ಆಸ್ತಿ ಮುಟ್ಟುಗೋಲು ಪ್ರಶ್ನಿಸಿ ಫಾರುಕ್‌ ಹೈಕೋರ್ಟಿಗೆ ಮೊರೆ

ಶ್ರೀನಗರ: ಆಸ್ತಿ ಮುಟ್ಟುಗೋಲು ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದ ವ್ಯಾಪ್ತಿಯನ್ನು ಪ್ರಶ್ನಿಸಿ ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್‌ ಅಬ್ದುಲ್ಲಾ ಅವರು ಜಮ್ಮು ಮತ್ತು ಕಾಶ್ಮೀರ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಜಮ್ಮು ಮತ್ತು ಕಾಶ್ಮೀರ ಕ್ರಿಕೆಟ್‌ ಅಸೋಸಿಯೆಷನ್‌ನಲ್ಲಿ (ಜೆಕೆಸಿಎ) ನಡೆದಿದೆ ಎನ್ನಲಾದ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ಕಳೆದಡಿಸೆಂಬರ್‌ 19ರಂದು … Continued

ಸಿಡಿ ಹಗರಣ: ಮಹಿಳಾ ಆಯೋಗದಿಂದ ಪ್ರಕರಣ ದಾಖಲು

ಬೆಂಗಳೂರು : ಮಾಜಿ ಸಚಿವ ರಮೇಶ್ ಜಾರಕಿಹೊಳಿಗೆ ಈಗ ಮತ್ತೊಂದು ಸಂಕಷ್ಟ ಎದುರಾಗಿದೆ. ಕನ್ನಡ ರಕ್ಷಣಾ ವೇದಿಕೆ ಹಾಗೂ ವಕೀಲರು ನೀಡಿದ ಎರಡು ದೂರನ್ನು ಆಧರಿಸಿ, ರಾಜ್ಯ ಮಹಿಳಾ ಆಯೋಗವು ರಮೇಶ್ ಜಾರಕಿಹೊಳಿ ವಿರುದ್ಧ ಸುಮೋಟೋ ಕೇಸ್ ದಾಖಲಿಸಿಕೊಂಡಿದೆ. ಈ ಕುರಿತಂತೆ ಮಾಹಿತಿ ನೀಡಿದ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಪ್ರಮೀಳಾ ನಾಯ್ಡು, ಕನ್ನಡ ರಕ್ಷಣಾ … Continued

೨೯೧ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ ಟಿಎಂಸಿ

  ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ 291 ಅಭ್ಯರ್ಥಿಗಳ ಪಟ್ಟಿಯನ್ನು ತೃಣಮೂಲ ಕಾಂಗ್ರೆಸ್‌ (ಟಿಎಂಸಿ) ಬಿಡುಗಡೆ ಮಾಡಿದೆ. ಟಿಎಂಸಿ ತೊರೆದು ಬಿಜೆಪಿ ಸೇರಿರುವ ಸುವೆಂದು ಅಧಿಕಾರಿಯ ಭದ್ರಕೋಟೆ ನಂದಿಗ್ರಾಮ ಕ್ಷೇತ್ರದಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರೇ ಸ್ವತಃ ಸ್ಪರ್ಧಿಸುತ್ತಿದ್ದಾರೆ. ಕೊಲ್ಕತ್ತಾದ ಭವಾನಿಪುರಾ ಕ್ಷೇತ್ರದ ಬದಲಿಗೆ ಈ ಸಲ ನಂದಿಗ್ರಾಮದಿಂದ ಕಣಕ್ಕಿಳಿಯುವುದಾಗಿ ಮಮತಾ ಬ್ಯಾನರ್ಜಿ ತಿಳಿಸಿದ್ದಾರೆ. 50 … Continued

ಚಿನ್ನ ಕಳ್ಳಸಾಗಣೆ ಪ್ರಕರಣ: ಕಸ್ಟಮ್ಸ್‌ ಅಧಿಕಾರಿಗಳ ಅಫಿಡ್‌ವಿಟ್‌ನಲ್ಲಿ ಸಿಎಂ ಪಿಣರಾಯಿ ವಿಜಯನ್‌, ಸ್ಪೀಕರ್‌ ಹೆಸರು

ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಹಿಂದಿನ ಯುನೈಟೆಡ್ ಅರಬ್ ಎಮಿರೇಟ್ಸ್ ಕಾನ್ಸುಲ್ ಜನರಲ್ (ಯುಎಇ) ಯೊಂದಿಗೆ ನಿಕಟ ಸಂಪರ್ಕ ಹೊಂದಿದ್ದರು ಮತ್ತು ಅಕ್ರಮ ವಿತ್ತೀಯ ವಹಿವಾಟು ನಡೆಸಿದ್ದಾರೆ ಎಂದು ಚಿನ್ನದ ಕಳ್ಳಸಾಗಣೆ ಪ್ರಕರಣದ ಪ್ರಧಾನ ಆರೋಪಿ ಸ್ವಪ್ನಾ ಸುರೇಶ್ ಹೇಳಿದ್ದಾರೆ ಎಂದು ಕಸ್ಟಮ್ಸ್ ಇಲಾಖೆ ಕೇರಳ ಹೈಕೋರ್ಟ್‌ಗೆ ಸಲ್ಲಿಸಿದ ಅಫಿಡವಿಟ್‌ನಲ್ಲಿ ಹೇಳಿದೆ. ಆಕೆಯ ಹೇಳಿಕೆ … Continued

ಆರ್‌ಟಿಒ ೧೮ ಸೇವೆಗಳು ಈಗ ಆನ್‌ಲೈನ್‌ನಲ್ಲಿಯೂ ಲಭ್ಯ..!

