ಫೋನ್ ಕದ್ದಾಲಿಕೆ, ಮಾಹಿತಿ ಸೋರಿಕೆ ಪ್ರಕರಣ:ಸಿಬಿಐ ಮುಖ್ಯಸ್ಥರಿಗೆ ಮುಂಬೈ ಪೊಲೀಸರಿಂದ ಸಮನ್ಸ್..!

ಮುಂಬೈ: ಮಹಾರಾಷ್ಟ್ರದ ಗುಪ್ತಚರ ಇಲಾಖೆಯ ವರ್ಗಾವಣೆ ಮತ್ತು ಪೋಸ್ಟಿಂಗ್‌ಗಳ ಮಾಹಿತಿ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ನಿರ್ದೇಶಕ ಸುಬೋಧ್ ಜೈಸ್ವಾಲ್ ಅವರಿಗೆ ಮುಂಬೈ ಪೊಲೀಸರ ಸೈಬರ್ ಸೆಲ್ ಸಮನ್ಸ್ ನೀಡಿದೆ. ಸುಬೋಧ್ ಜೈಸ್ವಾಲ್ ಅವರಿಗೆ ಸಮನ್ಸ್ ಅನ್ನು ಇ-ಮೇಲ್ ಮೂಲಕ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮುಂದಿನ ಗುರುವಾರ ಅಂದರೆ ಅಕ್ಟೋಬರ್ 14 ರಂದು ಹಾಜರಾಗುವಂತೆ … Continued

ಎಬಿಪಿ-ಸಿ ವೋಟರ್ ಸಮೀಕ್ಷೆ: 2022ರ ಉತ್ತರಾಖಂಡ ಚುನಾವಣೆಯಲ್ಲಿ ಬಿಜೆಪಿ ಪುನಃ ಅಧಿಕಾರ ಪಡೆಯುವ ಸಾಧ್ಯತೆ

ಮುಂದಿನ ವರ್ಷ ಭಾರತೀಯ ಜನತಾ ಪಕ್ಷವು 5 ವರ್ಷಗಳ ಆಡಳಿತವನ್ನು ಪೂರ್ಣಗೊಳಿಸುವುದರೊಂದಿಗೆ ಉತ್ತರಾಖಂಡವು ತನ್ನ ವಿಧಾನಸಭಾ ಚುನಾವಣೆಯನ್ನು ನಡೆಸಲಿದೆ. ಎಬಿಪಿ ನ್ಯೂಸ್ ಸಿವೋಟರ್ ಸಹಭಾಗಿತ್ವದಲ್ಲಿ ಉತ್ತರಾಖಂಡದ ಜನರ ಮನಸ್ಥಿತಿಯನ್ನು ಅರ್ಥಮಾಡಿಕೊಳ್ಳಲು ಸಮೀಕ್ಷೆ ನಡೆಸಿತು. ಇತ್ತೀಚೆಗೆ, ಉತ್ತರಾಖಂಡವು ತ್ರಿವೇಂದ್ರ ಸಿಂಗ್ ರಾವತ್ ಅವರ ರಾಜೀನಾಮೆಯಿಂದ ಕೆಲವೇ ದಿನಗಳ ಅಂತರದಲ್ಲಿ ಇಬ್ಬರು ಹೊಸ ಮುಖ್ಯಮಂತ್ರಿಗಳಿಗೆ ಸಾಕ್ಷಿಯಾಯಿತು. ಮುಖ್ಯಮಂತ್ರಿ ತ್ರಿವೇಂದ್ರ … Continued

