ಮತದಾನದ ನಂತರದ ಹಿಂಸಾಚಾರ: ಎನ್‌ಎಚ್‌ಆರ್‌ಸಿ ತನಿಖೆ ಆದೇಶ ಹಿಂಪಡೆಯಲು ಕೋರಿ ಬಂಗಾಳ ಸರ್ಕಾರದಿಂದ ಹೈಕೋರ್ಟಿಗೆ ಅರ್ಜಿ

ಕೋಲ್ಕತ್ತಾ: ಮತದಾನದ ನಂತರದ  ರಾಜ್ಯದಲ್ಲಿ ಹಿಂಸೆ. ಮಾನವ ಹಕ್ಕುಗಳ ಉಲ್ಲಂಘನೆಯ ಎಲ್ಲ ಪ್ರಕರಣಗಳನ್ನು ಪರಿಶೀಲಿಸಲು ಸಮಿತಿಯನ್ನು ರಚಿಸುವಂತೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ (ಎನ್‌ಎಚ್‌ಆರ್‌ಸಿ) ಅಧ್ಯಕ್ಷರಿಗೆ ನಿರ್ದೇಶನ ನೀಡಿದ ಆದೇಶವನ್ನು ಹಿಂಪಡೆಯಬೇಕೆಂದು ಕೋರಿ ಪಶ್ಚಿಮ ಬಂಗಾಳ ಸರ್ಕಾರ ಕೋಲ್ಕತ್ತಾ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ. ಮತದಾನದ ನಂತರದ ಹಿಂಸಾಚಾರದ ಬಗ್ಗೆ ಪಿಐಎಲ್‌ ಗಳನ್ನು ಪರಿಗಣಿಸಿದ ನಂತರ ಎರಡು … Continued

ಆಂಧ್ರದಲ್ಲಿ ಒಂದೇ ದಿನದಲ್ಲಿ 13.59 ಲಕ್ಷ ಜನರಿಗೆ ಲಸಿಕೆ: ಹೊಸ ದಾಖಲೆ

ಹೈದರಾಬಾದ್: ಪ್ರಮುಖ ಮೈಲಿಗಲ್ಲಿನಲ್ಲಿ, ಆಂಧ್ರಪ್ರದೇಶದಲ್ಲಿ ಭಾನುವಾರ 13 ಲಕ್ಷಕ್ಕೂ ಹೆಚ್ಚು ಜನರಿಗೆ ಕೊರೊನಾವೈರಸ್ ಲಸಿಕೆ ನೀಡಲಾಯಿತು. ರಾಜ್ಯ ಆರೋಗ್ಯ ಇಲಾಖೆಯ ಅಂಕಿಅಂಶಗಳ ಪ್ರಕಾರ, ರಾಜ್ಯದಾದ್ಯಂತ ಭಾನುವಾರ 13,59,300 ಜನರಿಗೆ ಕೊರೊನಾ ವೈರಸ್ ವಿರುದ್ಧ ಚುಚ್ಚುಮದ್ದು ನೀಡಲಾಗಿದೆ. ವೈದ್ಯಕೀಯ ಮತ್ತು ಆರೋಗ್ಯ ಇಲಾಖೆಯ 28,917 ಸಿಬ್ಬಂದಿ, 40,000 ಆಶಾ ಕಾರ್ಯಕರ್ತರು ಮತ್ತು 5,000 ಇತರ ಸಿಬ್ಬಂದಿ ಈ … Continued

