ಅರ್ಬನ್‌ ಕೋಆಪರೇಟಿವ್‌ ಬ್ಯಾಂಕುಗಳಿಗೆ ಆರ್‌ಬಿಐ ಮತ್ತೊಂದು ಅಸ್ತ್ರ

ನವದೆಹಲಿ: ಅರ್ಬನ್ ಕೋ ಆಪರೇಟಿವ್ ಬ್ಯಾಂಕು​ಗಳ ಪ್ರಸ್ತುತ ಸ್ಥಿತಿಗತಿ ಹಾಗೂ ಆಗಬೇಕಾದ ಬದಲಾವಣೆಯ ಕುರಿತಂತೆ ಅಧ್ಯಯನ ನಡೆಸಲು ರಿಸರ್ವ್ ಬ್ಯಾಂಕ್ (ಆರ್​ಬಿಐ) ತಜ್ಞರ ಸಮಿತಿಯೊಂದನ್ನು ಸೋಮವಾರ ರಚಿಸಿದೆ. ಈ ಸಮಿತಿಗೆ ರಿಸರ್ವ್ ಬ್ಯಾಂಕ್​ನ ಉಪ ಗವರ್ನರ್ ಎನ್.​ ಎಸ್.​ ವಿಶ್ವನಾಥನ್ ಅಧ್ಯಕ್ಷರಾಗಿರಲಿದ್ದು, ಇದು ಅರ್ಬನ್ ಬ್ಯಾಂಕುಗಳ ಸ್ಥಿತಿಗತಿಯಷ್ಟೇ ಅಲ್ಲದೇ ಅವುಗಳ ಮುಂದಿನ ಹಾದಿಯ ಬಗ್ಗೆಯೂ ಅಧ್ಯಯನ … Continued

ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ ನಿಕಿತಾ ಜೇಕಬ್‌

ಟೂಲ್‌ಕಿಟ್‌ ರಚನೆ ಕುರಿತು ನಿಕಿತಾ ಜೇಕಬ್‌ ಹಾಗೂ ಶಾಂತನು ವಿರುದ್ದ ಜಾಮೀನು ರಹಿತ ವಾರಂಟ್‌ ಹೊರಡಿಸಿದ ಹಿನ್ನೆಲೆಯಲ್ಲಿ ವಕೀಲರಾದ ನಿಕಿತಾ ನಾಲ್ಕು ವಾರಗಳ ನಿರೀಕ್ಷಣಾ ಜಾಮೀನು ಜಾಮೀನು ಕೋರಿ ಬಾಂಬೆ ಉಚ್ಚ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ದಿಶಾ ರವಿ ಬಂಧನಕ್ಕೊಳಗಾದ ೧ ದಿನದ ನಂತರ ದೆಹಲಿ ಪೊಲೀಸರು ರೈತರ ಪ್ರತಿಭಟನೆ ಕುರಿತ ಟೂಲ್‌ಕಿಟ್‌ ರಚನೆ ಆರೋಪ … Continued

೫ರೂ ದಲ್ಲಿ ಭೋಜನ ನೀಡುವ “ಮಾʼ ಯೋಜನೆಗೆ ಚಾಲನೆ ನೀಡಿದ ದೀದಿ

ಪಶ್ಚಿಮ ಬಂಗಾಳದಲ್ಲಿ ನಡೆಯುವ ವಿಧಾನಸಭಾ ಚುನಾವಣೆಗೆ ಮುನ್ನ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬಡಜನರಿಗೆ ೫ ರೂ.ದಲ್ಲಿ ಭೋಜನ ನೀಡುವ “ಮಾʼ ಯೋಜನೆಗೆ ಚಾಲನೆ ನೀಡಿದರು. ರಾಜ್ಯ ಸರಕಾರ ಬಡಜನರಿಗೆ ಕೇವಲ ೫ ರೂ.ಗಳಲ್ಲಿ ಭೋಜನ ನೀಡಲಿದೆ. ಭೋಜನವು ಒಂದು ಬಟ್ಟಲು ಅನ್ನ, ದಾಲ್‌, ತರಕಾರಿ, ಮೊಟ್ಟೆಯ ಕರಿ ಒಳಗೊಂಡಿರಲಿದೆ. ಪ್ರತಿ ಪ್ಲೇಟ್‌ ಊಟಕ್ಕೆ ರಾಜ್ಯ ಸರಕಾರ … Continued

