ಸಣ್ಣ ಜಗಳದ ನಂತರ ಮಹಿಳಾ ವೈದ್ಯರ ಮೇಲೆ ಕತ್ತರಿಯಿಂದ ಹಲ್ಲೆ ಮಾಡಿದ ವಾರ್ಡ್‌ ಬಾಯ್‌

ನಾಸಿಕ್‌: ಆಘಾತಕಾರಿ ಘಟನೆಯೊಂದರಲ್ಲಿ, ಮಹಾರಾಷ್ಟ್ರದ ಗಂಗಾಪುರದ ನಿಮ್ಸ್ ಆಸ್ಪತ್ರೆಯ ವಾರ್ಡ್ ಬಾಯ್ ಸಣ್ಣ ಜಗಳದ ನಂತರ ಮಹಿಳಾ ವೈದ್ಯೆಯ ಕುತ್ತಿಗೆ ಮತ್ತು ಹೊಟ್ಟೆಗೆ ಕತ್ತರಿಯಿಂದ ಇರಿದಿದ್ದಾನೆ. ಡಿಸೆಂಬರ್ 25 ರ ಭಾನುವಾರದಂದು ಈ ಘಟನೆ ಸಂಭವಿಸಿದ್ದು, ಘಟನೆಯ ನಂತರ, ವಾರ್ಡ್ ಬಾಯ್ ಅನ್ನು ನಗರ ಪೊಲೀಸರು ಬಂಧಿಸಿದ್ದಾರೆ. ಆರೋಪಿ, ವಾರ್ಡ್ ಬಾಯ್ ಅನಿಕೇತ್ ಡೋಂಗ್ರೆ ಸಣ್ಣ … Continued

ಕೋವಿಡ್ -19 : ಮುಂದಿನ 40 ದಿನಗಳು ಭಾರತಕ್ಕೆ ನಿರ್ಣಾಯಕ, ದೇಶ ಜನವರಿಯಲ್ಲಿ ಕೊರೊನಾ ಉಲ್ಬಣ ಕಾಣಬಹುದು-ಅಧಿಕೃತ ಮೂಲಗಳು

ನವದೆಹಲಿ: ಮುಂದಿನ 40 ದಿನಗಳು ನಿರ್ಣಾಯಕವಾಗಲಿವೆ. ಏಕೆಂದರೆ ಭಾರತವು ಜನವರಿಯಲ್ಲಿ ಕೋವಿಡ್‌-19 ಪ್ರಕರಣಗಳಲ್ಲಿ ಉಲ್ಬಣವನ್ನು ಕಾಣಬಹುದು ಎಂದು ಹಿಂದಿನ ಕೋವಿಡ್‌ ಉಲ್ಬಣದ ಮಾದರಿಯನ್ನು ಉಲ್ಲೇಖಿಸಿ ಅಧಿಕೃತ ಮೂಲಗಳು ಬುಧವಾರ ತಿಳಿಸಿವೆ. ಹಿಂದೆ, ಪೂರ್ವ ಏಷ್ಯಾಕ್ಕೆ ಅಪ್ಪಳಿಸಿದ 30-35 ದಿನಗಳ ನಂತರ ಕೋವಿಡ್‌-19 ನ ಹೊಸ ಅಲೆಯು ಭಾರತವನ್ನು ಅಪ್ಪಳಿಸಿದ್ದನ್ನು ಗಮನಿಸಲಾಗಿದೆ…. ಇದು ಒಂದು ಪ್ರವೃತ್ತಿಯಾಗಿದೆ” ಎಂದು … Continued

