ಭಟ್ಕಳ : ಸಮುದ್ರ ತೀರದಲ್ಲಿ ಜೋಡಿ ಶವ ಪತ್ತೆ..!

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಯಲ್ವಡಿಕವೂರು ಗ್ರಾಮ ಪಂಚಾಯತ ವ್ಯಾಪ್ತಿಯ ಹುಯಿಲಮಡಿ ಸಮುದ್ರ ಕಿನಾರೆಯ ಪಕ್ಕದ ಬಂಡೆಗಳ ನಡುವೆ ಪುರುಷ ಹಾಗೂ ಮಹಿಳೆಯ ಶವ ಪತ್ತೆಯಾಗಿದ್ದು, ಪ್ರಾಥಮಿಕ ತನಿಖೆಯಿಂದ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಅವರು ಹೊಂದಿದ್ದ ದಾಖಲೆಗಳಿಂದ ಮೃತರು ಬೆಂಗಳೂರಿನ ಜೆ.ಪಿ. ನಗರದ ನಿವಾಸಿಗಳು  ಆದಿತ್ಯ ಬಿ ಎಸ್, ಹಾಗೂ ಲಕ್ಷ್ಮಿ … Continued

ಟೊಮ್ಯಾಟೊ ಬೆಲೆ ನಷ್ಟ: ರೈತ ದಂಪತಿ ಆತ್ಮಹತ್ಯೆ

ಬೆಂಗಳೂರು: ಸಾಲ ಮಾಡಿ ಬೆಳೆದಿದ್ದ ಟೊಮ್ಯಾಟೊ ಬೆಳೆ ನಷ್ಟದಿಂದ ನೊಂದ ರೈತ ದಂಪತಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಕೊಂಡ್ಲಿಗಾನಹಳ್ಳಿಯಲ್ಲಿ ನಡೆದಿದೆ. ಕೊಂಡ್ಲಿಗಾನಹಳ್ಳಿಯ ವೆಂಕಟರೆಡ್ಡಿ(೫೨) ಮತ್ತು ರತ್ನಮ್ಮ (೪೬) ಆತ್ಮಹತ್ಯೆ ಮಾಡಿಕೊಂಡವರು ಎಂದು ಗುರುತಿಸಲಾಗಿದೆ. ಮೂರು ಲಕ್ಷ ರೂ ಸಾಲ ಮಾಡಿ ಟೊಮ್ಯಾಟೊ ಬೆಳೆದು ೫ ಲಕ್ಷ ರೂಪಾಯಿ ಲಾಭದ ನಿರೀಕ್ಷೆಯಲ್ಲಿದ್ದ … Continued

ಆರ್ಟಿಫಿಶಿಯಲ್‌ ಇಂಟಲಿಜೆನ್ಸ್‌ ಮೂಲಕ ಮಣ್ಣಿನ ತೇವಾಂಶ ಸಾಮರ್ಥ್ಯ ಅಳೆಯುವ ಸಾಧನ ಅಭಿವೃದ್ಧಿ: ಕರ್ನಾಟಕ ವಿಜ್ಞಾನ -ತಂತ್ರವಿದ್ಯಾ ಮಂಡಳಿಯಿಂದ ’ವರ್ಷದ ಅತ್ಯುತ್ತಮ ಸಂಶೋಧನಾ ಪ್ರಶಸ್ತಿ

ಕುಮಟಾ: ಉಡುಪಿಯ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ಸಿವಿಲ್ ವಿಭಾಗದ ನವೀನ್ ಹೆಗಡೆ, ಪ್ರೊ. ಸುನಿಲ್ ಹಲ್ದನಕರ್  ಹಾಗೂ ವಿದ್ಯುನ್ಮಾನ ವಿಭಾಗದ ಮುಖ್ಯಸ್ಥರಾದ ಡಾ. ಸಚಿನ್ ಭಟ್ಟ ಅವರ ಮಾರ್ಗದರ್ಶನದಲ್ಲಿ  ಮಣ್ಣಿನ ತೇವಾಂಶ  ಸಾಮರ್ಥ್ಯವನ್ನು ಕೃತಕ ಬುದ್ಧಿಮತ್ತೆ  (Artificial Intelligence ) ಉಪಯೋಗಿಸಿ ಅಳೆಯುವ ಸಾಧನಕ್ಕೆ ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರವಿದ್ಯಾ ಮಂಡಳಿಯ … Continued

ಕರ್ನಾಟಕದ ಅರ್ಹ ಜನಸಂಖ್ಯೆಯ 75% ಜನರಿಗೆ ಕೋವಿಡ್ -19 ಲಸಿಕೆಯ ಮೊದಲ ಡೋಸ್‌ ನೀಡಿಕೆ: ಕೆ. ಸುಧಾಕರ್

