ಸಮವಸ್ತ್ರದಲ್ಲಿ ವಿದ್ಯಾರ್ಥಿಗಳ ವಿಚಾರಣೆ ನಡೆಸಿದ್ದ ಪೊಲೀಸರ ವಿರುದ್ಧ ಕ್ರಮ: ಹೈಕೋರ್ಟ್‌ಗೆ ಸರ್ಕಾರದ ಮಾಹಿತಿ

ಬೆಂಗಳೂರು: ಬೀದರ್‌ನ ಶಾಹೀನ್‌ ಶಾಲೆಯಲ್ಲಿ ಸಮವಸ್ತ್ರ ಧರಿಸಿ ಮತ್ತು ಶಸ್ತ್ರಾಸ್ತ್ರಗಳನ್ನು ಹಿಡಿದುಕೊಂಡು 4, 5 ಮತ್ತು 6ನೇ ತರಗತಿ ವಿದ್ಯಾರ್ಥಿಗಳನ್ನು ವಿಚಾರಣೆ ನಡೆಸಿದ್ದ ತಪ್ಪಿತಸ್ಥ ಪೊಲೀಸ್‌ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದು ರಾಜ್ಯ ಸರ್ಕಾರವು ಶುಕ್ರವಾರ ಕರ್ನಾಟಕ ಹೈಕೋರ್ಟ್‌ಗೆ ತಿಳಿಸಿದೆ. ಬೀದರಿನ ಶಾಹೀನ್‌ ಶಾಲೆಯಲ್ಲಿ ಪೌರತ್ವ ತಿದ್ದುಪಡಿ ಕಾಯಿದೆಗೆ (ಸಿಎಎ) ಸಂಬಂಧಿಸಿದಂತೆ ಕಳೆದ ವರ್ಷ … Continued

ಕರ್ನಾಟಕದಲ್ಲಿ ಶುಕ್ರವಾರ ಹೊಸದಾಗಿ 378 ಜನರಿಗೆ ಕೊರೊನಾ ಸೋಂಕು; 11 ಮಂದಿ ಸಾವು

ಬೆಂಗಳೂರು: ರಾಜ್ಯದಲ್ಲಿ ಇಂದು (ಶುಕ್ರವಾರ) ಹೊಸದಾಗಿ 378 ಜನರಿಗೆ ಕೊರೊನಾ ಸೋಂಕು ದೃಢವಾಗಿದೆ. ಇದೇ ಸಮಯದಲ್ಲಿ ಸೋಂಕಿನಿಂದ 11 ಜನರು ಮೃತಪಟ್ಟಿದ್ದಾರೆ. ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 29,85,227 ಕ್ಕೆ ಏರಿಕೆಯಾಗಿದೆ. ಒಟ್ಟು 29,38,312 ಜನ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಈವರೆಗೆ 37,995 ಜನ ಮೃತಪಟ್ಟಿದ್ದಾರೆ. 8,891 ಸಕ್ರಿಯ ಪ್ರಕರಣಗಳಿವೆ.ಸೋಂಕಿನ ಪ್ರಮಾಣ ಶೇ. 0.36 ರಷ್ಟಿದ್ದು, … Continued

ಕರ್ನಾಟಕದಲ್ಲಿ ಶೇ.83 ಜನರಿಗೆ ಮೊದಲ ಡೋಸ್, ಶೇ.38 ಜನರಿಗೆ 2ನೇ ಡೋಸ್ ನೀಡಿಕೆ; ಸಚಿವ ಸುಧಾಕರ್

ಹುಬ್ಬಳ್ಳಿ : ಕರ್ನಾಟಕದಲ್ಲಿ ಶೇ.83 ಜನರಿಗೆ ಮೊದಲ ಡೋಸ್ ಹಾಗೂ ಶೇ.38 ಜನರಿಗೆ ಎರಡನೇ ಡೋಸ್ ನೀಡಲಾಗಿದೆ. ಭಾರತದಲ್ಲಿ ಅಮೆರಿಕದ ಎರಡೂವರೆ ಪಟ್ಟು, ಬ್ರೆಜಿಲ್ ನ 4 ಪಟ್ಟು, ಜಪಾನ್ ನ 8 ಪಟ್ಟು, ಇಂಗ್ಲೆಂಡ್ ನ 10 ಪಟ್ಟು, ಯುರೋಪ್ ದೇಶಗಳ 2 ಪಟ್ಟು ಅಧಿಕ ಜನರಿಗೆ ಲಸಿಕೆ ನೀಡಲಾಗಿದೆ ಎಂದು ರಾಜ್ಯದ ಆರೋಗ್ಯ … Continued