ನವ ದೆಹಲಿ: ಡ್ರೈವಿಂಗ್ ಲೈಸ್ಸ್, ನವೀಕರಣ ಸೇರಿದಂತೆ ವಿವಿಧ 18 ಸೇವೆಗಳಿಗೆ ಆರ್ ಟಿ ಒ ಕಚೇರಿಗೆ ಹೋಗಿಯೇ ಮಾಡಿಸಬೇಕಿತ್ತು. ಇನ್ಮುಂದೆ ಆಧಾರ್ ದೃಢೀಕರಣದ ಮೂಲಕ 18 ಸೇವೆಗಳನ್ನು ಈಗ, ಸಂಪರ್ಕ ರಹಿತ ಸೇವೆಗನ್ನಾಗಿ ಪಡೆಯಬಹುದಾಗಿದೆ. ಇಂತಹ ಸೇವೆಯನ್ನು ಭಾರತೀಯ ನಾಗರಿಕರಿಗೆ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ (MoRTH) ಆರಂಭಿಸಿದ್ದು, ದೇಶದ ಜನರು ಕುಳಿತಲ್ಲೇ, … Continued

ನಟ ಸುಶಾಂತ ಸಿಂಗ್‌ ಸಾವು: ಡ್ರಗ್ ಆಂಗಲ್ ಪ್ರಕರಣದಲ್ಲಿ ಎನ್‌ಸಿಬಿಯಿಂದ 12,000 ಪುಟಗಳ ಚಾರ್ಜ್‌ಶೀಟ್ ಸಲ್ಲಿಕೆ

  ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಸಾವಿನಲ್ಲಿ ಮಾದಕವಸ್ತು ಸಂಬಂಧಿತ ಕೋನವನ್ನು ತನಿಖೆ ಮಾಡುತ್ತಿದ್ದ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್‌ಸಿಬಿ) ವಿಶೇಷ ಎನ್‌ಡಿಪಿಎಸ್ ನ್ಯಾಯಾಲಯದ ಮುಂದೆ ಶುಕ್ರವಾರ ಸುದೀರ್ಘ ಚಾರ್ಜ್‌ಶೀಟ್ ಸಲ್ಲಿಸಿದೆ. ಚಾರ್ಜ್‌ಶೀಟ್‌ನಲ್ಲಿ 33 ಆರೋಪಿಗಳ ಹೆಸರು ಇದ್ದು, 200 ಸಾಕ್ಷಿಗಳ ಹೇಳಿಕೆಯನ್ನು ಒಳಗೊಂಡಿದೆ ಎಂದು ಸುದ್ದಿ ಸಂಸ್ಥೆ ಎಎನ್‌ಐ ವರದಿ ಮಾಡಿದೆ. … Continued

ಐಟಿ ಅಧಿಕಾರಿಗಳಿಗೆ ತಾಪ್ಸಿ ಪನ್ನು ಫೋನ್‌ ಡಾಟಾ ಅಳಿಸಿದ ಶಂಕೆ

ಗುರುವಾರ ನಡೆದ ಒಂದು ಪ್ರಮುಖ ಬೆಳವಣಿಗೆಯಲ್ಲಿ, ನಟಿ ತಾಪ್ಸೀ ಪನ್ನು ಅವರು ತಮ್ಮ ಫೋನ್‌ನಿಂದ ‘ಕೆಲವು ಡೇಟಾವನ್ನು’ ಅಳಿಸಿದ್ದಾರೆ ಎಂಬ ಶಂಕೆ ಇದೆಯೆಂದುಆದಾಯ ತೆರಿಗೆ ಇಲಾಖೆ ಮಾಹಿತಿ ನೀಡಿದೆ ಎಂದು ಇಂಡಿಯಾ ಟುಡೆ ವರದಿ ಮಾಡಿದೆ. ಐಟಿ ಇಲಾಖೆ ಆಕೆಯ ಮನೆ ಮತ್ತು ಕಚೇರಿಯಲ್ಲಿ ದಾಳಿ ನಡೆಸಿದ ಒಂದು ದಿನದ ನಂತರ ಈ ಬೆಳವಣಿಗೆ ಸಂಭವಿಸಿದೆ. … Continued

