ಇಂದು ಸೂರತ್‌, ನಾಳೆ ಮುಂಬೈ:ಎಎಪಿ

ಆಮ್ ಆದ್ಮಿ ಪಕ್ಷವು ಗುಜರಾತ್‌ನಲ್ಲಿ ಚೊಚ್ಚಲ ಪ್ರವೇಶ ಮಾಡಿ ಸೂರತ್ ಮುನ್ಸಿಪಲ್ ಕಾರ್ಪೊರೇಶನ್ ಚುನಾವಣೆಯಲ್ಲಿ 27 ಸ್ಥಾನಗಳನ್ನು ಗೆದ್ದುಕೊಂಡಿದ್ದು, ಗುಜರಾತ್ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಇದು ಪಕ್ಷದ ಮೊದಲ ಪ್ರಯತ್ನವಾಗಿದೆ. ಎಎಪಿ ವಕ್ತಾರ ಪ್ರೀತಿ ಶರ್ಮಾ ಮೆನನ್, “ಗುಜರಾತ್ ಜನರಿಗೆ ಮತ್ತು ನಮ್ಮ ಸಹೋದ್ಯೋಗಿಗಳಿಗೆ , ಅಷ್ಟು ಶ್ರಮವಹಿಸಿ ‘ಶುದ್ಧ ರಾಜಕೀಯ’ ಭಾರತದಾದ್ಯಂತ ಸಾಧ್ಯ ಎಂದು … Continued

ದೆಹಲಿ ಕೆಂಪುಕೋಟೆ ಹಿಂಸಾಚಾರ: ಮತ್ತಿಬ್ಬರ ಬಂಧನ

ನವ ದೆಹಲಿ: ಗಣರಾಜ್ಯೋತ್ಸವ ದಿನದಂದು ದೆಹಲಿಯ ಕೆಂಪು ಕೋಟೆ ಪ್ರದೇಶದಲ್ಲಿ ನಡೆಸಿದ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸರು ಮಂಗಳವಾರ ಜಮ್ಮು ನಗರದಲ್ಲಿ ಒಬ್ಬ ರೈತ ಮುಖಂಡ ಸೇರಿದಂತೆ ಇಬ್ಬರನ್ನು ಬಂಧಿಸಿದ್ದಾರೆ. ಬಂಧಿತರು ಜಮ್ಮು ನಗರದ ಛಾತಾ ಪ್ರದೇಶದ ನಿವಾಸಿ ಜಮ್ಮು ಮತ್ತು ಕಾಶ್ಮೀರದ ಯುನೈಟೆಡ್ ಕಿಸಾನ್ ಫ್ರಂಟ್ ಅಧ್ಯಕ್ಷ ಮೊಹಿಂದರ್ ಸಿಂಗ್ (45) ಹಾಗೂ ಗೊಲೆ … Continued

ಜನ ಬೀದಿಗೆ ಬಂದ್ರೆ ಸರ್ಕಾರಗಳೇ ಬದ್ಲಾಗಿವೆ, ಇನ್ನು ಕಾಯ್ದೆ ಯಾವ ಲೆಕ್ಕ

ಹರಿಯಾಣ: ಜನರು ಬೀದಿಗೆ ಬಂದರೆ ಸರಕಾರಗಳೇ ಬದಲಾಗಿವೆ, ಇನ್ನು ಕಾಯ್ದೆಗಳು ಯಾವ ಲೆಕ್ಕ ಎಂದು ರೈತ ಮುಖಂಡ ರಾಕೇಶ್‌ ಟಿಕಾಯತ್‌ ಹೇಳಿದ್ದಾರೆ. ಅವರು ಸೋನಿಪತ್‌ ಜಿಲ್ಲೆಯಲ್ಲಿ ನಡೆದ ಕಿಸಾನ್‌ ಮಹಾಪಂಚಾಯತ್‌ನಲ್ಲಿ ಮಾತನಾಡಿ, ಜನರನ್ನು ಸೇರಿಸಿದರೆ ಕಾಯ್ದೆಗಳನ್ನು ಹಿಂದಕ್ಕೆ ಪಡೆಯಲಾಗುವುದಿಲ್ಲ ಎಂದು ಕೃಷಿ ಸಚಿವರು ಹೇಳಿದ್ದಾರೆ. ಜನರು ಬೀದಿಗೆ ಬಂದರೆ ಸರಕಾರಗಳೇ ಬದಲಾಗುತ್ತವೆ ಎಂಬುದನ್ನು ಸಚಿವರು ಮರೆಯಬಾರದು … Continued