ಬೆಂಗಳೂರು: ಕರ್ನಾಟಕವು ತನ್ನ ಅರ್ಹ ಜನಸಂಖ್ಯೆಯ ಶೇಕಡಾ 75 ರಷ್ಟು ಜನರಿಗೆ ಕೋವಿಡ್ -19 ವಿರುದ್ಧ ಮೊದಲ ಡೋಸ್‌ ಲಸಿಕೆ ಹಾಕಿದ್ದು, ಶೇಕಡಾ 24 ರಷ್ಟು ಜನರಿಗೆ ಎರಡೂ ಡೋಸ್‌ ಲಸಿಕೆ ಹಾಕಲಾಗಿದೆ ಎಂದು ರಾಜ್ಯ ಆರೋಗ್ಯ ಸಚಿವ ಕೆ ಸುಧಾಕರ್ ಹೇಳಿದ್ದಾರೆ. ಶುಕ್ರವಾರ ರಾತ್ರಿ 9 ಗಂಟೆಯವರೆಗೆ 26.92 ಲಕ್ಷ ಡೋಸ್‌ಗಳನ್ನು ನೀಡುವ ಮೂಲಕ … Continued

ಸೆಪ್ಟೆಂಬರ್‌ 17: ದೇಶದಲ್ಲೇ ಅತಿ ಹೆಚ್ಚು ಲಸಿಕೆ ನೀಡಿದ ಎರಡನೇ ರಾಜ್ಯ ಕರ್ನಾಟಕ..!

ಬೆಂಗಳೂರು: ಶುಕ್ರವಾರ ನಡೆದ ಕೊವಿಡ್ ಲಸಿಕೆ ಅಭಿಯಾನದ ಮೂಲಕ ಕರ್ನಾಟಕ ಇಡೀ ದೇಶದಲ್ಲಿ ಅತಿ ಹೆಚ್ಚು ಲಸಿಕೆ ನಿರ್ವಹಿಸಿದ  ಎರಡನೇ  ರಾಜ್ಯ ಎಂಬ ಹಿರಿಮೆಗೆ ಪಾತ್ರವಾಗಿದೆ. ಮೆಗಾ ವ್ಯಾಕ್ಸಿನೇಷನ್ ಅಭಿಯಾನದ ಸಮಯದಲ್ಲಿ 27,80,032 ಕೋವಿಡ್ -19 ಲಸಿಕೆ ಪ್ರಮಾಣವನ್ನು  ನೀಡುವ ಮೂಲಕ ಕರ್ನಾಟಕ ಶುಕ್ರವಾರ ಲಸಿಕೆ ಹಾಕುವಲ್ಲಿ ಹೊಸ ದಾಖಲೆ ನಿರ್ಮಿಸಿದೆ. ಬಿಹಾರದಲ್ಲಿ 29,38,653 ಡೋಸ್​ … Continued

ಬೆಂಗಳೂರು ಮೆಟ್ರೋ ರೈಲು ಸಂಚಾರದ ಅವಧಿ ವಿಸ್ತರಣೆ

ಬೆಂಗಳೂರು: ಬೆಂಗಳೂರಿನ ನಮ್ಮ ಮೆಟ್ರೋ ರೈಲು ಸೇವೆಯ ದೈನಂದಿನ ಓಡಾಟದ ಅವಧಿಯನ್ನು ಬೆಳಗ್ಗೆ 6 ರಿಂದ ರಾತ್ರಿ 9.30 ರ ವರೆಗೆ ವಿಸ್ತರಣೆ ಮಾಡಲಾಗಿದೆ. ಈ ಮೊದಲು ಮೇಟ್ರೋ ರೈಲು ಸಂಚಾರದ ಅವಧಿ ಬೆಳಗ್ಗೆ 7 ಗಂಟೆಯಿಂದ ಸಂಜೆ 8 ಗಂಟೆಯವರೆಗೆ ಮಾತ್ರ ಇತ್ತು. ಕೊರೊನಾ ಸಾಂಕ್ರಾಮಿಕ ಸೋಂಕು ಕಾಣಿಸಿಕೊಂಡ ಬಳಿಕ ಜನಜೀವನ ಅಸ್ತವ್ಯಸ್ತವಾಗಿತ್ತು. ಹೀಗಾಗಿ … Continued

ಪ್ರಧಾನಿ ಮೋದಿ 71ನೇ ಜನ್ಮದಿನ: ಕಾರವಾರದ ಕಡಲತೀರದ ಮರಳಿನಲ್ಲಿ ಮೂಡಿದ ಕಲಾಕೃತಿ

ಕಾರವಾರ : ನರೇಂದ್ರ ಮೋದಿಯವರ 71 ನೇ ಜನ್ಮದಿನದ ಅಂಗವಾಗಿ ಉತ್ತರ ಕನ್ನಡ ಜಿಲ್ಲೆಯ ಕಾರವಾರದ ರವೀಂದ್ರನಾಥ ಠಾಗೋರ್ ಕಡಲತೀರದಲ್ಲಿ, ಮರಳಿನಲ್ಲಿ ಮೋದಿ ಕಲಾಕೃತಿ ಮೂಡಿಬಂದಿದೆ. ಮೋದಿಯವರ ಅಭಿಮಾನಿ ವಿಷ್ಟು ಎಂಬವರು ಮೋದಿಯವರ ಮರಳಿನ ಕಲಾಕೃತಿ ರಚಿಸಿ ವಿಶಿಷ್ಟವಾಗಿ ಮೋದಿ ಜನ್ಮದಿನವನ್ನು ಆವರಿಸಿದರು. ಅಂಕೋಲದ ವಿಷ್ಟು ಅವರ ಜೊತೆಗೆ ಮೂರು ಜನ ಕಲಾವಿದರು ಆರು ತಾಸುಗಳ … Continued

