ನನ್ನ ಬಳಿ ಇನ್ನೂ ಮೂವರು ಪ್ರಭಾವಿಗಳ ಸಿಡಿ ಇದೆ: ಕಲ್ಲಹಳ್ಳಿ ಮತ್ತೊಂದು ಬಾಂಬ್‌

ಬೆಂಗಳೂರು: ನನ್ನ ಬಳಿ ಮೂವರು ಪ್ರಭಾವಿ ವ್ಯಕ್ತಿಗಳ ಸಿಡಿ ಇದೆ ಎಂದು ಸಾಮಾಜಿಕ ಕಾರ್ಯಕರ್ತ, ರಮೇಶ್ ಜಾರಕಿಹೊಳಿ ರಾಸಲೀಲೆ ಎನ್ನಲಾದ ಸಿಡಿ ಪ್ರಕರಣದ ದೂರುದಾರ ದಿನೇಶ್ ಕಲ್ಲಹಳ್ಳಿ ಹೇಳಿದ್ದಾರೆ. ರಮೇಶ್ ಜಾರಕಿಹೊಳಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಮಾತನಾಡಿದ ಅವರು, ನಾನು ಆರೋಪಿಸುತ್ತಿರುವ ಮೂವರ ಪೈಕಿ ಒಬ್ಬರು ಸಚಿವ ಸಂಪುಟದಲ್ಲಿದ್ದಾರೆ. ಇಬ್ಬರು ಉನ್ನತ ಹುದ್ದೆಯಲ್ಲಿದ್ದಾರೆ. … Continued

ತಮಿಳುನಾಡು ಚುನಾವಣೆ: ಕಳೆದ ಸಲದಷ್ಟುಸೀಟು ಕೊಡಲೊಪ್ಪದ ಡಿಎಂಕೆ, ಕಾಂಗ್ರೆಸ್‌ಗೆ ಆರಂಭದಲ್ಲೇ ಹಿನ್ನಡೆ?

ತಮಿಳುನಾಡಿನಲ್ಲಿ ಡಿಎಂಕೆ ನೇತೃತ್ವದ ಮೈತ್ರಿಕೂಟದಲ್ಲಿ ಕಾಂಗ್ರೆಸ್‌ಗೆ ಮತ್ತೆ ಹಿನ್ನಡೆಯಾದ ಲಕ್ಷಣಗಳು ಗೋಚರಿಸುತ್ತಿವೆ. ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಡಿಎಂಕೆ ಮೈತ್ರಿಕೂಟದ ಭಾಗವಾಗಿರುವ ಕಾಂಗ್ರೆಸ್‌ಗೆ ಈ ಸಲ ಕಳೆದ ಸಲದಷ್ಟು ಸೀಟುಗಳನ್ನು ನಿಡಲು ಡಿಎಂಕೆ ಸಿದ್ಧವಿಲ್ಲ ಎನ್ನಲಾಗಿದೆ. ಆದರೂ ಕಾಂಗ್ರೆಸ್‌ ಪ್ರಯತ್ನ ಮುಂದುವರಿಸಿದೆ. ರಾಷ್ಟ್ರೀಯ ಪಕ್ಷಕ್ಕೆ ನೀಡುತ್ತಿರುವ ಕ್ಷೇತ್ರಗಳ ಸಂಖ್ಯೆಯನ್ನು ಹೆಚ್ಚಿಸಲು ಡಿಎಂಕೆ ಸಿದ್ಧವಿಲ್ಲ. ೨೦೧೬ರ ವಿದಾನಸಭೆ ಚುನಾವಣೆಯಲ್ಲಿ … Continued

