ಮತ್ತೊಬ್ಬ ಪ್ರತಿಭಟನಾ ನಿರತ ರೈತ ಆತ್ಮಹತ್ಯೆಗೆ ಶರಣು

ಚಂಡೀಗಢ: ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳ ವಿರುದ್ಧದ ರೈತರ ಪ್ರತಿಭಟನೆ ನೂರು ದಿನ ದಾಟಿದ ಬೆನ್ನಲ್ಲೇ ಮತ್ತೊಬ್ಬ ರೈತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಟಿಕ್ರಿ-ಬಹದ್ದೂರ್‌ಗ ಗಡಿಯಲ್ಲಿ ಭಾನುವಾರ ಹರಿಯಾಣದ ಹಿಸಾರ್ ಜಿಲ್ಲೆಯ ರೈತ ರಾಜ್ಬೀರ್ (55) ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಇನ್ನೂ ಕೃಷಿ ಕಾಯ್ದೆ ಹೋರಾಟದಲ್ಲಿ ಪರಿಹಾರ ಸಿಗದ ಹಿನ್ನೆಲೆಯಲ್ಲಿ ನೊಂದ ಮತ್ತೊಬ್ಬ ರೈತ … Continued

ರಾವಣ, ರಾಕ್ಷಸ, ಗೂಂಡಾ ಎಂದೆಲ್ಲ  ಹೀಯಾಳಿಸಿದಿರಿ… ನನ್ನ ಮೇಲೆ ನಿಮಗೆ ಇಷ್ಟೊಂದು ಕೋಪವೇಕೆ ದೀದಿ?: ಬಿಜೆಪಿ ಸಮಾವೇಶದಲ್ಲಿ ಮೋದಿ ಪ್ರಶ್ನೆ

  ಕೊಲ್ಕತ್ತಾ:ದೀದಿ (ಮಮತಾ ಬ್ಯಾನರ್ಜಿ) ನನ್ನ ಬಗ್ಗೆ ಬಹಳಷ್ಟು ಮಾತನಾಡಿದ್ದಾರೆ. ನನ್ನ ಮೇಲೆ ಅವರಿಗೆ ಕೋಪ ಎಷ್ಟಿತ್ತೆಂದರೆ ಅನೇಕ ಸಲ ರಾವಣ, ರಾಕ್ಷಸ, ಗೂಂಡಾ ಎಂದೆಲ್ಲ ಕರೆದು ನನ್ನನ್ನು ಹೀಯಾಳಿಸಿದ್ದೀರಿ. ದೀದಿಯವರೇ ನನ್ನ ಮೇಲೆ ನಿಮಗೆ ಯಾಕಿಷ್ಟು ಕೋಪ? ಅಂಥದ್ದನ್ನು ನಾನೇನು ಮಾಡಿದ್ದೇನೆ ಎಂದು ಮಾರ್ಮಿಕವಾಗಿ ಕೇಳಿದರು. ಬೃಹತ್‌ ಸಮಾವೇಶದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ … Continued

ಐಪಿಎಲ್‌ಗೆ ಮುಹೂರ್ತ ಫಿಕ್ಸ್‌, ಏ೯ರಿಂದ ಆರಂಭ

ನವ ದೆಹಲಿ: ಕ್ರಿಕೆಟ್ ಪ್ರೇಮಿಗಳು ಕಾತುರದಿಂದ ಕಾಯುತ್ತಿದ್ದ 2021ರ ಇಂಡಿಯನ್​ ಪ್ರೀಮಿಯರ್ ಲೀಗ್ (ಐಪಿಎಲ್)​ ಟೂರ್ನಿಗೆ ಮುಹೂರ್ತ ಫಿಕ್ಸ್ ಆಗಿದ್ದು, ಏಪ್ರಿಲ್​​ 9 ರಿಂದ ಪಂದ್ಯ ಆರಂಭಗೊಳ್ಳಲಿದೆ. ಒಟ್ಟು ೬೦ ಪಂದ್ಯಗಳನ್ನೊಳಗೊಂಡ ಈ ಐಪಿಎಲ್‌ ಪಂದ್ಯಾವಳಿಯು ಏ.೯ರಿಂದ ಆರಂಭವಾಗಲಿದ್ದು, ಅಂತಿಮ ಪಂದ್ಯ ಅಹಮದಾಬಾದ್​ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿದೆ ಎಂದು ತಿಳಿಸಲಾಗಿದೆ. ಪಂದ್ಯಾವಳಿಯು ಏಪ್ರಿಲ್​​ 9 … Continued

