ಉತ್ತರಾಖಂಡ ಪ್ರವಾಹ: ಕನ್ನಡಿಗರ ರಕ್ಷಣೆಗೆ ರಾಜ್ಯ ಸರ್ಕಾರದಿಂದ ಸಹಾಯವಾಣಿ ಆರಂಭ

ಬೆಂಗಳೂರು: ಉತ್ತರಾಖಂಡದಲ್ಲಿ ಮಳೆಯ ಆರ್ಭಟಕ್ಕೆ ಪ್ರವಾಹ ಪರಿಸ್ಥಿತಿ ತಲೆ ದೋರಿದ್ದು. ಪ್ರವಾಹದಲ್ಲಿ ಸಿಲುಕಿದ ಕರ್ನಾಟಕದ ಜನರ ಸಹಾಯಕ್ಕೆ ರಾಜ್ಯ ಸರ್ಕಾರ ಸಹಾಯವಾಣಿ ಆರಂಭಿಸಿದೆ. ಈ ಕುರಿತು ರಾಜ್ಯ ಸರ್ಕಾರ ಪ್ರಕಟಣೆ ಹೊರಡಿಸಿದ್ದು, ‘ಉತ್ತರಾಖಂಡದ ಪ್ರವಾಹದಲ್ಲಿ ಜನರು, ಪ್ರಯಾಣಿಕರು, ಯಾತ್ರಿಕರು, ಪ್ರವಾಸಿಗರು ಮತ್ತು ಸಂದರ್ಶಕರು ಸಿಲುಕಿಕೊಂಡಿದ್ದರೆ ಅವರ ಸಂಬಂಧಿಕರು, ಸ್ನೇಹಿತರು ಈ ಹೆಲ್ಪ್‌ ಡೆಸ್ಕ್‌ ಸಂಪರ್ಕಿಸಿ ಮಾಹಿತಿ … Continued

ವಿಜಯಪುರ ಜಿಲ್ಲೆಯಲ್ಲಿ ಭೂಕಂಪನ : ಭೂಗರ್ಭ ಶಾಸ್ತ್ರಜ್ಞರ ವರದಿ ಆಧರಿಸಿ ಮುಂದಿನ ಕ್ರಮ

ಕಲಬುರಗಿ ವಿಜಯಪುರ ಜಿಲ್ಲೆಯಲ್ಲಿ ಭೂಕಂಪನ ಆಗುತ್ತಿರುವ ಬಗ್ಗೆ ಭೂಗರ್ಭಶಾಸ್ತ್ರಜ್ಞರು ಭೇಟಿ ನೀಡಿದ್ದಾರೆ. ಭೂಗರ್ಭಶಾಸ್ತ್ರಜ್ಞರ ವರದಿ ಬಂದ ಮೇಲೆ ಅದರ ತೀವ್ರತೆಯನ್ನು ಆಧರಿಸಿ ಮುಂದೆ ಕ್ರಮ ಕೈಗೊಳ್ಳುತ್ತೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಕಲಬುರ್ಗಿ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಯಾವ ಕಾರಣದಿಂದಾಗಿ ಭೂಕಂಪನ ಸಂಭವಿಸುತ್ತಿದೆ, ಯಾಕೆ ನಿರ್ದಿಷ್ಟ ಸ್ಥಳದಲ್ಲಿ ಸಂಭವಿಸುತ್ತಿದೆ ಹಾಗೂ … Continued

