ರಾಜ್ಯದಲ್ಲಿ 9 ಐಪಿಎಸ್‌ ಅಧಿಕಾರಿಗಳ ವರ್ಗಾವಣೆ

ಬೆಂಗಳೂರು : ರಾಜ್ಯ ಸರ್ಕಾರ 9 ಮಂದಿ ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿದೆ. ಕೆಲ ದಿನಗಳ ಹಿಂದೆಯಷ್ಟೇ ಐಎಎಎಸ್‌ ವಲಯದಲ್ಲೂ ವರ್ಗಾವಣೆ ಮಾಡಲಾಗಿತ್ತು. ಈಗ ಬುಧವಾರ 9 ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿದೆ. ಪಾಟೀಲ್ ವಿನಾಯಕ ವಸಂತ ರಾವ್- ಡಿಸಿಪಿ ಬೆಂಗಳೂರು- ಉತ್ತರ ವಿಭಾಗ ಧರ್ಮೇಂದ್ರ ಕುಮಾರ್ ಮೀನಾ- ನಿರ್ದೇಶಕರು, ಎಫ್‌ಎಸ್‌ಎಲ್ ಎಸ್.ಸವಿತಾ- ಟ್ರಾಫಿಕ್ ಡಿಸಿಪಿ,ಉತ್ತರ … Continued

ನಮ್ಮ ಮೆಟ್ರೋಗೆ ದಶಕದ ಸಂಭ್ರಮ : 60 ಕೋಟಿ ಜನರ ಪ್ರಯಾಣ

ಬೆಂಗಳೂರು : ನಮ್ಮ ಮೆಟ್ರೋ, ಟ್ರಾಫಿಕ್‌ ಟ್ರಾಫಿಕ್‌ ತೊಂದರೆಯಲ್ಲಿ ಸಿಲುಕಿ ತತ್ತರಿಸಿದ್ದ ಜನರಿಗೆ ಅದರಿಂದ ಮುಕ್ತಿ ನೀಡಲು ರಾಜ್ಯ ಸರ್ಕಾರವು ಕೇಂದ್ರದ ಸಹಕಾರದಿಂದ ಆರಂಭಿಸಿದ ಯೋಜನೆಯಾಗಿದ್ದು ಇದಕ್ಕೆ ಈಗ ದಶಕದ ಸಂಭ್ರಮ. ಬೆಂಗಳೂರಿನ ಮಹತ್ವಾಕಾಂಕ್ಷಿ ಯೋಜನೆ ನಮ್ಮ ಮೆಟ್ರೊದಲ್ಲಿ ಕಳೆದ ಹತ್ತು ವರ್ಷಗಳಲ್ಲಿ 60 ಕೋಟಿ ಜನರು ಪ್ರಯಾಣ ಬೆಳೆಸಿದ್ದು, 1286.6 ಕೋಟಿ ರೂ. ಆದಾಯ … Continued

ದೀಪಾವಳಿಗೆ ಪಟಾಕಿ ಸಿಡಿಸಬಾರದೆಂಬ ಸಿಯೆಟ್ ಜಾಹೀರಾತಿಗೆ ಆಕ್ಷೇಪ:ತಕ್ಷಣ ಹಿಂಪಡೆಯಲು ಕಂಪನಿಗೆ ಪತ್ರ ಬರೆದ ಸಂಸದ ಅನಂತಕುಮಾರ ಹೆಗಡೆ