ಲಖಿಂಪುರ ಖೇರಿ ಹತ್ಯೆ ಪ್ರಕರಣ; ಕೇಂದ್ರ ಸಚಿವರ ಮಗ ಆಶಿಶ್ ಮಿಶ್ರಾ ಬಂಧನ

ಲಕ್ನೋ: ಲಖಿಂಪುರ್ ಖೇರಿ ಹಿಂಸಾಚಾರದ ಪ್ರಾಥಮಿಕ ಆರೋಪಿ ಆಶಿಶ್ ಮಿಶ್ರಾ ಅವರನ್ನು ಉತ್ತರ ಪ್ರದೇಶ ಪೊಲೀಸರ ವಿಶೇಷ ತನಿಖಾ ತಂಡ (ಎಸ್‌ಐಟಿ) ಸುಮಾರು 12 ಗಂಟೆಗಳ ಕಾಲ ವಿಚಾರಣೆ ನಡೆಸಿದ ನಂತರ ಶನಿವಾರ ಬಂಧಿಸಿದೆ. ಬಂಧನವನ್ನು ಎಸ್‌ಐಟಿ ಮುಖ್ಯಸ್ಥರಾಗಿರುವ ಉಪ ಇನ್ಸ್‌ಪೆಕ್ಟರ್ ಜನರಲ್ ಉಪೇಂದ್ರ ಅಗರ್ವಾಲ್ ದೃಢಪಡಿಸಿದ್ದಾರೆ. ಕೇಂದ್ರ ಗೃಹ ರಾಜ್ಯ ಮಂತ್ರಿ ಅಜಯ್ ಮಿಶ್ರಾ … Continued

ಎಬಿಪಿ- ಸಿ ವೋಟರ್‌ ಸಮೀಕ್ಷೆ: 2022ರ ಪಂಜಾಬ್ ಚುನಾವಣೆಯಲ್ಲಿ ಕಾಂಗ್ರೆಸ್‌ ಹಿಂದಿಕ್ಕಿದ ಆಮ್‌ ಆದ್ಮಿ ಪಾರ್ಟಿ

ಮುಂದಿನ ವರ್ಷ ಪಂಜಾಬ್ ರಾಜ್ಯ ಸಹ ವಿಧಾನಸಭಾ ಚುನಾವಣೆಗೆ ಹೋಗಲಿದೆ. ಕಾಂಗ್ರೆಸ್ ಪಕ್ಷಕ್ಕೆ ಈ ಸ್ಪರ್ಧೆಯು ನಿರ್ಣಾಯಕವಾಗಿದೆ ಏಕೆಂದರೆ ಪಂಜಾಬ್ ಕಾಂಗ್ರೆಸ್ಸಿನ ಉಳಿದಿರುವ ಕೆಲವೇ ಭದ್ರಕೋಟೆಗಳಲ್ಲಿ ಒಂದಾಗಿದೆ. ಎಬಿಪಿ ನ್ಯೂಸ್,ಸಿ ವೋಟರ್‌ ಸಹಭಾಗಿತ್ವದಲ್ಲಿ, ಚುನಾವಣೆಗೆ ಮುಂಚಿತವಾಗಿ ಪಂಜಾಬ್ ಜನರ ಮನಸ್ಥಿತಿಯನ್ನು ಅರ್ಥಮಾಡಿಕೊಳ್ಳಲು ಒಂದು ಸಮೀಕ್ಷೆಯನ್ನು ನಡೆಸಿತು. ಸಮೀಕ್ಷೆಯಲ್ಲಿ ಕಾಂಗ್ರೆಸ್‌ ಹಿನ್ನಡೆ ಅನುಭವಿಸಿದ್ದು ಕಂಡುಬಂದಿದ್ದು, ಆಮ್‌ ಆದ್ಮಿ … Continued

ಎಬಿಪಿ -ಸಿ ವೋಟರ್‌ ಸಮೀಕ್ಷೆ: 2022ರ ವಿಧಾನಸಭಾ ಚುನಾವಣೆಗಳಲ್ಲಿ ಉತ್ತರಪ್ರದೇಶದಲ್ಲಿ ಬಿಜೆಪಿ ಪುನಃ ಅಧಿಕಾರಕ್ಕೆ ಬರುವ ಸಾಧ್ಯತೆ

ಉತ್ತರ ಪ್ರದೇಶ ವಿಧಾನಸಭಾ ಚುನಾವಣೆ 2022ರಲ್ಲಿ ಸಿ-ಮತದಾರರ ಸಮೀಕ್ಷೆ: ಅತ್ಯಂತ ಮಹತ್ವದ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ಕೆಲವೇ ತಿಂಗಳುಗಳು ಬಾಕಿ ಇರುವಾಗ, ಎಬಿಪಿ ನ್ಯೂಸ್ ಜೊತೆಗೆ ಸಿ-ವೋಟರ್ ಸಮೀಕ್ಷೆ ನಡೆಸಿದ್ದು, ರಾಜ್ಯದ ಮತದಾರರ ಮನಸ್ಥಿತಿ ಅರಿಯುವ ಪ್ರಯತ್ನ ಮಾಡಿದೆ. ಇತ್ತೀಚಿನ ಸಮೀಕ್ಷೆಯ ಪ್ರಕಾರ, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೇತೃತ್ವದ ಭಾರತೀಯ ಜನತಾ ಪಾರ್ಟಿ (ಬಿಜೆಪಿ) … Continued

ಆರ್ಯನ್‌ ಖಾನ್‌ ನಿಂದ ತಂದೆಯ ಜಾಹೀರಾತಿಗೆ ಕತ್ತರಿ : ಶಾರುಖ್ ಖಾನ್ ನಟನೆ ಜಾಹೀರಾತು ನಿಲ್ಲಿಸಿದ ಬೈಜುಸ್‌..!

