ಭವಿಷ್ಯ‌ ನಿಧಿ ಠೇವಣಿ ಬಡ್ಡಿ ದರ ಶೇ.8.5

ಉದ್ಯೋಗಿಗಳ ಭವಿಷ್ಯ‌ ನಿಧಿ ಠೇವಣಿಯ ಬಡ್ಡಿ ದರವನ್ನು ಶೇ.8.5 ರಲ್ಲಿ ಯಥಾಸ್ಥಿತಿ ಮುಂದುವರಿಸಲಾಗಿದೆ. ಮೂಲ ವೇತನದಲ್ಲಿ ಉದ್ಯೋಗಿಗಳ ಭವಿಷ್ಯನಿಧಿ ಸಂಘಟನೆ ಪ್ರಕಾರ ಶೇ.12ರಷ್ಟು ಉದ್ಯೋಗಿಗಳು ಮತ್ತು ಅಷ್ಟೇ ಪ್ರಮಾಣದ ಮೊತ್ತವನ್ನು ಉದ್ಯೋಗದಾತರು ನೀಡಬೇಕಾಗುತ್ತದೆ ಎಂದು ಭವಿಷ್ಯ ನಿಧಿ ಸಂಘಟನೆ ತಿಳಿಸಿದೆ. 2020-21 ನೇ ಸಾಲಿನಲ್ಲಿ ಭವಿಷ್ಯ ನಿಧಿಯ ಠೇವಣಿ ಬಡ್ಡಿದರ ಶೇಕಡಾ 8.5 ರಲ್ಲಿ ಮುಂದುವರಿಸಲು … Continued

ರೈತರ ಆಂದೋಲನಕ್ಕೆ ಧ್ವನಿಯಾಗುವವರ ವಿರುದ್ಧ ಐಟಿ ದಾಳಿ; ರಾಹುಲ್‌

ನವ ದೆಹಲಿ:ದೇಶದಲ್ಲಿ ನಡೆಯುತ್ತಿರುವ ರೈತರ ಆಂದೋಲನಕ್ಕೆ ಧ್ವನಿಗೂಡಿಸುವವರ ವಿರುದ್ಧ ಮೋದಿ ಸರ್ಕಾರ ದಾಳಿ ನಡೆಸಿ ಅದನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದೆ ಎಂದು ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ. ಕಾಂಗ್ರೆಸ್ ಮುಖಂಡ ರಾಹುಲ್ ಗುರುವಾರ ಮೂರು ಖ್ಯಾತ ಹಿಂದಿ ಪದ್ಯಗಳ ಸಾಲುಗಳನ್ನು ಬಳಸುವ ಮೂಲಕ ಕೇಂದ್ರ ಸರ್ಕಾರವನ್ನು ಟೀಕಿಸಿದರು. ರೈತರ ಪರವಾಗಿರುವವರ ಮೇಲೆ ದಾಳಿ ನಡೆಸಿದ್ದಾರೆ … Continued

ಅನುರಾಗ್ ಕಶ್ಯಪ್, ನಟಿ ತಾಪ್ಸೀ ಪನ್ನು, ಇತರರ ಮೇಲೆ ೨ನೇ ದಿನವೂ ಮುಂದುವರಿದ ಐಟಿ ದಾಳಿ

  ಆದಾಯ ತೆರಿಗೆ ಇಲಾಖೆ (ಐಟಿ ಇಲಾಖೆ) ಚಲನಚಿತ್ರ ನಿರ್ಮಾಪಕ ಅನುರಾಗ್ ಕಶ್ಯಪ್, ನಟಿ ತಾಪ್ಸೀ ಪನ್ನು ಮತ್ತು ಇತರರಿಗೆ ಸಂಬಂಧಿಸಿರುವ ಆಸ್ತಿಗಳ ಮೇಲೆ ದಾಳಿ ಎರಡನೇ (ಮಾ.೪) ದಿನವೂ ಮುಂದುವರಿಯಿತು. ಮುಂಬೈ, ಪುಣೆ ಮತ್ತು ಇತರ ಸ್ಥಳಗಳಲ್ಲಿ ಕಶ್ಯಪ್, ಪನ್ನು, ವಿಕಾಸ್ ಬಹ್ಲ್, ಚಲನಚಿತ್ರ ನಿರ್ಮಾಪಕ ಮಧು ಮಂಟೆನಾ ಮತ್ತು ಇತರರಿಗೆ ಸಂಬಂಧಿಸಿರುವ ಆಸ್ತಿಗಳ … Continued

