ವಾಯುಪಡೆ 6 ಸಿಬ್ಬಂದಿ ಸೇರಿ ಕಾನ್ಪುರದಲ್ಲಿ 25ಕ್ಕೂ ಹೆಚ್ಚು ಜನರಿಗೆ ಝಿಕಾ ವೈರಸ್ ಸೋಂಕು

ಕಾನ್ಪುರ: ವಾಯುಪಡೆಯ ಆರು ಸಿಬ್ಬಂದಿಯೂ ಸೇರಿದಂತೆ ಜಿಲ್ಲೆಯ 25 ಜನರಲ್ಲಿ ಬುಧವಾರ ಝಿಕಾ ವೈರಸ್ ಸೋಂಕು ಪತ್ತೆಯಾಗಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಸೋಂಕಿತರ ಒಟ್ಟು ಸಂಖ್ಯೆ 36ಕ್ಕೆ ಏರಿಕೆಯಾಗಿದೆ. ಹೊಸ ಪ್ರಕರಣಗಳಲ್ಲಿ 14 ಮಹಿಳೆಯರು, ಆರು ವಾಯುಪಡೆಯ ಸಿಬ್ಬಂದಿ ಇದ್ದಾರೆ ಎಂದು ಜಿಲ್ಲಾಧಿಕಾರಿ ಜಿ.ವಿಶಾಖ್ ತಿಳಿಸಿದ್ದಾರೆ. ಆರೋಗ್ಯ ಇಲಾಖೆ 586 ಜನರಿಂದ ಭಾನುವಾರ ರಕ್ತದ ಮಾದರಿಗಳನ್ನು ಸಂಗ್ರಹಿಸಿ … Continued

ಟೀಮ್ ಇಂಡಿಯಾ ನೂತನ ಕೋಚ್ ಆಗಿ ರಾಹುಲ್ ದ್ರಾವಿಡ್ ನೇಮಕ

ಟೀಮ್ ಇಂಡಿಯಾದ ನೂತನ ಕೋಚ್ ಆಗಿ ಮಾಜಿ ಕ್ರಿಕೆಟಿಗ ರಾಹುಲ್ ದ್ರಾವಿಡ್ (Rahul Dravid) ನೇಮಕಗೊಂಡಿದ್ದಾರೆ. ಬುಧವಾರ ನಡೆದ ಬಿಸಿಸಿಐ ಕ್ರಿಕೆಟ್ ಸಲಹಾ ಸಮಿತಿ ಸಭೆಯಲ್ಲಿ ರಾಹುಲ್ ದ್ರಾವಿಡ್ ಅವರನ್ನು ಟೀಮ್ ಇಂಡಿಯಾದ ಮುಖ್ಯ ಕೋಚ್ ಆಗಿ ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಅವರು ನ್ಯೂಜಿಲೆಂಡ್ ವಿರುದ್ಧ ಸರಣಿಯೊಂದಿಗೆ ದ್ರಾವಿಡ್ ಟೀಮ್ ಇಂಡಿಯಾ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ. ಈ … Continued

ದೀಪಾವಳಿಗೆ ಕೇಂದ್ರ ಸರ್ಕಾರದ ಮಹತ್ವದ ನಿರ್ಧಾರ: ನಾಳೆಯಿಂದ ಪ್ರತಿ ಲೀಟರ್‌ ಪೆಟ್ರೋಲಿಗೆ 5 ರೂ., ಡೀಸೆಲ್‌ಗೆ 10 ರೂ. ಕಡಿಮೆ

ನವದೆಹಲಿ : ಪೆಟ್ರೋಲ್‌ ಹಾಗೂ ಡಿಸೇಲ್‌ ದರ ಇಳಿಕೆಗೆ ಕೇಂದ್ರ ಸರಕಾರ ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ. ನಾಳೆಯಿಂದ (November 4) ಜಾರಿಗೆ ಬರುವಂತೆ ಪ್ರತಿ ಲೀಟರ್‌ ಪೆಟ್ರೋಲಿಗೆ 5 ರೂ. ಮತ್ತು ಡೀಸೆಲ್‌ಗೆ 10 ರೂ. ಕಡಿತಗೊಳಿಸಲಾಗುವುದು ಎಂದು ದೀಪಾವಳಿಯ ಮುನ್ನಾದಿನ ಕೇಂದ್ರ ಸರ್ಕಾರ ಘೋಷಿಸಿದೆ. ಇಂಧನ ಬೆಲೆ ಏರಿಕೆಯ ಪರಿಣಾಮದಿಂದ ತತ್ತರಿಸಿರುವ ಜನರಿಗೆ ಪರಿಹಾರದ … Continued

