ಅಶ್ವತ್ಥ ವೃಕ್ಷದ ಎಲೆಯಲ್ಲಿ ಅದ್ಭುತವಾಗಿ ಮೂಡಿದ ಜನರಲ್‌ ಬಿಪಿನ್ ರಾವತ್: ವಿಭಿನ್ನ ರೀತಿಯಲ್ಲಿ ಸೇನಾನಿಗೆ ಕಲಾತ್ಮಕ ನಮನ..ವೀಕ್ಷಿಸಿ

ನವದೆಹಲಿ: ಸೇನಾ ಸಿಬ್ಬಂದಿ ಮುಖ್ಯಸ್ಥ (ಸಿಡಿಎಸ್‌) ಹಾಗೂ ಇತರ ಹನ್ನ್ನೆರಡು ಜನ ಹೆಲಿಕಾಪ್ಟ್ರ್‌ ದುರಂತದಲ್ಲಿ ಮೃತಪಟ್ಟ ಹಿನ್ನೆಲೆಯಲ್ಲಿ ಇಡೀ ದೇಶದ ಜನರೀಗ ದುಃಖದಲ್ಲಿದ್ದಾರೆ. ಯಾರೂ ಊಹಿಸಿಕೊಳ್ಳಲಾರದ ದುರಂತ ಘಟನೆಯನ್ನು ಬಹುತೇಕರಿಗೆ ಇನ್ನೂ ಅರಗಿಸಿಕೊಳ್ಳಲಾಗುತ್ತಿಲ್ಲ. ದುರಂತಕ್ಕೆ ದೇಶವೇ ಮರುಗುತ್ತಿದೆ. ಈ ದುರಂತದಲ್ಲಿ ಮಡಿದವರಿಗೆ ಎಲ್ಲರೂ ನಮನ ಸಲ್ಲಿಸುತ್ತಿದ್ದಾರೆ. ಇಲ್ಲೊಬ್ಬರು ಕಲಾವಿದರು ವಿಶಿಷ್ಟವಾಗಿ ತಮ್ಮ ಅಪರೂಪದ ಕಲೆಯ ಮೂಲಕವೇ … Continued

ಮಗು ಎತ್ತಿಕೊಂಡಿದ್ದ ವ್ಯಕ್ತಿಗೆ ನಿರ್ದಯವಾಗಿ ಹೊಡೆದ ಪೊಲೀಸರು..! ಆಕ್ರೋಶದ ನಂತರ ಪೊಲೀಸ್ ಅಮಾನತು: ದೃಶ್ಯ ವಿಡಿಯೊದಲ್ಲಿ ಸೆರೆ

ಲಕ್ನೋ: ಉತ್ತರ ಪ್ರದೇಶದ ಕಾನ್ಪುರದ ದೇಹತ್‌ನಲ್ಲಿ ಗುರುವಾರ ತನ್ನ ಮಗುವನ್ನು ತೋಳಲ್ಲಿ ಎತ್ತಿಕೊಂಡಿದ್ದ ವ್ಯಕ್ತಿಯೊಬ್ಬನಿಗೆ ಪೊಲೀಸರು ಲಾಠಿಗಳಿಂದ ನಿರ್ದಯವಾಗಿ ಹೊಡೆಯುತ್ತಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್‌ ಆಗಿದ್ದು, ಇದಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಸಂವೇದನಾ ರಹಿತವಾಗಿ ವರ್ತಿಸಿದ ಪೋಲೀಸರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಲಾಠಿ ಬೀಸಿದ ಪೊಲೀಸರನ್ನು ಅಮಾನತುಗೊಳಿಸಲಾಗಿದೆ ಎಂದು ಉತ್ತರ ಪ್ರದೇಶ ಪೊಲೀಸ್ … Continued

ಬಿಡುಗಡೆಗೂ ಮುನ್ನವೇ ’83’ ಸಿನೆಮಾಕ್ಕೆ ಸಂಕಷ್ಟ: ನಿರ್ಮಾಪಕರ ವಿರುದ್ಧ ಮುಂಬೈ ನ್ಯಾಯಾಲಯದಲ್ಲಿ ವಂಚನೆ ದೂರು ದಾಖಲು