ಯುರೋಪಿಯನ್ ವಿವಿ ಪ್ರತಿಷ್ಠಿತ ಪ್ರಶಸ್ತಿ ಪಡೆದ ಕೇರಳದ ಮಾಜಿ ಸಚಿವೆ ಶೈಲಜಾ ಟೀಚರ್‌

ತಿರುವನಂತಪುರಂ:ಕೇರಳದ ಮಾಜಿ ಆರೋಗ್ಯ ಸಚಿವೆ ಕೆ. ಕೆ. ಶೈಲಜಾ (ಶೈಲಜಾ ಟೀಚರ್‌) ಪ್ರತಿಷ್ಠಿತ ಕೇಂದ್ರ ಯುರೋಪಿಯನ್ ವಿಶ್ವವಿದ್ಯಾಲಯ ನೀಡುವ ಓಪನ್ ಸೊಸೈಟಿ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಸಾರ್ವಜನಿಕ ಆರೋಗ್ಯ ವಲಯದಲ್ಲಿನ ಅವರ ಸೇವಾ ಬದ್ಧತೆ ಗಮನದಲ್ಲಿ ಇಟ್ಟುಕೊಂಡು ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಪ್ರತಿವರ್ಷ ಭಿನ್ನ ರೀತಿಯಲ್ಲಿ ಸಮಾಜಮುಖಿ ಕಾರ್ಯಗಳನ್ನು ಮಾಡಿದ ವ್ಯಕ್ತಿಗಳನ್ನು ಗುರುತಿಸಿ ಓಪನ್ ಸೊಸೈಟಿ ಪ್ರಶಸ್ತಿ … Continued

ಬಿಜೆಪಿಯೊಂದಿಗೆ ಕೈಜೋಡಿಸಿ: ಶಿವಸೇನಾ ಶಾಸಕ ಸರ್ನಾಯಕ್‌ ಸಿಎಂ ಉದ್ಧವ್ ಠಾಕ್ರೆಗೆ ಬರೆದ ಪತ್ರ ಈಗ ವೈರಲ್..!

ಮುಂಬೈ: ಶಿವಸೇನೆ ಮುಖಂಡ ಮತ್ತು ಶಾಸಕ ಪ್ರತಾಪ್ ಸರ್ನಾಯಕ್ ಅವರು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರಿಗೆ ಪತ್ರ ಬರೆದಿದ್ದು, ಶಿವಸೇನೆಯು ಮತ್ತೆ ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಕೈಜೋಡಿಸಬೇಕು ಎಂದು ಹೇಳಿದ್ದಾರೆ. ಈಗ ವೈರಲ್ ಆಗಿರುವ ಮರಾಠಿಯಲ್ಲಿ ಬರೆದಿರುವ ಪತ್ರದಲ್ಲಿ, ಥಾನೆಯ ಓವಾಲಾ-ಮಜಿವಾಡಾ ಕ್ಷೇತ್ರದ ಶಾಸಕರಾದ ಸರ್ನಾಯಕ್, ಮುಂಬರುವ ಮುಂಬೈ ಮತ್ತು ಥಾಣೆ ಮಹಾನಗರ ಪಾಲಿಕೆ … Continued

ಧರ್ಮ-ವರ್ಗ-ರಾಷ್ಟ್ರೀಯತೆ ಗಡಿ ಮೀರಿ ವಿಶ್ವದಲ್ಲಿ ಜನಪ್ರಿಯವಾಗುತ್ತಿರುವ ಯೋಗ

(ದಿನಾಂಕ ಜೂನ್‌ ೨೧ ರಂದು ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸಲಾಗುತ್ತಿದ್ದು, ಆ ನಿಮಿತ್ತ ಒಂದು ಅವಲೋಕನ) ಭಾರತದ ಪ್ರಾಚೀನ ಸಂಪ್ರದಾಯ ಮತ್ತು ಸಂಸ್ಕೃತಿಯ ಭಾಗವಾಗಿರುವ ಯೋಗವು ಆರೋಗ್ಯ ಮತ್ತು ಸಮಗ್ರ ಜೀವನದ ಪದ್ಧತಿಯಾಗಿದೆ. ಋಷಿಗಳು, ಮಹರ್ಷಿಗಳು, ಸಂತರು, ಯೋಗವನ್ನು ಪಾಲಿಸುತ್ತಾ ಎಲ್ಲರಿಗೂ ಮಾರ್ಗದರ್ಶಕರಾಗಿದ್ದಾರೆ. ಯೋಗವು ಸಕಾರಾತ್ಮಕ ಆರೋಗ್ಯವನ್ನು ನೀಡುವ ಜೊತೆಗೆ, ಸಕಾರಾತ್ಮಕ ನಡವಳಿಕೆಯನ್ನೂ ಬೆಳೆಸುತ್ತದೆ. ಯೋಗ … Continued