ಶಿಶುಪಾಲನಾ ಸಂಸ್ಥೆಗಳಲ್ಲಿ‌ ಸೆಲೆಬ್ರಿಟಿಗಳ ಜನ್ಮದಿನಾಚರಣೆಗೆ ನಿಷೇಧಿಸಿ ರಾಜ್ಯ ಸರ್ಕಾರದ ಆದೇಶ

ಬೆಂಗಳೂರು: ರಾಜ್ಯ ಸರ್ಕಾರವು ರಾಜ್ಯಾದ್ಯಂತ ಶಿಶುಪಾಲನಾ ಸಂಸ್ಥೆಗಳಲ್ಲಿ (CCI) ಸೆಲೆಬ್ರಿಟಿಗಳ ಜನ್ಮದಿನಾಚರಣೆಗಳನ್ನು ನಿಷೇಧಿಸಿದ ಆದೇಶ ಹೊರಡಿಸಿದೆ. ಮಕ್ಕಳ ಸಂರಕ್ಷಣಾ ನಿರ್ದೇಶನಾಲಯ ಹೊರಡಿಸಿದ ಸುತ್ತೋಲೆಯ ಪ್ರಕಾರ, ಸೆಲೆಬ್ರಿಟಿಗ ಜನ್ಮದಿನಾಚರಣೆಗಳು ಸಿಸಿಐಗಳಲ್ಲಿ ವಾಸಿಸುವ ಮಕ್ಕಳ ಮೇಲೆ ಪ್ರತಿಕೂಲ ಮಾನಸಿಕ ಪರಿಣಾಮ ಬೀರುವುದು ಕಂಡುಬಂದಿದೆ. ಹೀಗಾಗಿ ರಾಜ್ಯ ಸರ್ಕಾರವು ರಾಜ್ಯಾದ್ಯಂತ ಶಿಶುಪಾಲನಾ ಸಂಸ್ಥೆಗಳಲ್ಲಿ  ಸೆಲೆಬ್ರಿಟಿಗಳ ಹುಟ್ಟುಹಬ್ಬ ಆಚರಿಸುವುದನ್ನು ನಿಷೇಧಿಸಿ ಆದೇಶ … Continued

ಕುಮಾರಸ್ವಾಮಿ ರಹಸ್ಯ ನನ್ನ ಬಳಿ ಇದೆ, ಬಾಯಿಬಿಟ್ರೆ ಅದು ಬೇರೆಯಾಗುತ್ತೆ: ಯತ್ನಾಳ್

ವಿಜಯಪುರ: ಉಪಚುನಾವಣೆ ಪ್ರಚಾರ ಸಮರ ತಾರಕಕ್ಕೇರಿದ್ದು, ಬಿಜೆಪಿಯಿಂದ ಕಾಂಗ್ರೆಸ್​ ವರಿಷ್ಠ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ಮುಂದುವರಿರುವ ಬೆನ್ನಿಗೇ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ರಾಹುಲ್​ ಗಾಂಧಿಯದ್ದು ಹುಚ್ಚರ ಕಂಪನಿ ಎಂದು ಹೇಳಿದ್ದಾರೆ. ವಿಜಯಪುರ ಜಿಲ್ಲೆಯ ಸಿಂದಗಿಯಲ್ಲಿ ಹಾಗೂ ಆಲಮೇಲದಲ್ಲಿ ಪ್ರಚಾರದ ವೇಳೆ ಮಾತನಾಡಿದ ಅವರು, ಕುಮಾರಸ್ವಾಮಿ ರಹಸ್ಯ ನನ್ನ ಬಳಿ ಇದೆ. ಬಾಯಿಬಿಟ್ಟರೆ … Continued

ಡಾ.ಎಂ.ಪಿ.ಕರ್ಕಿ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದ ಸಂಸದರು, ಶಾಸಕರು, ಅಭಿಮಾನಿಗಳು

ಹೊನ್ನಾವರ: ಪಟ್ಟಣದ ಎಸ್ ಡಿ ಎಂ ಕಾಲೇಜು ಆವರಣದಲ್ಲಿ ಮಂಗಳವಾರ ನೂರಾರು ಜನರು ಆಗಮಿಸಿ ಮಾಜಿ ಶಾಸಕ ಉತ್ತರ ಕನ್ನಡ ಧೀಮಂತ ರಾಜಕಾರಣಿ ಡಾ. ಎಂ.ಪಿ.ಕರ್ಕಿ ಅವರ ಅಂತಿಮ ದರ್ಶನ ಪಡೆದರು. ಮಂಗಳವಾರ ಬೆಳಗ್ಗೆ 8-30 ರಿಂದ 10-30ರ ವರೆಗೆ ಕಾಲೇಜು ಆವರಣದಲ್ಲಿ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಶಾಸಕ ದಿನಕರ ಶೆಟ್ಟಿ, ಮಾಜಿ ಶಾಸಕಿ … Continued

ಕೆಎಸ್‌ಆರ್‌ಟಿಸಿ ಬಸ್ಸನ್ನೇ ಕದ್ದ ಈ ಐನಾತಿ ಕಳ್ಳರು..!