ಶಿರಸಿ: ನಟ ಅಮೀರ್ ಖಾನ್ ನಟಿಸಿರುವ ಸಿಯೆಟ್ ಬೈಕ್ ಟೈರಿನ ಜಾಹಿರಾತೊಂದರಲ್ಲಿ ಹಿಂದುಗಳ ಭಾವನೆಗೆ ಧಕ್ಕೆ ಬರುವಂತೆ ಬಿಂಬಿಸಲಾಗಿದೆ ಎಂದು ಸಂಸದ ಅನಂತಕುಮಾರ ಹೆಗಡೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಕುರಿತು ಸಿಯೆಟ್ ಬೈಕ್ ಟೈರಿನ ಮುಖ್ಯಸ್ಥರಿಗೆ ಪತ್ರ ಬರೆದಿರುವ ಸಂಸದ ಹೆಗಡೆ, ಪಟಾಕಿಗಳನ್ನು ರಸ್ತೆ ಮೇಲೆ ಹೊಡೆಯುವುದರಿಂದ ಟ್ರಾಫಿಕ್‌ ಸಮಸ್ಯೆ ಹಾಗೂ ವಾಐಉ ಮಾಲಿನ್ಯದ ಸಮಸ್ಯೆ … Continued

ಕರ್ನಾಟಕದಲ್ಲಿ ಬುಧವಾರ ಕೊರೋನಾ ಸೋಂಕು ಏರಿಕೆ

ಬೆಂಗಳೂರು: ರಾಜ್ಯದಲ್ಲಿ ಬುಧವಾರ ಕೊರೊನಾ ಸೋಂಕು ಏರಿಕೆಯಾಗಿದೆ. ರಾಜ್ಯದಲ್ಲಿ ಇಂದು (ಬುಧವಾರ) ಹೊಸದಾಗಿ 462 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದ್ದು 9 ಮಂದಿ ಮೃತಪಟ್ಟಿದ್ದಾರೆ.ಜೊತೆಗೆ 479 ಮಂದಿ ಚೇತರಿಸಿಕೊಂಡು ಗುಣಮುಖರಾಗಿದ್ದಾರೆ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ‌. ರಾಜ್ಯದಲ್ಲಿ ಹೊಸದಾಗಿ ಕಾಣಿಸಿಕೊಂಡಿರುವ ಸೋಂಕು ಸೇರಿದಂತೆ ಇಲ್ಲಿಯ ತನಕ ಒಟ್ಟು ಸೋಂಕಿತರ ಸಂಖ್ಯೆ 29,84,484 … Continued

ಮೈಸೂರು: ಗುರುಪುರ ಟಿಬೆಟಿಯನ್ ಕ್ಯಾಂಪಿಗೆ ನುಗ್ಗಿದ ಆನೆ

ಮೈಸೂರು: ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಿಂದ ಮೇವನ್ನರಸಿ ಹೊರಬಂದಿದ್ದ ಆನೆಯೊಂದು ಗುರುಪುರ ಟಿಬೆಟಿಯನ್ ಕ್ಯಾಂಪಿಗೆ ನುಗ್ಗಿದೆ. ಸಾ ಕ್ಯಾಂಪಿನೊಳಗೆ ಸಲಗ ನುಗ್ಗಿದ್ದರಿಂದ ಆತಂಕಗೊಂಡ ಟಿಬೆಟಿಯನ್ನರು ಕೊನೆಗೆ ಕಲ್ಲು ಹೊಡೆದು ಸಲಗವನ್ನು ಓಡಿಸಿದ್ದರೂ ಪಕ್ಕದ ಕುರುಚಲು ಕಾಡಿನಲ್ಲಿ ಸೇರಿಕೊಂಡಿದ್ದು ಆತಂಕಕ್ಕೆ ಕಾರಣವಾಗಿದೆ. ಸೃ ವೀರನಹೊಸಹಳ್ಳಿ ವಲಯ ವ್ಯಾಪ್ತಿಯ ಸೊಳ್ಳೆಪುರ ಕಡೆಯಿಂದ ಬುಧವಾರ ಮುಂಜಾನೆ ಅರಣ್ಯ ದಾಟಿ ಹೊರ ಬಂದಿದ್ದ … Continued

ಮಕ್ಕಳ ಕೋವಿಡ್‌ ಲಸಿಕೆಗೆ ಅನುಮೋದನೆ ಸಿಕ್ಕಿದ ನಂತರ 16-17 ವರ್ಷದ ಮಕ್ಕಳು, ದೀರ್ಘಾವಧಿ ಕಾಯಿಲೆಯುಳ್ಳ ಮಕ್ಕಳಿಗೆ ಆದ್ಯತೆ