ದೆಹಲಿ ಮೆಟ್ರೊದಲ್ಲಿ ಮಂಗನ ಸವಾರಿ…! ಯಾರಿಗೂ ಹಾನಿಮಾಡದ ಕೋತಿ..ವಿಡಿಯೋ ವೈರಲ್‌

ನವದೆಹಲಿ: ದೆಹಲಿ ಮೆಟ್ರೊ ರೈಲಿನ ಬೋಗಿಯೊಳಗೆ ಕೋತಿಯೊಂದು ಶನಿವಾರ ಪ್ರಯಾಣ ಮಾಡಿ ಹೊರಬಂದ ನಂತರ ಸಾಮಾಜಿಕ ಮಾಧ್ಯಮದಲ್ಲಿ ಇದರ ವಿಡಿಯೋ ವೈರಲ್ ಆಗಿದೆ. ಪ್ರಯಾಣಿಕರ ಪಕ್ಕದ ಸೀಟಿನಲ್ಲಿ ಕುಳಿತುಕೊಂಡ ಕೋತಿ ಮೊದಲು ಗಾಡಿಯೊಳಗೆ ತಿರುಗಾಡುವುದನ್ನು ವಿಡಿಯೋ ತೋರಿಸುತ್ತದೆ. ದೆಹಲಿ ಮೆಟ್ರೊದ ನೀಲಿ ಮಾರ್ಗದ ‘ಯಮುನಾ ಬ್ಯಾಂಕ್ ಸ್ಟೇಷನ್’ ಎಂದು ಪ್ರಯಾಣಿಕರೊಬ್ಬರು ಹೇಳಿದ್ದು ವಿಡಿಯೋದಲ್ಲಿ ಕೇಳುತ್ತದೆ. ನಂತರ … Continued

ತಿರುಪತಿಯ ಟಿಟಿಡಿಯಲ್ಲಿ ಇನ್ನೂ ಹಾಗೆಯೇ ಉಳಿದ 49.7 ಕೋಟಿ ರೂ.ಮೊತ್ತದ ಅಮಾನ್ಯಗೊಂಡ ನೋಟುಗಳು..!

ತಿರುಪತಿ:ತಿರುಪತಿ: ತಿರುಮಲ ತಿರುಪತಿ ದೇವಸ್ತಾನಂ (ಟಿಟಿಡಿ)ಗೆ 49.7 ಕೋಟಿ ರೂ.ಗಳ ಮೌಲ್ಯದ ಅಮಾನ್ಯಗೊಂಡ (demonetised ) ನೋಟುಗಳ ವಿಲಕ್ಷಣ ಪರಿಸ್ಥಿತಿಯಿಂದ ಹೊರಬರಲು ಸಾಧ್ಯವಾಗುತ್ತಿಲ್ಲ, ಇದು 2016 ರಿಂದ ಟಿಟಿಡಿ ಬೊಕ್ಕಸದಲ್ಲಿ ಸಂಗ್ರಹವಾಗಿದೆ. ಟಿಟಿಡಿ ಅಧ್ಯಕ್ಷ ವೈ.ವಿ. ಸುಬ್ಬಾ ರೆಡ್ಡಿ ಅವರು ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಅವರನ್ನು ಈವರೆಗೆ ಸುಮಾರು ನಾಲ್ಕು ಬಾರಿ ಭೇಟಿ … Continued

ಕೋವಿಡ್ ಮೃತಪಟ್ಟವರಿಗೆ 4 ಲಕ್ಷ ರೂ. ಪರಿಹಾರ ಸಾಧ್ಯವಿಲ್ಲ, ಇದು ವಿಪತ್ತು ನಿಧಿ ಖಾಲಿ ಮಾಡುತ್ತದೆ: ಸುಪ್ರೀಂಕೋರ್ಟಿಗೆ ತಿಳಿಸಿದ ಕೇಂದ್ರ

