನು ಎಂ.ಜಿ ತಿಮ್ಮಾಪುರ ಗ್ರಾಮದ ಹತ್ತಿರ ಪಟ್ಟಣದ ಪಿಎಸ್‌ಐ ಸಿದ್ದಾರೂಢ ಬಡಿಗೇರ ನೇತೃತ್ವದಲ್ಲಿ ರಕ್ಷಣೆ ಮಾಡಲಾಗಿದೆ. ಕಂಟೇನರ್‌ … Continued

ಸಿಎಂ ಬೊಮ್ಮಾಯಿ ಮತ್ತೊಂದು ಮಹತ್ವದ ನಿರ್ಧಾರ

ಬೆಂಗಳೂರು : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತೊಂದು ಮಹತ್ವದ ನಿರ್ಧಾರ ಕೈಗೊಂಡಿದ್ದು, ಇನ್ಮುಂದೆ ತಾವು ಸಂಚರಿಸುವ ರಸ್ತೆಗಳಲ್ಲಿ ಭದ್ರತೆಗಾಗಿ ಪೊಲೀಸರು ಝೀರೋ ಟ್ರಾಫಿಕ್ ವ್ಯವಸ್ಥೆ ನೀಡಬಾರದೆಂದು ಪೊಲೀಸರಿಗೆ ಸೂಚನೆ ನೀಡಿದ್ದಾರೆ. ಸಭೆ ಸಮಾರಂಭಗಳಲ್ಲಿ ಹಾರ-ತುರಾಯಿ ಹಾಕಬಾರದೆಂದು ಆದೇಶ ಮಾಡಿದ ಬೆನ್ನಲ್ಲೇ ಮುಖ್ಯಮಂತ್ರಿ ಬೊಮ್ಮಾಯಿ ಮತ್ತೊಂದು ಮಹತ್ವದ ಘೋಷಣೆ ಮಾಡಿದ್ದಾರೆ. ಸಾರ್ವಜನಿಕರಿಗೆ ಆಗುವ ಕಿರಿಕಿರಿ ತಪ್ಪಿಸಲು ತಾವು … Continued

ಗಮನಿಸಿ…: ದ್ವಿತೀಯ ಪಿಯುಸಿ ದಾಖಲಾತಿ ದಿನಾಂಕ ವಿಸ್ತರಣೆ

ಬೆಂಗಳೂರು:2021-22ನೇ ಶೈಕ್ಷಣಿಕ ಸಾಲಿನಲ್ಲಿ ದ್ವಿತೀಯ ಪಿಯುಸಿ ದಾಖಲಾತಿಗೆ ( Second PU Admission ) ಶುಕ್ರವಾರ ಕೊನೆಗೊಂಡಂತ ದಾಖಲಾತಿ ದಿನಾಂಕವನ್ನು, ಯಾವುದೇ ದಂಡ ಶುಲ್ಕವಿಲ್ಲದೇ ಆಗಸ್ಟ್‌ 28ರ ವರೆಗೆ ವಿಸ್ತರಿಸಲಾಗಿದೆ. ಈ ಕುರಿತು ಪದವಿ ಪೂರ್ವ ಶಿಕ್ಷಣ ಇಲಾಖೆಯ ( PU Board ) ನಿರ್ದೇಶಕರು ಸುತ್ತೋಲೆ ಹೊರಡಿಸಿದ್ದು, 2021-22ನೇ ಶೈಕ್ಷಣಿಕ ಸಾಲಿಗೆ ದ್ವಿತೀಯ ಪಿಯುಸಿ … Continued

ಕೋವಿಡ್‌ ತಡೆ: ಇಂದು ಸಿಎಂ ಬೊಮ್ಮಾಯಿ ಮಹತ್ವದ ಸಭೆ, ಕರ್ನಾಟಕದ ಕೆಲ ಜಿಲ್ಲೆಗಳಲ್ಲಿ ಕಠಿಣ ನಿರ್ಬಂಧ ಜಾರಿ..?