ಕಬ್ಬಿಣ ಅದಿರು ಗಣಿ ಪ್ರಕರಣದಲ್ಲಿ ವರವರರಾವ್‌‌ಗೆ ಜಾಮೀನು

ನಾಗಪುರ: ಸೂರಜ್‌ಗರ ಕಬ್ಬಿಣ ಅದಿರು ಗಣಿ ಪ್ರಕರಣದಲ್ಲಿ ಸಾಮಾಜಿಕ ಕಾರ್ಯಕರ್ತ ವರವರರಾವ್‌ಗೆ ಬಾಂಬೆ ಉಚ್ಚ ನ್ಯಾಯಾಲಯದ ನಾಗಪುರ ಪೀಠ ಜಾಮೀನು ನೀಡಿದೆ. ೮೨ ವರ್ಷದ ವರವರರಾವ್‌ ಹಾಗೂ ನ್ಯಾಯವಾದಿ ಸುರೇಂದ್ರ ಗದ್ಲಿಂಗ್‌ ಗಡಚಿರೋಲಿ ಠಾಣೆ ಪೊಲೀಸರು ೨೦೧೯ರ ಫೆಬ್ರವರಿಯಲ್ಲಿ ಬಂಧಿಸಿದ್ದರು. ನ್ಯಾಯಮೂರ್ತಿ ಸ್ವಪ್ನಾ ಜೋಶಿ ಜಾಮೀನು ನೀಡಿದರು. ವರವರರಾವ್‌ ವಿವಿಧ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದು, ವೈದ್ಯಕೀಯ … Continued

ದಿಶಾ ರವಿಗೆ ಜಾಮೀನು ನೀಡುವಾಗ ಋಗ್ವೇದ ಉಲ್ಲೇಖಿಸಿದ ನ್ಯಾಯಾಧೀಶರು

ನವ ದೆಹಲಿ:  ಹವಾಮಾನ ಕಾರ್ಯಕರ್ತೆ ದಿಶಾ ರವಿ ಅವರಿಗೆ ಮಂಗಳವಾರ ಜಾಮೀನು ನೀಡಿದ ದೆಹಲಿ ನ್ಯಾಯಾಲಯದ ನ್ಯಾಯಾಧೀಶರು ಋಗ್ವೇದವನ್ನು ಉಲ್ಲೇಖಿಸಿದ್ದಾರೆ. ನಮ್ಮ 5000 ವರ್ಷಗಳಷ್ಟು ಹಳೆಯದಾದ ಈ ನಾಗರಿಕತೆಯು ವೈವಿಧ್ಯಮಯ ಭಾಗಗಳಿಂದ ಬಂದ ವಿಚಾರಗಳಿಗೆ ಎಂದಿಗೂ ಹಿಂಜರಿಯಲಿಲ್ಲ. ನಮ್ಮ ರಾಷ್ಟ್ರ ನಿರ್ಮಾತೃರು ನಮ್ಮ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು, ಉಲ್ಲಂಘಿಸಲಾಗದ ಮೂಲಭೂತ ಹಕ್ಕು ಎಂದು ಗುರುತಿಸುವ ಮೂಲಕ ಅಭಿಪ್ರಾಯದ … Continued

