ಮೋದಿ ಹೊಗಳಿದ್ದಕ್ಕೆ ಆಜಾದ್‌ ಪ್ರತಿಕ್ರತಿ ದಹನ, ಆನಂದ ಶರ್ಮಾ ವಿರುದ್ಧ ಅಧೀರ್‌ ವಾಗ್ದಾಳಿ.

ಪಂಚರಾಜ್ಯಗಳ ಚುನಾವಣೆ ಘೋಷಣೆಯಾದ ಬೆನ್ನಲ್ಲೇ ಕಾಂಗ್ರೆಸ್‌ನಲ್ಲಿ ಅಂತರ್ಯುದ್ಧವೂ ಜೋರಾಗಿದೆ. ಜಮ್ಮುವಿನಲ್ಲಿ ಪ್ರಧಾನಿ ಮೋದಿ ಹೊಗಳಿದ್ದಕ್ಕೆ ಮಾಜಿ ಕೇಂದ್ರ ಸಚಿವ ಹಾಗೂ ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಗುಮಾಮ್‌ ನಬಿ ಆಜಾದ್‌ ವಿರುದ್ದ ಜಮ್ಮುವಿನಲ್ಲಿ ಆಕ್ರೋಶಿತ ಕಾಂಗ್ರೆಸ್‌ ಕಾರ್ಯಕರ್ತರು ಅವರ ಪ್ರತಿಕೃತಿ ದಹನ ಮಾಡಿದ್ದಾರೆ. ಅದೇರೀತಿ ಪಶ್ಚಿಮ ಬಂಗಾಳದಲ್ಲಿ ಜಾತ್ಯತೀತ ನಿಲುವು ಹೊಂದಿರುವ ಕಾಂಗ್ರೆಸ್‌ ಪಕ್ಷವು … Continued

ಅತ್ಯಾಚಾರ ಸಂತ್ರಸ್ತೆಗೆ ೨೬ ವಾರಗಳ ನಂತರ ಗರ್ಭಪಾತ ಸುರಕ್ಷಿತವೇ: ವರದಿ ಕೇಳಿದ ಸುಪ್ರೀಂ ಕೋರ್ಟ್‌

ನವದೆಹಲಿ: ೧೪ ವರ್ಷದ ಅತ್ಯಾಚಾರ ಸಂತ್ರಸ್ತೆಗೆ, ಗರ್ಭಧಾರಣೆಯಾದ 26 ವಾರಗಳ ನಂತರ ಗರ್ಭಪಾತ ಮಾಡುವುದು ಅವಳಿಗೆ ಸುರಕ್ಷಿತವೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಹರಿಯಾಣದ ಕರ್ನಾಲ್ ಜಿಲ್ಲೆಯ ಸರ್ಕಾರಿ ಆಸ್ಪತ್ರೆಯು ವೈದ್ಯಕೀಯ ಸಮಿತಿ ರಚಿಸಬೇಕು ಎಂದು ಸುಪ್ರೀಂ ಕೋರ್ಟ್ ಮಂಗಳವಾರ ನಿರ್ದೇಶನ ನೀಡಿದೆ. ಮುಖ್ಯ ನ್ಯಾಯಮೂರ್ತಿ ಎಸ್‌.ಎ.ಬೊಬ್ಡೆ, ಎ.ಎಸ್.ಬೋಪಣ್ಣ ಹಾಗೂ ವಿ. ರಾಮಸುಬ್ರಹ್ಮಣಿಯನ್ ಅವರನ್ನೊಳಗೊಂಡ ಪೀಠವು, ಈ ಪ್ರಕರಣಕ್ಕೆ … Continued

