ರೈಲ್ವೆ ಹಳಿಗಳ ಮೇಲೆ ಪ್ರತಿಭಟನೆ ನಡೆಸಿದ ರೈತರ ವಿರುದ್ಧದ ಪ್ರಕರಣ ಹಿಂಪಡೆಯಲು ಪಂಜಾಬ್ ಸಿಎಂ ಆದೇಶ

ನವದೆಹಲಿ: ಪಂಜಾಬ್ ಮುಖ್ಯಮಂತ್ರಿ ಚರಣ್ಜಿತ್ ಸಿಂಗ್ ಚನ್ನಿ ರೈಲ್ವೇ ಹಳಿಗಳ ಮೇಲೆ ಧರಣಿ ಕುಳಿತಿದ್ದ ರೈತರ ಸಂಘಟನೆಗಳ ಸದಸ್ಯರ ವಿರುದ್ಧ ದಾಖಲಾಗಿರುವ ಪ್ರಕರಣಗಳನ್ನು ಹಿಂಪಡೆಯುವಂತೆ ಸೂಚಿಸಿ ರೈಲ್ವೇ ಪ್ರೊಟೆಕ್ಷನ್ ಫೋರ್ಸ್ (ಆರ್‌ಪಿಎಫ್‌ಗೆ) ಗೆ ಪತ್ರ ಬರೆದಿದ್ದಾರೆ. ಮುಖ್ಯಮಂತ್ರಿ ಚನ್ನಿ ಆರ್‌ಪಿಎಫ್ ಅಧ್ಯಕ್ಷರಿಗೆ ಆದೇಶವನ್ನು ತಕ್ಷಣ ಪಾಲಿಸುವಂತೆ ಮತ್ತು ಪ್ರತಿಭಟನಾ ನಿರತ ರೈತರ ಮೇಲಿನ ಪೊಲೀಸ್ ಪ್ರಕರಣಗಳನ್ನು … Continued

ವಿಚಿತ್ರ ವದಂತಿಯಿಂದ ಬಿಹಾರದಲ್ಲಿ ದಿಢೀರ್‌ ಭಾರೀ ಹೆಚ್ಚಳ ಕಂಡ ಪಾರ್ಲೆ-ಜಿ ಬಿಸ್ಕತ್ ಮಾರಾಟ:ಅಂಗಡಿಗಳ ಮುಂದೆ ಕ್ಯೂ, ಕಾಳಸಂತೆಯಲ್ಲೂ ಮಾರಾಟ..!

ಪಾಟ್ನಾ: ಬಿಹಾರದಲ್ಲಿ ವದಂತಿಗಳು ಯಾವಾಗಲೂ ಕಾಳ್ಗಿಚ್ಚಿನಂತೆ ಹರಡುತ್ತವೆ. ಇತ್ತೀಚಿನ ವದಂತಿಯು ಜ್ಯೂತಿಯಾ ಹಬ್ಬಕ್ಕೆ (Jeutiya festival) ಸಂಬಂಧಿಸಿದೆ. ಇದರಲ್ಲಿ ಮಕ್ಕಳು (ಪುರುಷರು) ಜ್ಯೂತಿಯಾದ ಪಾರ್ಲೆ-ಜಿ ಬಿಸ್ಕತ್ತುಗಳನ್ನು ತಿನ್ನದಿದ್ದರೆ, ಭವಿಷ್ಯದಲ್ಲಿ ಅವರು ಅಹಿತಕರ ಘಟನೆಗಳನ್ನು ಎದುರಿಸಬೇಕಾಗಬಹುದು ಎಂಬ ವದಂತಿ ಹರಡಿದೆ. ಬಾಯಿಂದ ಬಾಯಿಗೆ ಹಬ್ಬಿದ ಈ ವದಂತಿ ಬಿಹಾರದಲ್ಲಿ ‘ಪಾರ್ಲೆ-ಜಿ ಬಿಸ್ಕೆಟ್‌ ಎಷ್ಟು ಹೆಚ್ಚಿಸಿದೆಯೆಂದರೆ ಈಗ ಈ … Continued

ಲಸಿಕೆ ಪ್ರಮಾಣೀಕರಣದಲ್ಲಿ ಭಾರತದೊಂದಿಗೆ ತೊಡಗಿಸಿಕೊಳ್ಳುತ್ತೇವೆ: ಭಾರತದ ತಿರುಗೇಟಿನ ಕ್ರಮಕ್ಕೆ ಬ್ರಿಟನ್‌ ಪ್ರತಿಕ್ರಿಯೆ

