ತಿರುಪತಿಯಲ್ಲಿ ಭಾರೀ ಮಳೆ: ಧುಮ್ಮಿಕ್ಕಿದ ಮಳೆ ನೀರು, ಹಲವು ಪ್ರದೇಶಗಳು ಜಲಾವೃತ, ಕೊಚ್ಚಿಹೋದ ವಾಹನಗಳು…! ವೀಕ್ಷಿಸಿ

ಹೈದರಾಬಾದ್: ಗುರುವಾರ ಚಂಡಮಾರುತದ ಪರಿಣಾಮದಿಂದ ತಿರುಪತಿಯಲ್ಲಿ ಭಾರೀ ಪ್ರವಾಹ ಉಂಟಾಗಿದೆ. ಕಳೆದೆರಡು ವಾರಗಳಲ್ಲಿ ತಮಿಳುನಾಡು ಮತ್ತು ಆಂಧ್ರಪ್ರದೇಶ ರಾಜ್ಯಗಳಲ್ಲಿ ಭಾರಿ ಮಳೆಯಾಗುತ್ತಿದ್ದು, ಹೆಚ್ಚಿನ ಪ್ರಮುಖ ಹೆದ್ದಾರಿಗಳು ಮತ್ತು ರಸ್ತೆಗಳು ಜಲಾವೃತಗೊಂಡಿವೆ. ಗುರುವಾರದಂದು ರಸ್ತೆಗಳಲ್ಲಿ ನೀರು ನಿಂತಿದ್ದರಿಂದ ಪ್ರಯಾಣಿಕರು ಮತ್ತು ಜನರು ತೊಂದರೆ ಅನುಭವಿಸಿದರು. ನೀರಿನ ಮೂಲ ಸಂಚಾರವನ್ನು ತಡೆಯುವುದರಿಂದ ತಗ್ಗು ಪ್ರದೇಶಗಳಲ್ಲಿನ ದೈನಂದಿನ ಜೀವನವು ಸಂಪೂರ್ಣ … Continued

ಇಬ್ಬರು ಪೊಲೀಸ್‌ ಅಧಿಕಾರಿಗಳಿಂದ ನ್ಯಾಯಾಧೀಶರ ಮೇಲೆ ಹಲ್ಲೆ, ಬಂದೂಕು ತೋರಿಸಿ ಬೆದರಿಕೆ..! : ಬಂಧನ

ಮಧುಬನಿ(ಬಿಹಾರ): ಬಿಹಾರದಲ್ಲಿ ನ್ಯಾಯಾಧೀಶರ ಮೇಲೆ ಹಲ್ಲೆ ನಡೆಸಿದ ಇಬ್ಬರು ಪೊಲೀಸ್ ಅಧಿಕಾರಿಗಳನ್ನು ಇಂದು (ಗುರುವಾರ) ಬಂಧಿಸಲಾಗಿದೆ. ವಿಚಾರಣೆಯ ಮಧ್ಯದಲ್ಲಿ ನ್ಯಾಯಾಲಯದ ಕೊಠಡಿಗೆ ಪ್ರವೇಶಿಸಿದ ಅಧಿಕಾರಿಗಳು ಮಧುಬನಿ ಜಿಲ್ಲೆಯ ಝಂಜರ್‌ಪುರದಲ್ಲಿ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ (ಎಡಿಜೆ) ಅವಿನಾಶ್ ಕುಮಾರ್ ಅವರನ್ನು ಥಳಿಸಿದ್ದಾರೆ. ಅವರತ್ತ ಬಂದೂಕು ತೋರಿಸಿದ್ದಾರೆ ಎಂದು ವರದಿಯಾಗಿದೆ. ನ್ಯಾಯಾಧೀಶರು ಸುರಕ್ಷಿತವಾಗಿದ್ದಾರೆ. ಆದರೆ … Continued

