ಬಂಗಾಳದಲ್ಲಿ ಅತಂತ್ರವಾದರೆ ಟಿಎಂಸಿ-ಬಿಜೆಪಿ ಸರ್ಕಾರದ ರಚನೆ, ಯಾಕಂದ್ರೆ ಇಬ್ಬರು ಹಳೆಯ ಮಿತ್ರರು: ಯೆಚೂರಿ

ಭಾನುವಾರ ನಡೆದ ಕಾಂಗ್ರೆಸ್‌ ಹಾಗೂ ಎಡಪಕ್ಷಗಳ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣಾ ಬೃಹತ್ ಸಮಾವೇಶದಲ್ಲಿರಾಜ್ಯದ ತೃಣಮೂಲ ಕಾಂಗ್ರೆಸ್‌ ಸರ್ಕಾರ ಹಾಗೂ ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿ ಜನಶಕ್ತಿ ಮೂಲಕ ಈ ಸರ್ಕಾರಗಳನ್ನು ಕಿತ್ತು ಹಾಕಬೇಕು ಎಂದು ಹೇಳಿದರು. ಸಿಪಿಐ (ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ, ಆರ್‌ಎಸ್‌ಎಸ್-ಬಿಜೆಪಿಯ ಕೋಮುವಾದಿ ತಂಡವನ್ನು ತಡೆಯಲು … Continued

ಕೊರೊನಾ ಹೆಚ್ಚಳ: ಪುಣೆಯಲ್ಲಿ ಶಾಲೆಗಳು ಮಾ.೧೪ರ ವರೆಗೆ ಸ್ಥಗಿತ

ಪುಣೆಯಲ್ಲಿ ಸಿಒವಿಐಡಿ -19 ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಪುಣೆ ಜಿಲ್ಲಾಡಳಿತ ಭಾನುವಾರ ರಾತ್ರಿ ಕರ್ಫ್ಯೂ ಮತ್ತು ಶಾಲೆಗಳನ್ನು ಸ್ಥಗಿತಗೊಳಿಸಿರುವುದನ್ನು ಮಾರ್ಚ್ 14ರ ವರೆಗೆ ವಿಸ್ತರಿಸಿದೆ. ಅಗತ್ಯ ಸೇವೆಗಳನ್ನು ಕರ್ಫ್ಯೂನಿಂದ ವಿನಾಯಿತಿ ನೀಡಲಾಗಿದೆ. ಫೆಬ್ರವರಿ 28 ರ ವರೆಗೆ ಪುಣೆ ನಗರದಲ್ಲಿ ವಿಧಿಸಲಾದ ಸಿಒವಿಐಡಿ -19 ನಿರ್ಬಂಧಗಳನ್ನು ಮಾರ್ಚ್ 14ರ ವರೆಗೆ ವಿಸ್ತರಿಸಲಾಗಿದೆ” ಎಂದು ಪುಣೆ ಮೇಯರ್‌ … Continued

ತಮಿಳು ಭಾಷೆಯ ಹಿರಿಮೆ ಹೊಗಳಿದ ಪ್ರಧಾನಿ ಮೋದಿ

ಸುಂದರ ಭಾಷೆಗಳಲ್ಲೊಂದಾದ ತಮಿಳು ಕಲಿಯಲು ಸಾಧ್ಯವಾಗದಿರುವುದಕ್ಕೆ ವ್ಯಥೆಯಾಗುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಅವರು ಮನ್‌ ಕೀ ಬಾತ್‌ನಲ್ಲಿ ಮಾತನಾಡಿ, ಅತ್ಯಂತ ಹಳೆಯ ಭಾಷೆ ತಮಿಳು ಸುಂದರ ಭಾಷೆಯಾಗಿದ್ದು, ಅದು ವಿಶ್ವದಾದ್ಯಂತ ಜನಪ್ರಿಯ ಭಾಷೆಯಾಗಿದೆ ಎಂದು ಬಣ್ಣಿಸಿದರು. ತಮಿಳು ಕಲಿಯಲು ಸಾಧ್ಯವಾಗದಿರುವುದು ಒಂದು ವಿಷಾದವಾಗಿದೆ ವಿಶ್ವದ ಅತ್ಯಂತ ಹಳೆಯ ಭಾಷೆ ತಮಿಳು ಕಲಿಯಬೇಕು. ತಮಿಳು … Continued