ನವದೆಹಲಿ: ಕೋವಿಡ್ -19 ನಿಂದ ಮೃತಪಟ್ಟ ಎಲ್ಲರಿಗೂ 4 ಲಕ್ಷ ರೂ.ಗಳ ಪರಿಹಾರವನ್ನು ಪಾವತಿಸಲು ಸಾಧ್ಯವಿಲ್ಲ ಎಂದು ಕೇಂದ್ರವು ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ. ಕನಿಷ್ಠ ಪರಿಹಾರದ ಮಾನದಂಡಗಳು” ಮತ್ತು ಕೋವಿಡ್ -19 ಮೃತರಿಗೆ ಎಕ್ಸ್-ಗ್ರೇಶಿಯಾ ಪಾವತಿಯನ್ನು ಕೋರಿ ಸಲ್ಲಿಸಿದ್ದ ಪಿಐಎಲ್‌ ಗೆ ಪ್ರತಿಕ್ರಿಯಿಸಿ ಕೇಂದ್ರವು ಸುಪ್ರೀಂಕೋರ್ಟಿಗೆ ಅಫಿಡವಿಟ್ ಸಲ್ಲಿಸಿದೆ. ಕೋವಿಡ್ -19ರ ಸಂತ್ರಸ್ತರಿಗೆ 4 ಲಕ್ಷ … Continued

ಈವರೆಗಿನ ದಾಖಲೆಯ ಗರಿಷ್ಠಮಟ್ಟಕ್ಕೆ ಏರಿದ ತಲುಪಿದ ಪೆಟ್ರೋಲ್, ಡೀಸೆಲ್ ದರಗಳು…! ಪ್ರಮುಖ ನಗರಗಳಲ್ಲಿ ಇತ್ತೀಚಿನ ದರಗಳು

ನವದೆಹಲಿ: ಈ ತಿಂಗಳು 11ನೇ ಬಾರಿಗೆ ದರಗಳನ್ನು ಹೆಚ್ಚಿಸಿದ್ದರಿಂದ ಇಂಧನ ಬೆಲೆಗಳು ಭಾನುವಾರ ದಾಖಲೆಯ ಗರಿಷ್ಠ ಮಟ್ಟವನ್ನು ಮುಟ್ಟಿದೆ. ಪೆಟ್ರೋಲ್, ಡೀಸೆಲ್ ಬೆಲೆಗಳು ಈಗ ಸುಮಾರು 50 ದಿನಗಳಿಂದ ಏರುತ್ತಿದೆ. ಇಂದಿನ ಬೆಲೆ ಪರಿಷ್ಕರಣೆಯ ನಂತರ, ರಾಷ್ಟ್ರರಾಜಧಾನಿಯಲ್ಲಿ ಪೆಟ್ರೋಲ್ 29 ಪೈಸೆ ಏರಿಕೆಯಾದರೆ,ಡೀಸೆಲ್ 27 ಪೈಸೆ ಏರಿಕೆಯಾಗಿದೆ. ತೈಲ ಚಿಲ್ಲರೆ ವ್ಯಾಪಾರಿಗಳ ಬೆಲೆ ಅಧಿಸೂಚನೆಯ ಪ್ರಕಾರ, … Continued

ಭಾರತದಲ್ಲಿ 81 ದಿನಗಳಲ್ಲಿ ಕಡಿಮೆ ದೈನಂದಿನ ಕೊರೊನಾ ಸೋಂಕು ದಾಖಲು

ನವದೆಹಲಿ: ಕಳೆದ 24 ಗಂಟೆಗಳಲ್ಲಿಕೊರೊನಾ ವೈರಸ್ಸಿನ 58,419 ಹೊಸ ಪ್ರಕರಣಗಳನ್ನು ಭಾರತ ದಾಖಲಿಸಿದೆ, ಜೊತೆಗೆ ಿದೇ ಸಮಯದಲ್ಲಿ ಸೋಂಕಿನಿಂದ 1,576 ಸಾವುಗಳು ಸಂಭವಿಸಿವೆ. ಕೇಂದ್ರ ಆರೋಗ್ಯ ಸಚಿವಾಲಯ ಭಾನುವಾರ ಹಂಚಿಕೊಂಡ ಮಾಹಿತಿಯ ಪ್ರಕಾರ, ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ ಒಟ್ಟು 87,619 ಜನರು ಸೋಂಕಿನಿಂದ ಚೇತರಿಸಿಕೊಂಡಿದ್ದು, ಒಟ್ಟು ಚೇತರಿಕೆ 2,87,66,009 ಕ್ಕೆ ತಲುಪಿದೆ. ಭಾರತದಲ್ಲಿ ಒಟ್ಟು … Continued