2021ನೇ ವರ್ಷ ಭಾರತದಲ್ಲಿ 1901ರಿಂದ ಐದನೇ ಅತ್ಯಂತ ಬೆಚ್ಚಗಿನ ವರ್ಷ: ಐಎಂಡಿ

ನವದೆಹಲಿ: 2021ರ ವರ್ಷವು 1901 ರಿಂದ ಭಾರತದಲ್ಲಿ ಐದನೇ ಅತ್ಯಂತ ಬೆಚ್ಚಗಿನ ವರ್ಷವಾಗಿದೆ. ದೇಶದಲ್ಲಿ ತನ್ನ ವಾರ್ಷಿಕ ಸರಾಸರಿ ಗಾಳಿಯ ಸಾಮಾನ್ಯ ಉಷ್ಣತೆಗಿಂತ 0.44 ಡಿಗ್ರಿ ಸೆಲ್ಸಿಯಸ್‌ ಹೆಚ್ಚು ದಾಖಲಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಶುಕ್ರವಾರ ತಿಳಿಸಿದೆ. ಪ್ರವಾಹ, ಚಂಡಮಾರುತ, ಭಾರೀ ಮಳೆ, ಭೂಕುಸಿತ, ಸಿಡಿಲು ಮುಂತಾದ ಹವಾಮಾನ ವೈಪರೀತ್ಯಗಳಿಂದಾಗಿ ದೇಶದಲ್ಲಿ 1,750 … Continued

ಅತಿಥಿ ಉಪನ್ಯಾಸಕರಿಗೆ ರಾಜ್ಯ ಸರ್ಕಾರದಿಂದ ಸಂಕ್ರಾಂತಿ ಗಿಫ್ಟ್‌..ವೇತನದಲ್ಲಿ ಭಾರೀ ಹೆಚ್ಚಳ

ಬೆಂಗಳೂರು: ಅತಿಥಿ ಉಪನ್ಯಾಸಕರಿಗೆ ರಾಜ್ಯ ಸರ್ಕಾರ ಸಂಕ್ರಾಂತಿ ಸಿಹಿಯನ್ನು ನೀಡಿದೆ. ಅತಿಥಿ ಉಪನ್ಯಾಸಕರ ವೇತನವನ್ನು 11 ಸಾವಿರ ಇದ್ದವರಿಗೆ 28 ಸಾವಿರ ರೂ.ಗಳಿಗೆ ಹೆಚ್ಚಳ ಮಾಡಲಾಗಿದೆ. 13 ಸಾವಿರ ಇರುವವರಿಗೆ 32 ಸಾವಿರ ರೂ.ಗಳಿಗೆ ಸಂಬಳ ನಿಗದಿ ಮಾಡಲಾಗಿದೆಎಂದು ಉನ್ನತ ಶಿಕ್ಷಣ ಸಚಿವ ಅಶ್ವತ್ಥ ನಾರಾಯಣ್ ಹೇಳಿದ್ದಾರೆ. ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅತಿಥಿ ಉಪನ್ಯಾಸಕರು … Continued

ಪಕ್ಷದ ಟಿಕೆಟ್ ಸಿಗದೆ ಪೊಲೀಸರೆದುರೇ ಗಳಗಳನೆ ಬಿಎಸ್‌ಪಿ ನಾಯಕ, ಆತ್ಮಾಹುತಿ ಬೆದರಿಕೆ | ವೀಕ್ಷಿಸಿ

ಮುಜಾಫರ್‌ನಗರ: ಉತ್ತರ ಪ್ರದೇಶದಲ್ಲಿ ವಿಧಾನಸಭಾ ಚುನಾವಣೆಯ ದಿನಾಂಕ ಪ್ರಕಟವಾಗುತ್ತಿದ್ದಂತೆಯೇ ಪಕ್ಷದ ಟಿಕೆಟ್‌ ವಿಚಾರದಲ್ಲಿ ಕಿತ್ತಾಟ ಜೋರಾತ್ತಿದೆ. ಮುಜಾಫರ್‌ನಗರದ ಚಾರ್ತಾವಾಲ್ ಕ್ಷೇತ್ರದಿಂದ ಟಿಕೆಟ್ ಸಿಗದಿದ್ದಕ್ಕೆ ಅಸಮಾಧಾನಗೊಂಡ ಬಹುಜನ ಸಮಾಜ ಪಕ್ಷದ (ಬಿಎಸ್‌ಪಿ) ಮುಖಂಡರೊಬ್ಬರು ನಗರದ ಕೊತ್ವಾಲಿಯಲ್ಲಿ ಪೊಲೀಸರ ಮುಂದೆ ಗಳಗಳನೆ ಅತ್ತಿದ್ದಾರೆ..! ಎರಡು ವರ್ಷಗಳ ಹಿಂದೆ ಪಕ್ಷದ ಹಿರಿಯ ನಾಯಕರೊಬ್ಬರು ಟಿಕೆಟ್‌ಗಾಗಿ 67 ಲಕ್ಷ ರೂ.ಗೆ ಬೇಡಿಕೆಯಿಟ್ಟಿದ್ದರು. … Continued