ರಾಷ್ಟ್ರೀಯ ಆಹಾರ ಭದ್ರತಾ ಕಾಯಿದೆಯಡಿ ಫಲಾನುಭವಿ ಗುರುತಿಸಲು ಆಧಾರ್ ಒಂದೇ ಮಾನದಂಡವಲ್ಲ: ಬಾಂಬೆ ಹೈಕೋರ್ಟ್

ಮುಂಬೈ: ರಾಷ್ಟ್ರೀಯ ಆಹಾರ ಭದ್ರತಾ ಕಾಯಿದೆಯಡಿ ಫಲಾನುಭವಿಗಳನ್ನು ಗುರುತಿಸಲು ಆಧಾರ್ ಒಂದು ಮಾನದಂಡವಾಗಿದ್ದು ಆದರೆ ಅದುವೇ ಏಕೈಕ ಮಾನದಂಡವಲ್ಲ ಎಂದು ಬಾಂಬೆ ಹೈಕೋರ್ಟ್‌ ಕಳೆದ ವಾರ ತಿಳಿಸಿದೆ (ಗಣಪತ್ ಧರ್ಮ ಮೆಂಗಲ್ ಮತ್ತಿತರರು ಹಾಗೂ ತಹಸೀಲ್ದಾರ್ ಕಚೇರಿ, ಮುರ್ಬಾದ್ ಮತ್ತಿತರರ ನಡುವಣ ಪ್ರಕರಣ). ಸಾರ್ವಜನಿಕ ವಿತರಣಾ ವ್ಯವಸ್ಥೆ ಮತ್ತು ರಾಷ್ಟ್ರೀಯ ಆಹಾರ ಭದ್ರತಾ ಕಾಯಿದೆಯ ಪ್ರಯೋಜನಗಳನ್ನು … Continued

ಐದು ರಾಜ್ಯಗಳ ಚುನಾವಣೆ ಹಿನ್ನೆಲೆ: ನವೆಂಬರ್‌ 7ರಂದು ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ

ನವದೆಹಲಿ: ಮುಂದಿನ ವರ್ಷ ಐದು ರಾಜ್ಯಗಳಿಗೆ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ) ತನ್ನ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯನ್ನು ನವೆಂಬರ್ 7 ರಂದು ನಡೆಸಲಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ನೇತೃತ್ವದಲ್ಲಿ ದೆಹಲಿಯ ಪಕ್ಷದ ಪ್ರಧಾನ ಕಚೇರಿಯಲ್ಲಿ ಸಭೆ ನಡೆಯಲಿದೆ. ಕಳೆದ ವರ್ಷ ಮಾರ್ಚ್‌ನಲ್ಲಿ ಭಾರತದಲ್ಲಿ ಕೋವಿಡ್ -19 ಸಾಂಕ್ರಾಮಿಕ ರೋಗವು … Continued

ಭಾರತಕ್ಕೆ ದಿವಾಳಿ ಬಂಪರ್‌… ಸ್ವದೇಶಿ ನಿರ್ಮಿತ ಕೋವಿಡ್‌ ಲಸಿಕೆ ಕೊವ್ಯಾಕ್ಸಿನ್‌ ತುರ್ತು ಬಳಕೆಗೆ ವಿಶ್ವ ಆರೋಗ್ಯ ಸಂಸ್ಥೆ ಅನುಮೋದನೆ