ರೈಲು ಪ್ರಯಾಣಿಕರಿಗೆ ಸಿಹಿ ಸುದ್ದಿ: ರೈಲಿನಲ್ಲಿಯೇ ಸಿನಿಮಾ, ನ್ಯೂಸ್

ನವದೆಹಲಿ: ರೈಲುಗಳಲ್ಲಿ ಪ್ರಯಾಣಿಕರಿಗೆ ಬೇಡಿಕೆಯ ಅನುಸಾರ ಚಲನಚಿತ್ರ, ಸುದ್ದಿ, ವಿಡಿಯೋಗಳನ್ನು ವಿವಿಧ ಭಾಷೆಗಳಲ್ಲಿ ಪ್ರದರ್ಶಿಸಲು ಚಿಂತನೆ ನಡೆದಿದೆ. ಸಂಗೀತ, ಸಿನಿಮಾ, ಸಾಮಾನ್ಯ ಮನರಂಜನೆ, ಸುದ್ದಿ ಸೇರಿದಂತೆ ವಿವಿಧ ಭಾಷೆಗಳ ವಿಡಿಯೋಗಳನ್ನು ರೈಲುಗಳಲ್ಲಿ ಪ್ರದರ್ಶಿಸಲಾಗುವುದು ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ ಎಂದು ಕೆಲ ಮಾಧ್ಯಮಗಳು ವರದಿ ಮಾಡಿವೆ. ಮೀಡಿಯಾ ಸರ್ವರ್ ಗಳನ್ನು ಬೋಗಿಗಳ ಒಳಗೆ ಇರಿಸಲಾಗುವುದು ಎಂದು … Continued

ಒಟಿಟಿ ಪ್ಲಾಟ್‌ಫಾರ್ಮಿನಲ್ಲಿ ಪ್ರದರ್ಶನವಾಗುವ ಮೊದಲು ಸೆನ್ಸಾರ್ ಬೇಕು:ಮೌಖಿಕವಾಗಿ ಅಭಿಪ್ರಾಯಪಟ್ಟ ಸುಪ್ರೀಂಕೋರ್ಟ್‌

ನವದೆಹಲಿ: ಒಟಿಟಿ ಪ್ಲಾಟ್‌ಫಾರ್ಮ್‌ಗಳಾದ ನೆಟ್‌ಫ್ಲಿಕ್ಸ್ ಮತ್ತು ಅಮೆಜಾನ್‌ನಲ್ಲಿನ ಚಲನಚಿತ್ರಗಳು ಅಥವಾ ಟೆಲಿವಿಷನ್ ಕಾರ್ಯಕ್ರಮಗಳು ಸಾರ್ವಜನಿಕರಿಗೆ ಲಭ್ಯವಾಗುವ ಮೊದಲು ಅವುಗಳನ್ನು ಸೆನ್ಸಾರು/ಪರಿಶೀಲನೆ ನಡೆಸುವ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ ಮೌಖಿಕವಾಗಿ ಹೇಳಿದೆ. ಅಲಹಾಬಾದ್ ಹೈಕೋರ್ಟ್ ಆದೇಶದ ವಿರುದ್ಧ ಅಮೆಜಾನ್ ಪ್ರೈಮ್ ವಿಡಿಯೋ ಇಂಡಿಯಾ ಮುಖ್ಯಸ್ಥ ಅಪರ್ಣಾ ಪುರೋಹಿತ್ ಅವರು ಸಲ್ಲಿಸಿದ್ದ ಮನವಿಯ ವಿಚಾರಣೆಯ ಸಂದರ್ಭದಲ್ಲಿ ಉನ್ನತ … Continued

ಕೇರಳ ಚುನಾವಣೆ; ‘ಮೆಟ್ರೋ ಮ್ಯಾನ್ ಶ್ರೀಧರನ್‌ ಬಿಜೆಪಿ ಸಿಎಂ ಅಭ್ಯರ್ಥಿ, ಬದಲಿಸುವರೇ ಸಮೀಕರಣ?