ಕೊವಿಡ್‌ಗೆ ಮತ್ತೊಬ್ಬ ಬಿಜೆಪಿ ಸಂಸದ ಸಾವು

ಭೋಪಾಲ್: ಮಧ್ಯಪ್ರದೇಶದ ಖಾಂಡ್ವಾ ಜಿಲ್ಲೆಯ ಬಿಜೆಪಿ ಸಂಸದ ನಂದಕುಮಾರ್ ಸಿಂಗ್ ಚೌಹಾಣ್ ಅವರು ಗುರುಗ್ರಾಮ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. 69 ವರ್ಷ ವಯಸ್ಸಿಯ ಚೌಹಾಣ್ ಅವರು ಈ ಕ್ಷೇತ್ರದಿಂದ ಆರು ಬಾರಿ ಬಿಜೆಪಿ ಸಂಸದರಾಗಿ ಆಯ್ಕೆಯಾಗಿದ್ದರು. ಇತ್ತೀಚೆಗೆ ಕೋವಿಡ್-19 ಪಾಸಿಟಿವ್ ಸೋಂಕಿನಿಂದ ಗುರುಗ್ರಾಮ್‍ದ ಮೇದಾಂತ ಆಸ್ಪತ್ರೆಯಲ್ಲಿ ಅವರು ಚಿಕಿತ್ಸೆ ಪಡೆಯುತ್ತಿದ್ದರು. ಸೋಮವಾರ ರಾತ್ರಿ ತೀವ್ರ ಉಸಿರಾಟ ತೊಂದರೆಯುಂಟಾಗಿ … Continued

ಮಧ್ಯಪ್ರದೇಶ ಮುಸ್ಲಿಂ ಹುಡುಗಿಯ ಭಗವದ್ಗೀತೆ ಪ್ರೀತಿ…೫೦೦ಶ್ಲೋಕಗಳು ಈಕೆಗೆ ಸಲೀಸು

ಭೋಪಾಲ್: ಅಧ್ಯಾತ್ಮಿಕ ಜ್ಞಾನವನ್ನು ಪಡೆಯಲು ಧರ್ಮದ ಚೌಕಟ್ಟಿಲ್ಲ, ಧರ್ಮ ಅಡ್ಡಿಯಲ್ಲ ಎಂಬುದಕ್ಕೆ ಮಧ್ಯಪ್ರದೇಶದ ಚಿಂದ್ವಾರ ಜಿಲ್ಲೆಯ ಮುಷಾರಿಫ್ ಖಾನ್ ಉತ್ತಮ ಉದಾಹರಣೆಯಾಗಿದ್ದಾರೆ. ಎಂಟನೇ ತರಗತಿಯ ವಿದ್ಯಾರ್ಥಿನಿಯಾಗಿರುವ ಈಕೆ ಭಗವದ್ಗೀತೆ ಶ್ಲೋಕಗಳನ್ನು ಬಹಳ ಸ್ಫುಟವಾಗಿ ಪಠಿಸುತ್ತಾಳೆ. ಇದು ಅವಳ ಹೆತ್ತವರು ಮತ್ತು ಶಿಕ್ಷಕರ ಸಂತೋಷಕ್ಕೆ ಕಾರಣವಾಗಿದೆ. ಇದನ್ನು ನ್ಯೂ ಇಂಡಿಯನ್‌ ಎಕ್ಸ್‌ಪ್ರೆಸ್‌ ವರದಿ ಮಾಡಿದೆ. ಜ್ಞಾಪಕ ಶಕ್ತಿಯ … Continued

ಅರೆರೆರೆ…ಈಗ ಸೀರಂ ಇನ್ಸ್ಟಿಟ್ಯೂಟ್‌, ಭಾರತ ಬಯೋಟೆಕ್‌ಗೂ ಒಳನುಸುಳುವ ಚೀನಾ ಹ್ಯಾಕರ್‌ಗಳು…!!

ಮುಂಬೈ: ಚೀನಾದ ವಿಚ್ಛಿದ್ರಕಾರಕ ಪ್ರಯತ್ನಗಳು ವಿದ್ಯುತ್ ಕಡಿತ ಉಂಟು ಮಾಡುವುದಕ್ಕಷ್ಟೇ ಸೀಮಿತವಾಗಿಲ್ಲ. ಅದು ಭಾರತೀಯ ಲಸಿಕೆ ತಯಾರಕರ ಐಟಿ ವ್ಯವಸ್ಥೆಗಳನ್ನೂ ಹ್ಯಾಕಿಂಗ್ ಮಾಡುತ್ತವೆ…! ಇತ್ತೀಚಿನ ದಿನಗಳಲ್ಲಿ ಚೀನಿಯರು ಹೊಂಚು ಹಾಕಿರುವ ಇಂತಹ ಎರಡು ಕಂಪನಿಗಳು ಹೈದರಾಬಾದ್ ಮೂಲದ ಭಾರತ್ ಬಯೋಟೆಕ್ ಮತ್ತು ವಿಶ್ವದ ಅತಿದೊಡ್ಡ ಲಸಿಕೆ ತಯಾರಕ ಪುಣೆ ಮೂಲದ ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ … Continued