ನವದೆಹಲಿ: ಬ್ರಿಟನ್ನಿನ “ತಾರತಮ್ಯ” ಅಂತಾರಾಷ್ಟ್ರೀಯ ಪ್ರಯಾಣ ನಿಯಮಗಳಿಗೆ ಪ್ರತಿಕ್ರಿಯೆಯಾಗಿ ಭಾರತವು ಕ್ರಮಗಳನ್ನು ಹೇರಿದ ನಂತರ, ಬ್ರಿಟಿಷ್ ಹೈ ಕಮಿಷನ್ ಕೋವಿಡ್ -19 ಲಸಿಕೆ ಪ್ರಮಾಣೀಕರಣದ ಮಾನ್ಯತೆಯನ್ನು ವಿಸ್ತರಿಸಲು ದೇಶವು ನವದೆಹಲಿಯೊಂದಿಗೆ “ತೊಡಗಿಸಿಕೊಳ್ಳುವುದನ್ನು ಮುಂದುವರಿಸುತ್ತಿದ್ದೇವೆ ಎಂದು ತಿಳಿಸಿದೆ. ಭಾರತದಲ್ಲಿ ಸಂಬಂಧಿತ ಸಾರ್ವಜನಿಕ ಆರೋಗ್ಯ ಸಂಸ್ಥೆಯಿಂದ ಲಸಿಕೆ ಪಡೆದ ಜನರಿಗೆ ಲಸಿಕೆ ಪ್ರಮಾಣೀಕರಣದ ಬ್ರಿಟನ್ನಿನ ಮಾನ್ಯತೆ ವಿಸ್ತರಿಸಲು ನಾವು … Continued

ಕೋವಿಡ್ ಸಮಯದಲ್ಲಿ ಕೆಲಸ ಕಳೆದುಕೊಂಡ ಸಾಮಾಜಿಕ ಭದ್ರತಾ ಯೋಜನೆ ಸದಸ್ಯರಿಗೆ 3 ತಿಂಗಳ ವೇತನ ನೀಡಲಿದೆ ಕೇಂದ್ರ

ನವದೆಹಲಿ: ಕೊರೊನಾ ಸಮಯದಲ್ಲಿ ಕೆಲಸ ಕಳೆದುಕೊಂಡ ನೌಕರರ ರಾಜ್ಯ ವಿಮಾ ನಿಗಮದ(Employees’ State Insurance Corporation) ಸದಸ್ಯರಿಗೆ ಕೇಂದ್ರ ಸರ್ಕಾರ ಮೂರು ತಿಂಗಳ ವೇತನವನ್ನು ನೀಡುತ್ತದೆ ಎಂದು ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವ ಭೂಪೇಂದರ ಯಾದವ್ ಶುಕ್ರವಾರ ಮಾಹಿತಿ ನೀಡಿದ್ದಾರೆ. ಕೊರೊನಾದಿಂದ ಜೀವ ಕಳೆದುಕೊಂಡ ECSI ಸದಸ್ಯರ ಸಂಬಂಧಿಕರಿಗೆ ತಮ್ಮ ಸಚಿವಾಲಯವು ಆಜೀವ ಆರ್ಥಿಕ … Continued

ಭಾರತದಲ್ಲಿ 24,354 ಹೊಸ ಕೋವಿಡ್ -19 ಪ್ರಕರಣಗಳು ದಾಖಲು; ನಿನ್ನೆಗಿಂತ 8.9% ಕಡಿಮೆ

ನವದೆಹಲಿ: ಕಳೆದ 24 ಗಂಟೆಗಳಲ್ಲಿ ಭಾರತವು 24,354 ಹೊಸ ಕೋವಿಡ್ -19 ಪ್ರಕರಣಗಳನ್ನು ದಾಖಲಿಸಿದೆ, ಇದು ನಿನ್ನೆಗಿಂತ ಶೇಕಡಾ 8.9 ರಷ್ಟು ಕಡಿಮೆಯಾಗಿದೆ. ಇದರೊಂದಿಗೆ, ದೇಶದ ಒಟ್ಟು ಪ್ರಕರಣಗಳ ಸಂಖ್ಯೆ 3,37,91,061 ಕ್ಕೆ ತಲುಪಿದೆ. ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 234 ಸಾವುಗಳು ವರದಿಯಾಗಿದ್ದು, ಒಟ್ಟು ಸಾವಿನ ಸಂಖ್ಯೆಯನ್ನು 4,48,573 ಕ್ಕೆ ಹೆಚ್ಚಿಸಿದೆ ಎಂದು ಕೇಂದ್ರ … Continued