ಅಹಮದಾಬಾದ್ ಆಸ್ಪತ್ರೆಯಲ್ಲಿ ತಾಯಿಯನ್ನು ಭೇಟಿ ಮಾಡಿದ ಪ್ರಧಾನಿ ಮೋದಿ

ಅಹಮದಾಬಾದ್: ಆರೋಗ್ಯ ಹದಗೆಟ್ಟ ಹಿನ್ನೆಲೆಯಲ್ಲಿ ನಿನ್ನೆ ರಾತ್ರಿಯಿಂದ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವ ತಾಯಿ ಹೀರಾಬೆನ್ ಮೋದಿ ಅವರನ್ನು ಪ್ರಧಾನಿ ನರೇಂದ್ರ ಮೋದಿ ಭೇಟಿ ಮಾಡಿದರು. ಯು.ಎನ್. ಮೆಹ್ತಾ ಇನ್‌ಸ್ಟಿಟ್ಯೂಟ್ ಆಫ್ ಕಾರ್ಡಿಯಾಲಜಿ ಮತ್ತು ರಿಸರ್ಚ್ ಸೆಂಟರ್‌ನ ಹೇಳಿಕೆಯು ಹೀರಾಬೆನ್ ಮೋದಿ ಅವರ ಸ್ಥಿತಿ ಸ್ಥಿರವಾಗಿದೆ ಎಂದು ತಿಳಿಸಿದೆ. ಆಸ್ಪತ್ರೆಯು ಬೇರೆ ಯಾವುದೇ ಮಾಹಿತಿಯನ್ನು ಹಂಚಿಕೊಂಡಿಲ್ಲ.ಗುಜರಾತ್‌ನ … Continued

ಪಾಯಿಂಟ್ ಬ್ಲಾಂಕ್ ರೇಂಜ್‌ನಿಂದ 2 ಗುಂಡು ಹಾರಿಸಿದ ನಂತರ ವ್ಯಕ್ತಿ ಮೇಲೆ ದಾಳಿ ಮಾಡಿದ ಕೆರಳಿದ ನಾಗರಹಾವು | ವೀಕ್ಷಿಸಿ

ವ್ಯಕ್ತಿಯೊಬ್ಬ ನಾಗರಹಾವಿನ ಮೇಲೆ ಬಂದೂಕಿನಿಂದ ಗುಂಡು ಹಾರಿಸುತ್ತಿರುವುದನ್ನು ತೋರಿಸುವ ವಿಡಿಯೋವೊಂದು ವೈರಲ್ ಆಗಿದೆ. ಟ್ವಿಟರ್‌ನಲ್ಲಿ ಅಪ್‌ಲೋಡ್ ಮಾಡಲಾದ ಕ್ಲಿಪ್‌ನಲ್ಲಿ, ವ್ಯಕ್ತಿಯೊಬ್ಬ ಗನ್ ಹಿಡಿದುಕೊಂಡು ತನ್ನ ಕಾರಿನೊಳಗೆ ಕುಳಿತಿರುವುದು ಕಂಡುಬರುತ್ತದೆ. ಆತ ಬಂದೂಕಿನಿಂದ ನೆಲದ ಮೇಲೆ ನಾಗರ ಹಾವಿನತ್ತ ಗುರಿಯಿಟ್ಟು ಒಮ್ಮೆ ಗುಂಡು ಹಾರಿಸುತ್ತಾನೆ. ಸರ್ಪವು ತನ್ನ ತಲೆಯನ್ನು ನೆಟ್ಟಗೆ ಮತ್ತು ಹೆಡೆಯನ್ನುಅಗಲವಾಗಿ ಹರಡಿರುವಾಗ ವ್ಯಕ್ತಿಯು ಗುರಿ … Continued

ಕಾಂಗ್ರೆಸ್‌ ನಾಯಕ ಆರ್. ವಿ. ದೇಶಪಾಂಡೆಗೆ 2022ರ ಅತ್ಯುತ್ತಮ ಶಾಸಕ ಪ್ರಶಸ್ತಿ ಪ್ರದಾನ

ಬೆಳಗಾವಿ: ಆರ್. ವಿ. ದೇಶಪಾಂಡೆ ಅವರಿಗೆ 2022ರ ಅತ್ಯುತ್ತಮ ಶಾಸಕ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಬೆಳಗಾವಿ ವಿಧಾನಮಂಡಲ ಅಧಿವೇಶನದ ಸಂದರ್ಭದಲ್ಲಿ ಹಿರಿಯ ಶಾಸಕ ಆರ್. ವಿ. ದೇಶಪಾಂಡೆ ಅವರಿಗೆ 2022ರ ಅತ್ಯುತ್ತಮ ಶಾಸಕ ಪ್ರಶಸ್ತಿ ಪ್ರದಾನ ಮಾಡಲಾಯಿತು. ವಿಧಾನ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ … Continued