ಬಂಗಾಳದಲ್ಲಿ ಮುಸ್ಲಿಂ ಧರ್ಮಗುರು ಸಿದ್ದಿಕಿ ಪಕ್ಷದ ಜೊತೆ ಮೈತ್ರಿ: ಕಾಂಗ್ರೆಸ್‌ ನಾಯಕತ್ವದ ವಿರುದ್ಧ ತಿರುಗಿಬಿದ್ದ ಶರ್ಮಾ

ಪಶ್ಚಿಮ ಬಂಗಾಳದ ಮುಸ್ಲಿಂ ಧರ್ಮಗುರು ಅಬ್ಬಾಸ್ ಸಿದ್ದಿಕಿ ನೇತೃತ್ವದ ಇಂಡಿಯನ್ ಸೆಕ್ಯುಲರ್ ಫ್ರಂಟ್ (ಐಎಸ್ಎಫ್) ಒಂದಿಗೆ ಕಾಂಗ್ರೆಸ್‌ ಪಸ್ಚಿಮ ಬಂಗಾಳ ಚುನಾವಣೆಗೆ ಮೈತ್ರಿ ಮಾಡಿಕೊಂಡಿರುವುದನ್ನು ಕಾಂಗ್ರೆಸ್ಸಿನ ಹಿರಿಯ ಮುಖಂಡ ಆನಂದ್ ಶರ್ಮಾ ಸೋಮವಾರ ಖಂಡಿಸಿದ್ದು, ಇದು ಪಕ್ಷದ ಪ್ರಮುಖ ಸಿದ್ಧಾಂತ, ಗಾಂಧಿ ಮತ್ತು ನೆಹರೂ ಜಾತ್ಯತೀತತೆಗೆ ವಿರುದ್ಧವಾಗಿದೆ ಎಂದು ಹೇಳಿದ್ದಾರೆ. ಪಕ್ಷವು ಕೋಮುವಾದಿಗಳ ವಿರುದ್ಧ ಹೋರಾಡುವಲ್ಲಿ … Continued

ಡ್ರಗ್ಸ್‌ ಪ್ರಕರಣದ ಹಿಂದೆ ನನ್ನ ಸಿಲುಕಿಸಲು ಮಮತಾ ಅಳಿಯ ಅಭಿಷೇಕ, ಪೊಲೀಸ್‌ ಅಧಿಕಾರಿ ಶರ್ಮಾ ಸಂಚು: ರಾಕೇಶ ಸಿಂಗ್‌

ಕೊಲ್ಕತ್ತಾ: ಕೊಕೇನ್ ಪ್ರಕರಣದ ಆರೋಪಿ ಬಿಜೆಪಿ ಮುಖಂಡ ರಾಕೇಶ್ ಸಿಂಗ್ ಅವರನ್ನು ಮಾರ್ಚ್ 9 ರವರೆಗೆ ಪೊಲೀಸ್ ಕಸ್ಟಡಿಗೆ ಕಳುಹಿಸಲಾಗಿದೆ. ಸೋಮವಾರ ಅಲಿಪೋರ್ ಎನ್‌ಡಿಪಿಎಸ್ ನ್ಯಾಯಾಲಯದ ಮುಂದೆ ಹಾಜರಾದ ಬಿಜೆಪಿ ನಾಯಕ ಮತ್ತು ಅವರ ಆಪ್ತರಿಗೆ ಮಾರ್ಚ್ 9 ರವರೆಗೆ ಪೊಲೀಸ್ ಕಸ್ಟಡಿಗೆ ಕಳುಹಿಸಿ ಆದೇಶಿಸಿದೆ. ನ್ಯಾಯಾಲಯಕ್ಕೆ ಕರೆದೊಯ್ಯುವಾಗ, ಬಿಜೆಪಿ ಮುಖಂಡ ರಾಕೇಶ್ ಸಿಂಗ್ ಇದು … Continued

ರಾಜಕಾರಣಿಗಳು ದಪ್ಪ ಚರ್ಮದವರೆಂದು ದಪ್ಪ ಸೂಜಿ ಬಳಸಲು ಯೋಜಿಸುತ್ತಿದ್ದೀರಾ: ಲಸಿಕೆ ನೀಡಿದ ದಾದಿಯರಿಗೆ ಪ್ರಧಾನಿ ಮೋದಿ ಪ್ರಶ್ನೆ

