ವಿಶ್ವದ ಅತಿ ಎತ್ತರದ ಯುದ್ಧಭೂಮಿ ಸಿಯಾಚಿನ್‌ನ ಕುಮಾರ ಪೋಸ್ಟ್‌ಗೆ ಮೊದಲ ಮಹಿಳಾ ಅಧಿಕಾರಿ ನಿಯೋಜನೆ..!

ನವದೆಹಲಿ : ಜಗತ್ತಿನ ಅತಿ ಎತ್ತರದ ಹಾಗೂ ಕ್ಲಿಷ್ಟಕರ ಯುದ್ಧ ಭೂಮಿ ಎಂದೇ ಖ್ಯಾತಿ ಪಡೆದಿರುವ ಸಿಯಾಚಿನ್‌ನಲ್ಲಿ ಇದೇ ಮೊದಲ ಬಾರಿಗೆ ಮಹಿಳಾ ಅಧಿಕಾರಿಯೊಬ್ಬರು ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದಾರೆ. ಸಿಯಾಚಿನ್ ಗ್ಲೇಸಿಯರ್‌ನ ಕುಮಾರ ಪೋಸ್ಟ್ ಯುದ್ಧ ಭೂಮಿಯಲ್ಲಿ ಮಹಿಳಾ ಅಧಿಕಾರಿ ಕ್ಯಾಪ್ಟನ್ ಶಿವ ಚೌಹಾಣ್ ಅವರನ್ನು ನಿಯೋಜನೆ ಮಾಡಲಾಗಿದೆ. ಈ ಸಂಬಂಧ ಭಾರತೀಯ ಸೇನೆಯ ಫೈರ್ ಅಂಡ್ … Continued

ಸಚಿವರು, ಸಂಸದರು, ಶಾಸಕರ ವಾಕ್ ಸ್ವಾತಂತ್ರ್ಯದ ಮೇಲೆ ಹೆಚ್ಚುವರಿ ನಿರ್ಬಂಧಗಳನ್ನು ವಿಧಿಸಲು ಸಾಧ್ಯವಿಲ್ಲ: ಸುಪ್ರೀಂ ಕೋರ್ಟ್

ನವದೆಹಲಿ: ಸಂಸತ್ತಿನ ಸದಸ್ಯರು (ಸಂಸದರು), ಸಚಿವರು ಮತ್ತು ವಿಧಾನಸಭೆಯ ಸದಸ್ಯರು (ಎಂಎಲ್‌ಎಗಳು) ಸಂವಿಧಾನದ 19 (1) (ಎ) ಪರಿಚ್ಛೇದದ ಅಡಿಯಲ್ಲಿ ಇತರ ನಾಗರಿಕರಂತೆ ಸಮಾನ ಪ್ರಮಾಣದಲ್ಲಿ ವಾಕ್ ಸ್ವಾತಂತ್ರ್ಯವನ್ನು ಆನಂದಿಸುತ್ತಾರೆ ಎಂದು ಸುಪ್ರೀಂ ಕೋರ್ಟ್ ಮಂಗಳವಾರ ಹೇಳಿದೆ. ಅಂತಹ ಸಾರ್ವಜನಿಕ ಕಾರ್ಯಕರ್ತರ ವಾಕ್ ಸ್ವಾತಂತ್ರ್ಯದ ಮೂಲಭೂತ ಹಕ್ಕಿನ ಮೇಲೆ ಹೆಚ್ಚುವರಿ ನಿರ್ಬಂಧಗಳನ್ನು ವಿಧಿಸಲಾಗುವುದಿಲ್ಲ ಎಂದು ಸುಪ್ರೀಂ … Continued

ದೆಹಲಿಯ ಭಯಾನಕ ಘಟನೆ: ಅಪಘಾತದಲ್ಲಿ ಯುವತಿ ಕಾರಿನಡಿ ಸಿಲುಕಿಕೊಂಡಾಗ ಸ್ಥಳದಿಂದ ಪರಾರಿಯಾದ ಸ್ಕೂಟಿಯಲ್ಲಿದ್ದ ಸ್ನೇಹಿತೆ-ವರದಿ

ನವದೆಹಲಿ: ದೆಹಲಿಯ ಅಂಜಲಿ ಸಿಂಗ್ ಅವರು 13 ಕಿ.ಮೀ ದೂರದವರೆಗೆ ಕಾರಿನಡಿ ಎಳೆದೊಯ್ದು ಸಾವಿಗೀಡಾದ ನಂತರ ರಾಷ್ಟ್ರ ರಾಜಧಾನಿಯಲ್ಲಿ ಮಹಿಳೆಯರ ಸುರಕ್ಷತೆಯ ಬಗ್ಗೆ ಮತ್ತೊಮ್ಮೆ ಪ್ರಶ್ನೆಗಳನ್ನು ಎತ್ತಿವೆ. ಅವರ ಸ್ಕೂಟರ್ ಅಪಘಾತವಾದಾಗ ಅವರು ಒಬ್ಬಂಟಿಯಾಗಿರಲಿಲ್ಲ ಎಂದು ಮೂಲಗಳು ತಿಳಿಸಿವೆ. ಈ ಹೊಸ ವರ್ಷದ ಮುಂಜಾನೆ ನಡೆದ ದೆಹಲಿ ಶಾಕರ್‌ಗೆ ಸಿಕ್ಕ ಹೊಸ ಟ್ವಿಸ್ಟ್‌ನಲ್ಲಿ, 20 ವರ್ಷದ … Continued