ಯಕ್ಷರಂಗದ ಗೋಡೆ, ನಾರಾಯಣ ಹೆಗಡೆಗೆ ಅನಂತ ಶ್ರೀ ಪ್ರಶಸ್ತಿ ಪ್ರಕಟ

ಶಿರಸಿ: ಬಡಗುತಿಟ್ಟು ಯಕ್ಷಗಾನದ ಮೇರು‌ ಕಲಾವಿದ ಯಕ್ಷರಂಗದ ಗೋಡೆ ಎಂದೇ ಖ್ಯಾತರಾದ ಗೋಡೆ ನಾರಾಯಣ ಹೆಗಡೆ ಅವರಿಗೆ‌ ಪ್ರತಿಷ್ಠಿತ ಅನಂತ ಶ್ರೀ ಪ್ರಶಸ್ತಿ ಪ್ರಕಟವಾಗಿದೆ. ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಶ್ರೀ ಅನಂತ ಯಕ್ಷಕಲಾ ಪ್ರತಿಷ್ಠಾನದ ಕಾರ್ಯದರ್ಶಿ ಹಾಗೂ ಯಕ್ಷಗಾನದ ಖ್ಯಾತ ಭಾಗ್ವತ ಕೇಶವ ಹೆಗಡೆ ಕೊಳಗಿ, ಖ್ಯಾತ ತಾಳಮದ್ದಳೆ ಅರ್ಥಧಾರಿ ಉಮಾಕಾಂತ ಭಟ್ಟ ಕೆರೇಕೈ … Continued

ಶಾಸಕರು, ಸಂಸದರ ವಿರುದ್ಧದ ಕ್ರಿಮಿನಲ್‌ ಪ್ರಕರಣ: ಅಮಿಕಸ್‌ ಕ್ಯೂರಿಗೆ ಪ್ರಕರಣ ಹಿಂಪಡೆದ ಪಟ್ಟಿ ನೀಡಲು ಆದೇಶಿಸಿದ ಹೈಕೋರ್ಟ್‌

ಬೆಂಗಳೂರು: ಶಾಸಕರು ಮತ್ತು ಸಂಸದರ ವಿರುದ್ಧದ ಕ್ರಿಮಿನಲ್‌ ಪ್ರಕರಣಗಳನ್ನು ಹಿಂಪಡೆದಿರುವುದು ಮತ್ತು ಹಿಂಪಡೆಯಲು ಉದ್ದೇಶಿಸಿರುವ ಪ್ರಕರಣಗಳ ಪಟ್ಟಿಯನ್ನು ಅಮಿಕಸ್‌ ಕ್ಯೂರಿಗೆ ನೀಡುವಂತೆ ರಾಜ್ಯ ಸರ್ಕಾರಕ್ಕೆ ಶುಕ್ರವಾರ ಕರ್ನಾಟಕ ಹೈಕೋರ್ಟ್‌ ಆದೇಶಿಸಿದೆ. ಅಮಿಕಸ್‌ ಕ್ಯೂರಿ ಅದನ್ನು ಪರಿಶೀಲಿಸಿ, ಅಗತ್ಯ ಬಿದ್ದರೆ ಪ್ರತಿಕ್ರಿಯೆ ದಾಖಲಿಸಬಹುದು ಎಂದು ಹೇಳಿದೆ. ಶಾಸಕರು ಮತ್ತು ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ಮೇಲ್ವಿಚಾರಣೆ ನಡೆಸುವಂತೆ … Continued