ಅಸ್ಸಾಂ: ಕಾಂಗ್ರೆಸ್ಸಿನ 40 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ

ಅಸ್ಸಾಂ: ಅಸ್ಸಾಂ ವಿಧಾನಸಭೆ ಚುನಾವಣೆ ಮಾರ್ಚ್ 27ರಿಂದ ಮೂರು ಹಂತಗಳಲ್ಲಿ ನಡೆಯಲಿದ್ದು, ಕಾಂಗ್ರೆಸ್ ತನ್ನ 40 ಅಭ್ಯರ್ಥಿಗಳ ಪಟ್ಟಿಯನ್ನು ಶನಿವಾರ ಬಿಡುಗಡೆ ಮಾಡಿದೆ. ಒಟ್ಟು ೧೨೬ ಸ್ಥಾನಗಳಿಗೆಚುನಾವಣೆ ನಡೆಯಲಿದೆ.ಅಸ್ಸಾಂನಲ್ಲಿ ಸಿಎಎ ಕಾನೂನು ಪ್ರಮುಖ ಚುನಾವಣಾ ವಿಷಯವಾಗಲಿದ್ದು, ಕಾಂಗ್ರೆಸ್‌ ಈ ಬಾರಿ ಉತ್ತರಾಂಚಲದಲ್ಲಿ ಕಳೆದುಕೊಂಡಿರುವ ವರ್ಚಸ್ಸನ್ನು ಮರಳಿ ಪಡೆಯಲು ಯತ್ನಿಸುತ್ತಿದ್ದು, ಅದಕ್ಕಾಗಿ ಅನೇಕ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಂಡಿದೆ. … Continued

ಶ್ವಾಸಕೋಶದ ಕ್ಯಾನ್ಸರ್‌:ಧೂಮಪಾನಿಗಳಲ್ಲದವರ ತಪಾಸಣೆಯೂ ಮುಖ್ಯ – ಪರಿಣಾಮಕಾರಿ, ತೈವಾನ್ ಅಧ್ಯಯನದಲ್ಲಿ ಬೆಳಕಿಗೆ

ಎಂದಿಗೂ ಧೂಮಪಾನ ಮಾಡದವರಲ್ಲಿ ಶ್ವಾಸಕೋಶದ ಕ್ಯಾನ್ಸರ್ ಹೆಚ್ಚುತ್ತಿರುವುದು ಕಳವಳಕಾರಿಯಾಗಿದೆ. ತೈವಾನ್‌ನ ಹೊಸ ಅಧ್ಯಯನವು ಈ ರೋಗವನ್ನು ಮೊದಲೇ ಗುರುತಿಸಲು ಕೆಲವು ಅಪಾಯಕಾರಿ ಗುಂಪುಗಳ ತಪಾಸಣೆಯ ಮಹತ್ವವನ್ನು ಒತ್ತಿಹೇಳಿದೆ. ಈ ಅಧ್ಯಯನದ ಬಗ್ಗೆ ದಿ ಪ್ರಿಂಟ್‌ ವಿಸ್ತೃತವಾಗಿ ವರದಿ ಮಾಡಿದೆ. ತೈಪೆಯ ನ್ಯಾಷನಲ್ ತೈವಾನ್ ಯೂನಿವರ್ಸಿಟಿ ಕಾಲೇಜ್ ಆಫ್ ಮೆಡಿಸಿನ್‌ನ ಸಂಶೋಧಕರ ಪ್ರಕಾರ, ಕಡಿಮೆ-ಪ್ರಮಾಣದ ಕಂಪ್ಯೂಟೆಡ್ ಟೊಮೊಗ್ರಫಿ … Continued