ಪೆಟ್ರೋಲ್‌ ದರ ಹೆಚ್ಚಳ ಖಂಡಿಸಿ ಒಂಟೆ ಸವಾರಿ ಮಾಡಿದ ಕಾಂಗ್ರೆಸ್‌ ಮುಖಂಡ

ಇಂಧನ ಬೆಲೆ ಹೆಚ್ಚಳ ಖಂಡಿಸಿ ಆಂಧ್ರಪ್ರದೇಶದ ಕಾಂಗ್ರೆಸ್‌ ಮುಖಂಡ ಹಾಗೂ ಮಾಜಿ ಸಂಸದ ಜಿ.ವಿ.ಹರ್ಷಕುಮಾರ ರಾಜಮಂದ್ರಿ ತಮ್ಮ ನಿವಾಸದಿಂದ ರಾಜೀವ ಗಾಂಧಿ ಶಿಕ್ಷಣ ಸಂಸ್ಥೆ ವರೆಗೆ ಒಂಟೆ ಸವಾರಿ ಮಾಡುವ ಮೂಲಕ ಪ್ರತಿಭಟಿಸಿದರು ಕಾಂಗ್ರೆಸ್‌ ಮುಖ್ಯಸ್ಥೆ ಸೋನಿಯಾ ಗಾಂಧಿ ಅಳಿಯ ರಾಬರ್ಟ್‌ ವಾಧ್ರಾ ಬೈಸಿಕಲ್‌ ಸವಾರಿ ಮಾಡಿ ಪೆಟ್ರೋಲ್‌ ದರ ಹೆಚ್ಚಳ ಖಂಡಿಸಿದ ಮರುದಿನ ಜಿ.ವಿ.ಹರ್ಷಕುಮಾರ … Continued

ಹಿಂದೂ ಮುಖಂಡರ ಹತ್ಯೆ ಸಂಚು:ಇಬ್ಬರ ವಿರುದ್ಧ ಎನ್‌ಐಎ ದೋಷಾರೋಪ ಪಟ್ಟಿ ಸಲ್ಲಿಕೆ

ಬೆಂಗಳೂರು: ಕರ್ನಾಟಕ ಮತ್ತು ಮಹಾರಾಷ್ಟ್ರದಲ್ಲಿ ಹಿಂದೂ ಮುಖಂಡರ ಹತ್ಯೆಗೆ ಸಂಚು ರೂಪಿಸಿದ ಪ್ರಕರಣದಲ್ಲಿ ‘ಲಷ್ಕರೆ ತಯ್ಯಬಾ (ಎಲ್‌ಇಟಿ) ಉಗ್ರ ಸಂಘಟನೆ ಸದಸ್ಯ ಬೆಂಗಳೂರಿನ ವೈದ್ಯ ಸೇರಿ ಇಬ್ಬರ ವಿರುದ್ಧ ರಾಷ್ಟ್ರೀಯ ತನಿಖಾ ದಳ(ಎನ್‌ಐಎ) ನ್ಯಾಯಾಲಯಕ್ಕೆ ಹೆಚ್ಚುವರಿ ದೋಷಾರೋಪ ಪಟ್ಟಿ ಸಲ್ಲಿಸಿದೆ. ಡಾ. ಸಬೀಲ್‌ ಅಹಮದ್‌ ಮತ್ತು ಹೈದರಾಬಾದ್‌ನ ಅಸಾದುಲ್ಲಾಖಾನ್‌ ವಿರುದ್ಧ ಬೆಂಗಳೂರಿನ ಎನ್‌ಐಎ ಪ್ರಕರಣಗಳ ವಿಶೇಷ … Continued