ಅಕ್ರಮವಾಗಿ ತಂದಿದ್ದ ಹಂದಿ ಚಿಪ್ಪು ಮಾರಾಟಕ್ಕೆ ಯತ್ನ: ಇಬ್ಬರ ಬಂಧನ

ಬೆಂಗಳೂರು: ನಗರದಲ್ಲಿ ಹಂದಿ ಚಿಪ್ಪು ಮಾರುತ್ತಿದ್ದ ಆರೋಪದ ಮೇಲೆ ಇಬ್ಬರನ್ನು ಬಂಧಿಸಲಾಗಿದೆ. ಬಂಧಿತರಿಂದ 8 ಕೆಜಿ 200 ಗ್ರಾಂ ತೂಕದ ಹಂದಿ ಚಿಪ್ಪು ಜಪ್ತಿ ಮಾಡಲಾಗಿದ್ದು, ಅನ್ನಪೂರ್ಣೇಶ್ವರಿನಗರ ಠಾಣೆ ಪೊಲೀಸರ ಕಾರ್ಯಾಚರಣೆಯಲ್ಲಿ ಈ ಅಕ್ರಮ ಮಾರಾಟ ಪತ್ತೆಯಾಗಿದೆ. ಬಳ್ಳಾರಿಯಲ್ಲಿ ಚಿಪ್ಪು ಹಂದಿ ಬೇಟೆಯಾಡಿದ್ದ ದುಷ್ಕರ್ಮಿಗಳು, ಬೆಂಗಳೂರಿನಲ್ಲಿ 1 ಲಕ್ಷ ರೂ.ಗಳಿಗೆ ಮಾರಾಟ ಮಾಡಲು ತಂದಿದ್ದರು ಎಂದು … Continued

ಪ್ರಜ್ಞೆ ತಪ್ಪಿದ ಪ್ರಯಾಣಿಕ: ಇಂದೋರ್​​ನಲ್ಲಿ ತುರ್ತು ಲ್ಯಾಂಡ್ ದೆಹಲಿ ವಿಮಾನ; ಆಸ್ಪತ್ರೆಗೆ ಒಯ್ಯುವಷ್ಟರಲ್ಲಿ ವ್ಯಕ್ತಿ ಸಾವು!

ಬೆಂಗಳೂರು: ಬೆಂಗಳೂರಿನಿಂದ ದೆಹಲಿಗೆ ತೆರಳುತ್ತಿದ್ದ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಬೆಂಗಳೂರಿನ ಪ್ರಯಾಣಿಕರೊಬ್ಬರಿಗೆ ತೀವ್ರ ಉಸಿರಾಟದ ಸಮಸ್ಯೆ ಉಂಟಾಗಿ, ಪ್ರಜ್ಞೆ ತಪ್ಪಿದ ಕಾರಣ ಅವರಿಗೆ ತುರ್ತಾಗಿ ವೈದ್ಯಕೀಯ ಚಿಕಿತ್ಸೆ ಕೊಡಿಸಲು ವಿಮಾನವನ್ನು ಇಂದೋರ್​ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಮಾಡಲಾಯಿತು. ಆದರೆ ಇಂದೋರ್ ವಿಮಾನ ನಿಲ್ದಾಣದಿಂದ ಆಸ್ಪತ್ರೆಗೆ ದಾಖಲಿಸುವಷ್ಟರಲ್ಲಿ ಅವರು ಮೃತಪಟ್ಟ ಘಟನೆ ವರದಿಯಾಗಿದೆ. ವಿಸ್ತಾರ ವಿಮಾನದಲ್ಲಿ ಪ್ರಯಾಣಿಸುತ್ತಿದ್ದವರನ್ನು … Continued