ತಿರುವನಂತಪುರಂ / ಕೊಚ್ಚಿ: ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ‘ಮೆಟ್ರೋ ಮ್ಯಾನ್’ ಇ ಶ್ರೀಧರನ್ ಅವರು ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿಯಾಗಲಿದ್ದಾರೆ ಎಂದು ಕೇರಳ ಬಿಜೆಪಿ ಮುಖ್ಯಸ್ಥರು ಗುರುವಾರ ಪ್ರಕಟಿಸಿದ್ದಾರೆ. ಏ.೬ರಂದು ನಡೆಯಲಿರುವ ಕೇರಳ ವಿಧಾನಸಭಾ ಚುನಾವಣೆಯಲ್ಲಿ ಇ. ಶ್ರೀಧರನ್ ಬಿಜೆಪಿಯ ಮುಖ್ಯಮಂತ್ರಿ ಅಭ್ಯರ್ಥಿಯಾಗಲಿದ್ದಾರೆ ಎಂದು ಸುರೇಂದ್ರನ್ ಹೇಳಿದ್ದಾರೆ. ಇದು ಕೇರಳದಲ್ಲಿ ರಾಜಕೀಯ ಸಮೀಕರಣದ ಬದಲಾವಣೆಗೆ ಕಾರಣವಾಗಬಹುದು … Continued

ಚುನಾವಣಾ ರಾಜ್ಯಗಳಲ್ಲಿ ಮೋದಿ ಭಾವಚಿತ್ರದ ಹೋರ್ಡಿಂಗ್‌ ತೆಗೆಯಲು ಚುನಾವಣಾ ಆಯೋಗ ಆದೇಶ

ಚುನಾವಣೆ ನಡೆಯುತ್ತಿರುವ ಐದು ರಾಜ್ಯಗಳಲ್ಲಿ ಪೆಟ್ರೋಲ್‌ ಬಂಕ್‌ಗಳಲ್ಲಿ ಪ್ರಧಾನಿ ಭಾವಚಿತ್ರ ಇರುವ ಹೋರ್ಡಿಂಗ್‌ಗಳನ್ನು ತೆಗೆದುಹಾಕಲು ಚುನಾವನಾ ಆಯೋಗವು ಪೆಟ್ರೋಲ್‌ ಪಂಪ್‌ಗಳಿಗೆ ಆದೇಶ ನೀಡಿದೆ. ಪ್ರಧಾನಿ ನರೇಂದ್ರ ಮೋದಿಯವರ ಛಾಯಾಚಿತ್ರಗಳನ್ನು ಹೊಂದಿರುವ ಕೇಂದ್ರ ಸರ್ಕಾರದ ಯೋಜನೆಗಳ ಹೋರ್ಡಿಂಗ್‌ಗಳನ್ನು ೭೨ ಗಂಟೆಗಳಲ್ಲಿ ತೆಗೆದುಹಾಕುವಂತೆ ಚುನಾವಣಾ ಆಯೋಗ (ಇಸಿ) ಎಲ್ಲಾ ಪೆಟ್ರೋಲ್ ಪಂಪ್ ವಿತರಕರು ಮತ್ತು ಇತರ ಸಂಸ್ಥೆಗಳಿಗೆ ಬುಧವಾರ … Continued