ತುಮಕೂರು: ಕೆಎಸ್‌ಆರ್‌ಟಿಸಿ ಬಸ್ಸನ್ನೇ ಖದೀಮರು ಕದ್ದಿರುವ ಘಟನೆಯೊಂದು ವರದಿಯಾಗಿದೆ. ತುಮಕೂರು ಜಿಲ್ಲೆಯ ಗುಬ್ಬಿ ಬಸ್ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ. ಗುಬ್ಬಿ ಬಸ್ ನಿಲ್ದಾಣದಲ್ಲಿ ಕೆಎಸ್‌ಆರ್‌ಟಿಸಿ ಬಸ್ ಕದ್ದ ಕಳ್ಳರು, ಜನ್ನೇನಹಳ್ಳಿ ಎಂಬ ಗ್ರಾಮದ ಬಳಿ ಬಿಟ್ಟು ಹೋಗಿದ್ದಾರೆ. ಬಸ್‌ ಬಿಟ್ಟುಹೋಗುವ ಮೊದಲು ಕಳ್ಳರು ಎಡೆಯೂರು, ಕುಣಿಗಲ್, ಅಮೃತೂರು ಸುತ್ತಾಡಿ ಜನ್ನೆನಹಳ್ಳಿಗಳಲ್ಲಿ ಬಸ್‌ … Continued

ಕರ್ನಾಟಕದಲ್ಲಿ ಅಕ್ಟೋಬರ್‌ 21ರಿಂದ ಬಿಸಿಯೂಟ ಪುನರಾರಂಭ

ಬೆಂಗಳೂರು: ಕೋವಿಡ್ ಕಾರಣದಿಂದ ಸ್ಥಗಿತಗೊಳಿಸಿದ್ದ ಬಿಸಿಯೂಟ ಕಾರ್ಯಕ್ರಮವನ್ನು ಅಕ್ಟೋಬರ್ 21ರಿಂದ ಪುನರಾರಂಭಿಸಲಾಗುತ್ತಿದೆ. ಈ ಸಂಬಂಧ ಸರ್ಕಾರ ಆದೇಶ ಹೊರಡಿಸಿದ್ದು, 2021ರ ಅ.21ರಿಂದ ಮಧ್ಯಾಹ್ನದ ಬಿಸಿಯೂಟದ ಯೋಜನೆಯನ್ನು ಪುನರಾರಂಭಿಸಲು ಸೂಚನೆ ನೀಡಿದೆ. ಈ ಸಂಬಂಧ ಮುಂಜಾಗ್ರತಾ ಕ್ರಮಗಳನ್ನು ತುರ್ತಾಗಿ ಕೈಗೊಳ್ಳುವಂತೆ ಸರ್ಕಾರಿ, ಅನುದಾನಿತ ಶಾಲಾ ಮುಖ್ಯ ಶಿಕ್ಷಕರುಗಳಿಗೆ ಈ ಕೆಳಕಂಡ ಸೂಚನೆ ಕೊಡಲಾಗಿದೆ. ಶಾಲೆಗಳಲ್ಲಿ ಅಡುಗೆ ತಯಾರು … Continued

ಫಿಲಿಪೈನ್ಸ್​ನಲ್ಲಿ ಕುಖ್ಯಾತ ಗ್ಯಾಂಗ್​ಸ್ಟರ್ ಸುರೇಶ್ ಪೂಜಾರಿ ಬಂಧನ

ಫಿಲಿಪೈನ್ಸ್​ನಲ್ಲಿ ಕುಖ್ಯಾತ ಗ್ಯಾಂಗ್​ಸ್ಟರ್ ಸುರೇಶ್ ಪೂಜಾರಿಯನ್ನು ಬಂಧಿಸಲಾಗಿದೆ. ಮಂಗಳೂರು ಮೂಲದ ಸುರೇಶ್ ಪೂಜಾರಿ, ಭೂಗತ ಪಾತಕಿ ಛೋಟಾ ರಾಜನ್ ಹಾಗೂ ರವಿ ಪೂಜಾರಿ ಸಹಚರನಾಗಿದ್ದ. ನಂತರ ತನ್ನದೇ ಗ್ಯಾಂಗ್ ನಡೆಸುತ್ತಿದ್ದ. ಬೆಂಗಳೂರಿನ ಕೆಲವು ಪ್ರಣಗಳಲ್ಲಿಯೂ ಸುರೇಶ್ ಪೂಜಾರಿ ಪ್ರಮುಖ ಆರೋಪಿಯಾಗಿದ್ದಾನೆ. ಇದೀಗ ಫಿಲಿಫೈನ್ಸ್​​ನಲ್ಲಿ ಇಂಟರ್​ಪೋಲ್ ಪೊಲೀಸರು ಈತನನ್ನು ಬಂಧಿಸಲಾಗಿದೆ ಎಂದು ಖಾಸಗಿ ವಾಹಿನಿಯೊಂದು ವರದಿ ಪ್ರಸಾರ … Continued