ನಿರೀಕ್ಷಣಾ ಜಾಮೀನು ಕೋರಿದ ಟೂಲ್‌ಕಿಟ್‌ ಆರೋಪಿ ಶಾಂತನು

ನವದೆಹಲಿ: ರೈತರ ಪ್ರತಿಭಟನೆಗೆ ಸಂಬಂಧಿಸಿ ಸಾಮಾಜಿಕ ಜಾಲತಾಣದಲ್ಲಿ ಟೂಲ್‌ಕಿಟ್‌ ಹಂಚಿಕೊಂಡ ಆರೋಪ ಎದುರಿಸುತ್ತಿರುವ ಶಾಂತನು ಮುಲುಕ್‌ ನಿರೀಕ್ಷಣಾ ಜಾಮೀನು ನೀಡುವಂತೆ ದೆಹಲಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಮುಲುಕ್‌ ಸಲ್ಲಿಸಿದ ಅರ್ಜಿ ಹೆಚ್ಚುವರಿ ಸೆಷೆನ್ಸ್‌ ನ್ಯಾಯಾಧೀಶ ಧರ್ಮೆಂದರ್‌ ರಾಣಾ ಅವರ ಮುಂದೆ ಬುಧವಾರ ವಿಚಾರಣೆಗೆ ಬರುವ ಸಾಧ್ಯತೆಯಿದೆ. ಮುಲುಕ್ ಫೆಬ್ರವರಿ 16 ರಂದು ಬಾಂಬೆ ಹೈಕೋರ್ಟ್‌ನಿಂದ 10 … Continued

ಟೂಲ್‌ಕಿಟ್‌ ಪ್ರಕರಣ: ದಿಶಾ ರವಿಗೆ ಜಾಮೀನು ನೀಡಿದ ದೆಹಲಿ ಕೋರ್ಟ್‌

ನವ ದೆಹಲಿ: ಟೂಲ್ಕಿಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲ್ಪಟ್ಟ 22 ವರ್ಷದ ಹವಾಮಾನ ಕಾರ್ಯಕರ್ತ ದಿಶಾ ರವಿ ಅವರಿಗೆ ದೆಹಲಿ ನ್ಯಾಯಾಲಯ ಮಂಗಳವಾರ ಜಾಮೀನು ನೀಡಿದೆ.ಶನಿವಾರ ವಿಚಾರಣೆ ಮುಗಿಸಿ ದೆಹಲಿ ನ್ಯಾಯಾಲಯವು ಮಂಗಳವಾರಕ್ಕೆ ತೀರ್ಪು ಕಾಯ್ದಿರಿಸಿತ್ತು. ದೇಶದಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಯನ್ನು ಬೆಂಬಲಿಸಿ ರವಿ ಆನ್‌ಲೈನ್ ಟೂಲ್‌ಕಿಟ್ – ಗೂಗಲ್ ಡಾಕ್ಯುಮೆಂಟ್ ರಚಿಸಿದ್ದಾರೆ ಎಂದು ದೆಹಲಿ ಪೊಲೀಸರು … Continued

ಕಲ್ಲಿದ್ದಲು ಹಗರಣ: ಟಿಎಂಸಿ ಸಂಸದ ಅಭಿಷೇಕ್‌ ಪತ್ನಿ ರುಜಿರಾ ವಿಚಾರಣೆ ನಡೆಸಿದ ಸಿಬಿಐ

ಕಲ್ಲಿದ್ದಲು ಅವ್ಯವಹಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಅಧಿಕಾರಿಗಳು ಮಂಗಳವಾರ ಕೋಲ್ಕತ್ತದಲ್ಲಿ ಟಿಎಂಸಿ ಸಂಸದ ಅಭಿಷೇಕ್‌ ಬ್ಯಾನರ್ಜಿ ನಿವಾಸಕ್ಕೆ ತೆರಳಿ ಅವರ ಪತ್ನಿ ರುಜಿರಾ ಬ್ಯಾನರ್ಜಿ ಅವರ ವಿಚಾರಣೆ ನಡೆಸಿದರು. ವಿಚಾರಣೆ ಸಂದರ್ಭದಲ್ಲಿ ರುಜಿರಾ ಅವರ ಬ್ಯಾಂಕ್‌ ವಹಿವಾಟಿನ ವಿವರಗಳನ್ನು ಪಡೆದುಕೊಂಡರು. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಅಧಿಕಾರಿಗಳು ಸೋಮವಾರ ರುಜಿರಾ ಸೋದರಿ ಮೇನಕಾ ಗಂಭೀರ್‌ ಅವರ … Continued