ನವದೆಹಲಿ: ಅರಬ್ಬೀ ಸಮುದ್ರದಲ್ಲಿ ನಡೆದ ಡ್ರಗ್ ಪ್ರಕರಣದಲ್ಲಿ ಸಿಲುಕಿದ ಬಾಲಿವುಡ್‌ ನಟ ಶಾರುಖ್‌ ಖಾನ್‌ ಪುತ್ರ ಆರ್ಯನ್ ಖಾನ್ ತನಿಖೆಯ ವೇಳೆ ಚರಸ್ ಸೇವನೆ ಮಾಡಿರುವುದಾಗಿ ಎನ್‌ಸಿಬಿ ಹೇಳಿದೆ. ಮಗನ ಡ್ರಗ್ಸ್‌ ಪ್ರಕರಣ ತಂದೆ ಶಾರುಖ್‌ಗೆ ನಷ್ಟಕ್ಕೆ ಕಾರಣವಾಗಿದೆ. ಎನ್‌ಸಿಬಿ ಆರ್ಯನ್‌ ಮಾದಕ ವಸ್ತು ಸೇವನೆಯ ಕುರಿತು ಮಾಹಿತಿ ನೀಡುತ್ತಲೇ ಇತ್ತ ಜಾಹೀರಾತು ಕಂಪೆನಿಗಳು ಬಾಲಿವುಡ್ … Continued

ಹೆಟೆರೊ ಫಾರ್ಮಾ ಗ್ರೂಪ್ಸ್‌ ಮೇಲೆ ಐಟಿ ಇಲಾಖೆ ದಾಳಿ: 550-ಕೋಟಿ ಗುಪ್ತ ಆದಾಯ ಪತ್ತೆ, 142 ಕೋಟಿ ನಗದು ವಶ

ನವದೆಹಲಿ: ಹೈದರಾಬಾದ್‌ ಮೂಲದ ಹೆಟಿರೊ ಫಾರ್ಮಸುಟಿಕಲ್ಸ್‌ ಸಮೂಹ ಸಂಸ್ಥೆಯ ಮೇಲೆ ದಾಳಿ ನಡೆಸಿರುವ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು, ₹550 ಕೋಟಿ ಮೊತ್ತದ ದಾಖಲೆ ರಹಿತ ಆದಾಯವನ್ನು (ಲೆಕ್ಕವಿಲ್ಲದ) ಪತ್ತೆ ಮಾಡಿದ್ದು, ₹142 ಕೋಟಿಗೂ ಅಧಿಕ ನಗದನ್ನು ವಶಪಡಿಸಿಕೊಂಡಿರುವುದಾಗಿ ಅಧಿಕೃತ ಮೂಲಗಳು ಶನಿವಾರ ತಿಳಿಸಿವೆ. ದಾಳಿಗೆ ಸಂಬಂಧಿಸಿದಂತೆ ಕಂಪನಿಯ ಅಧಿಕಾರಿಗಳು ತಕ್ಷಣಕ್ಕೆ ಪ್ರತಿಕ್ರಿಯೆಗೆ ಲಭ್ಯವಾಗಿಲ್ಲ. ಅಕ್ಟೋಬರ್ … Continued

ಮಗ ಡ್ರಗ್ಸ್‌ ಕೇಸ್‌ನಲ್ಲಿ ಅರೆಸ್ಟ್‌ ಆದ ನಂತ್ರ ಜಗತ್ತಿನ ಕ್ಷಮೆ ಕೋರಿ, ಕೋಟ್ಯಂತರ ಆಸ್ತಿ ಚಾರಿಟಿಗೆ ದಾನ ಮಾಡಿದ್ದ ಹಾಲಿವುಡ್‌ ನಟನ ಸುದ್ದಿ ಆರ್ಯನ ಖಾನ್‌ ಬಂಧನದ ನಂತರ ಟ್ರೆಂಡಿಂಗ್‌ಗೆ