ಆರೋಗ್ಯದಲ್ಲಿ ಏರುಪೇರು: ಪ್ರಧಾನಿ ನರೇಂದ್ರ ಮೋದಿ ತಾಯಿ ಅಹಮದಾಬಾದ್‌ನಲ್ಲಿ ಆಸ್ಪತ್ರೆಗೆ ದಾಖಲು

ಅಹಮದಾಬಾದ್: ಪ್ರಧಾನಿ ನರೇಂದ್ರ ಮೋದಿ ಅವರ ತಾಯಿ ಹೀರಾಬೆನ್ ಮೋದಿ ಅವರ ಆರೋಗ್ಯ ಕಳೆದ ರಾತ್ರಿ ಹದಗೆಟ್ಟ ಹಿನ್ನೆಲೆಯಲ್ಲಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ವರ್ಷ ನೂರನೇ ವರ್ಷಕ್ಕೆ ಕಾಲಿಟ್ಟ ಹೀರಾಬೆನ್ ಮೋದಿ ಅವರನ್ನು ಅಹಮದಾಬಾದ್‌ನ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಾಧ್ಯಮ ವರದಿಗಳ ಪ್ರಕಾರ, ಹೀರಾಬೆನ್ ಮೋದಿ ಅವರನ್ನು ಅಹಮದಾಬಾದ್‌ನ ಯುಎನ್ ಮೆಹ್ತಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಯುಎನ್ … Continued

ಜೈಲು ವಾರ್ಡನ್‌ಗೆ ಮೂವರು ಸಹೋದ್ಯೋಗಿಗಳಿಂದ ಲಾಠಿಯಿಂದ ಹಿಗ್ಗಾಮುಗ್ಗಾ ಥಳಿತ : ದೃಶ್ಯ ಸಿಸಿಟಿಯಲ್ಲಿ ಸೆರೆ…ಕಾರಣ ಇಲ್ಲಿದೆ

ರಾಯಬರೇಲಿ: ಉತ್ತರ ಪ್ರದೇಶದ ಜೈಲು ವಾರ್ಡನ್‌ಗೆ ಆತನ ಸಹೋದ್ಯೋಗಿಗಳು ಅಮಾನುಷವಾಗಿ ಥಳಿಸಿದ್ದಾರೆ. ಈಗ ಇವರೆಲ್ಲರನ್ನು ಉತ್ತರ ಪ್ರದೇಶದ ರಾಯ್ಬರೇಲಿಯ ಜಿಲ್ಲಾ ಕಾರಾಗೃಹದಲ್ಲಿ ಇರಿಸಲಾಗಿದೆ. ಆಹಾರದ ಅವ್ಯವಸ್ಥೆ ಬಗ್ಗೆ ಉಂಟಾದ ವಾದ ವಿವಾದವು ಉತ್ತರ ಪ್ರದೇಶದ ಜೈಲು ವಾರ್ಡನ್‌ಗೆ ಅವರ ಸಹೋದ್ಯೋಗಿಗಳು ತೀವ್ರವಾಗಿ ಥಳಿಸಲು ಕಾರಣವಾಯಿತು. ಜೈಲ್‌ ವಾರ್ಡನ್‌ ಅವರು ತಮ್ಮ ಕ್ಯಾಂಟೀನ್ ವ್ಯವಹಾರಕ್ಕೆ ಹಾನಿ ಮಾಡುತ್ತಿದ್ದಾರೆ … Continued

ಜಮ್ಮು-ಕಾಶ್ಮೀರದ ಸಿದ್ರಾದಲ್ಲಿ ಎನ್‌ಕೌಂಟರ್‌ನಲ್ಲಿ 3 ಭಯೋತ್ಪಾದಕರನ್ನು ಹೊಡೆದುರುಳಿಸಿದ ಭದ್ರತಾ ಪಡೆಗಳು

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಸಿದ್ರಾದಲ್ಲಿ ಅಡಗಿಕೊಂಡಿದ್ದ ಮೂವರು ಭಯೋತ್ಪಾದಕರು ಬುಧವಾರ ಭದ್ರತಾ ಪಡೆಗಳೊಂದಿಗೆ ನಡೆದ ಎನ್‌ಕೌಂಟರ್‌ನಲ್ಲಿ ಹತರಾಗಿದ್ದಾರೆ. ಗುಂಡಿನ ಚಕಮಕಿ ನಡೆದಾಗ ಟ್ರಕ್‌ನಲ್ಲಿ ಭಯೋತ್ಪಾದಕರು ಇದ್ದರು ಎಂದು ಜಮ್ಮು ಮತ್ತು ಕಾಶ್ಮೀರದ ಎಡಿಜಿಪಿ ಹೇಳಿದ್ದಾರೆ. ಇದೀಗ ಮೂವರೂ ಭಯೋತ್ಪಾದಕರನ್ನು ಹತ್ಯೆ ಮಾಡಲಾಗಿದ್ದು, ಎನ್‌ಕೌಂಟರ್ ಸ್ಥಳದಿಂದ ಒಬ್ಬ ಭಯೋತ್ಪಾದಕನ ಶವವನ್ನು ಹೊರತೆಗೆಯಲಾಗಿದೆ. ಜಮ್ಮು ಮತ್ತು ಕಾಶ್ಮೀರದ … Continued