ಬೆಂಗಳೂರು: ಮಕ್ಕಳಿಗಾಗಿ ಸಿದ್ಧಪಡಿಸಲಾಗಿರುವ ಕೋವಿಡ್ ಲಸಿಕೆಗಳಿಗೆ ಅನುಮೋದನೆ ಸಿಕ್ಕ ಬಳಿಕ 16-17 ವರ್ಷದ ಮಕ್ಕಳಿಗೆ ಮೊದಲು ಲಸಿಕೆ ಹಾಕುವ ಸಾಧ್ಯತೆಗಳಿವೆ. ರಾಜ್ಯದ ತಾಂತ್ರಿಕ ಸಲಹಾ ಸಮಿತಿಯು, ಯೋಜನೆಗಳನ್ನು ರೂಪಿಸಿ, ಸಿದ್ಧತೆ ನಡೆಸುವಂತೆ ಸಲಹೆ ನೀಡಿದೆ. ಮಹಾಮಾರಿ ಕೊರೋನಾ ವಿರುದ್ಧ ಹೋರಾಡಲು ಲಸಿಕೆ ಅತ್ಯಂತ ಮುಖ್ಯವಾಗಿದ್ದು, ಮಕ್ಕಳಿಗಾಗಿ ಈಗಾಗಲೇ ಎರಡು ಲಸಿಕೆಗಳು ಸಿದ್ಧಗೊಂಡಿವೆ. ಝೈಡಸ್ ಕ್ಯಾಡಿಲಾದ ಝೈಕೋವ್ … Continued

ಭಟ್ಕಳ: ಅಕಸ್ಮಾತ್‌ ವಿದ್ಯುತ್ ತಂತಿ ತಗುಲಿ ರೈತ ಸಾವು

ಭಟ್ಕಳ: ತೋಟದಲ್ಲಿ ಕೃಷಿ ಚಟುವಟಿಕೆ ಮಾಡುತ್ತಿದ್ದ ವೇಳೆ ಅಕಸ್ಮಾತ್‌ ಆಗಿ ವಿದ್ಯುತ್ ತಂತಿ ತಗುಲಿ ರೈತನೊಬ್ಬ ಮೃತಪಟ್ಟ ಘಟನೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಮಾರುಕೇರಿಯ ಹೂತ್ಕಲದಲ್ಲಿ ನಡೆದ ಬಗ್ಗೆ ವರದಿಯಾಗಿದೆ. ಮೃತ ವ್ಯಕ್ತಿಯನ್ನು ನಾಗೇಶ ಮಂಜಯ್ಯ ಭಟ್(48) ಎಂದು ಗುರುತಿಸಲಾಗಿದೆ. ಈತ ಮನೆಯ ಮುಂದಿನ ತೋಟದಲ್ಲಿ ಕೊಕ್ಕೆಯನ್ನು ಕೈಯಲ್ಲಿ ಹಿಡಿದು ಹೀರೆಕಾಯಿ ಕೊಯ್ಯುತ್ತಿರುವಾಗ … Continued

ಶ್ರೀ ಜೈನ ರಾಜಸ್ತಾನಿ ವಿದ್ಯಾ ಪ್ರಚಾರಕ ಮಂಡಳದ ನೂತನ ಪದಾಧಿಕಾರಿಗಳ ಪದಗ್ರಹಣ, ಸತತ 3ನೇ ಬಾರಿಗೆ ಅಧ್ಯಕ್ಷರಾಗಿ ಭವರಲಾಲ್ ಜೈನ್‌ ಆಯ್ಕೆ