ನಡೆದಾಡುವ ದೇವರು ಖ್ಯಾತಿಯ ವಿಜಯಪುರ ಜ್ಞಾನ ಯೋಗಾಶ್ರಮದ ಶ್ರೀ ಸಿದ್ದೇಶ್ವರ ಸ್ವಾಮೀಜಿ ಲಿಂಗೈಕ್ಯ

ವಿಜಯಪುರ: ನಡೆದಾಡುವ ದೇವರು ಎಂದೇ ಖ್ಯಾತರಾಗಿದ್ದ ಜ್ಞಾನಯೋಗಿ ಆಶ್ರಮದ ಸಿದ್ದೇಶ್ವರ ಸ್ವಾಮೀಜಿ(82) ವಿಧಿವಶರಾಗಿದ್ದಾರೆ. ಇಂದು ಸೋಮವಾರ ಸಂಜೆ 6:05ಕ್ಕೆ ಸ್ವಾಮೀಜಿ ಲಿಂಗೈಕ್ಯರಾದರು. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಸಿದ್ದೇಶ್ವರ ಶ್ರೀಗಳ ಆರೋಗ್ಯದಲ್ಲಿ ಏರುಪೇರು ಉಂಟಾಗಿ ಆಶ್ರಮದ ಕೊಠಡಿಯಲ್ಲೇ ಚಿಕಿತ್ಸೆ ನಡೆದಿತ್ತು. ಜಿಲ್ಲಾಧಿಕಾರಿ ಡಾ. ವಿಜಯ ಮಾಂತೇಶ ದಾನಮನ್ನವರ, ಎಸ್ಪಿ ಎಚ್. ಡಿ.ಆನಂದ್ ಕುಮಾರ್ ಹಾಗೂ ಹಲವು ಮಠಾಧೀಶರು … Continued

ಪಂಜಾಬ್ ಸಿಎಂ ಭಗವಂತ್ ಮಾನ್ ಮನೆ ಬಳಿ ಬಾಂಬ್ ಪತ್ತೆ

ಚಂಡೀಗಡ: ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರ ನಿವಾಸದ ಬಳಿ ಇಂದು, ಸೋಮವಾರ ಸ್ಫೋಟಕ ಎಂದು ಭಾವಿಸಲಾದ ಅನುಮಾನಾಸ್ಪದ ವಸ್ತು ಪತ್ತೆಯಾಗಿದೆ. ಪಂಜಾಬ್ ಮುಖ್ಯಮಂತ್ರಿ ಬಳಸುತ್ತಿದ್ದ ಹೆಲಿಪ್ಯಾಡ್‌ನಿಂದ ಸ್ವಲ್ಪ ದೂರದಲ್ಲಿರುವ ಸ್ಥಳಕ್ಕೆ ಬಾಂಬ್ ನಿಷ್ಕ್ರಿಯ ದಳವನ್ನು ತಕ್ಷಣವೇ ರವಾನಿಸಲಾಯಿತು. ಭಾರತೀಯ ಸೇನೆಯ ವೆಸ್ಟರ್ನ್ ಕಮಾಂಡ್ ಅನ್ನು ಕೂಡ ತನಿಖೆಗಾಗಿ ಲೂಪ್ ಮಾಡಲಾಗಿದೆ. ಇಂದು ಸೋಮವಾರ ಸಂಜೆ … Continued

ಮ್ಯಾಕ್ಸ್ ಆಸ್ಪತ್ರೆಯ ಖಾಸಗಿ ವಾರ್ಡ್‍ಗೆ ಕ್ರಿಕೆಟಿಗ ರಿಷಭ್ ಪಂತ್ ಸ್ಥಳಾಂತರ

ನವದೆಹಲಿ: ಭೀಕರ ರಸ್ತೆ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಭಾರತದ ವಿಕೆಟ್ ಕೀಪರ್ ರಿಷಭ ಪಂತ್‍ ಅವರ ಆರೋಗ್ಯದಲ್ಲಿ ತುಸು ಚೇತರಿಕೆ ಕಂಡಿದ್ದು, ಅವರನ್ನು ಮ್ಯಾಕ್ಸ್ ಆಸ್ಪತ್ರೆಯ ಸುಸಜ್ಜಿತ ಖಾಸಗಿ ವಾರ್ಡ್‍ಗೆ ಶಿಫ್ಟ್ ಮಾಡಲಾಗಿದೆ. ಡಿಡಿಸಿಎ ನಿರ್ದೇಶಕ ಶ್ಯಾಂ ಶರ್ಮಾ ಅವರು ರಿಷಭ್ ಪಂತ್‍ ಅವರ ಆರೋಗ್ಯದ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, `ಡಿಸೆಂಬರ್ 30ರಂದು ಕಾರಿನ … Continued