ಪ್ರಕಾಶ್ ಪಡುಕೋಣೆಗೆ ವಿಶ್ವ ಬ್ಯಾಡ್ಮಿಂಟನ್ ಫೆಡರೇಶನ್ ಜೀವಮಾನ ಸಾಧನೆ ಪ್ರಶಸ್ತಿ

ನವದೆಹಲಿ:: ಭಾರತದ ಶ್ರೇಷ್ಠ ಬ್ಯಾಡ್ಮಿಂಟನ್ ಆಟಗಾರ ಪ್ರಕಾಶ್ ಪಡುಕೋಣೆ ಅವರನ್ನು ವಿಶ್ವ ಬ್ಯಾಡ್ಮಿಂಟನ್ ಫೆಡರೇಶನ್ ಈ ವರ್ಷದ ಜೀವಮಾನ ಸಾಧನೆ ಪ್ರಶಸ್ತಿಗೆ ಆಯ್ಕೆ ಮಾಡಿದೆ. ಪ್ರಶಸ್ತಿ ಆಯೋಗದ ಶಿಫಾರಸಿನ ಮೇರೆಗೆ ಬಿಡಬ್ಲ್ಯುಎಫ್ ಅವರನ್ನು ಆಯ್ಕೆ ಮಾಡಿದೆ. ಬ್ಯಾಡ್ಮಿಂಟನ್ ಅಸೋಸಿಯೇಷನ್ ​​ಆಫ್ ಇಂಡಿಯಾ ಅವರ ಹೆಸರನ್ನು ಪ್ರಶಸ್ತಿಗೆ ಕಳುಹಿಸಿತ್ತು. ವಿಶ್ವದ ಮಾಜಿ ನಂಬರ್ ಒನ್ ಆಟಗಾರ ಮತ್ತು … Continued

ಸಾಮಾಜಿಕ ಜಾಲತಾಣದಲ್ಲಿ ಬಿರುಗಾಳಿ ಎಬ್ಬಿಸಿದ ಮೂರು ಕಪ್ಪು ಸರ್ಪಗಳ ಫೋಟೋಗಳು..!

ನವದೆಹಲಿ: ಡಿಜಿಟಲ್ ಕ್ರಾಂತಿಯ ನಂತರ ಪ್ರಾಣಿ ಪ್ರಪಂಚದ ವಿಡಿಯೋಗಳು, ಫೋಟೋಗಳು ಕೂಡ ಈಗ ಜನಮಾನಸದಲ್ಲಿ ಭಾರೀ ಸಂವೇದನೆಯ ವಿಷಯವಾಗಿದೆ, ಇಂಥದ್ದೇ ಸಂವೇದನೆ ಉಂಟು ಮಾಡುವ ಕಪ್ಪು ಬಣ್ಣದ ಮೂರು ಹಾವುಗಳ ಈ ಫೋಟೋ ಅಂತರ್ಜಾಲದಲ್ಲಿ ಭಾರೀ ವೈರಲ್‌ ಆಗಿದೆ. ದು ಮಹಾರಾಷ್ಟ್ರದಲ್ಲಿ ಕಂಡುಬಂದಿದೆ ಎಂದು ಹೇಳಲಾಗಿದ್ದು. ಮೂರು ಕಪ್ಪುಬಣ್ಣದ ಸರ್ಪಗಳ ಚಿತ್ರವೊಂದು ನೆಟ್ಟಲ್ಲಿ ಭಾರೀ ಸದ್ದು … Continued

ಚರ್ಮದಿಂದ ಚರ್ಮ ಸ್ಪರ್ಶಿಸಿದ್ದರೆ ಮಾತ್ರ ಲೈಂಗಿಕ ದೌರ್ಜನ್ಯ ಎನ್ನುವ ಬಾಂಬೆ ಹೈಕೋರ್ಟ್ ತೀರ್ಪು ರದ್ದುಗೊಳಿಸಿದ ಸುಪ್ರೀಂಕೋರ್ಟ್‌

ನವದೆಹಲಿ: ಬಟ್ಟೆ ತೆಗೆಯದೆ ಮಕ್ಕಳ ಖಾಸಗಿ ಅಂಗ ಸ್ಪರ್ಶಿಸಿದರೆ ಅದು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯಿದೆಯ ಸೆಕ್ಷನ್ 7 ರ ಅಡಿಯಲ್ಲಿ ʼಲೈಂಗಿಕ ದೌರ್ಜನ್ಯʼ ಆಗುವುದಿಲ್ಲ ಎಂದು ಬಾಂಬೆ ಹೈಕೋರ್ಟ್‌ ಕೆಲ ತಿಂಗಳುಗಳ ಹಿಂದೆ ನೀಡಿದ್ದ ವಿವಾದಾತ್ಮಕ ತೀರ್ಪನ್ನು ಸುಪ್ರೀಂಕೋರ್ಟ್‌ ಗುರುವಾರ ರದ್ದುಗೊಳಿಸಿದೆ. ಪೊಕ್ಸೊ ಕಾಯ್ದೆಯಡಿ ‘ಲೈಂಗಿಕ ಆಕ್ರಮಣ’ದ ಅಪರಾಧ ನಿರ್ಧರಿಸುವ ಪ್ರಮುಖ … Continued