ಮನೆಮನೆಗೆ ಪೂರೈಸುವ ಗಿಫ್ಟ್ ಬಾಕ್ಸ್‌ನಲ್ಲಿ ಡ್ರಗ್ಸ್ ಪೂರೈಕೆ; ಇಬ್ಬರ ಬಂಧನ

ಬೆಂಗಳೂರು: ಬಿಟ್ ಕಾಯಿನ್ ಮೂಲಕ ಡಾರ್ಕ್ ನೆಟ್‌ನಲ್ಲಿ ಮಾದಕ ವಸ್ತುಗಳನ್ನು ಖರೀದಿಸಿ ಮನೆ ಮನೆಗೆ ಸ್ವಿಗ್ಗಿ ಡಂಜೋ ಹೆಸರಿನಲ್ಲಿ ಗ್ರಾಹಕರಿಗೆ ಗಿಫ್ಟ್ ಬಾಕ್ಸ್‌ಗಳಲ್ಲಿ ತಲುಪಿಸುತ್ತಿದ್ದ ಹೊಸ ವಿಧಾನದ ಬೃಹತ್ ಡ್ರಗ್ಸ್ ಸರಬರಾಜು ಮಾರಾಟ ಜಾಲವನ್ನು ಬೆಂಗಳೂರಿನ ಕೇಂದ್ರ ಅಪರಾಧ ವಿಭಾಗ(ಸಿಸಿಬಿ)ದ ಪೊಲೀಸರು ಭೇದಿಸಿದ್ದಾರೆ. ಬೃಹತ್ ಜಾಲದಲ್ಲಿದ್ದ ಇಬ್ಬರು ಡ್ರಗ್ಸ್ ಪೆಡ್ಲರ್ ಗಳನ್ನು ಬಂಧಿಸಿ ಅವರಿಂದ ೬೦ … Continued

ಮೈಸೂರು ಹೊರವಲಯದಲ್ಲಿ ಡಬಲ್ ಮರ್ಡರ್; ಮಗನಿಂದಲೇ ತಂದೆ, ತಂದೆಯ ಪ್ರೇಯಸಿ ಕೊಲೆ ಕೊಲೆ

ಮೈಸೂರು: ಮೈಸೂರಿನ ಶ್ರೀನಗರದಲ್ಲಿನ ಮನೆಯೊಂದಕ್ಕೆ ನುಗ್ಗಿದ ಪುತ್ರನೇ ತಂದೆ ಹಾಗೂ ತಂದೆಯ ಜೊತೆಗಿದ್ದ ಮಹಿಳೆಯನ್ನು ಬರ್ಬರವಾಗಿ ಮಚ್ಚಿನಿಂದ ಕೊಚ್ಚಿ ಹತ್ಯೆಗೈದ ಘಟನೆ ನಡೆದ ಬಗ್ಗೆ ವರದಿಯಾಗಿದೆ. ಬೆಳ್ಳಬೆಳಿಗ್ಗೆ ನಡೆದ ಈ ಜೋಡಿಕೊಲೆಯಿಂದಾಗಿ ಸಾಂಸ್ಕೃತಿಕ ನಗರಿ ಬೆಚ್ಚಿಬಿದ್ದಿದೆ. ಈ ಮೈಸೂರು ಹೊರವಲಯದ ಶ್ರೀ ನಗರದಲ್ಲಿ ನಡೆದ ಬಗ್ಗೆ ವರದಿಯಾಗಿದ್ದು, ಪ್ರಕಾಶ್ ಮತ್ತು ಲತಾ ಅವರನ್ನು ಹತ್ಯೆಗೈದು ಪುತ್ರ … Continued

ಘಟಪ್ರಭಾ ಕಾಲುವೆಗೆ ಉರುಳಿಬಿದ್ದ ಕಾರು : ಸ್ಥಳದಲ್ಲೇ ನಾಲ್ವರು ಸಾವು, ಇಬ್ಬರಿಗೆ ಗಂಭೀರ ಗಾಯ

ಬಾಗಲಕೋಟೆ : ಘಟಪ್ರಭಾ ಕಾಲುವೆಗೆ ಕಾರು ಪಲ್ಟಿಯಾಗಿ ನಾಲ್ವರು ಸ್ಥಳದಲ್ಲೇ ಮೃತಪಟ್ಟ ಘಟನೆ ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಹಲಕಿ ಗ್ರಾಮದ ಬಳಿ ನಡೆದಿದೆ . ಹಲಕಿ ಗ್ರಾಮದ ಬಳಿ ಕಲ್ಲಿಗೆ ಡಿಕ್ಕಿಯಾದ ಕಾರು ಘಟಪ್ರಭಾ ಕಾಲುವೆಗೆ ಪಲ್ಟಿಯಾಗಿದ್ದು, ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ತಡರಾತ್ರಿ ಈ ಭೀಕರ ಅಪಘಾತ ಸಂಭವಿಸಿದ್ದು, ಕಾರಿನಲ್ಲಿ ಆರು … Continued