ಕೋವಾಕ್ಸಿನ್ ಫೇಸ್ 3 ಫಲಿತಾಂಶ ಪ್ರಕಟ : ಶೇ.81 ಪರಿಣಾಮಕಾರಿ ಎಂದ ಭಾರತ್ ಬಯೋಟೆಕ್

ನವ ದೆಹಲಿ : ಭಾರತೀಯ ಲಸಿಕೆ ತಯಾರಕ ಭಾರತ್ ಬಯೋಟೆಕ್ ಬುಧವಾರ ತನ್ನ ಕೋವಿಡ್-19 ಲಸಿಕೆ ಕೋವಾಕ್ಸಿನ್ ಫೇಸ್ 3 ವೈದ್ಯಕೀಯ ಫಲಿತಾಂಶ ಪ್ರಕಟಿಸಿದೆ. ಲಸಿಕೆಯು ಶೇ.81ರಷ್ಟು ಮಧ್ಯಂತರ ವೈದ್ಯಕೀಯ ಪರಿಣಾಮಕಾರಿತನವನ್ನು ಹೊಂದಿದೆ ಎಂದು ಅದು ತಿಳಿಸಿದೆ. ಕೋವಾಕ್ಸಿನ್ 3ನೇ ಹಂತದ ವೈದ್ಯಕೀಯ ಪ್ರಯೋಗಗಳಲ್ಲಿ 25,800 ಸ್ವಯಂಸೇವಕರು ಭಾಗಿಯಾಗಿದ್ದರು, ಇದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ … Continued

ಬಿಬಿಸಿ ರೇಡಿಯೋ ಕಾರ್ಯಕ್ರಮದಲ್ಲಿ ಮೋದಿ ತಾಯಿಗೆ ಅವಹೇಳನ: ಟ್ವಿಟ್ಟರ್‌ನಲ್ಲಿ #BoycottBBC ಆರಂಭ

ಬಿಬಿಸಿ ಏಷ್ಯನ್ ನೆಟ್‌ವರ್ಕ್‌ನ ‘ಬಿಗ್ ಡಿಬೇಟ್’ ರೇಡಿಯೊ ಕಾರ್ಯಕ್ರಮದ ಇತ್ತೀಚಿನ ಸಂಚಿಕೆಯಲ್ಲಿ, ಕರೆ ಮಾಡಿದವರಲ್ಲಿ ಒಬ್ಬರು ಪ್ರಧಾನಿ ನರೇಂದ್ರ ಮೋದಿಯವರ ತಾಯಿಯ ವಿರುದ್ಧ ಅವಹೇಳನಕಾರಿ ಟೀಕೆಗಳನ್ನು ಮಾಡಿದ್ದಾರೆ. ಅದರ ಆಡಿಯೋ ಕ್ಲಿಪ್ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಇದನ್ನು ಅನುಸರಿಸಿ ಬಿಜೆಪಿ ನಾಯಕರು ಹಾಗೂ ಅನೇಕರು ಟ್ವಟ್ವರ್‌ನಲ್ಲಿ ತಮ್ಮ ಅಸಮಾಧಾನವನ್ನು ದಾಖಲಿಸಿದ್ದಾರೆ. ‘ಬಿಗ್ ಡಿಬೇಟ್’ … Continued

ಕೊವಿಡ್‌ ಡೋಸ್‌ ಪಡೆಯಲು ಸಮಯ ಮಿತಿ ತೆಗೆದ ಕೇಂದ್ರ

ನವದೆಹಲಿ: ಕೋವಿಡ್-19 ಲಸಿಕೆ ಪಡೆಯಲು ಈವರೆಗೆ ಇದ್ದ ಸಮಯ ಮಿತಿಯನ್ನು ಕೇಂದ್ರ ಸರ್ಕಾರ ತೆಗೆದುಹಾಕಿದ್ದು, ಜನರಿಗೆ ಅನುಕೂಲವಾಗಲು ದಿನದ ಯಾವ ಸಮಯದಲ್ಲಾದರೂ ಲಿಸಿಕೆ ಪಡೆಯಬಹುದು ಎಂದು ಹೇಳಿದೆ. ಈ ಕುರಿತು ಬುಧವಾರ ಟ್ವೀಟ್ ಮಾಡಿರುವ ಕೇಂದ್ರ ಆರೋಗ್ಯ ಸಚಿವ ಡಾ ಹರ್ಷವರ್ಧನ್, ಸಾರ್ವಜನಿಕರು ಇನ್ನು ಮುಂದೆ ತಮಗೆ ಅನುಕೂಲವಾಗುವ ಸಮಯದಲ್ಲಿ ಲಸಿಕೆ ಹಾಕಿಸಿಕೊಳ್ಳಬಹುದು. ಪ್ರಧಾನಿ ಮೋದಿಯವರು … Continued