ರಾಜಕಾರಣಿಗಳು “ತುಂಬಾ ದಪ್ಪ ಚರ್ಮದವರೆಂದು ದಪ್ಪ ಸೂಜಿ ಬಳಸಲು ಯೋಜಿಸುತ್ತಿದ್ದೀರಾ ಎಂದು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಕೋವಿಡ್ -19 ಲಸಿಕೆ ನೀಡುವ ದಾದಿಯರನ್ನು ಕೇಳಿ ಹಾಸ್ಯ ಮಾಡಿದ ಪ್ರಸಂಗ ನಡೆಯಿತು. ಪ್ರಧಾನಿ ಮೋದಿ ತಮ್ಮ ಮೊದಲ ಡೋಸ್ ಕೊವಿಡ್‌-19 ಲಸಿಕೆಯನ್ನು ಸೋಮವಾರ ಇಲ್ಲಿನ ಏಮ್ಸ್‌ನಲ್ಲಿ ತೆಗೆದುಕೊಂಡರು. ಪುದುಚೇರಿಯವರಾದ ನರ್ಸ್ ಪಿ. ನಿವೇದ ಭಾರತ್ ಬಯೋಟೆಕ್‌ನ … Continued

ಬಿಜೆಪಿ ಭ್ರಷ್ಟಾಚಾರದ ಪರ ನಿಂತಿದೆ: ಸ್ಟಾಲಿನ್‌

ತಮಿಳುನಾಡಿನಲ್ಲಿ ಎಐಎಡಿಎಂಕೆ ಪಕ್ಷದೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವ ಮೂಲಕ ಬಿಜೆಪಿ ಭ್ರಷ್ಟಾಚಾರದ ಪರ ನಿಂತಿದೆ ಎಂದು ಡಿಎಂಕೆ ಮುಖಂಡ ಎಂ.ಕೆ. ಸ್ಟಾಲಿನ್‌ ಆರೋಪಿಸಿದರು. ಮುಖ್ಯಮಂತ್ರಿ ಪಳನಿಸ್ವಾಮಿ ಹಾಗೂ ಉಪಮುಖ್ಯಮಂತ್ರಿ ಪನ್ನೀರಸೆಲ್ವಂ ಕಮೀಶನ್‌, ಕಲೆಕ್ಷನ್‌, ಕರಪ್ಷನ್‌ ಮಾಡುವ ಮೂಲಕ ಭ್ರಷ್ಟಾಚಾರದಲ್ಲಿ ಮುಳುಗಿದ್ದಾರೆ. ಬಿಜೆಪಿ ಇಂಥವರನ್ನು ಬೆಂಬಲಿಸುತ್ತಿದೆ ಎಂದರು. ಡಿಎಂಕೆ ನೇತೃತ್ವದ ಮೈತ್ರಿಕೂಟದಲ್ಲಿ ಸೀಟು ಹಂಚಿಕೆ ಪ್ರಕ್ರಿಯೆ ರವಿವಾರದಿಂದ ಆರಂಭಗೊಂಡಿದೆ. … Continued

ನೀವು ಮಕ್ಕಳನ್ನು ಹೆತ್ತರೆ ಸರ್ಕಾರ ಅವರ ಶಿಕ್ಷಣ ಶುಲ್ಕ ಭರಿಸಬೇಕಾ?:ಉತ್ತರ ಪ್ರದೇಶದ ಬಿಜೆಪಿ ಶಾಸಕನ ಪ್ರಶ್ನೆ

ಖಾಸಗಿ ಶಾಲೆಯಲ್ಲಿ ಕಲಿಯುವ ಮಕ್ಕಳ ಶುಲ್ಕವನ್ನು ಮನ್ನಾ ಮಾಡುವಂತೆ ಕೋರಿದ ಮಹಿಳೆಯರನ್ನುದ್ದೇಶಿಸಿ ಮಾತನಾಡಿದ ಉತ್ತರ ಪ್ರದೇಶದ ಬಿಜೆಪಿ ಶಾಸಕ ರಮೇಶ ದಿವಾಕರ, ನೀವು ಮಕ್ಕಳನ್ನು ಹೆತ್ತು ಸರಕಾರ ಶಿಕ್ಷಣ ವೆಚ್ಚ ಭರಿಸಬೇಕೆಂದು ನಿರೀಕ್ಷಿಸುತ್ತೀರಾ? ಎಂದು ಕೇಳುವ ಮೂಲಕ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ನೀವು ಮಕ್ಕಳನ್ನು ಮಾಡಿಕೊಳ್ಳುತ್ತೀರಿ. ಸರಕಾರ ಅವರ ಶಿಕ್ಷಣವನ್ನು ಭರಿಸಬೇಕೆಂದರೆ ಹೇಗೆ ಎಂದು ಅವರು … Continued