ಪರಿಷತ್‌ ಸದಸ್ಯರಿಗೆ ಅವಧಿ ಮೀರಿದ ಮಾಸ್ಕ್ ವಿತರಣೆ : ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಸಭಾಪತಿ ಹೊರಟ್ಟಿ ಸೂಚನೆ

ಬೆಂಗಳೂರು: ಅವಧಿ ಮೀರಿದ ಮಾಸ್ಕ್ ವಿತರಿಸಿದ ಸಂಬಂಧ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಭಾಪತಿ ಬಸವರಾಜಹೊರಟ್ಟಿ ಸರ್ಕಾರಕ್ಕೆ ವಿಧಾನಪರಿಷತ್‌ನಲ್ಲಿ ಇಮದು (ಶುಕ್ರವಾರ) ಸೂಚಿಸಿದ್ದಾರೆ. ಒಂದು ವರ್ಷದ ಅವಧಿ ಮೀರಿದ ಮಾಸ್ಕ್‌ಗೆ ಎರಡು ವರ್ಷದ ಸ್ಟಿಕರ್ ಅಂಟಿಸಿ ನೀಡಿರುವ ಸಂಬಂಧ ಆರೋಗ್ಯ ಇಲಾಖೆಯ ಕ್ರಮದ ಬಗ್ಗೆ ಸೂಕ್ತ ತನಿಖೆ ನಡೆಸಿ ವರದಿ ನೀಡಬೇಕು. ಹಾಗೂ … Continued

ಒಂದೇ ಕುಟುಂಬದ ಐವರು ಆತ್ಮಹತ್ಯೆ : ಮೃತದೇಹಗಳ ಮುಂದೆಯೇ 5 ದಿನಗಳಿಂದ ಹಸಿದು ಕುಳಿತಿದ್ದ 3 ವರ್ಷದ ಮಗು

ಬೆಂಗಳೂರು: ಬೆಂಗಳೂರಿನ ಬ್ಯಾಡರಹಳ್ಳಿ ಪೊಲೀಸ್​ ಠಾಣಾ ವ್ಯಾಪ್ತಿಯನ್ನು ಒಂದೇ ಕುಟುಂಬದ ಐವರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಕೌಟುಂಬಿಕ ಕಲಹದಿಂದ ಮನೆಯಲ್ಲಿರುವ ಐವರು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಬಹಿರಂಗವಾಗಿದೆ ಎಂದು ವರದಿಯಾಗಿದೆ. ಐವರು ನೇಣು ಬಿಗಿದ ಸ್ಥಿತಿಯಲ್ಲಿದ್ದು, ಇದು ಐದು ದಿನಗಳ ಹಿಂದೆ ಘಟನೆ ನಡೆದಿರುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ. ಅದೃಷ್ಟವಶಾತ್​ ಮೂರು ವರ್ಷದ … Continued

ಕುಮಟಾ : ಹೊಲನಗದ್ದೆ ಕಡ್ಲೆಯ ಅರಬ್ಬಿ ಸಮುದ್ರ ತೀರದಲ್ಲಿ ಡಾಲ್ಫಿನ್ ಕಳೇಬರ ಪತ್ತೆ..!

ಕುಮಟಾ : ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಹೊಲನಗದ್ದೆಯ ಕಡ್ಲೆಯ ಅರಬ್ಬಿ ಸಮುದ್ರ ತೀರದಲ್ಲಿ ಡಾಲ್ಫಿನ್ ಕಳೇಬರ ಪತ್ತೆಯಾಗಿದೆ. ಸುಮಾರು 3 ಮೀಟರುಗಳಷ್ಟು ಉದ್ದವಿರುವ ಡಾಲ್ಫಿನ್ ಯಾವಕಾರಣದಿಂದ ಮೃತಪಟ್ಟಿದೆ ಎನ್ನುವುದು ತಿಳಿದು ಬಂದಿಲ್ಲ. ಇದು ಗಂಡು ಡಾಲ್ಪಿನ್ ಆಗಿದ್ದು ಕಳೇಬರದ ಮೇಲೆ ಮೇಲ್ನೋಟಕ್ಕೆ ಯಾವುದೇ ಗಾಯದ ಗುರುತು ಕಂಡು ಬರುತ್ತಿಲ್ಲ. ಮೀನುಗಾರರು ಇದನ್ನು ಹಂದಿ … Continued