ಎನ್‌ಡಿಎ ಮೀನುಗಾರಿಕೆ ಸಚಿವಾಲಯ ಆರಂಭವಾದಾಗ ರಾಹುಲ್‌ ರಜೆ ಮೇಲಿದ್ರು: ಶಾ ಟೀಕೆ

ಎನ್‌ಡಿಎ ಸರಕಾರ ೨೦೧೯ರಲ್ಲಿ ಮೀನುಗಾರಿಕೆ ಸಚಿವಾಲಯ ಆರಂಭಿಸಿದಾಗ ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ ರಜೆಯಲ್ಲಿದ್ದರು ಎಂದು ಗೃಹ ಸಚಿವ ಅಮಿತ್‌ ಶಾ ಟೀಕಿಸಿದರು. ಕೆಲ ದಿನಗಳ ಹಿಂದೆ ರಾಹುಲ್ ಗಾಂಧಿ ಅವರು ಮೀನುಗಾರಿಕೆ ಇಲಾಖೆ ಏಕೆ ಇಲ್ಲ ಎಂದು ಕೇಳಿದ್ದರು. ಮೀನುಗಾರಿಕಾ ಇಲಾಖೆ 2 ವರ್ಷಗಳಿಂದ ಅಸ್ತಿತ್ವದಲ್ಲಿದೆ ಎಂಬ ವಿಷಯ ತಿಳಿಯದ ನಾಯಕನನ್ನು ಜನರು ಹೇಗೆ … Continued

ಬ್ರಿಟೀಷರನ್ನೇ ಓಡಿಸಿದ್ದೇವೆ ಮೋದಿ ಯಾವ ಲೆಕ್ಕ: ರಾಹುಲ್‌ ಗಾಂಧಿ

ಬ್ರಿಟೀಷರನ್ನೇ ಸೋಲಿಸಿದ್ದೇವೆ ಇನ್ನು ನರೇಂದ್ರ ಮೋದಿ ಯಾವ ಲೆಕ್ಕ ಎಂದು ಕಾಂಗ್ರೆಸ್‌ ಮುಖಂಡ ರಾಹುಲ್‌‌ ಗಾಂಧಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ತಿರುನಲ್ವೇಲಿಯಲ್ಲಿ ನಡೆದ ಸಂವಾದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಹಣದ ಪ್ರಭಾವ ಬಳಸಿ ದೇಶವನ್ನು ನಿಯಂತ್ರಿಸಲು ಹಾಗೂ ವಿರೋಧಿಗಳನ್ನು ಹಣಿಯಲು ಪ್ರಯತ್ನಿಸುತ್ತಿರುವವರ ವಿರುದ್ಧ ನಾವು ಹೋರಾಟ ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ. ನಾವು … Continued

ವಿಚಾರಣೆಯ ವಿಡಿಯೋ ಕಾನ್ಫರೆನ್ಸ್‌ ಹಂಚಿಕೊಳ್ಳಲು ವ್ಯಾಟ್ಸಾಪ್‌ ಗುಂಪು ಬಳಸುವಂತಿಲ್ಲ: ಸುಪ್ರಿಂ ಕೋರ್ಟ್‌