ಕೇಂದ್ರ ಬಜೆಟ್ ಮಂಡನೆಯ ದಿನಾಂಕ ಘೋಷಣೆ

ನವದೆಹಲಿ: ಸಂಸತ್ತಿನ ಬಜೆಟ್ ಅಧಿವೇಶನವು ಜನವರಿ 31ರಂದು ಪ್ರಾರಂಭವಾಗಲಿದ್ದು, ಕೇಂದ್ರ ಬಜೆಟ್ 2022-23 ಅನ್ನು ಫೆಬ್ರವರಿ 1 ರಂದು ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಮಂಡಿಸಲಿದ್ದಾರೆ. ಅಧಿವೇಶನವು ಉಭಯ ಸದನಗಳನ್ನು ಉದ್ದೇಶಿಸಿ ರಾಷ್ಟ್ರಪತಿಗಳ ಭಾಷಣದೊಂದಿಗೆ ಪ್ರಾರಂಭವಾಗುತ್ತದೆ ಮತ್ತು ಏಪ್ರಿಲ್ 8 ರಂದು ಮುಕ್ತಾಯಗೊಳ್ಳಲಿದೆ. ಅಧಿವೇಶನದ ಮೊದಲ ಭಾಗವು ಫೆಬ್ರವರಿ 11ರಂದು ಮುಕ್ತಾಯಗೊಳ್ಳಲಿದೆ. ಒಂದು ತಿಂಗಳ … Continued

ಇದು ಪ್ರಚಾರ ಸ್ವಾಮಿ.. ವ್ಯಕ್ತಿ ಸ್ನಾನ ಮಾಡುತ್ತಿರುವಾಗಲೇ ಎಂಟ್ರಿ ಕೊಟ್ಟ ಬಿಜೆಪಿ ಶಾಸಕ..ನಿಮ್ಮ ಬಳಿ ರೇಷನ್ ಕಾರ್ಡ್ ಇದೆಯೇ ಎಂದು ಪ್ರಶ್ನೆ..! ವೀಕ್ಷಿಸಿ

ಕಾನ್ಪುರ: ಚುನಾವಣಾ ಆಯೋಗವು ಕೋವಿಡ್ ಕುರಿತು ಸಮಾವೇಶ, ಸಭೆ-ಸಮಾರಂಭಗಳನ್ನು ನಿಷೇಧಿಸಿದ ಹಿನ್ನೆಲೆಯಲ್ಲಿ ಉತ್ತರ ಪ್ರದೇಶದಲ್ಲಿ ಅಭ್ಯರ್ಥಿಗಳು ಮನೆ-ಮನೆಗೆ ಭೇಟಿ ನೀಡುತ್ತಿದ್ದಾರೆ. ಕಾನ್ಪುರದಿಂದ ವ್ಯಾಪಕವಾಗಿ ಹಂಚಿಕೊಂಡ ವಿಡಿಯೊವೊಂದರಲ್ಲಿ ಬಿಜೆಪಿ ಶಾಸಕರೊಬ್ಬರು ಮತದಾರ ಸ್ನಾನದ ಮಾಡುತ್ತಿರುವಾಗಲೇ ಭೇಟಿ ಮಾಡಿ ವಿಚಾರಿಸಿದ ವಿಡಿಯೊವೊಂದು ಈಗ ಸುದ್ದಿ ಮಾಡುತ್ತಿದೆ. ಕಾನ್ಪುರದ ಬಿಜೆಪಿ ಶಾಸಕ ಸುರೇಂದ್ರ ಮೈತಾನಿ ಅವರು ತಮ್ಮ ವಿಧಾನಸಭಾ ಕ್ಷೇತ್ರದಲ್ಲಿ … Continued