ಈ 49 ಸ್ಮಾರ್ಟ್‌ಫೋನ್‌ಗಳಲ್ಲಿ ವಾಟ್ಸಾಪ್‌ ಸ್ಥಗಿತವಾಗಲಿದೆ : ಸ್ಮಾರ್ಟ್‌ಫೋನ್‌ಗಳ ಪಟ್ಟಿ ಇಲ್ಲಿದೆ…

ಮೆಟಾ-ಮಾಲೀಕತ್ವದ ಇನ್‌ಸ್ಟೆಂಟ್ ಮೆಸೇಜಿಂಗ್ ಪ್ಲಾಟ್‌ಫಾರ್ಮ್ ವಾಟ್ಸಾಪ್‌ (WhatsApp) ಜನವರಿ 1, 2023 ರಿಂದ ಆಪಲ್, ಸ್ಯಾಮ್‌ಸಂಗ್, ಹುವಾವೇ, ಎಲ್ಜಿ ಮತ್ತು ಇತರ ಹಳೆಯ ಸ್ಮಾರ್ಟ್‌ಫೋನ್‌ಗಳಲ್ಲಿ ಕಾರ್ಯನಿರ್ವಹಣೆ ಸ್ಥಗಿತಗೊಳಿಸಿದೆ. ಈ ಪಟ್ಟಿಯು ಹಳತಾದ ಆಪರೇಟಿಂಗ್ ಸಿಸ್ಟಮ್‌ಗಳಲ್ಲಿ ಕಾರ್ಯನಿರ್ವಹಿಸುವ 49 ಫೋನ್‌ಗಳನ್ನು ಒಳಗೊಂಡಿದೆ. ವಾಟ್ಸಾಪ್‌ (WhatsApp)ನ ಅಧಿಕೃತ ವೆಬ್‌ಸೈಟ್ ಪ್ರಕಾರ, ಓಎಸ್ ಆವೃತ್ತಿ 4.1 (OS version 4.1 … Continued

ನೋಟು ಅಮಾನ್ಯೀಕರಣದ ನಿರ್ಧಾರವನ್ನು 4:1 ಬಹುಮತದೊಂದಿಗೆ ಎತ್ತಿ ಹಿಡಿದ ಸುಪ್ರೀಂ ಕೋರ್ಟ್

ನವದೆಹಲಿ: 2016ರಲ್ಲಿ ಕೇಂದ್ರ ಸರ್ಕಾರ 500 ಮತ್ತು 1000 ರೂಪಾಯಿ ಮುಖಬೆಲೆಯ ನೋಟುಗಳನ್ನು ಅಮಾನ್ಯಗೊಳಿಸುವ ನಿರ್ಧಾರವನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದೆ. ₹ 1,000 ಮತ್ತು ₹ 500 ರ ನೋಟುಗಳನ್ನು ಅಮಾನ್ಯಗೊಳಿಸುವ ಕೇಂದ್ರ ಸರ್ಕಾರದ 2016 ರ ನಿರ್ಧಾರವನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳನ್ನು ಸುಪ್ರೀಂ ಕೋರ್ಟ್‌ನ ಐವರು ನ್ಯಾಯಾಧೀಶರ ಪೀಠ ಸೋಮವಾರ ವಜಾಗೊಳಿಸಿದೆ. ನ್ಯಾಯಮೂರ್ತಿಗಳಾದ … Continued

ಭಾರತದ ನಿರುದ್ಯೋಗ ದರ ಡಿಸೆಂಬರ್‌ನಲ್ಲಿ 16 ತಿಂಗಳಲ್ಲೇ ಗರಿಷ್ಠ ಮಟ್ಟಕ್ಕೆ ಹೆಚ್ಚಳ : ಶೇಕಡ 8.30ಕ್ಕೆ ಏರಿಕೆ

ನವದೆಹಲಿ: ಡಿಸೆಂಬರ್‌ನಲ್ಲಿ ಭಾರತದ ನಿರುದ್ಯೋಗ ದರವು 16 ತಿಂಗಳಲ್ಲೇ ಗರಿಷ್ಠ ಮಟ್ಟ 8.30%ಕ್ಕೆ ಏರಿದೆ. ನವೆಂಬರ್‌ ತಿಂಗಳಲ್ಲಿ ನಿರುದ್ಯೋಗ ದರವು 8%ರಷ್ಟು ಇತ್ತು ಎಂದು ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ (CMIE)ಯ ದತ್ತಾಂಶವು ಜನವರಿ 1 ರಂದು ತೋರಿಸಿದೆ. ಸಿಎಂಐಇ(CMIE) ದತ್ತಾಂಶವು ನಗರ ನಿರುದ್ಯೋಗ ದರವು ಹಿಂದಿನ ತಿಂಗಳಿನ 8.96%ದಿಂದ ಡಿಸೆಂಬರ್‌ನಲ್ಲಿ 10.09 ಶೇಕಡಾಕ್ಕೆ … Continued