ಕೋವಾಕ್ಸಿನ್ ‘ತೀವ್ರ ಕೋವಿಡ್ ಕಾಯಿಲೆ’ಯ ವಿರುದ್ಧ 100% ಪರಿಣಾಮಕಾರಿ: ಹಂತ -3 ಮಧ್ಯಂತರ ವಿಶ್ಲೇಷಣೆಯಲ್ಲಿ ಕಂಡುಬಂದ ಫಲಿತಾಂಶ

ನವ ದೆಹಲಿ: ಭಾರತದ ಮೊದಲ ಮತ್ತು ಏಕೈಕ ದೇಶೀಯವಾಗಿ ಅಭಿವೃದ್ಧಿಪಡಿಸಿದ ಕೋವಿಡ್ -19 ಲಸಿಕೆ ಕೋವಾಕ್ಸಿನ್‌ನ 3 ನೇ ಹಂತದ ಪರಿಣಾಮಕಾರಿತ್ವದ ಪ್ರಯೋಗದ ಫಲಿತಾಂಶಗಳನ್ನು ಭಾರತ್ ಬಯೋಟೆಕ್ ಮತ್ತು ಐಸಿಎಂಆರ್ ಬುಧವಾರ ಪ್ರಕಟಿಸಿದ್ದು, ಇದು ಒಟ್ಟಾರೆ 78% ಮಧ್ಯಂತರ ಕ್ಲಿನಿಕಲ್ ಪರಿಣಾಮಕಾರಿತ್ವವನ್ನು ಹೊಂದಿದೆ ಮತ್ತು ಗಂಭೀರ ರೋಗದ ವಿರುದ್ಧ 100% ಪರಿಣಾಮಕಾರಿತ್ವವನ್ನು ಹೊಂದಿದೆ ಎಂದು ಹೇಳಿವೆ. … Continued

ಕೊರೊನಾ ಎಲ್ಲೆಡೆ ಇದೆ, ಹೃದಯ ಒಡೆದಿದೆ..ನಾವು ಅಸಹಾಯಕರಾಗಿದ್ದೇವೆ: ಕೊವಿಡ್‌ ಪರಿಸ್ಥಿತಿಗೆ ಕಣ್ಣೀರಿಟ್ಟ ವೈದ್ಯೆ ವಿಡಿಯೋ ವೈರಲ್‌

ಮುಂಬೈ: ಕೋವಿಡ್-19 ಜನರ ಶ್ವಾಸಕೋಶದ ಮೇಲೆ ಆಕ್ರಮಣ ಮಾಡುತ್ತಿದೆ. ದೇಶದಲ್ಲಿ ಕೊರೊನಾ ಎರಡನೇ ಅಲೆ ಪರಿಸ್ಥಿತಿ ಆತಂಕಕಾರಿ ಹಂತದಲ್ಲಿದೆ, ವೈದ್ಯರು ಸಹ ಬಹುತೇಕ ಅಸಹಾಯಕರಾಗಿದ್ದಾರೆ.ಒಂದು ವರ್ಷದಿಂದ ಕೆಲಸ ಮಾಡಿ ಮಾಡಿ ಬಸವಳಿದಿದ್ದಾರೆ. ವೈದ್ಯಕೀಯ ವ್ಯವಸ್ಥೆ ಕೊರೊನಾ ಒತ್ತಡದಿಂದ ಕುಸಿಯುವ ಭೀತಿ ಎದುರಿಸುತ್ತಿದೆ. ಇದಕ್ಕೆ ಪುಷ್ಟಿ ನೀಡುವಂತೆ ವೈದ್ಯರೊಬ್ಬರು ಅಸಹಾಯಕತೆಯಿಂದ ಕಣ್ಣೀರಿಡುವ ವೀಡಿಯೋ ವೈರಲ್ ಆಗಿದೆ. 5 … Continued

ದುರಂತ… ನಾಸಿಕ್ ಆಸ್ಪತ್ರೆಯಲ್ಲಿ ಆಮ್ಲಜನಕದ ಟ್ಯಾಂಕರ್ ಸೋರಿಕೆ : ಕೊರೊನಾ ರೋಗಿಗಳ ಸಾವಿನ ಸಂಖ್ಯೆ 22ಕ್ಕೆ ಏರಿಕೆ

ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ಡಾ.ಜಕೀರ್ ಹುಸೇನ್ ಆಸ್ಪತ್ರೆಯಲ್ಲಿ ಬುಧವಾರ ಆಮ್ಲನಕದ ಟ್ಯಾಂಕರ್ ಸೋರಿಕೆಯಾಗಿದ್ದು, ಕನಿಷ್ಠ 22  ಕೊರೊನಾ ಸೋಂಕಿತ ರೋಗಿಗಳು ಎಂದು ವರದಿಯಾಗಿದೆ. ಘಟನೆಯ ಸಮಯದಲ್ಲಿ ಆಸ್ಪತ್ರೆಯಲ್ಲಿ 171 ರೋಗಿಗಳು ಇದ್ದರು. ಮಹಾರಾಷ್ಟ್ರದ ನಾಸಿಕ್‌ನ ಡಾ ಝಕಿರ್ ಹುಸೇನ್ ಆಸ್ಪತ್ರೆಯಲ್ಲಿ ಬುಧವಾರ ಆಮ್ಲಜನಕ ತುಂಬುವಾಗ ಸಿಲಿಂಡರ್ ಸೋರಿಕೆಯಾಗಿದೆ. ಈ ಘಟನೆಯಲ್ಲಿ 22 ಕೋವಿಡ್ -19 ರೋಗಿಗಳು … Continued

ಸರ್ಕಾರಿ-ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಶೀಲ್ಡ್ ಲಸಿಕೆ ದರ ಪ್ರಕಟಿಸಿದ ಎಸ್‌ಐಐ

ನವ ದೆಹಲಿ: ಕೇಂದ್ರ ಸರ್ಕಾರದ ನಿರ್ದೇಶನದ ಪ್ರಕಾರ, ಕೋವಿಡ್-19 ಸಾಂಕ್ರಾಮಿಕ ರೋಗಕ್ಕೆ ಲಸಿಕೆ ಒದಗಿಸುತ್ತಿರುವ ಪುಣೆಯ ಸೆರಮ್ ಇನ್ಸ್ ಟಿಟ್ಯೂಟ್ (ಎಸ್‌ಐಐ) ಕೇಂದ್ರ ಸರ್ಕಾರದ ಲಸಿಕೆ ಅಭಿಯಾನದ ಹೊರತಾಗಿ ಉಳಿದ ಶೇ.50% ರ ಕೋವಿಶೀಲ್ಡ್ ಲಸಿಕೆಯ ದರವನ್ನು ಪ್ರಕಟಿಸಿದೆ. ವಿವಿಧ ರಾಜ್ಯದ ಸರ್ಕಾರಿ ಆಸ್ಪತ್ರೆಗಳಿಗೆ ಸೆರಂ ಇನ್ಸ್ ಟಿಟ್ಯೂಟ್ ನ ಕೋವಿಶೀಲ್ಡ್ ಲಸಿಕೆಗೆ ಪ್ರತಿ ಡೋಸ್ … Continued

ಮಧ್ಯರಾತ್ರಿ ಆಸ್ಪತ್ರೆಗಳಿಗೆ ತಲುಪಿದ ಆಮ್ಲಜನಕದ​ ಟ್ಯಾಂಕರ್​​; ಸ್ವಲ್ಪ ತಡವಾಗಿದ್ದರೂ ಅನಾಹುತವಾಗುತ್ತಿತ್ತು…!.

ದೆಹಲಿ: ದೆಹಲಿಯಲ್ಲಿ ಆಮ್ಲಜನಕದ ಕೊರತೆ ತೀವ್ರವಾಗಿ ಕಾಣಿಸಿಕೊಂಡ ಬೆನ್ನಲ್ಲೇ ಆರೋಗ್ಯ ಸಚಿವ ಸತ್ಯೇಂದ್ರ ಜೈನ್​ ರೈಲ್ವೆ ಸಚಿವ ಪಿಯೂಷ್‌ ಗೋಯಲ್‌ ಅವರಿಗೆ ಈ ಕುರಿತು ಟ್ವೀಟ್‌ ಮಾಡಿದ್ದು ಅನೇಕರ ಪ್ರಾಣ ಉಳಿಸಿದೆ. ಮಂಗಳವಾರ ರಾತ್ರಿ ದೆಹಲಿಯ ಜಿಟಿಬಿ ಆಸ್ಪತ್ರೆಯಲ್ಲಿ ವೈದ್ಯಕೀಯ ಆಮ್ಲಜನಕದ ತೀವ್ರ ಕೊರತೆ ಉಂಟಾಗಿದೆ. ಹೆಚ್ಚೆಂದರೆ ಇನ್ನು ನಾಲ್ಕು ತಾಸುಗಳಿಗಷ್ಟೇ ಆಕ್ಸಿಜನ್​ ಸಾಕಾಗುವಷ್ಟು ಇತ್ತು. … Continued