ಮಾತುಕತೆಗೆ ಕೇಂದ್ರ ಸರಕಾರ ವಿಳಂಬ: ಸಂಯುಕ್ತ ಕಿಸಾನ್‌ ಮೋರ್ಚಾ ಆರೋಪ

ರೈತರೊಂದಿಗೆ ಮಾತುಕತೆಗೆ ಸಿದ್ಧ ಎಂದು ಹೇಳಿದ ಪ್ರಧಾನಿ ನರೇಂದ್ರ ಮೋದಿ ಮಾತುಕತೆಗೆ ದಿನಾಂಕ ನಿಗದಿ ಮಾಡಲು ವಿಳಂಬ ಮಾಡುತ್ತಿದ್ದಾರೆ ಎಂದು ಸಂಯುಕ್ತ ಕಿಸಾನ್‌ ಮೋರ್ಚಾ ಆರೋಪ ಮಾಡಿದೆ. ಹೋರಾಟ ನಿರತ ರೈತರೊಂದಿಗೆ ಮಾತುಕತೆ ನಡೆಸಲು ಕೇಂದ್ರ ಸರಕಾರ ಬದ್ಧವಾಗಿದೆ ಎಂದು ಸಂಸತ್ತಿನಲ್ಲಿ ಹೇಳಿಕೆ ನೀಡುವ ಪ್ರಧಾನಿ ಮೋದಿ, ರೈತರನ್ನು ಮಾತುಕತೆಗೆ ಆಹ್ವಾನಿಸಲು ಹಿಂದೇಟು ಹಾಕುತ್ತಿದ್ದಾರೆ. ಕೇಂದ್ರ … Continued

ಟೂಲ್‌ಕಿಟ್‌ ಆರೋಪಿಗಳಿಗೆ ಭಾರತದ ಘನತೆ ಹಾಳು ಮಾಡುವ ಉದ್ದೇಶವಿತ್ತು: ದೆಹಲಿ ಪೊಲೀಸ್‌

ದೆಹಲಿ: ಟೂಲ್‌ಕಿಟ್‌ ರಚನೆ ಮಾಡಿದ ದಿಶಾ ರವಿ, ನಿಕಿತಾ ಜೇಕಬ್‌ ಹಾಗೂ ಶಾಂತನು ಅವರಿಗೆ ಭಾರತದ ಘನತೆಗೆ ಚ್ಯುತಿ ತರುವ ಉದ್ದೇಶವಿತ್ತು ಎಂದು ದೆಹಲಿ ಪೊಲೀಸ್‌ ಅಧಿಕಾರಿ ತಿಳಿಸಿದ್ದಾರೆ. ಟೂಲ್‌ಕಿಟ್‌ ಪ್ರಕರಣದಲ್ಲಿ ದಿಶಾ, ನಿಕಿತಾ ಹಾಗೂ ಶಾಂತನು ಪಾಲ್ಗೊಳ್ಳುವಿಕೆ ದೃಢಪಟ್ಟಿದೆ. ಭಾರತದ ಚಿತ್ರಣವನ್ನು ಕಳಂಕಿತಗೊಳಿಸುವುದು ಅವರ ಉದ್ದೇಶವಾಗಿತ್ತು. ಟೂಲ್‌ಕಿಟ್‌ ಹರಡಲು ದಿಶಾ ಅವರು ರಚಿಸಿದ ವ್ಯಾಟ್ಸಪ್‌ … Continued