ಮುಂಬೈ: ಬಿಡುಗಡೆಗೆ ಮುನ್ನವೇ ರಣವೀರ ಸಿಂಗ್​ ನಟೆನೆಯ 83 ಸಿನಿಮಾ ಸಂಕಷ್ಟದಲ್ಲಿ ಸಿಲುಕಿದೆ. ಯುನೈಟೆಡ್ ಅರಬ್ ಎಮಿರೇಟ್ಸ್ ಮೂಲದ ಹಣಕಾಸು ಕಂಪನಿಯು ಮುಂಬರುವ ಬಾಲಿವುಡ್ ಚಲನಚಿತ್ರ “83” ನಿರ್ಮಾಪಕರ ವಿರುದ್ಧ ಇಲ್ಲಿನ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ವಂಚನೆ ದೂರು ದಾಖಲಿಸಿದೆ. ದೀಪಿಕಾ ಪಡುಕೋಣೆ, ಸಾಜಿದ್​ ನಾಡಿಯಾಡ್ವಾಲಾ, ಮತ್ತು ಕಬೀರ್​ ಖಾನ್ ಚಿತ್ರದ ನಿರ್ಮಾಪಕರಾಗಿ ಕೆಲಸ ಮಾಡಿದ್ದರು. ಪೈನಾನ್ಸ್ … Continued

ಇಂದು ಸಿಡಿಎಸ್ ಜನರಲ್ ಬಿಪಿನ್ ರಾವತ್ ಅಂತ್ಯಕ್ರಿಯೆ: ನೇಪಾಳ, ಶ್ರೀಲಂಕಾ, ಭೂತಾನ್‌ ದೇಶಗಳ ಸೇನಾಧಿಕಾರಿಗಳ ಉಪಸ್ಥಿತಿ

ನವದೆಹಲಿ: ಚೀಫ್ ಆಫ್ ಡಿಫೆನ್ಸ್ ಸ್ಟಾಫ್ ಜನರಲ್ ಬಿಪಿನ್ ರಾವತ್ ಮತ್ತು ಅವರ ಪತ್ನಿ ಡಾ ಮಧುಲಿಕಾ ರಾವತ್ ಅವರ ಅಂತ್ಯಕ್ರಿಯೆ ಇಂದು, ಡಿಸೆಂಬರ್ 10 ರಂದು ದೆಹಲಿಯಲ್ಲಿ ಪೂರ್ಣ ಮಿಲಿಟರಿ ಗೌರವಗಳೊಂದಿಗೆ ನಡೆಸಲಾಗುತ್ತದೆ. ಗುರುವಾರ ಸಂಜೆ ತಮಿಳುನಾಡಿನಿಂದ ಅವರ ಮೃತದೇಹಗಳನ್ನು ತರಲಾಯಿತು. ಸಿಡಿಎಸ್ ಜನರಲ್ ಬಿಪಿನ್ ರಾವತ್, ಅವರ ಪತ್ನಿ ಮತ್ತು ಇತರ 11 … Continued

ಭಾರತದಲ್ಲಿ 8,503 ಹೊಸ ಕೋವಿಡ್ -19 ಪ್ರಕರಣಗಳು ದಾಖಲು

ನವದೆಹಲಿ: ಶುಕ್ರವಾರ ನವೀಕರಿಸಿದ ಕೇಂದ್ರ ಆರೋಗ್ಯ ಸಚಿವಾಲಯದ ಮಾಹಿತಿಯ ಪ್ರಕಾರ, ಒಂದು ದಿನದಲ್ಲಿ 8,503 ಜನರು ಕೊರೊನಾ ವೈರಸ್‌ಗೆ ಧನಾತ್ಮಕ ಪರೀಕ್ಷೆ ಮಾಡಿದ್ದಾರೆ. ಇದರೊಂದಿಗೆ ಭಾರತದ ಕೋವಿಡ್‌-19 ಸಂಖ್ಯೆ 3,46,74,744 ಕ್ಕೆ ಏರಿದೆ, ಆದರೆ ಸಕ್ರಿಯ ಪ್ರಕರಣಗಳ ಸಂಖ್ಯೆ 94,943 ಕ್ಕೆ ಏರಿದೆ. ಬೆಳಿಗ್ಗೆ 8 ಗಂಟೆಗೆ ನವೀಕರಿಸಿದ ಮಾಹಿತಿಯ ಪ್ರಕಾರ, 624 ಹೊಸ ಸಾವುನೋವುಗಳ … Continued