ಈ ವರ್ಷದ ಸೆಪ್ಟೆಂಬರ್ ಅಂತ್ಯದ ವೇಳೆಗೆ ದೇಶದ ಒಟ್ಟು ಸಾಲ 147 ಲಕ್ಷ ಕೋಟಿ ರೂ.ಗಳಿಗೆ ಏರಿಕೆ : ಸರ್ಕಾರದ ವರದಿ

ನವದೆಹಲಿ: ಸಾರ್ವಜನಿಕ ಸಾಲದ ಇತ್ತೀಚಿನ ಅಂಕಿಅಂಶಗಳ ಪ್ರಕಾರ, ಸರ್ಕಾರದ ಸಾಲವು ಜೂನ್‌ನಲ್ಲಿ 145.72 ಲಕ್ಷ ಕೋಟಿ ರೂಪಾಯಿಗಳಿಂದ ಈ ಹಣಕಾಸು ವರ್ಷದ ಸೆಪ್ಟೆಂಬರ್ ಅಂತ್ಯಕ್ಕೆ ಒಟ್ಟು 147.19 ಲಕ್ಷ ಕೋಟಿ ರೂಪಾಯಿಗಳಿಗೆ ಏರಿದೆ. ಸಾಲ ನಿರ್ವಹಣೆಯ ಕುರಿತು ನಿಯಮಿತವಾಗಿ ತ್ರೈಮಾಸಿಕ ವರದಿಯನ್ನು ಹೊರತರುವ ಬಜೆಟ್ ವಿಭಾಗದ ಸಾರ್ವಜನಿಕ ಸಾಲ ನಿರ್ವಹಣಾ ಕೋಶ (ಪಿಡಿಎಂಸಿ) ಮಂಗಳವಾರ ತನ್ನ … Continued

ಭಾರತ -ಶ್ರೀಲಂಕಾ ಸರಣಿ : ಏಕದಿನದ ಸರಣಿಗೆ ಭಾರತ ತಂಡಕ್ಕೆ ಮರಳಿದ ರೋಹಿತ್ ಶರ್ಮಾ, ರಿಷಬ್ ಪಂತಗೆ ವಿಶ್ರಾಂತಿ

ನವದೆಹಲಿ: ಮುಂಬರುವ ಶ್ರೀಲಂಕಾ ವಿರುದ್ಧದ ಏಕದಿನ ಸರಣಿಗೆ ಭಾರತದ ತಂಡವನ್ನು ರೋಹಿತ್ ಶರ್ಮಾ ಮುನ್ನಡೆಸಲಿದ್ದಾರೆ. ವಿಕೆಟ್ ಕೀಪರ್‌ ರಿಷಬ್ ಪಂತ್ ಅವರಿಗೆ ವಿಶ್ರಾಂತಿ ನೀಡಲಾಗಿದ್ದು, ವೇಗಿ ಉಮ್ರಾನ್ ಮಲಿಕ್ ಅವರನ್ನು ತಂಡಕ್ಕೆ ಕರೆಸಿಕೊಳ್ಳಲಾಗಿದೆ. ಶ್ರೀಲಂಕಾ ಸರಣಿಗಾಗಿನ ಏಕ ದಿನ ಪಂದ್ಯಾವಳಿ(ODI)ಗೆ ತಂಡದಿಂದ ಆರಂಭಿಕ ಆಟಗಾರ ಶಿಖರ್ ಧವನ್ ಅವರನ್ನು ಕೈಬಿಡಲಾಗಿದ್ದು, ಅವರ ಸ್ಥಾನಕ್ಕೆ ಶುಭಮನ್ ಗಿಲ್ … Continued