ಕ್ರಿಪ್ಟೋಕರೆನ್ಸಿ ಮೌಲ್ಯಮಾಪನಕ್ಕೆ ಸರ್ಕಾರ ಮುಕ್ತವಾಗಿದೆ: ಠಾಕೂರ್

ನವ ದೆಹಲಿ : ಆಡಳಿತ ಸುಧಾರಿಸಲು ಮುಕ್ತವಾಗಿ ಕ್ರಿಪ್ಟೋಕರೆನ್ಸಿಗಳು ಸೇರಿದಂತೆ ಹೊಸ ತಂತ್ರಜ್ಞಾನಗಳನ್ನು ಮೌಲ್ಯಮಾಪನ ಮಾಡಲು ಮತ್ತು ಅನ್ವೇಷಿಸಲು ಸರ್ಕಾರ ಮುಕ್ತವಾಗಿದೆ ಕೇಂದ್ರದ ಹಣಕಾಉ ಖಾತೆ ರಾಜ್ಯ ಸಚಿವ ಸಚಿವ ಅನುರಾಗ್ ಠಾಕೂರ್ ಹೇಳಿದ್ದಾರೆ. ವಾಣಿಜ್ಯೋದ್ಯಮಿಗಳ ಸಂಘಟನೆ – ಇಒ ಪಂಜಾಬ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರೇ ಆಡಳಿತದ ವಿವಿಧ … Continued

ಜೈ ಶ್ರೀರಾಮ್ ಉತ್ತರ ಪ್ರದೇಶ, ಬಂಗಾಳದಲ್ಲಷ್ಟೇ ಅಲ್ಲ ಭಾರತದಾದ್ಯಂತ ಕೆಲಸ ಮಾಡುತ್ತದೆ: ಯೋಗಿ ಆದಿತ್ಯನಾಥ್

“ಜೈ ಶ್ರೀ ರಾಮ್ ಉತ್ತರ ಪ್ರದೇಶ ಮೇ ಭೀ ಚಾಲೆಗಾ, ಬಂಗಾಳ ಮೇ ಭೀ ಚಲೆಗಾ, ಪೂರೇ ದೇಶ್ ಮೇ ಭೀ ಚಲೆಗಾ (ಜೈ ಶ್ರೀ ರಾಮ್ ಉತ್ತರ ಪ್ರದೇಶ, ಬಂಗಾಳ ಮತ್ತು ಭಾರತದಾದ್ಯಂತ ಕೆಲಸ ಮಾಡುತ್ತದೆ)” ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ. ಸುದ್ದಿ ಚಾನೆಲ್ ನ್ಯೂಸ್ ನೇಷನ್ ಆಯೋಜಿಸಿದ್ದ ಉತ್ತರ … Continued

ಉಜ್ವಲ ಯೋಜನೆಯಡಿ ಮೂರು ಸಿಲಿಂಡರ್‌ ಉಚಿತ ನೀಡಲು ಕೇಂದ್ರ ಚಿಂತನೆ

ನವದೆಹಲಿ: ಉಜ್ವಲ ಯೋಜನೆಯಡಿ ಮೂರು ಗೃಹ ಬಳಕೆ ಅನಿಲ ಸಿಲಿಂಡರ್ ಗಳನ್ನು ಉಚಿತವಾಗಿ ನೀಡಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. 14.2 ಕೆಜಿ ಗೃಹಬಳಕೆ ಅಡುಗೆ ಅನಿಲ ಸಿಲಿಂಡರ್ ದರ ಈಗ 800 ರೂ.ಗಳಿಗಿಂತಲೂ ಹೆಚ್ಚಾಗಿರುವುದರಿಂದ ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. ಇದು ಕಾರ್ಯಗತವಾದರೆ ಏಪ್ರಿಲ್‌ನಿಂದ ಮೂರು ತಿಂಗಳ ಕಾಲ ಉಜ್ವಲ ಯೋಜನೆ ಫಲಾನುಭವಿಗಳಿಗೆ ತಿಂಗಳಿಗೆ … Continued