ಬೆಳಗಾವಿಯಲ್ಲಿ ಅನೈತಿಕ ಪೊಲೀಸ್ ಗಿರಿ: ಪ್ರತ್ಯೇಕ ಘಟನೆಯಲ್ಲಿ ಅನ್ಯಕೋಮಿನ ಯುವಕರ ಜೊತೆ ಕಾಣಿಸಿಕೊಂಡಿದ್ದಕ್ಕೆ ಯುವತಿಯರ ಮೇಲೆ ಹಲ್ಲೆ

ಬೆಳಗಾವಿ: ಈಗ ಗಡಿ ಜಿಲ್ಲೆ ಬೆಳಗಾವಿಯಲ್ಲಿ ಅನೈತಿಕ ಪೊಲೀಸ್ ಗಿರಿ ಹೆಚ್ಚುತ್ತಿದ್ದು, ಮೂರು ಪ್ರಕರಣಗಳು ಬೆಳಕಿಗೆ ಬಂದಿದೆ. ಬೆಳಗಾವಿ:ಈಗ ಬೆಳಗಾವಿಯಲ್ಲಿ ನೈತಿಕ ಪೊಲೀಸ್‌ಗಿರಿ ವರದಿಯಾಗಿದೆ. ಅನ್ಯಧರ್ಮದ ಯುವಕನ ಜೊತೆ ಯುವತಿ ಕಾಣಿಸಿಕೊಂಡಿದ್ದಕ್ಕೆ ಪುಂಡರು ಇಬ್ಬರನ್ನು ಥಳಿಸಿದ್ದಾರೆ. ಅಕ್ಟೋಬರ್ 14ರಂದು ರಾಯಭಾಗದ ಯುವಕ ಮತ್ತು ಸಂಕೇಶ್ವರದ ಯುವತಿ ಬೆಳಗಾವಿ ಬಸ್ ನಿಲ್ದಾಣಕ್ಕೆ ಬಂದಿದ್ದರು. ಬಸ್ ನಿಲ್ದಾಣದಲ್ಲಿದ್ದ ಆಟೋ … Continued

ಲೈಂಗಿಕ ದೌರ್ಜನ್ಯದ ಆರೋಪ; ಮಂಗಳೂರಿನ ಖ್ಯಾತ ವಕೀಲರ ವಿರುದ್ಧ ಎಫ್​ಐಆರ್ ದಾಖಲು

ಮಂಗಳೂರು: ಮಂಗಳೂರಿನ ಖ್ಯಾತ ವಕೀಲ ಕೆ.ಎಸ್‌.ಎನ್‌.ರಾಜೇಶ್ ಭಟ್ ವಿರುದ್ಧ ಇಂಟರ್ನ್‌ಶಿಪ್‌ ವಿದ್ಯಾರ್ಥಿನಿ ಮೇಲೆ ದೌರ್ಜನ್ಯ ಎಸಗಿದ ಆರೋಪಕ್ಕೆ ಸಂಬಂಧಪಟ್ಟಂತೆ ಎಫ್‌ಐಆರ್‌ ದಾಖಲಾಗಿದೆ. ಮಂಗಳೂರಿನ ಪ್ರತಿಷ್ಠಿತ ಕಾಲೇಜಿನ ಎಲ್ಎಲ್‌ಬಿ ವಿದ್ಯಾರ್ಥಿನಿ ದೂರು ಅಧರಿಸಿ ನಿನ್ನೆ ರಾತ್ರಿ (ಸೋಮವಾರ ರಾತ್ರಿ) ಮಂಗಳೂರು ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ವಿದ್ಯಾರ್ಥಿನಿಯು ಲೈಂಗಿಕ ದೌರ್ಜನ್ಯ ನಡೆಸಿದ್ದಾರೆಂದು ಆರೋಪಿಸಿ ವಕೀಲರ ವಿರುದ್ಧ ದೂರು ನೀಡಿದ್ದಾರೆ. … Continued