ಹುಬ್ಬಳ್ಳಿ: ಸ್ಥಾನಿಕ ಶ್ರೀ ಜೈನ ರಾಜಸ್ತಾನಿ ವಿದ್ಯಾ ಪ್ರಚಾರಕ ಮಂಡಳದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ನಗರದ ಶಾಂತಿನಿಕೇತನ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆಯಿತು. ಭವರಲಾಲ್‌ ಸಿ.ಜೈನ್‌ ಅವರು ಸತತ ಮೂರನೇ ಬಾರಿಗೆ ಶ್ರೀ ಜೈನ ರಾಜಸ್ತಾನಿ ವಿದ್ಯಾ ಪ್ರಚಾರಕ ಮಂಡಳದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದು, ಅವರು ಪದಗ್ರಹಣ ಸಮಾರಂಭದಲ್ಲಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡರು. ಮಹೇಂದ್ರ ಪಾಲಗೋತಾ … Continued

ಬಬಲೇಶ್ವರದ ಬಳಿ ಭೀಕರ ಅಪಘಾತ: ಮಗು ಸೇರಿ ಸ್ಥಳದಲ್ಲೇ ನಾಲ್ವರು ಸಾವು, ಮೂವರ ಸ್ಥಿತಿ ಗಂಭೀರ

ವಿಜಯಪುರ: ಬಬಲೇಶ್ವರ ತಾಲೂಕಿನ ಹೊನಗನಹಳ್ಳಿ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿ-50ರಲ್ಲಿ ಭೀಕರ ಅಪಘಾತದಲ್ಲಿ ಮಗು ಸೇರಿದಂತೆ ಸ್ಥಳದಲ್ಲೇ ನಾಲ್ವರು ಮೃತಪಟ್ಟಿದ್ದಾರೆ ಹಾಗೂ ಮೂವರ ಸ್ಥಿತಿ ಗಂಭೀರವಾಗಿದೆ. ಹೆದ್ದಾರಿ ಬದಿಯಲ್ಲಿ ಕೆಟ್ಟು ನಿಂತಿದ್ದ ಲಾರಿಗೆ ಕಾರು ಬುಧವಾರ ಮುಂಜಾನೆ ಕಾರು ಡಿಕ್ಕಿ ಹೊಡೆದಿದೆ, ಡಿಕ್ಕಿಯ ರಭಸಕ್ಕೆ ಕಾರಿನಲ್ಲಿದ್ದ ಒಂದೇ ಕುಟುಂಬದ ಮೂವರು ಹಾಗೂ ಲಾರಿ ಚಾಲಕ ಸ್ಥಳದಲ್ಲೇ … Continued

ಇಂಧನ ದರ ಮತ್ತೆ ಹೆಚ್ಚಳ: ದಾಖಲೆಯ ಮಟ್ಟಕ್ಕೆ ಏರಿದ ಪೆಟ್ರೋಲ್‌, ಡೀಸೆಲ್‌ ದರ

ಬೆಂಗಳೂರು: ಜಾಗತಿಕವಾಗಿ ಕಚ್ಚಾ ತೈಲ ದರ ಏರಿಕೆಯಾಗಿರುವ ಬೆನ್ನಲ್ಲೇ ದೇಶದಲ್ಲಿ ಬುಧವಾರ ಪೆಟ್ರೋಲ್‌, ಡೀಸೆಲ್‌ ದರ ಸಾರ್ವಕಾಲಿಕ ದಾಖಲೆಯ ಮಟ್ಟಕ್ಕೆ ಏರಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬ್ರೆಂಟ್‌ ಕಚ್ಚಾ ತೈಲ ದರವು ಪ್ರತಿ ಬ್ಯಾರೆಲ್‌ಗೆ 85.08 ಡಾಲರ್‌ ತಲುಪಿದೆ. ದೆಹಲಿಯಲ್ಲಿ ಪ್ರತಿ ಲೀಟರ್‌ ಪೆಟ್ರೋಲ್‌ ಮತ್ತು ಡೀಸೆಲ್‌ ದರ 35 ಪೈಸೆ ಹೆಚ್ಚಳವಾಗಿದೆ. ದೆಹಲಿಯಲ್ಲಿ ಪ್ರತಿ ಲೀಟರ್‌ … Continued