ಈ ರಾಜ್ಯದಲ್ಲಿ ಕೋವಿಡ್‌ ಲಸಿಕೆ ಹಾಕದವರಿಗೆ ಮುಂದಿನ ವರ್ಷದಿಂದ ರೇಶನ್‌ ಬಂದ್‌..!.!

ಭೋಪಾಲ್‌ : ಕೊರೊನಾ ವೈರಸ್‌ ಸೋಂಕಿನ ವಿರುದ್ಧ ಲಸಿಕೆ ಅಭಿಯಾನವನ್ನು ದೇಶಾದ್ಯಂತ ನಡೆಸಲಾಗುತ್ತಿದೆ. ಆದರೆ ಬಹುತೇಕ ರಾಜ್ಯಗಳಲ್ಲಿನ ಜನರು ಲಸಿಕೆ ಪಡೆಯಲು ಹಿಂದೇಟು ಹಾಕುತ್ತಿದ್ದಾರೆ. ಅದರ ವೇಗ ಹೆಚ್ಚಿಸಲು ಸರ್ಕಾರಗಳು ಕಸರತ್ತು ನಡೆಸುತ್ತಿದ್ದು ಈಗ ಮಧ್ಯಪ್ರದೇಶ ರಾಜ್ಯ ಕೋವಿಡ್‌ ಲಸಿಕೆ ಪಡೆಯದವರಿಗೆ ಪಡಿತರ ಸಾಮಗ್ರಿ ನೀಡದಿರಲು ನಿರ್ಧರಿಸಿದೆ. ಮಧ್ಯಪ್ರದೇಶದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯು … Continued

ಕ್ರಿಪ್ಟೋ ಕರೆನ್ಸಿ ತಪ್ಪು ಕೈಗಳಿಗೆ ಹೋಗದಂತೆ ಖಚಿತ ಪಡಿಸಿಕೊಳ್ಳಬೇಕು: ಜಾಗತಿಕ ನಾಯಕರಿಗೆ ಕರೆ ನೀಡಿದ ಪ್ರಧಾನಿ ಮೋದಿ

ನವದೆಹಲಿ: ದೇಶಾದ್ಯಂತ ಭಾರೀ ಸದ್ದು ಮಾಡುತ್ತಿರುವ ಬಿಟ್ ಕಾಯಿನ್, ಕ್ರಿಪ್ಟೋ ಕರೆನ್ಸಿಯ ಬಗ್ಗೆ ಮೌನ ಮುರಿದಿರುವ ಪ್ರಧಾನಿ ನರೇಂದ್ರ ಮೋದಿ ಡಿಜಿಟಲ್ ಕರೆನ್ಸಿಯಲ್ಲಿ ಲಕ್ಷಾಂತರ ಭಾರತೀಯರು ವಿದೇಶಗಳಲ್ಲಿ ಮಾಡಿದ ಹೂಡಿಕೆ ನಿರ್ವಹಿಸಲು ಮತ್ತು ಮೇಲ್ವಿಚಾರಣೆಗೆ ಅಗತ್ಯವಿರುವ ನಿಯಂತ್ರಣದ ಚೌಕಟ್ಟು ರೂಪಿಸುವ ಸಂಬಂಧ ಗಂಭೀರವಾಗಿ ಪರಿಗಣಿಸಲಾಗುತ್ತಿದೆ. ಯಾಕೆಂದರೆ ಕ್ರಿಪ್ಟೋ ಕರೆನ್ಸಿ ತಪ್ಪು ಕೈಗಳಿಗೆ ಹೋಗದಂತೆ ಖಚಿತಪಡಿಸಿಕೊಳ್ಳ ಬೇಕಿದೆ … Continued