ನ್ಯಾಯಾಲಯದ ವಿಚಾರಣೆಯ ವಿಡಿಯೋ ಕಾನ್ಫರೆನ್ಸ್ ಲಿಂಕ್‌ಗಳನ್ನು ಹಂಚಿಕೊಳ್ಳಲು ಇನ್ನು ಮುಂದೆ ವಾಟ್ಸಾಪ್ ಗುಂಪುಗಳನ್ನು ಬಳಸುವಂತಿಲ್ಲ ಎಂದು ಸರ್ವೋಚ್ಚ ನ್ಯಾಯಾಲಯ ಸೂಚನೆ ನೀಡಿದೆ. ವಾಟ್ಸಾಪ್ ಬದಲಿಗೆ, ನೋಂದಾಯಿತ ಇಮೇಲ್ ಐಡಿಗಳಲ್ಲಿ ಮತ್ತು ಸಂಬಂಧಪಟ್ಟ ವಕೀಲರ ನೋಂದಾಯಿತ ಮೊಬೈಲ್ ಸಂಖ್ಯೆಗಳು, ರೆಕಾರ್ಡ್ ಮತ್ತು ಪಾರ್ಟಿ-ಇನ್-ಪರ್ಶನ್‌ನಲ್ಲಿ ಸರ್ವೋಚ್ಚ ನ್ಯಾಯಾಲಯದ ವಿಡಿಯೋಕಾನ್ಫೆರೆನ್ಸ್‌ ಲಿಂಕ್‌ಗಳನ್ನು ಹಂಚಿಕೊಳ್ಳಲಾಗುವುದು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ. ಹೊಸ ಅಧಿಸೂಚನೆಯನ್ವಯ … Continued

ಶಿವಸೇನೆ ಸಚಿವ ಸಂಜಯ ರಾಥೋಡ್‌ ರಾಜೀನಾಮೆ

ಮುಂಬೈ: 23 ವರ್ಷದ ಪುಣೆ ಮಹಿಳೆಯ ಆತ್ಮಹತ್ಯೆ ಪ್ರಕರಣದಲ್ಲಿ ಆರೋಪ ಎದುರಿಸುತ್ತಿರುವ ಶಿವಸೇನೆ ಸಚಿವ ಸಂಜಯ್ ರಾಥೋಡ್ ಅವರು ಭಾನುವಾರ ಮಧ್ಯಾಹ್ನ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರಿಗೆ ರಾಜೀನಾಮೆ ನೀಡಿದ್ದಾರೆ. ರಾಜೀನಾಮೆ ಅಂಗೀಕರಿಸಲಾಗಿದೆ. ಬೆಳವಣಿಗೆಗಳ ಬಗ್ಗೆ ತಿಳಿದಿರುವ ನಾಯಕರು, ಅರಣ್ಯ ವಿಪತ್ತು ನಿರ್ವಹಣಾ ಸಚಿವರು, ಠಾಕ್ರೆ ಅವರ ರಾಜೀನಾಮೆಯನ್ನು ವಿಚಾರಣೆ ಮುಗಿಯುವವರೆಗೂ ಸ್ವೀಕರಿಸದಂತೆ ವಿನಂತಿಸಿದ್ದಾರೆ. … Continued

ಕೆಂಪು ಕೋಟೆ ಹಿಂಸಾಚಾರ ಬಿಜೆಪಿ ಪೂರ್ವ ನಿಯೋಜಿತ ಕೃತ್ಯ: ಕೇಜ್ರಿವಾಲ್‌

ಗಣರಾಜ್ಯೋತ್ಸವದಿನದಂದು ದೆಹಲಿಯ ಕೆಂಪುಕೋಟೆಯಲ್ಲಿ ನಡೆದ ಹಿಂಸಾಚಾರ ಬಿಜೆಪಿಯ ಪೂರ್ವ ನಿಯೋಜಿತ ಕೃತ್ಯ ಎಂದು ಎಎಪಿ ಮುಖಂಡ ಅರವಿಂದ ಕೇಜ್ರಿವಾಲ್‌ ಆರೋಪಿಸಿದ್ದಾರೆ. ಉತ್ತರ ಪ್ರದೇಶದ ಮೀರತ್‌ನಲ್ಲಿ ಕಿಸಾನ್‌ ಮಹಾಪಂಚಾಯತ್‌ನಲ್ಲಿ ಮಾತನಾಡಿ, ಕೆಂಪು ಕೋಟೆಯಲ್ಲಿ ನಡೆದ ಹಿಂಸಾಚಾರವನ್ನು ಕೇಸರಿ ಪಕ್ಷ ಮೊದಲೇ ಯೋಜಿಸಿತ್ತು. ಕೇಂದ್ರದ ಮೂರು ಕೃಷಿ ಕಾನೂನುಗಳು ರೈತರಿಗೆ ಡೆತ್ ವಾರಂಟ್ ಇದ್ದಂತೆ ಎಂದರು. ಇಡೀ ಕೆಂಪು … Continued

ಪುದುಚೇರಿ: ಕಾಂಗ್ರೆಸ್‌ಗೆ‌ ಮೊದಲ ಶಾಂಕಿಂಗ್‌ ನ್ಯೂಸ್‌…!