ಟೂಲ್‌ಕಿಟ್‌ ಹಂಚಿಕೆ ಆರೋಪ ಇಬ್ಬರ ವಿರುದ್ಧ ವಾರಂಟ್‌

ಟೂಲ್‌ಕಿಟ್‌ ಹಂಚಿಕೆ ಕುರಿತು ದಿಶಾ ರವಿ ಬಂಧನದ ಮರುದಿನ ದೆಹಲಿ ಪೊಲೀಸರು ಇಬ್ಬರ ವಿರುದ್ಧ ಜಾಮೀನುರಹಿತ ವಾರಂಟ್‌ ಹೊರಡಿಸಿದ್ದಾರೆ. ನಿಕಿತಾ ಜೇಕಬ್‌ ಹಾಗೂ ಶಾಂತನು ವಿರುದ್ಧ ವಾರಂಟ್‌ ಹೊರಡಿಸಲಾಗಿದೆ. ಶೀಘ್ರದಲ್ಲೇ ಇಬ್ಬರನ್ನೂ ಬಂಧಿಸಲಾಗುವುದು ಎಂದು ಪೊಲೀಸ್‌ ಮೂಲಗಳು ತಿಳಿಸಿವೆ. ಇಬ್ಬರೂ ದಾಖಲೆಗಳನ್ನು ಸಿದ್ಧಪಡಿಸುವಲ್ಲಿ ಪಾಲ್ಗೊಂಡಿದ್ದಾರೆ. ಖಲಿಸ್ತಾನ ಪರ ವ್ಯಕ್ತಿಗಳೊಂದಿಗೆ ನೇರ ಸಂಪರ್ಕದಲ್ಲಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. … Continued

ವಾಟ್ಸಅಪ್‌‌‌ಗೆ ಚಾಟಿ ಬೀಸಿದ ಸರ್ವೋಚ್ಚ ನ್ಯಾಯಾಲಯ

ನವದೆಹಲಿ: ಹೊಸ ಗೌಪ್ಯತೆ ನೀತಿ ಜಾರಿಗೆ ತರಲು ಮುಂದಾಗಿದ್ದ ಮೆಸೆಜಿಂಗ್‌ ಅಪ್ಲಿಕೇಶನ್‌ ವ್ಯಾಟ್ಸಪ್‌ಗೆ ಚಾಟಿ ಬೀಸಿದ ಸರ್ವೋಚ್ಚ ನ್ಯಾಯಾಲಯ, ಹಣಕ್ಕಿಂತ ನಾಗರಿಕರ ಗೌಪ್ಯತೆ ಮುಖ್ಯವಾಗಿದೆ ಎಂದು ಅಭಿಪ್ರಾಯಟ್ಟಿದೆ. ಕೇಂದ್ರ ಸರಕಾರ ಹಾಗೂ ವ್ಯಾಟ್ಸಪ್‌ಗೆ ನೊಟೀಸ್‌ ನೀಡಿದ ನ್ಯಾಯಾಲಯ, ನ್ಯಾಯಾಲಯವು ಜನರ ಗೌಪ್ಯತೆ ಬಗ್ಗೆ ಗಂಭೀರ ಕಾಳಜಿ ಹೊಂದಿದೆ. ಜನರ ಗೌಪ್ಯತೆ ರಕ್ಷಿಸುವುದು ನಮ್ಮ ಕರ್ತವ್ಯ ಎಂದು … Continued