ಬಾಡಿಗೆ ತಾಯ್ತನದ ಮೂಲಕ ಅವಳಿ ಮಕ್ಕಳಿಗೆ ತಾಯಿಯಾದ ಬಾಲಿವುಡ್‌ ನಟಿ ಪ್ರೀತಿ ಜಿಂಟಾ

ಮುಂಬೈ: ಬಾಲಿವುಡ್ ನಟಿ ಪ್ರೀತಿ ಜಿಂಟಾ ತಾಯಿಯಾಗಿದ್ದು, ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಈ ಸಿಹಿ ಸುದ್ದಿ ಹಂಚಿಕೊಂಡಿದ್ದಾರೆ. ಅವರು ಬಾಡಿಗೆ ತಾಯ್ತನದ (Surrogacy) ಮೂಲಕ ಪ್ರೀತಿ ಜಿಂಟಾ ಹಾಗೂ  ಪತಿ ಜಿನ್ ಗುಡ್​ಎನಾಫ್ ದಂಪತಿ ಅವಳಿ- ಜವಳಿ ಮಕ್ಕಳಿಗೆ ಪೋಷಕರಾಗಿದ್ದಾರೆ. ಮಕ್ಕಳಿಗೆ ಜೈ ಜಿಂಟಾ ಗುಡ್​​ಎನಾಫ್ಹಾಗೂ ಜಿಯಾ ಜಿಂಟಾ ಗುಡ್​​ಎನಾಫ್ ಎಂದು ನಾಮಕರಣ ಮಾಡಲಾಗಿದೆ ಎಂದು … Continued

ಹಸುವಿನ ಸಗಣಿ ತಿನ್ನುವ ಹರ್ಯಾಣದ ತಜ್ಞ ವೈದ್ಯ..ಆರೋಗ್ಯಕ್ಕಾಗಿ ತಿಂತೇನೆ ಅಂತಾರೆ….ವೀಕ್ಷಿಸಿ

ಹಸುವಿನ ಸಗಣಿ ಮತ್ತು ಮೂತ್ರವು ಹಲವಾರು ರೋಗಗಳನ್ನು ಗುಣಪಡಿಸುವ ಶಕ್ತಿಹೊಂದಿದೆ ಎಂದು ಭಾರತೀಯರು ನಂಬಿದ್ದಾರೆ. ಹಸುವಿನ ಸಗಣಿ ಮತ್ತು ಮೂತ್ರದ ಬಗೆಗಿನ ಅದ್ಭುತ ಪ್ರಯೋಜನಗಳ ಕುರಿತು ಸಾಕಷ್ಟು ವಿಡಿಯೊಗಳು ಆನ್‌ಲೈನ್‌ನಲ್ಲಿ ಸಿಗುತ್ತವೆ. ಈಗ ವೈದ್ಯರೊಬ್ಬರು ಹಸುವಿನ ಸಗಣಿ ತಿನ್ನುತ್ತ ಅದು ಮನಸ್ಸು, ದೇಹ ಮತ್ತು ಆತ್ಮವನ್ನು ಶುದ್ಧಗೊಳಿಸುತ್ತದೆ ಎಂದು ಹೇಳಿರುವ ವಿಡಿಯೋ ವೈರಲ್ ಆಗಿದೆ. ವಿಡಿಯೊದಲ್ಲಿ, … Continued

ಭಾರತದಲ್ಲಿ 11,919 ಹೊಸ ಕೋವಿಡ್-19 ಪ್ರಕರಣಗಳು ದಾಖಲು

ನವದೆಹಲಿ: ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 11,919 ಹೊಸ ಪ್ರಕರಣಗಳು ದಾಖಲಾಗಿದೆ. 11,242 ಜನರು ಸೋಂಕಿನಿಂದ ಚೇತರಿಸಿಕೊಂಡಿದ್ದಾಋೆ ಹಾಗೂ 470 ಸಾವುಗಳು ವರದಿಯಾಗಿವೆ. ಕೇಂದ್ರ ಆರೋಗ್ಯ ಸಚಿವಾಲಯದ ಪ್ರಕಾರ, ಸಕ್ರಿಯ ಪ್ರಕರಣ 1,28,762ಕ್ಕೆ ಈಗ ಏರಿದೆ. ಕೇರಳದಲ್ಲಿ 6,849 ಹೊಸ ಪ್ರಕರಣಗಳು, 6,046 ಚೇತರಿಕೆ ಮತ್ತು 61 ಸಾವುಗಳು ವರದಿಯಾಗಿವೆ. 24 ಗಂಟೆಗಳ ಅವಧಿಯಲ್ಲಿ ಸಕ್ರಿಯ … Continued