ಭಾರತಕ್ಕೆ ದಿವಾಳಿ ಬಂಪರ್‌… ಸ್ವದೇಶಿ ಕೋವಿಡ್‌ ಲಸಿಕೆ ಕೊವ್ಯಾಕ್ಸಿನ್‌ ತುರ್ತು ಬಳಕೆಗೆ ವಿಶ್ವ ಆರೋಗ್ಯ ಸಂಸ್ಥೆ ಅನುಮೋದನೆ ನವದೆಹಲಿ: ಕೊರೊನಾ ವೈರಸ್ ವಿರುದ್ಧದ ಭಾರತದ ಕೊವ್ಯಾಕ್ಸಿನ್‌ ಲಸಿಕೆಯ ತುರ್ತು ಬಳಕೆಗೆ ಕೊನೆಗೂ ವಿಶ್ವ ಆರೋಗ್ಯ ಸಂಸ್ಥೆ ಅನುಮೋದನೆ ನೀಡಿದೆ. ವಿಶ್ವ ಆರೋಗ್ಯ ಸಂಸ್ಥೆಯ ಸಮಿತಿಯು ಕಳೆದ ವಾರ ಹೈದರಾಬಾದ್ ಮೂಲದ ಸಂಸ್ಥೆಯಿಂದ ಹೆಚ್ಚುವರಿ ಸ್ಪಷ್ಟೀಕರಣಗಳನ್ನು ಕೇಳಿತ್ತು. … Continued

ಭಾರತದ ವಿಪರೀತ ಮಳೆಗೆ ಮೂಲ 9,000 ಕಿಮೀ ದೂರದ ಆರ್ಕಟಿಕ್ ಪ್ರದೇಶ.: ಬಟರ್ ಫ್ಲೈ ಎಫೆಕ್ಟ್‌ನಿಂದ ಇಲ್ಲಿ ಹೆಚ್ಚಿದ ಮಳೆ..?: ಅಧ್ಯಯನ ವರದಿ

ನವದೆಹಲಿ: ಕರ್ನಾಟಕ, ಕೇರಳ, ತಮಿಳುನಾಡು ಸೇರಿದಂತೆ ಭಾರತದ ಹಲವೆಡೆ ಬೀಳುತ್ತಿರುವ ಭಾರೀ ಮಳೆಗೆ ಆರ್ಕ್ ಟಿಕ್ ಪ್ರದೇಶದ ಬೆಳವಣಿಗೆ 9,000 ಕಿಮೀ ದೂರದ ಆರ್ಕಟಿಕ್‌ನಲ್ಲಿ ತನ್ನ ಬೇರುಗಳನ್ನು ಹೊಂದಿರಬಹುದು ಎಂದು ಅಧ್ಯಯನವೊಂದು ಹೇಳುತ್ತದೆ..! ಭಾರತದಲ್ಲಿನ ಮಳೆಯ ಅನಾಹುತಗಳಿಗೆ ಆರ್ಕಟಿಕ್‌ ಪ್ರದೇಶ ಕಾರಣವಾಗಿರಬಹುದು ಎಂದು ಭಾರತೀಯ ಮತ್ತು ನಾರ್ವೇಜಿಯನ್ ವಿಜ್ಞಾನಿಗಳು ನೇಚರ್ ಜರ್ನಲ್‌ನಲ್ಲಿ ಪ್ರಕಟಿಸಿದ ಇತ್ತೀಚಿನ ಅಧ್ಯಯನವು … Continued

ಮನೆ-ಮನೆಗೆ ತೆರಳಿ ಕೋವಿಡ್ ಲಸಿಕೆ ನೀಡುವ ಆಂದೋಲನ ಕೈಗೊಳ್ಳಿ, ವದಂತಿಗಳ ವಿರುದ್ಧ ಹೋರಾಡಲು ಧಾರ್ಮಿಕ ಮುಖಂಡರನ್ನು ತೊಡಗಿಸಿಕೊಳ್ಳಿ: ಪ್ರಧಾನಿ ಮೋದಿ

ನವದೆಹಲಿ: ಕೋವಿಡ್-19 ಲಸಿಕೆ ಅಭಿಯಾನವನ್ನು ಜನರ ಮನೆ ಬಾಗಿಲಿಗೆ ಕೊಂಡೊಯ್ಯುವ ಅಗತ್ಯವಿದೆ ಎಂದು ಪ್ರತಿಪಾದಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು, ಲಸಿಕೆ ಅಭಿಯಾನವನ್ನು ಹೆಚ್ಚಿಸಲು ನವೀನ ಮಾರ್ಗಗಳನ್ನು ಅಳವಡಿಸಿಕೊಳ್ಳುವಂತೆ ಲಸಿಕೆ ನೀಡಿಕೆಯಲ್ಲಿ ಹಿಂದುಳಿದಿರುವ ಜಿಲ್ಲೆಗಳ ಅಧಿಕಾರಿಗಳಿಗೆ ಬುಧವಾರ ಸೂಚಿಸಿದ್ದಾರೆ. ಇಂದು ಕಡಿಮೆ ಲಸಿಕೆ ವ್ಯಾಪ್ತಿಯನ್ನು ಹೊಂದಿರುವ 40ಕ್ಕೂ ಹೆಚ್ಚು ಜಿಲ್ಲೆಗಳ ಜಿಲ್ಲಾಧಿಕಾರಿಗಳ ಜೊತೆ ವೀಡಿಯೊ ಕಾನ್ಫರೆನ್ಸ್ … Continued