ಧೋನಿ ತಂದೆ-ತಾಯಿಗೆ ಕೊರೊನಾ ಸೋಂಕು, ಆಸ್ಪತ್ರೆಗೆ ದಾಖಲು

ರಾಂಚಿ: ಭಾರತದ ಮಾಜಿ ನಾಯಕ, ಹಾಗೂ ಪ್ರಸ್ತುತ ಚೆನ್ನೈ ಸೂಪರ್ ಕಿಂಗ್ಸ್‌ ತಂಡದ ನಾಯಕ ಎಂ.ಎಸ್. ಧೋನಿ ಅವರ ತಂದೆ-ತಾಯಿಗೆ ಕೊರೊನಾ ಸೋಂಕು ತಗುಲಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಧೋನಿ ಅವರ ತಂದೆ ಪಾನ್‌ ಸಿಂಗ್‌ ಮತ್ತು ತಾಯಿ ದೇವಕಿ ದೇವಿ ಅವರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಅವರನ್ನು ಜಾರ್ಖಂಡಿನ ರಾಂಚಿಯಲ್ಲಿರುವ ಪಲ್ಸ್ ಸೂಪರ್ ಸ್ಪೆಷಾಲಿಟಿ … Continued

ಗುಜರಾತ್: ಗುಂಪಾಗಿ ನಮಾಜ್‌ ಬೇಡ ಎಂದಿದ್ದಕ್ಕೆ ಹಿಂಸೆ, ಪೊಲೀಸರ ಮೇಲೆ ಕಲ್ಲು ತೂರಾಟ

ನಮಾಜ್ ಮಾಡಲು ಹೆಚ್ಚಿನ ಗುಂಪನ್ನು ಸೇರಿಸಬಾರದು ಎಂದು ಪೊಲೀಸರುಹೇಳಿದ ನಂತರ ಗೊಂಪೊಂದು ಪೊಲೀಸರ ಮೇಲೆ ಹಲ್ಲೆ ನಡೆಸಿ ಕಲ್ಲು ತೂರಾಟ ನಡೆಸಿದ ಘಟನೆ ಗುಜರಾತಿನ ಕಪದ್ವಾಂಜ್‌ನಲ್ಲಿ ನಡೆದಿದೆ ಎಂದು ವರದಿಯಾಗಿದೆ. ದಿವ್ಯ ಭಾಸ್ಕರ್ ವರದಿ ಮಾಡಿದಂತೆ, ಕಪಾದ್ವಾಂಜ್‌ನ ಲಯನ್ಸ್ ಕ್ಲಬ್ ಬಳಿಯ ಮಸೀದಿಗೆ ಪೊಲೀಸರು ಸಾಮಾಜಿಕ ದೂರವಿಡುವ ಮಾನದಂಡಗಳ ಜಾರಿಗೆ ಮನವೊಲಿಸಲು ಹೋಗಿದ್ದರು. ಆದಾಗ್ಯೂ, ಶೀಘ್ರದಲ್ಲೇ … Continued

ಭಾರತದಲ್ಲಿ ಬುಧವಾರ ಇದುವರೆಗಿನ ಅತಿ ಹೆಚ್ಚು ದೈನಂದಿನ ಕೊರೊನಾ ಸೋಂಕು..ಅತಿ ಹೆಚ್ಚು ಸಾವು..!