ʼಯುವಿʼ ವಿರುದ್ಧ ಜಾತಿನಿಂದನೆ ಪ್ರಕರಣ ದಾಖಲು

ದಲಿತರ ವಿರುದ್ಧ ಜಾತಿ ನಿಂದನೆ ಮಾಡಿದ ಕ್ರಿಕೆಟಿಗ ಯುವರಾಜ್‌ ಸಿಂಗ್‌ ವಿರುದ್ಧ ಹರಿಯಾಣ ಪೊಲೀಸರು ಎಫ್‌ಐಆರ್‌ ದಾಖಲಿಸಿಕೊಂಡಿದ್ದಾರೆ. ಕಳೆದ ವರ್ಷ ಜೂನ್‌ನಲ್ಲಿ ಹನ್ಸಿ ಮೂಲದ ನ್ಯಾಯವಾದಿ ರಜತ್‌ ಕಲ್ಸನ್‌ ಹಿಸ್ಸಾರ್‌ ಜಿಲ್ಲೆಯ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಸಾಮಾಜಿಕ ಜಾಲತಾಣ ಆಯೋಜಿಸಿದ ಕಾರ್ಯಕ್ರಮವೊಂದರಲ್ಲಿ ಇನ್ನೊಬ್ಬ ಆಟಗಾರನನ್ನು ಉಲ್ಲೇಖಿಸುವಾಗ ಈ ಹೇಳಿಕೆ ನೀಡಿದ್ದರು ಎಂದು ಕಲ್ಸನ್‌ ಆರೋಪಿಸಿದ್ದರು. … Continued

ನೆರೆ ದೇಶಗಳಲ್ಲೂ ಬಿಜೆಪಿ ಸರಕಾರ: ತ್ರಿಪುರ ಸಿಎಂ ವಿವಾದಾತ್ಮಕ ಹೇಳಿಕೆ

ಕೇಂದ್ರ ಗೃಹ ಸಚಿವ ಹಾಗೂ ಬಿಜೆಪಿ ಮುಖಂಡ ಅಮಿತ್‌ ಶಾ ನೆರೆ ದೇಶಗಳಾದ ನೇಪಾಳ ಹಾಗೂ ಶ್ರೀಲಂಕಾದಲ್ಲಿ ಬಿಜೆಪಿ ಸರಕಾರ ರಚನೆಯ ಉದ್ದೇಶ ಹೊಂದಿದ್ದಾರೆ ಎಂದು ತ್ರಿಪುರ ಮುಖ್ಯಮಂತ್ರಿ ಬಿಪ್ಲಬ್‌ ಕುಮಾರ್‌ ದೇಬ್‌ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ದೇಶದಲ್ಲಿ ಮಾತ್ರವಲ್ಲದೇ ನೇಪಾಳ ಹಾಗೂ ಶ್ರೀಲಂಕಾದಲ್ಲಿ ಬಿಜೆಪಿಯನ್ನು ಸಂಘಟಿಸಿ ಅಲ್ಲಿ ಬಿಜೆಪಿ ಸರಕಾರ ರಚನೆ ಮಾಡುವ ಉದ್ದೇಶ … Continued

ಉತ್ತರಾಖಂಡ ಪ್ರವಾಹ: ಮೃತ ಸಂಖ್ಯೆ ೫೩ಕ್ಕೆ ಏರಿಕೆ

ಉತ್ತರಾಖಂಡದಲ್ಲಿ ಹಿಮ ಬಂಡೆ ಕುಸಿದು ಉಂಟಾದ ಪ್ರವಾಹ ದುರ್ಘಟನೆಯಲ್ಲಿ ಮೃತಪಟ್ಟವರ ಸಂಖ್ಯೆ ೫೩ಕ್ಕೆ ಏರಿಕೆಯಾಗಿದೆ. ಸೋಮವಾರ ಅವಶೇಷಗಳ ಅಡಿಯಿಂದ ಮೂರು ಶವಗಳನ್ನುಹೊರ ತೆಗೆಯಲಾಗಿದೆ. ಚಮೋಲಿ ಜಿಲ್ಲೆಯ ಆದಿತಿ ಸುರಂಗ ಹಾಗೂ ತಪೋವನ-ವಿಷ್ಣುಗಡ ಪ್ರದೇಶದಿಂದ ಶವಗಳನ್ನು ಹೊರತೆಗೆಯಲಾಗಿದೆ ಎಂದು ಜಿಲ್ಲಾಧಿಕಾರಿ ಸ್ವಾತಿ ಬದೋರಿಯಾ ತಿಳಿಸಿದ್ದಾರೆ. ಫೆ.೭ರಂದು ಹಿಮ ಬಂಡೆ ಕುಸಿದು ಪ್ರವಾಹ ಉಂಟಾಗಿದ್ದು ಇದರಿಂದ ೧೫೧ ಜನರು … Continued