ನಟಿ ತಾಪ್ಸಿ ಪನ್ನು, ನಿರ್ಮಾಪಕ ಅನುರಾಗ ಕಶ್ಯಪ ಮನೆ ಮೇಲೆ ಐಟಿ ದಾಳಿ

ತೆರಿಗೆ ವಂಚನೆ ಆರೋಪದ ಅಡಿ ಐಟಿ ಅಧಿಕಾರಿಗಳು ಬುಧವಾರ ಬಾಲಿವುಡ್​ ನಟಿ ತಾಪ್ಸಿ ಪನ್ನು, ನಿರ್ಮಾಪಕ ಅನುರಾಗ್​ ಕಶ್ಯಪ್​​, ವಿಕ್ರಮಾದಿತ್ಯ ಮೋಟ್ವಾನೆ, ವಿಕಾಸ್​ ಬಹ್ಲ್​ ಹಾಗೂ ಮಧು ಮಾಂಟೇನಾ ಅವರ ನಿವಾಸಗಳ ಮೇಲೆ ದಾಳಿ ನಡೆಸಿದ್ದಾರೆ . ಪ್ರಕರಣ ಸಂಬಂಧ ಐಟಿ ಅಧಿಕಾರಿಗಳು ಮುಂಬೈ ಹಾಗೂ ಪುಣೆಯ ೩೦ಕ್ಕೂ ಹೆಚ್ಚು ಸ್ಥಳಗಳಲ್ಲಿ ದಾಖಲೆ ಪರಿಶೀಲಿಸುತ್ತಿದ್ದಾರೆ. ಸಿನಿಮಾ … Continued

ಹತ್ರಾಸ ಕೊಲೆ ಪ್ರಕರಣ: ಮುಖ್ಯ ಆರೋಪಿ ತಲೆಗೆ ೧ ಲಕ್ಷ ರೂ.ಘೋಷಣೆ

ಹತ್ರಾಸ್(ಉತ್ತರಪ್ರದೇಶ): ತಮ್ಮ ಪುತ್ರಿಗೆ ಕಿರುಕುಳ ನೀಡಿದ್ದರ ವಿರುದ್ಧ ದೂರು ನೀಡಿದ್ದ ವ್ಯಕ್ತಿಯನ್ನು ಗುಂಡಿಕ್ಕಿ ಕೊಲೆ ಮಾಡಿದ ಎರಡು ದಿನಗಳ ನಂತರ, ಪೊಲೀಸರು ಸಾಸ್ನಿ ಪ್ರದೇಶದ ನೊಜಲ್‌ಪುರ ಗ್ರಾಮದ ಪ್ರಮುಖ ಆರೋಪಿ ಗೌರವ್ ಸೊಂಗ್ರಾ ತಲೆಗೆ ಒಂದು ಲಕ್ಷ ರೂ ಬಹುಮಾನ ಘೋಷಿಸಲಾಗಿದೆ. ಇತರ ಇಬ್ಬರು ಆರೋಪಿಗಗಳ ಸುಳಿವಿಗೆ ತಲಾ 25 ಸಾವಿರ ರೂ. ಬಹುಮಾನ ಘೋಷಿಸಲಾಗಿದ್ದು, … Continued

ಮೊದಲ ಕೊವಿಡ್‌ ಡೋಸ್‌ ಪಡೆದ ರಾಷ್ಟ್ರಪತಿ ಕೋವಿಂದ್‌

ನವ ದೆಹಲಿ:ನವ ದೆಹಲಿಯ ಆರ್ ಆರ್ ಆಸ್ಪತ್ರೆಯಲ್ಲಿ ಬುಧವಾರ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಕೊವಿಡ್‌ ಲಸಿಕೆ ಹಾಕಿಸಿಕೊಂಡರು. 60 ವರ್ಷ ಮೇಲ್ಪಟ್ಟವರು ಮತ್ತು 45 ವರ್ಷ ಮೇಲ್ಪಟ್ಟ ಅನಾರೋಗ್ಯ ಪೀಡಿತರಿಗೆ ಕೊರೊನಾವೈರಸ್ ಲಸಿಕೆ ಹಾಕುವ ಅಭಿಯಾನ ಪ್ರಾರಂಭಿಸಿದ ಎರಡು ದಿನಗಳ ನಂತರ, ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ಅವರು ಬುಧವಾರ ಕೊವಿಡ್-19 ಲಸಿಕೆ ಮೊದಲ ಡೋಸ್‌ … Continued