ಮುಂಬೈ: ಬಾಲಿವುಡ್‌ ನಟ ಶಾರುಖ್‌ ಖಾನ್‌ ಪುತ್ರ ಆರ್ಯನ್‌ ಖಾನ್‌ ಡ್ರಗ್ಸ್‌ ಕೇಸ್‌ನಲ್ಲಿ ಸಿಲುಕಿದ್ದಾರೆ. ಸದ್ಯಕ್ಕೆ ಕೋರ್ಟ್‌ ಅವರಿಗೆ ಜಾಮೀನು ನಿರಾಕರಿಸಿದೆ. ಆದರೂ ಆತನ ಪರವಾಗಿ ಹಲವಾರು ಮಂದಿ ಬಾಲಿವುಡ್‌ ನಟರು ನಿಂತಿದ್ದಾರೆ. ಆದರೆ ಈ ನಡುವೆಯೇ ಇದೇ ರೀತಿ ಡ್ರಗ್ಸ್‌ ಪ್ರಕರಣದಲ್ಲಿ ಸಿಲುಕಿರುವ ಹಾಲಿವುಡ್‌ ನಟನ ಪುತ್ರನ ವಿಚಾರ ಜಾಲತಾಣದಲ್ಲಿ ಮತ್ತೆ ಸುದ್ದಿಯಾಗುತ್ತಿದೆ. ಅದೇ … Continued

ಲಖೀಂಪುರ್ ಖೇರಿ ರೈತ ಹತ್ಯಾಕಾಂಡ; ಪೊಲೀಸ್ ವಿಚಾರಣೆಗೆ ಕೊನೆಗೂ ಹಾಜರಾದ ಕೇಂದ್ರ ಸಚಿವರ ಪುತ್ರ ಆಶಿಶ್ ಮಿಶ್ರಾ

ಲಕ್ನೋ : ಉತ್ತರ ಪ್ರದೇಶದಲ್ಲಿ ರೈತರ ಮೇಲೆ ಕಾರು ಹಾಯಿಸಿರುವ ಆರೋಪಿಯಾಗಿವ ಕೇಂದ್ರ ಸಚಿವ ಅಜಯ್ ಮಿಶ್ರಾ ಅವರ ಪುತ್ರ ಆಶಿಶ್ ಇಂದು (ಶನಿವಾರ) ಲಖಿಂಪುರ್ ಖೇರಿಗೆ ಹತ್ತಾರು ಪೊಲೀಸರ ಬೆಂಗಾವಲಿನಲ್ಲಿ ವಿಚಾರಣೆಗೆ ಆಗಮಿಸಿದ್ದಾರೆ. ಐದು ದಿನಗಳ ನಂತರವೂ ಆಶಿಶ್‌ನನ್ನು ಬಂಧಿಸದಿದ್ದಕ್ಕಾಗಿ ಸುಪ್ರೀಂ ಕೋರ್ಟ್ ಶುಕ್ರವಾರ ಉತ್ತರ ಸರ್ಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿತ್ತು. ಇದರಲ್ಲಿ ನಾಲ್ವರು … Continued

ಬೆಚ್ಚಿ ಬೀಳಿಸಿದ ಮತ್ತೊಂದು ಘಟನೆ..ಮತ್ತು ಬರುವ ಚಾಕಲೇಟ್‌ ನೀಡಿ ಶಾಲೆಗೆ ಹೋಗುತ್ತಿದ್ದ ಬಾಲಕಿ ಅಪಹರಣ; ಐದು ಜನರಿಂದ ಸಾಮೂಹಿಕ ಅತ್ಯಾಚಾರ

ಬಂಟ್ವಾಳ: ಮೈಸೂರು ಗ್ಯಾಂಗ್ ರೇಪ್ ಪ್ರಕರಣ ಮಾಸುವ ಮುನ್ನವೇ ಅಂಥದ್ದೇ ಪ್ರಕರಣ ಈಗ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದಲ್ಲಿ ವರದಿಯಾಗಿದೆ. ಬಂಟ್ವಾಳ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಶಾಲೆಗೆ ತೆರಳುತ್ತಿದ್ದ ಬಾಲಕಿಯನ್ನು ಐದು ಮಂದಿ ಅಪಹರಿಸಿ ಆಕೆಗೆ ಮತ್ತು ಬರುವ ಚಾಕಲೇಟ್ ನೀಡಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಸಾಮೂಹಿಕ ಅತ್ಯಾಚಾರ ಮಾಡಿದ್ದಾರೆ … Continued