ಕ್ರೈಸ್ತ ಸನ್ಯಾಸಿನಿ ಮೇಲೆ ಅತ್ಯಾಚಾರ ಪ್ರಕರಣ: ಬಿಷಪ್ ಫ್ರಾಂಕೋ ಮುಲಕ್ಕಲ್ ಖುಲಾಸೆ

ತಿರುವನಂಪುರಂ: ಕ್ರೈಸ್ತ ಸನ್ಯಾಸಿನಿಯೊಬ್ಬರ ಮೇಲೆ ಅತ್ಯಾಚಾರ ಎಸಗಿದ ಆರೋಪ ಎದುರಿಸುತ್ತಿದ್ದ ಬಿಷಪ್ ಫ್ರಾಂಕೋ ಮುಲಕ್ಕಲ್ ಅವರನ್ನು ಕೇರಳ ನ್ಯಾಯಾಲಯ ಖುಲಾಸೆಗೊಳಿಸಿದೆ. 2014 ರಿಂದ 2016ರ ನಡುವೆ ತಮ್ಮ ಮೇಲೆ ಪದೇ ಪದೇ ಅತ್ಯಾಚಾರ ಎಸಗಿದ್ದರು ಎಂದು ಸನ್ಯಾಸಿನಿಯೊಬ್ಬರು ಆರೋಪಿಸಿದ್ದರು. ಮಿಷನರೀಸ್ ಆಫ್ ಜೀಸಸ್ ಆರ್ಡರ್‌ನ ಮುಖ್ಯಸ್ಥರಾಗಿದ್ದಾಗ ಬಿಷಪ್ ಫ್ರಾಂಕೋ ಅವರು 2014 ಮತ್ತು 2016 ರ … Continued

ಎಂಟು ಕಿಮೀ ಆಳ ಸಮುದ್ರದಲ್ಲಿ ಜೀವನ್ಮರಣದ ಮಧ್ಯೆ ಹೋರಾಡಿ ಮೀನುಗಾರರಿಂದ ಬಚಾವ್‌ ಆದ ಎಮ್ಮೆ..! ದೃಶ್ಯ ವಿಡಿಯೊದಲ್ಲಿ ಸೆರೆ

ಕೋಝಿಕೋಡ್: ಆಳ ಸಮುದ್ರದಲ್ಲಿ ಜೀವನ್ಮರಣಗಳ ಮಧ್ಯೆ ಹೋರಾಡಿ ಕೊನೆಗೂ ಸಾವನ್ನು ಗೆಲ್ಲುವಲ್ಲಿ ಎಮ್ಮೆ ಯಶಸ್ವಿಯಾಗಿದೆ. ಇದರ ಗೆಲುವಿಗೆ ಪ್ರಮುಖ ಪಾತ್ರ ವಹಿಸಿದವರು ಮೀನುಗಾರರು. ಕೋಝಿಕೋಡ್‌ನ ಕೋಠಿಯಿಂದ ಸಮುದ್ರಕ್ಕೆ ಇಳಿದಿದ್ದ ಮೂವರು ಮೀನುಗಾರರು ಗುರುವಾರ ಮಧ್ಯರಾತ್ರಿ 1 ಗಂಟೆಗೆ ಅಸಾಮಾನ್ಯ ದೃಶ್ಯವನ್ನು ನೋಡಿದ್ದಾರೆ. ಸಮುದ್ರ ತೀರದಿಂದ ಸುಮಾರು ಎಂಟು ಕಿಲೋಮೀಟರ್ ದೂರದ ಆಳ ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳಿದಾಗ … Continued