ಕಾಂಗ್ರೆಸ್ಸಿನಲ್ಲೀಗ ಕಾಂಗ್ರೆಸ್‌ ವರ್ಸಸ್‌ ಕಾಂಗ್ರೆಸ್‌…!

ಪಂಚ ರಾಜ್ಯಗಳ ರಾಜ್ಯಗಳ ವಿಧಾನಸಭೆ ಚುನಾವಣೆ ಘೋಷಣೆಯಅಗುತ್ತಿದ್ದಂತೆಯೇ ಕಾಂಗ್ರೆಸ್‌ನಲ್ಲಿದ್ದ ಒಳಬೇಗುದಿಯೂ ಕೂಡ ಇದೇ ಸಮಯದಲ್ಲಿ ಹೊರಗೆ ಕಾಣಿಸಿಕೊಳ್ಳಲು ಆರಂಭಿಸಿದ್ದು, ಚುನಾವಣೆ ಸಂಸರ್ಭದಲ್ಲಿ ಇದು ಕಾಂಗ್ರೆಸ್‌ಗೆ ತಲೆ ನೋವೂ ಆಗಬಹುದಾಗಿದೆ. ಕಾಂಗ್ರೆಸ್‌ನಲ್ಲಿ 23 (ಜಿ 23) ಭಿನ್ನಮತೀಯರ ಗುಂಪು ಇತ್ತೀಚೆಗೆ ಜಮ್ಮುವಿನಲ್ಲಿ ನಡೆದ ಸಭೆಯ ಪ್ರಕಾರ ಇತರ ರಾಜ್ಯಗಳಲ್ಲಿ ಸರಣಿ ಸಭೆಗಳನ್ನು ಆಯೋಜಿಸುವ ಮೂಲಕ ಹೈಕಮಾಂಡ್ಗೆ ಸಡ್ಡು … Continued

ಗಟಾರ ಸ್ವಚ್ಛಗೊಳಿಸುವುದು ನಿನ್ನ ಕೆಲಸ, ಪ್ರತಿಭಟಿಸುವ ಹಕ್ಕು ಯಾರು ಕೊಟ್ಟರು ನಿನಗೆ?

ನವ ದೆಹಲಿ: ದಲಿತ ಕಾರ್ಮಿಕ ಹಕ್ಕುಗಳ ಕಾರ್ಯಕರ್ತೆ ನೊದೀಪ್ ಕೌರ್ ಪೊಲೀಸ್ ವಶದಲ್ಲಿದ್ದಾಗ ತಮಗೆ ನೀಡಲಾದ ಚಿತ್ರ ಹಿಂಸೆಯನ್ನು ಬಹಿರಂಗಪಡಿಸಿದ್ದಾರೆ. ಹತ್ಯೆಯ ಆರೋಪ, ಕೈಗಾರಿಕಾ ಯುನಿಟ್ ನಲ್ಲಿ ಘೆರಾವ್ ಹಾಕುವುದು ಹಾಗೂ ಕಂಪನಿಗಳಿಂದ ಹಣಕ್ಕಾಗಿ ಬೇಡಿಕೆ ಇಡುವುದೂ ಸೇರಿದಂತೆ ಹಲವು ಆರೋಪಗಳನ್ನೆದುರಿಸಿ ಪೊಲೀಸ್ ವಶದಲ್ಲಿದ್ದ 24 ವರ್ಷದ ನೊದೀಪ್ ಕೌರ್ಗೆ ಕೆಲವೇ ದಿನಗಳ ಹಿಂದೆ ಪಂಜಾಬ್, … Continued