23 ರಾಜ್ಯಗಳಿಗೆ 7,274 ಕೋಟಿ ರೂ.ಗಳ ವಿಪತ್ತು ಪ್ರತಿಕ್ರಿಯೆ ನಿಧಿ ಬಿಡುಗಡೆ ಮಾಡಿದ ಕೇಂದ್ರ

ನವದೆಹಲಿ: ರಾಜ್ಯ ವಿಪತ್ತು ಪ್ರತಿಕ್ರಿಯೆ ನಿಧಿಯ (ಎಸ್ಡಿಆರ್‌ಎಫ್) ತನ್ನ ಪಾಲು 7,274.40 ಕೋಟಿ ರೂ.ಗಳನ್ನು ಮುಂಗಡವಾಗಿ 23 ರಾಜ್ಯಗಳಿಗೆ ಬಿಡುಗಡೆ ಮಾಡಲು ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. ವಿಪತ್ತಿನಿಂದ ಸೃಷ್ಟಿಯಾಗುವ ಯಾವುದೇ ತುರ್ತ ಪರಿಸ್ಥಿತಿ ನಿಭಾಯಿಸಲು ತಮ್ಮ ಎಸ್ಡಿಆರ್‌ಎಫ್‌ ನಲ್ಲಿ ರಾಜ್ಯ ಸರ್ಕಾರಗಳು ಸಾಕಷ್ಟು ನಿಧಿ ಹೊಂದಲು ಕೇಂದ್ರ ಸರ್ಕಾರದ ಉಪಕ್ರಮದ ಭಾಗವಾಗಿ ಕೇಂದ್ರ ಗೃಹ … Continued

ಸೆಪ್ಟೆಂಬರ್ ತಿಂಗಳ ಜಿಎಸ್‌ಟಿ ಸಂಗ್ರಹವು 5 ತಿಂಗಳಲ್ಲೇ ಗರಿಷ್ಠ : 1.17 ಲಕ್ಷ ಕೋಟಿ ತಲುಪಿದ ಸಂಗ್ರಹ

ನವದೆಹಲಿ: ಕಳೆದ ಸೆಪ್ಟೆಂಬರಿನಲ್ಲಿ ಸಂಗ್ರಹಿಸಿದ ಒಟ್ಟು ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಆದಾಯವು ಐದು ತಿಂಗಳ ಗರಿಷ್ಠ 1.17 ಲಕ್ಷ ಕೋಟಿಗೆ ತಲುಪಿದೆ, ಇದು ಸತತ ಮೂರು ತಿಂಗಳಲ್ಲಿ ₹ 1 ಲಕ್ಷ ಕೋಟಿಗಿಂತ ಹೆಚ್ಚಾಗಿದೆ ಎಂದು ಹಣಕಾಸು ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ. ಅಕ್ಟೋಬರ್ 1, ಶುಕ್ರವಾರ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ಸೆಪ್ಟೆಂಬರ್ ತಿಂಗಳು … Continued

ಬ್ರಿಟನ್‌ ಪ್ರಯಾಣ ನಿಯಮದ ವಿವಾದ: ಬ್ರಿಟನ್‌ ನಾಗರಿಕರಿಗೆ ಸಂಪರ್ಕತಡೆ ಕಡ್ಡಾಯ ಮಾಡಿ ಭಾರತದ ತಿರುಗೇಟು

ನವದೆಹಲಿ: ಬ್ರಿಟನ್ನಿನಿಂದ ಭಾರತಕ್ಕೆ ಬರುವ ಎಲ್ಲ ಪ್ರಯಾಣಿಕರು, ತಮ್ಮ ವ್ಯಾಕ್ಸಿನೇಷನ್ ಸ್ಥಿತಿಯ ಹೊರತಾಗಿಯೂ, ಈಗ ನೆಗೆಟಿವ್‌ ಆರ್‌ಟಿ-ಪಿಸಿಆರ್ (negative RT-PCR) ವರದಿಯನ್ನು ಹೊಂದಿರಬೇಕು ಮತ್ತು ಭಾರತಕ್ಕೆ ಬಂದ ನಂತರ 10 ದಿನಗಳವರೆಗೆ ಕಡ್ಡಾಯವಾಗಿ ಸಂಪರ್ಕತಡೆ ಹೊಂದಿರಬೇಕು ಎಂದು ಭಾರತ ಕಡ್ಡಾಯಗೊಳಿಸಿದೆ. ಬ್ರಿಟನ್‌ ತನ್ನ ಅಂತಾರಾಷ್ಟ್ರೀಯ ಪ್ರಯಾಣ ನಿಯಮಗಳನ್ನು ಪರಿಷ್ಕರಿಸಿದ ನಂತರ, ಭಾರತದಿಂದ ಬಂದ ಪ್ರಯಾಣಿಕರಿಗೆ ಸಂಪರ್ಕತಡೆಯನ್ನು … Continued