ಕೋವ್ಯಾಕ್ಸಿನ್ ಕೋವಿಡ್‌ ಲಸಿಕೆ ಜೀವಿತಾವಧಿ (Expiry Date) ಉತ್ಪಾದನಾ ದಿನಾಂಕದಿಂದ 12 ತಿಂಗಳಿಗೆ ವಿಸ್ತರಣೆ : ಭಾರತ್ ಬಯೋಟೆಕ್

ನವದೆಹಲಿ: ಸೆಂಟ್ರಲ್ ಡ್ರಗ್ಸ್ ಸ್ಟ್ಯಾಂಡರ್ಡ್ ಕಂಟ್ರೋಲ್ ಆರ್ಗನೈಸೇಶನ್ (CDSCO) ಬುಧವಾರ ಕೋವಾಕ್ಸಿನ್‌ನ ಲಸಿಕೆಯ ಜೀವಿತ ಅವಧಿ (shelf life)ಯನ್ನು ಉತ್ಪಾದನೆಯ ದಿನಾಂಕದಿಂದ 12 ತಿಂಗಳವರೆಗೆ ವಿಸ್ತರಿಸಲು ಅನುಮೋದಿಸಿದೆ. ಟ್ವೀಟ್‌ನಲ್ಲಿ, ಕೋವಾಕ್ಸಿನ್ ತಯಾರಕ ಕಂಪನಿ ಭಾರತ್ ಬಯೋಟೆಕ್, ಹೆಚ್ಚುವರಿ ಸ್ಥಿರತೆಯ ಡೇಟಾದ ಲಭ್ಯತೆಯ ಆಧಾರದ ಮೇಲೆ ಅನುಮೋದನೆಯನ್ನು ಸಿಡಿಎಸ್‌ಸಿಇ (CDSCO)ಗೆ ಸಲ್ಲಿಸಲಾಗಿದೆ ಎಂದು ತಿಳಿಸಿದೆ. ಕಳೆದ ತಿಂಗಳು, … Continued

ಡೆಂಗ್ಯೂ ಪ್ರಕರಣಗಳ ಹೆಚ್ಚಳ: 9 ರಾಜ್ಯಗಳಿಗೆ ಕೇಂದ್ರದಿಂದ ತಜ್ಞರ ತಂಡ ನಿಯೋಜನೆ

ನವದೆಹಲಿ :ಡೆಂಗ್ಯೂ ಪ್ರಕರಣಗಳು ಹಲವು ರಾಜ್ಯಗಳಲ್ಲಿ ಹೆಚ್ಚುತ್ತಿರುವುದರಿಂದ ಡೆಂಗ್ಯೂ ನಿಯಂತ್ರಿಸಲು ಕೇಂದ್ರ ಆರೋಗ್ಯ ಸಚಿವಾಲಯವು ಈಗ 9 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ತಜ್ಞರ ತಂಡಗಳನ್ನು ನಿಯೋಜಿಸಿದೆ. ಈ 9 ರಾಜ್ಯಗಳಲ್ಲಿ ಅಕ್ಟೋಬರ್ 31ರ ವರೆಗೆ ದೇಶದ ಒಟ್ಟು ಡೆಂಗ್ಯೂ ಪ್ರಕರಣಗಳಲ್ಲಿ 86% ರಷ್ಟು ವರದಿಯಾಗಿವೆ. ದೆಹಲಿಯಲ್ಲಿ ಡೆಂಗ್ಯೂ ಪರಿಸ್ಥಿತಿಯ ಅವಲೋಕನದ ಸಂದರ್ಭದಲ್ಲಿ, ಆರೋಗ್ಯ … Continued