ಬೆಂಗಳೂರು : ಕೊರೊನಾ ಹೆಚ್ಚಿರುವ ಜಿಲ್ಲೆಗಳಲ್ಲಿ ಕರ್ನಾಟಕದಲ್ಲಿ ಮತ್ತೆ ಲಾಕ್‌ಡೌನ್‌ ಹೇರಿಕೆಯಾಗುತ್ತದೆಯಾ..? ನೈಟ್‌ ಕರ್ಪ್ಯೂ ಅವಧಿ ವಿಸ್ತರಣೆಯ ಜೊತೆಗೆ ವೀಕೆಂಡ್‌ ಕರ್ಫ್ಯೂ ಜಾರಿಯಾಗುತ್ತದೆಯೇ ಎನ್ನುವ ಪ್ರಶ್ನೆಗಳಿಗೆ ಇಂದು ಉತ್ತರ ಸಿಗುವ ಸಾಧ್ಯತೆಯಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಇಂದು (ಶನಿವಾರ) ಕೋವಿಡ್‌ ಕುರಿತು ಮಹತ್ವದ ಸಭೆ ನಡೆಯಲಿದ್ದು, ಈ ಸಭೆಯಲ್ಲಿ ಇವೆಲ್ಲ ಸಂಗತಿಗಳ ಬಗ್ಗೆ ಚರ್ಚೆಯಾಗಿ … Continued

ಆ.30ರ ವರೆಗೆ ಕೋವಿಡ್ ಕಣ್ಗಾವಲು ನಿಯಂತ್ರಣ- ಜಾಗ್ರತೆ ಮಾರ್ಗಸೂಚಿ ವಿಸ್ತರಿಸಿ ಆದೇಶ

ಬೆಂಗಳೂರು: ಕೋವಿಡ್ 19 ಕಣ್ಗಾವಲು ನಿಯಂತ್ರಣ ಮತ್ತು ಜಾಗ್ರತೆ ಮಾರ್ಗಸೂಚಿಗಳನ್ನು ಆಗಸ್ಟ್ 30ರ ವರೆಗೆ ವಿಸ್ತರಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಈ ಬಗ್ಗೆ ರಾಜ್ಯ ಸರ್ಕಾರದ ಪ್ರಧಾನ ಕಾರ್ಯದರ್ಶಿ (ಕಂದಾಯ ಇಲಾಖೆ) ತುಷಾರ್ ಗಿರಿನಾಥ್ ಆದೇಶ ಹೊರಡಿಸಿದ್ದಾರೆ. ರಾಜ್ಯದಲ್ಲಿ ಕೋವಿಡ್- 19 ಸೋಂಕು ಪ್ರಕರಣಗಳು ಹೆಚ್ಚಾಗುತ್ತಿದ್ದು, ಈ ಹಿನ್ನೆಲೆ ಕೊರೊನಾ ಸೋಂಕು ಹರಡುವದನ್ನು ತಡೆಯಲು … Continued

ಕರ್ನಾಟಕದಲ್ಲಿ ಶುಕ್ರವಾರ 1,669 ಕೊರೊನಾ ಹೊಸ ಸೋಂಕು

ಬೆಂಗಳೂರು : ರಾಜ್ಯದಲ್ಲಿ ಐದು ಜಿಲ್ಲೆಗಳಲ್ಲಿ ಕೊರೊನಾ ಹೊಸ ಸೋಂಕಿನಲ್ಲಿ ಏರಿಕೆಯಾಗಿದೆ. ಮೂರು ಜಿಲ್ಲೆಗಳಲ್ಲಿ ಶೂನ್ಯ ಪ್ರಕರಣಗಳು ಕೂಡ ವರದಿಯಾಗಿದೆ. ಶುಕ್ರವಾರ 1,669 ಜನರಿಗೆ ಕೊರೊನಾ ಹೊಸ ಸೋಂಕು ದೃಢಪಟ್ಟಿದೆ. ಇದೇ ಸಮಯದಲ್ಲಿ 1672 ಜನರು ಗುಣಮುಖುರಾಗಿ ಬಿಡುಗಡೆಯಾಗಿದ್ದಾರೆ.22 ಮಂದಿ ಸೋಂಕಿತರು ಮೃತಪಟ್ಟಿದ್ದಾರೆ. ಇದರೊಂದಿಗೆ ಸೋಂಕಿತರ ಸಂಖ್ಯೆ 29,26,401ಕ್ಕೆ ಏರಿಕೆಯಾಗಿದೆ. ಆ ಪೈಕಿ 36,933 ಮಂದಿ … Continued