ಕಾಲೇಜು ಆವರಣದಲ್ಲಿಯೇ ವಿದ್ಯಾರ್ಥಿನಿಯ ಕತ್ತು ಸೀಳಿದ ಭಗ್ನ ಪ್ರೇಮಿ..!

ಕೊಟ್ಟಾಯಂ: ತನ್ನ ಪ್ರೀತಿಯನ್ನು ಒಪ್ಪಿಕೊಳ್ಳಲಿಲ್ಲ ಎಂಬ ಕಾರಣಕ್ಕೆ ಯುವಕ ವಿದ್ಯಾರ್ಥನಿಯೋರ್ವಳ ಕತ್ತು ಸೀಳಿ ಕೊಲೆ ಮಾಡಿದ ಆಘಾತಕಾರಿ ಘಟನೆ ಕೇರಳದ ಕೊಟ್ಟಾಯಂನ ಪಾಲಾದ ಕಾಲೇಜು ಆವರಣದಲ್ಲಿ ನಡೆದ ಬಗ್ಗೆ ವರದಿಯಾಗಿದೆ ನಿತಿನಾ ಮೋಲ್ ( 21) ಎಂಬುವವಳೇ ಮೃತಪಟ್ಟ ವಿದ್ಯಾರ್ಥಿನಿ ಎಂದು ಗುರುತಿಸಲಾಗಿದೆ. ನಿತಿನಾಮೋಲ್ ಪಾಲಾದಲ್ಲಿರುವ ಸೇಂಟ್ ಥಾಮಸ್ ಕಾಲೇಜಿನ ವಿದ್ಯಾರ್ಥಿನಿಯಾಗಿದ್ದು, ಇಂದು ಪರೀಕ್ಷೆ ಬರೆದು … Continued

ಏರ್ ಇಂಡಿಯಾ ಬಿಡ್ ಟಾಟಾ ಸಂಸ್ಥೆ ಗೆದ್ದಿಲ್ಲ, ಕೇಂದ್ರ ಸರ್ಕಾರದಿಂದ ಸ್ಪಷ್ಟನೆ

ನವದೆಹಲಿ: ಟಾಟಾ ಸನ್ಸ್ ರಾಷ್ಟ್ರೀಯ ವಿಮಾನಯಾನ ಏರ್ ಇಂಡಿಯಾಕ್ಕೆ ಬಿಡ್ ಗೆದ್ದಿದೆ ಎನ್ನುವ ಸುದ್ದಿಗಳು ಮಾಧ್ಯಮಗಳಲ್ಲಿ ವರದಿಯಾದ ಬೆನ್ನಿಗೇ ಕೇಂದ್ರ ಸರ್ಕಾರವು ಈ ವರದಿಗಳನ್ನು ನಿರಾಕರಣೆ ಮಾಡಿದೆ. ಎಐ ಡಿಇನ್‌ವೆಸ್ಟ್‌ಮೆಂಟ್ ಪ್ರಕರಣದಲ್ಲಿ ಭಾರತ ಸರ್ಕಾರವು ಹಣಕಾಸು ಬಿಡ್‌ಗಳ ಅನುಮೋದನೆಯನ್ನು ಸೂಚಿಸುವ ಮಾಧ್ಯಮ ವರದಿಗಳು ತಪ್ಪಾಗಿವೆ. ಸರ್ಕಾರದ ನಿರ್ಧಾರವನ್ನು ಯಾವಾಗ ತೆಗೆದುಕೊಳ್ಳಲಾಗುತ್ತದೆ ಎಂದು ಮಾಧ್ಯಮಗಳಿಗೆ ತಿಳಿಸಲಾಗುವುದು ಎಂದು … Continued