ಮಮತಾ ೫೦ ಸಾವಿರ ಮತಗಳ ಅಂತರದಿಂದ ಸೋಲುತ್ತಾರೆ: ಸುವೇಂದು ಪುನರುಚ್ಚಾರ

ಬಿಜೆಪಿ ಶನಿವಾರ ನಂದಿಗ್ರಾಮ್ ಕ್ಷೇತ್ರದಿಂದ ಟಿಎಂಸಿ ಟರ್ನ್ ಕೋಟ್ ಸುವೆಂದು ಅಧಿಕಾರಿಯ ಉಮೇದುವಾರಿಕೆಯನ್ನು ಘೋಷಿಸುವುದರೊಂದಿಗೆ, ಮುಂಬರುವ ಪಶ್ಚಿಮ ಬಂಗಾಳ ವಿಧಾನಸಭೆಯಲ್ಲಿ ಅತ್ಯುನ್ನತ ಸ್ಥಾನದಲ್ಲಿರುವ ಅವರು ಮತ್ತು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನಡುವಿನ ರಾಯಲ್‌ ಕದನಕ್ಕೆ ವೇದಿಕೆ ಸಜ್ಜಾಗಿದೆ. ಮಮತಾ ಬ್ಯಾನರ್ಜಿಯನ್ನು 50,000 ಕ್ಕೂ ಹೆಚ್ಚು ಮತಗಳಿಂದ ಸೋಲಿಸುವುದಾಗಿ ಸುವೆಂದು ಅಧಿಕಾರಿ ಶನಿವಾರ ಮತ್ತೆ ಪುನರುಚ್ಚರಿಸಿದ್ದಾರೆ. ಬಿಜೆಪಿ … Continued

ಕೊನೆಗೂ ಶವ ಸ್ವೀಕರಿಸಿದ ಹಿರೆನ್‌ ಕುಟುಂಬ , ಫಾರೆನ್ಸಿಕ್‌ಗೆ ವಿಸೆರಾ ಸಂರಕ್ಷಣೆ

ಥಾಣೆ: ಉದ್ಯಮಿ ಮನ್ಸುಖ್ ಹಿರೆನ್ ಅವರ ಶವಪರೀಕ್ಷೆಯ ಸುಮಾರು 18 ಗಂಟೆಗಳ ನಂತರ – ಅವರ ದೇಹವನ್ನು ಥಾಣೆ ಕ್ರೀಕ್ ಜವುಗು ಪ್ರದೇಶದಿಂದ ಹೊರತೆಗೆಯಲಾಯಿತು.ಅವರ ವಿಚಲಿತ ಕುಟುಂಬವು ಶನಿವಾರ ಸಂಜೆಯ ನಂತರ ಕೊನೆಯ ವಿಧಿಗಳಿಗಾಗಿ ಅವರ ಶವವನ್ನು ಸ್ವೀಕರಿಸಿತು, ಅವರ ಸಹೋದರ ಸೇರಿದಂತೆ ನಿಕಟ ಸಂಬಂಧಿಗಳು ಆಸ್ಪತ್ರೆಗೆ ತೆರಳಿ ಔಪಚಾರಿಕತೆಗಳನ್ನು ಪೂರ್ಣಗೊಳಿಸಿ ನಂತರ ಹಿರೆನ್ ಶವವನ್ನು … Continued