ಬಾಲ್ಯದ ಗೆಳತಿಯೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಲಾಲು ಕಿರಿಯಪುತ್ರ ತೇಜಸ್ವಿ ಯಾದವ್

ನವದೆಹಲಿ: ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರ ಎರಡನೇ ಪುತ್ರ, ಬಿಹಾರ ವಿಧಾನಸಭೆ ಪ್ರತಿಪಕ್ಷ ನಾಯಕ ತೇಜಸ್ವಿ ಯಾದವ್ ತಮ್ಮ ಬಹುದಿನಗಳ ಕಾಲೇಜ್ ಗೆಳತಿ ಜೊತೆ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ. ವರದಿಗಳ ಪ್ರಕಾರ, ತೇಜಸ್ವಿ ಯಾದವ್ ಹರಿಯಾಣ ಮೂಲದ ತಮ್ಮ ಬಾಲ್ಯದ ಗೆಳತಿ  ರೇಚೆಲ್  ಐರಿಸ್‌  ಅವರನ್ನು ಗುರುವಾರ ನವದೆಹಲಿಯಲ್ಲಿ ವಿವಾಹವಾಗಿದ್ದಾರೆ. ರೇಚಲ್‌ ಐರಿಸ್‌ … Continued

ಪ್ರಧಾನಿ ಮೋದಿ, ರಕ್ಷಣಾ ಸಚಿವ ರಾಜನಾಥ, 3 ಸೇನಾ ಮುಖ್ಯಸ್ಥರಿಂದ ಜನರಲ್ ಬಿಪಿನ್ ರಾವತ್, ಇತರ 12 ಜನರಿಗೆ ಅಂತಿಮ ಗೌರವ..ವೀಕ್ಷಿಸಿ

ನವದೆಹಲಿ: ಸೇನಾ ಸಿಬ್ಬಂದಿ ಮುಖ್ಯಸ್ಥ (ಸಿಡಿಎಸ್) ಜನರಲ್ ಬಿಪಿನ್ ರಾವತ್, ಅವರ ಪತ್ನಿ ಮಧುಲಿಕಾ ರಾವತ್ ಮತ್ತು ಇತರ 11 ಮಂದಿಯ ಪಾರ್ಥಿವ ಶರೀರವನ್ನು ಭಾರತೀಯ ವಾಯುಪಡೆಯ ವಿಶೇಷ ವಿಮಾನದ ಮೂಲಕ ದೆಹಲಿಗೆ ತರಲಾಯಿತು. ಪ್ರಧಾನಿ ನರೇಂದ್ರ ಮೋದಿ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಎನ್‌ಎಸ್‌ಎ ಅಜಿತ್ ದೋವಲ್ ಮತ್ತು ಮೂವರು ಸೇನಾ ಮುಖ್ಯಸ್ಥರು ಸಿಡಿಎಸ್ … Continued

ಸೇನಾ ಹೆಲಿಕಾಪ್ಟರ್ ದುರಂತ :ಮೃತ ಕೇರಳದ ವಾಯುಪಡೆ ಅಧಿಕಾರಿ ತಂದೆಗೆ ಮಗನ ಸಾವಿನ ಬಗ್ಗೆ ತಿಳಿಸಿಲ್ಲ..ಯಾಕೆಂದ್ರೆ ಆಸ್ಪತ್ರೆಯಲ್ಲಿ ವೆಂಟಿಲೇಟರ್ ಮೇಲಿದ್ದಾರೆ