ಜಮ್ಮು-ಕಾಶ್ಮೀರ: ಸಹಜ ಸ್ಥಿತಿಗೆ ಮರಳಲು ಭಾರತದ ಕ್ರಮಕ್ಕೆ ಅಮೆರಿಕ ಸ್ವಾಗತ

ಜಮ್ಮು ಮತ್ತು ಕಾಶ್ಮೀರವನ್ನು ಕೇಂದ್ರಾಡಳಿತ ಪ್ರದೇಶವೆಂದು ಘೋಷಿಸಿದ ನಂತರ ಪೂರ್ಣ ಪ್ರಮಾಣದ ಆರ್ಥಿಕ ಮತ್ತು ರಾಜಕೀಯ ಸಹಜ ಸ್ಥಿತಿಗೆ ಮರಳಿಸಲು ಭಾರತ ಸರ್ಕಾರ ತೆಗೆದುಕೊಂಡ ಕ್ರಮಗಳನ್ನು ಅಮೆರಿಕ ಸರ್ಕಾರ ಸ್ವಾಗತಿಸಿದೆ. ಭಾರತದ ಪ್ರಜಾಪ್ರಭುತ್ವ ಮೌಲ್ಯಗಳಿಗೆ ಅನುಗುಣವಾಗಿ ಕಣಿವೆ ರಾಜ್ಯದ ಕೇಂದ್ರ ಪ್ರದೇಶವನ್ನು ಆರ್ಥಿಕವಾಗಿ ಹಾಗೂ ರಾಜಕೀಯವಾಗಿ ಸಹಜ ಸ್ಥಿತಿಗೆ ಮರಳಿಸಲು ನವದೆಹಲಿ ಕೈಗೊಂಡ ಕ್ರಮಗಳನ್ನು ಬೈಡೆನ್ … Continued

ಸರ್ಕಾರದೊಂದಿಗೆ ಒಟಿಟಿ ಉದ್ಯಮ ಪಾಲುದಾರಿಕೆ: ಜಾವಡೇಕರ್

ನವ ದೆಹಲಿ: ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ ಪ್ರಕಾಶ್ ಜಾವಡೇಕರ್ ಒಟಿಟಿ ಉದ್ಯಮದ ಪ್ರತಿನಿಧಿಗಳನ್ನು ಗುರುವಾರ ಭೇಟಿ ಮಾಡಿದ್ದು, ಸರ್ಕಾರದ ಹೊಸ ಮಾರ್ಗಸೂಚಿಯನ್ನು ಅವರು ಒಪ್ಪಿಕೊಂಡಿರುವುದಾಗಿ ತಿಳಿಸಿದ್ದಾರೆ. ಪ್ರೇಕ್ಷಕರಿಗೆ ವೇದಿಕೆಯ ಉತ್ತಮ ಅನುಭವನ್ನುಂಟು ಮಾಡಲು ಸಚಿವಾಲಯದೊಂದಿಗೆ ಒಟಿಟಿ ಉದ್ಯಮ ಪಾಲುದಾರರಾಗಲಿದ್ದಾರೆ ಎಂದು ಹೇಳಿದ್ದಾರೆ. ಒಟಿಟಿ ಉದ್ಯಮದ ಪ್ರತಿನಿಧಿಗಳ ಜೊತೆಗಿನ ಮಾತುಕತೆ ಫಲಪ್ರದವಾಗಿದೆ. ಎಲ್ಲಾ … Continued

ಶ್ರೀಧರನ್‌ ಕೇರಳ ಸಿಎಂ ಅಭ್ಯರ್ಥಿ ಘೋಷಣೆಯೂ…ಯೂ ಟರ್ನ್‌ ಗೊಂದಲವೂ

  ಕೊಚ್ಚಿ: ಮೆಟ್ರೋ ಮ್ಯಾನ್‌ ಇ ಶ್ರೀಧರನ್‌ ಅವರ ಮುಖ್ಯಮಂತ್ರಿ ಅಭ್ಯರ್ಥಿ ಘೋಷಣೆ ವಿಚಾರದಲ್ಲಿ ಗೊಂದಲವೇರ್ಪಟ್ಟಿದೆ. ಇ ಶ್ರೀಧರನ್‌ ಅವರು ಕೇರಳದ ಏ.೬ರಂದು ನಡೆಯಲಿರುವ ಕೇರಳದ ವಿಧಾನಸಭೆ ಚುನಾವಣೆಯ ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಗುರುವಾರ ಬಿಜೆಪಿ ಕೇರಳದ ರಾಜ್ಯಾಧ್ಯಕ್ಷ ಗುರುವಾರ ಘೋಷಣೆ ಮಾಡಿದ ಬೆನ್ನಲ್ಲೇ ಇದು ದೊಡ್ಡ ಸುದ್ದಿಯಾಯಿತು, ಇದು ಸಾಕಷ್ಟು ಸುದ್ದಿಯಾಗುತ್ತಿದ್ದಂತೆಯೇ ದೆಹಲಿಯಲ್ಲಿ … Continued