ಪುದುಚೇರಿ: ತನ್ನ ಆಂತರಿಕ ಭಿನ್ನಮತದಿಂದಾಗಿ ಇತ್ತೀಚೆಗೆ ಸರ್ಕಾರ ಕಳೆದುಕೊಂಡ ಕಾಂಗ್ರೆಸ್ ಏ.೬ರಂದು ನಡೆಯಲಿರುವ ವಿಧಾನಸಭೆ ಚುನಾವಣೆಯಲ್ಲೂ ಹಿನ್ನಡೆ ಅನುಭವಿಸಲಿದೆ ಎಂದು ಚುನಾವಣಾ ಪೂರ್ವ ಸಮೀಕ್ಷೆಯೊಂದು ಹೇಳಿದೆ. ಚುನಾವಣಾಪೂರ್ವ ಸಮೀಕ್ಷೆ ನಡೆಸಿರುವ ಎಬಿಪಿ-ವೋಟರ್ಸ್ ಸಮೀಕ್ಷೆ ಪಾಂಡಿಚೇರಿಯಲ್ಲಿ ಬಿಜೆಪಿ ಅಧಿಕಾರ ಹಿಡಿಯುವ ಸಾಧ್ಯತೆ ಹೆಚ್ಚಿದೆ ಎಂದು ಹೇಳಿದೆ. ಒಟ್ಟು ೩೦ ವಿಧಾಸಭಾ ಕ್ಷೇತ್ರವಿರುವ ಪುದುಚೇರಿ ಕೇಂದ್ರಾಡಳಿತ ಪ್ರದೇಶವಾಗಿರುವ ಏಪ್ರಿಲ್ … Continued

ಅಹ್ಮದಾಬಾದ ಕ್ರೀಡಾಂಗಣಕ್ಕಿಟ್ಟ ಮೋದಿ ಹೆಸರು ತೆಗೆಯಲು ‌ಸ್ವಾಮಿ ಆಗ್ರಹ

ಅಹ್ಮದಾಬಾದ್‌ ಕ್ರೀಡಾಂಗಣಕ್ಕಿಡಲಾದ ತಮ್ಮ ಹೆಸರನ್ನು ತೆಗೆದುಹಾಕಬೇಕು ಎಂದು ಬಿಜೆಪಿ ರಾಜ್ಯಸಭಾ ಸದಸ್ಯ ಸುಬ್ರಮಣಿಯನ್‌ ಸ್ವಾಮಿ ಆಗ್ರಹಿಸಿದ್ದಾರೆ. ಕ್ರೀಡಾಂಗಣಕ್ಕೆ ತಮ್ಮ ಹೆಸರಿಡುವಂತೆ ಹೇಳುವ ರಾಷ್ಟ್ರದ ನಾಯಕರು ಯಾರಾದರೂ ಇದ್ದಾರೆಯೇ ಎಂದು ಅವರು ಟ್ವೀಟ್‌ ಮಾಡಿದ್ದಾರೆ. ನನ್ನ ಪ್ರಕಾರ ತಮ್ಮ ಹೆಸರಿಡುವಂತೆ ಸೂಚಿಸುವವರು ಸದ್ದಾಂ ಹುಸೇನ್ ಮತ್ತು ಗಡಾಫಿ ಇಬ್ಬರು ಮಾತ್ರ ಎಂದು ಅಭಿಪ್ರಾಯಪಟ್ಟರು. ನೆಹರೂ, ಮಾವೋ ಅಥವಾ … Continued