ತ್ರಿಶೂರ್: ಕೂನೂರಿನಲ್ಲಿ ನಡೆದ ಹೆಲಿಕಾಪ್ಟರ್ ಅಪಘಾತದಲ್ಲಿ ರಕ್ಷಣಾ ಸಿಬ್ಬಂದಿ (ಸಿಡಿಎಸ್) ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಸೇರಿದಂತೆ 13 ಜನರ ಪೈಕಿ ಕಿರಿಯ ವಾರಂಟ್ ಅಧಿಕಾರಿ (ಜೆಡಬ್ಲ್ಯೂಒ) ಪ್ರದೀಪ್ ಅರಕ್ಕಲ್ ( 37 ವರ್ಷ) ಅವರ ಮೃತದೇಹಕ್ಕಾಗಿ ಅವರ ಶೋಕ ಗ್ರಾಮ ಕಾಯುತ್ತಿದೆ. ಆದರೆ ಸೇನಾಧಿಕಾರಿಯ ತಂದೆಗೆ ತನ್ನ ಮಗನ ಸಾವಿನ ಬಗ್ಗೆ ಇನ್ನೂ ತಿಳಿದಿಲ್ಲ … Continued

ಜನರಲ್ ರಾವತ್‍ ಸಾವನ್ನು ಸಾಮಾಜಿಕ ಜಾಲತಾಣದಲ್ಲಿ ಸಂಭ್ರಮಿಸಿದ ಯುವಕನ ಬಂಧನ

ಜೈಪುರ: ಡಿಸೆಂಬರ್ 8 ರಂದು ಸಂಭವಿಸಿದ ಹೆಲಿಕಾಪ್ಟರ್ ಪತನದ ದುರಂತದಲ್ಲಿ ರಕ್ಷಣಾ ಸಿಬ್ಬಂದಿಯ ಮುಖ್ಯಸ್ಥ (ಸಿಡಿಎಸ್) ಸಾವಿಗೆ ದೇಶವೇ ಶೋಕಿಸಿತ್ತಿದೆ. ಆದರೆ ಸಾಮಾಜಿಕ ಮಾಧ್ಯಮದಲ್ಲಿ ಅವರ ಸಾವಿನ ಸಂಭ್ರಮಾಚರಣೆ ಮಾಡಿದ ಆರೋಪದ ಮೇರೆಗೆ ರಾಜಸ್ತಾನದ ಯುವಕ 21 ವರ್ಷದ ಜವ್ವಾದ್ ಖಾನ್ ಎಂಬಾತನನ್ನು ರಾಜಸ್ಥಾನದ ಟೋಂಕ್ ಪೊಲೀಸರು ಬಂಧಿಸಿದ್ದಾರೆ. ಜವ್ವಾದ್ ಖಾನ್ ಜನರಲ್ ರಾವತ್ ಅವರ … Continued

ಎಲ್ಗಾರ್ ಪರಿಷತ್ ಪ್ರಕರಣ: 3 ವರ್ಷಗಳ ನಂತರ ಜೈಲಿನಿಂದ ಬಿಡುಗಡೆಯಾದ ಸುಧಾ ಭಾರದ್ವಾಜ

ಮುಂಬೈ: ಎಲ್ಗಾರ್ ಪರಿಷತ್ ಪ್ರಕರಣದಲ್ಲಿ ಬಂಧಿತ 16 ಜನರಲ್ಲಿ ಒಬ್ಬರಾದ ವಕೀಲೆ, ಸಾಮಾಜಿಕ ಹೋರಾಟಗಾರ್ತಿ ಸುಧಾ ಭಾರದ್ವಾಜ ಅವರು ಮೂರು ವರ್ಷಗಳ ಬಳಿಕ ಇಂದು, ಗುರುವಾರ ಬೆಳಿಗ್ಗೆ ಜೈಲಿನಿಂದ ಬಿಡುಗಡೆಯಾಗಿದ್ದಾರೆ. ಡಿಸೆಂಬರ್ 1 ರಂದು ಬಾಂಬೆ ಹೈಕೋರ್ಟ್ ನೀಡಿದ್ದ ಡೀಫಾಲ್ಟ್ ಜಾಮೀನಿಗೆ ತಡೆ ನೀಡುವಂತೆ ರಾಷ್ಟ್ರೀಯ ತನಿಖಾ ಸಂಸ್ಥೆಯ ಮನವಿಯನ್ನು ಸುಪ್ರೀಂಕೋರ್ಟ್ ಎರಡು ದಿನಗಳ ಹಿಂದೆ … Continued