ಭಾರತದಲ್ಲಿ ಹೊಸದಾಗಿ 2.64 ಲಕ್ಷ ಹೊಸ ಪ್ರಕರಣಗಳು ದಾಖಲು, ನಿನ್ನೆಗಿಂತ 6.7% ಹೆಚ್ಚು

ನವದೆಹಲಿ: ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 2,64,202 ಹೊಸ ಕೋವಿಡ್ -19 ಪ್ರಕರಣಗಳು ದಾಖಲಾಗಿವೆ, ಇದು ಗುರುವಾರ ಕೇಂದ್ರ ಆರೋಗ್ಯ ಸಚಿವಾಲಯ ವರದಿ ಮಾಡಿದ ಪ್ರಮಾಣಕ್ಕಿಂತ 6.7% ಹೆಚ್ಚಾಗಿದೆ. ಇತ್ತೀಚಿನ ಮಾಹಿತಿಯ ಪ್ರಕಾರ, ಭಾರತದಲ್ಲಿ ಓಮಿಕ್ರಾನ್ ಪ್ರಕರಣಗಳ ಸಂಖ್ಯೆ 5,753 ಕ್ಕೆ ಏರಿದೆ. ತಾಜಾ ಸೋಂಕಿನೊಂದಿಗೆ, ದೇಶದ ಕೋವಿಡ್ -19 ಸಕ್ರಿಯ ಪ್ರಕರಣ 12,72,073 ಕ್ಕೆ … Continued

ಕೋವಾಕ್ಸಿನ್ ಈಗ ವಯಸ್ಕರು-ಮಕ್ಕಳಿಗೆ ಸಾರ್ವತ್ರಿಕ ಲಸಿಕೆ: ಭಾರತ್ ಬಯೋಟೆಕ್

ನವದೆಹಲಿ: ಭಾರತದ ಪ್ರಮುಖ ಪ್ರಗತಿಯಲ್ಲಿ, ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ಕೊರೊನಾವೈರಸ್ ವಿರೋಧಿ ಲಸಿಕೆ – ಕೋವಾಕ್ಸಿನ್ – ಈಗ ಜಾಗತಿಕವಾಗಿ “ವಯಸ್ಕರು ಮತ್ತು ಮಕ್ಕಳಿಗಾಗಿ ಸಾರ್ವತ್ರಿಕ ಲಸಿಕೆ” ಎಂದು ಗುರುತಿಸಲ್ಪಟ್ಟಿದೆ. ಕೋವಾಕ್ಸಿನ್ ಈಗ ವಯಸ್ಕರು ಮತ್ತು ಮಕ್ಕಳಿಗೆ ಸಾರ್ವತ್ರಿಕ ಲಸಿಕೆಯಾಗಿದೆ. ಕೋವಿಡ್ -19 ವಿರುದ್ಧ ಜಾಗತಿಕ ಲಸಿಕೆ ಅಭಿವೃದ್ಧಿಪಡಿಸುವ ನಮ್ಮ ಗುರಿಗಳನ್ನು ಸಾಧಿಸಲಾಗಿದೆ ಮತ್ತು ಪರವಾನಗಿಗಾಗಿ ಎಲ್ಲವೂ … Continued

ಕೋವಿಡ್ ಉಲ್ಬಣ: ಸ್ಥಳೀಯ ನಿಯಂತ್ರಣ ಕ್ರಮಗಳಿಗೆ ಒತ್ತು ನೀಡಿ, ಆರ್ಥಿಕತೆಯ ವೇಗ ಕಾಪಾಡಿಕೊಳ್ಳಿ: ಸಿಎಂಗಳ ಸಭೆಯಲ್ಲಿ ಪ್ರಧಾನಿ ಮೋದಿ

ನವದೆಹಲಿ: ದೇಶದ ಕೋವಿಡ್-19 ಪರಿಸ್ಥಿತಿ ಕುರಿತು ಚರ್ಚಿಸಲು ಪ್ರಧಾನಿ ನರೇಂದ್ರ ಮೋದಿ ಗುರುವಾರ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಪರಿಶೀಲನಾ ಸಭೆ ನಡೆಸಿದರು. ಸಭೆಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, “ಓಮಿಕ್ರಾನ್ ರೂಪಾಂತರವು ಹಿಂದಿನ ರೂಪಾಂತರಗಳಿಗಿಂತ ಹಲವಾರು ಪಟ್ಟು ವೇಗವಾಗಿ ಜನರಿಗೆ ಹರಡುತ್ತಿದೆ. ನಾವು ಎಚ್ಚರದಿಂದಿರಬೇಕು ಆದರೆ ನಾವು ಯಾವುದೇ ಭಯಭೀತರಾಗದಂತೆ ನಾವು ಕಾಳಜಿ ವಹಿಸಬೇಕು … Continued