ನವ ದೆಹಲಿ: ಕಳೆದ 24 ಗಂಟೆಗಳಲ್ಲಿ ಭಾರತವು 2,95,041 ಹೊಸ ಕೊರೊನಾ ವೈರಸ್‌ ಸೋಂಕು (ಕೋವಿಡ್ -19) ಮತ್ತು 2,023 ಸಾವುಗಳಿಗೆ ಸಾಕ್ಷಿಯಾಗಿದೆ. ಬುಧವಾರದ ಈ ಎರಡೂ ಅಂಕಿಅಂಶಗಳು ಸಾಂಕ್ರಾಮಿಕ ರೋಗದ ಪ್ರಾರಂಭದಿಂದಲೂ ಅತಿ ಹೆಚ್ಚು ಎಂದು ಕೇಂದ್ರ ಆರೋಗ್ಯ ಸಚಿವಾಲಯ ಬಿಡುಗಡೆ ಮಾಡಿದ ಅಂಕಿ ಅಂಶಗಳು ತಿಳಿಸಿವೆ. ದೇಶದ ಒಟ್ಟು ಸೋಂಕಿನ ಸಂಖ್ಯೆ 15.6 … Continued

2021 ಆರ್ಥಿಕ ವರ್ಷದಲ್ಲಿ ಹೊಸ ಪ್ರೀಮಿಯಂ 1.84 ಲಕ್ಷ ಕೋಟಿ ರೂ.ಸಂಗ್ರಹಿಸಿ ದಾಖಲೆ ಬರೆದ ಎಲ್‌ಐಸಿ

2021 ರ ಮಾರ್ಚ್ 31 ಕ್ಕೆ ಕೊನೆಗೊಂಡ ಹಣಕಾಸು ವರ್ಷದಲ್ಲಿ 1.84 ಲಕ್ಷ ಕೋಟಿ ರೂ.ಗಳ ಹೊಸ ಹೊಸ ವ್ಯವಹಾರ ಪ್ರೀಮಿಯಂ ಸಂಗ್ರಹವಾಗಿದೆ ಎಂದು ದೇಶದ ಅತಿದೊಡ್ಡ ಜೀವ ವಿಮೆದಾರ ಎಲ್ಐಸಿ ಮಂಗಳವಾರ ತಿಳಿಸಿದೆ. ಸಂಖ್ಯೆ ಪ್ರಾವಿಜನಲ್‌ ಎಂದು ಎಲ್‌ಐಸಿ ಹೇಳಿದೆ. ಮಾರ್ಚ್ 2021 ರ ಪಾಲಿಸಿಗಳ ಸಂಖ್ಯೆಯಲ್ಲಿ ಅದರ ಮಾರುಕಟ್ಟೆ ಪಾಲು ಶೇ .81.04 … Continued

ರೋಗನಿರೋಧಕ ಪಾರಾಗುವಿಕೆ ಸಾಮರ್ಥ್ಯದ ಕೊರೊನಾ ವೈರಸ್ಸಿನ ಮತ್ತೊಂದು ರೂಪಾಂತರ ಪತ್ತೆ..! ಇದು ಅತೀ ವೇಗವಾಗಿ ಹರಡುತ್ತದೆ ಎಂದ ತಜ್ಞರು..!!

ನವ ದೆಹಲಿ: SARS-CoV-2 ವೈರಸ್‌ನ ಡಬಲ್-ರೂಪಾಂತರಿತ ಭಾರತೀಯ ರೂಪಾಂತರವು ದೇಶಾದ್ಯಂತ ಹಾನಿ ಮಾಡುತ್ತಿದ್ದಂತೆಯೇ ಜೀನೋಮ್ ತಜ್ಞರು ಬಿ 1.618 ಹೆಸರಿನ ಕೊರೊನಾ ವೈರಸ್ಸಿನ ಮತ್ತೊಂದು ವಂಶಾವಳಿಯನ್ನು ಫ್ಲ್ಯಾಗ್ ಮಾಡಿದ್ದಾರೆ. ಪ್ರಮುಖ ರೋಗನಿರೋಧಕದಿಂದ ಪಾರಾಗುವ (ಎಸ್ಕೇಪ್‌) ಸಾಮರ್ಥ್ಯದೊಂದಿಗೆ ಈ ರೂಪಾಂತರವು ಪಶ್ಚಿಮ ಬಂಗಾಳದಲ್ಲಿ ಸಾಂಕ್ರಾಮಿಕ ರೋಗವನ್ನು ಹೆಚ್ಚಿಸುತ್ತಿದೆ ಮತ್ತು ಅತ್ಯಂತ ವೇಗವಾಗಿ ಹರಡುತ್ತಿದೆ ಎಂದು ಹೇಳಲಾಗುತ್ತದೆ. ಬಂಗಾಳ … Continued