ಅಯೋಧ್ಯಾ ರಾಮಮಂದಿರ ಸಂಕೀರ್ಣ ವಿಸ್ತರಣೆಗೆ ಹೆಚ್ಚುವರಿ ಭೂಮಿ ಖರೀದಿ

ಅಯೋಧ್ಯೆ(ಉತ್ತರ ಪ್ರದೇಶ): ಪೂರ್ವ ಯೋಜನೆಯಂತೆ ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮಮಂದಿರ ದೇವಾಲಯ ಸಂಕೀರ್ಣ ವಿಸ್ತರಿಸುವ ಕಾರ್ಯ ಆರಂಭವಾಗಿದೆ. ಇದರ ಅಂಗವಾಇಗಿ ಪ್ರಥಮ ಹೆಜ್ಜೆಯಾಗಿ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ ರಾಮಜನ್ಮಭೂಮಿ ಪಕ್ಕದಲ್ಲಿರುವ 7,285 ಚದರ ಅಡಿಯಷ್ಟು ಭೂಮಿ ಖರೀದಿ ಮಾಡಿದೆ. ರಾಮಮಂದಿರ ದೇವಾಲಯ ಸಂಕೀರ್ಣವನ್ನು 70 ಎಕರೆ ಪ್ರದೇಶದಿಂದ 107 ಎಕರೆ ಪ್ರದೇಶಕ್ಕೆ ವಿಸ್ತರಿಸಬೇಕೆಂಬ ಯೋಜನೆಗೆ … Continued

ತಾಜ್ ಮಹಲ್‌ಗೆ ಬಾಂಬ್‌ ಬೆದರಿಕೆ ಕರೆ; ಪ್ರವಾಸಿಗರ ಹೊರಗೆ ಕಳುಹಿಸಿ ಭದ್ರತಾ ತಪಾಸಣೆ

ಆಗ್ರಾ/ನವದೆಹಲಿ: ಬಾಂಬ್‌ ಇರುವುದಾಗಿ ಕರೆ ಬಂದ ಬೆನ್ನಲ್ಲೇ ತಾಜ್‌ ಮಹಲ್‌ ಆವರಣದಲ್ಲಿದ್ದ ಪ್ರವಾಸಿಗರನ್ನು ಖಾಲಿ ಮಾಡಿಸಲಾಗಿದೆ. ಸುಮಾರು ಸಾವಿರ ಪ್ರವಾಸಿಗರನ್ನು ಸ್ಥಳದಿಂದ ಕಳುಹಿಸಿ, ಬಾಂಬ್‌ ಪತ್ತೆಗಾಗಿ ಹುಡುಕಾಟ ನಡೆಸಿರುವ ಘಟನೆ ಗುರುವಾರ ಬೆಳಿಗ್ಗೆ ನಡೆದಿದೆ. ಅನಾಮಧೇಯ ವ್ಯಕ್ತಿ ತಾಜ್‌ ಮಹಲ್‌ನಲ್ಲಿ ಬಾಂಬ್ ಇರುವುದಾಗಿ ಉತ್ತರ ಪ್ರದೇಶ ಪೊಲೀಸರ 112 ತುರ್ತು ಸ್ಪಂದಿಸುವ ಸಂಖ್ಯೆಗೆ ಬೆಳಿಗ್ಗೆ 9ಕ್ಕೆ … Continued

ಛತ್ತೀಸ್‌ಗಡ:೧೩ ಮಂಗಳಮುಖಿಯರು ಪೊಲೀಸ್‌ ಕಾನ್‌ಸ್ಲ್ಟೇಬಲ್‌‌ಗಳಾಗಿ ನೇಮಕ

ಸಮುದಾಯದ ಜನರ ಆತ್ಮವಿಶ್ವಾಸವನ್ನು ಹೆಚ್ಚಿಸುವ ಮತ್ತು ಅವರ ಬಗ್ಗೆ ಸಮಾಜದ ಗ್ರಹಿಕೆ ಬದಲಿಸುವ ಪ್ರಯತ್ನದಲ್ಲಿ ಛತ್ತೀಸ್‌ಗಡ ರಾಜ್ಯದಲ್ಲಿ ಪೊಲೀಸ್‌ ಇಲಾಖೆ 13  ಮಂಗಳಮುಖಿಯರು  (ತೃತೀಯಲಿಂಗಿಗಳು) ಕಾನ್‌ಸ್ಟೆಬಲ್‌ಗಳಾಗಿ ನೇಮಿಸಿಕೊಂಡಿದೆ. ಮಂಗಳಮುಖಿಯರನ್ನು ರಾಜ್ಯ ಪೊಲೀಸ್ ಪಡೆಗೆ ಸೇರಿಸಿಕೊಳ್ಳುವುದು ಇದೇ ಮೊದಲು ಎಂದು ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ. ಹದಿಮೂರು ಅಭ್ಯರ್ಥಿಗಳನ್ನು ಅರ್ಹತೆಯ ಆಧಾರದ ಮೇಲೆ ಕಾನ್‌ಸ್ಟೆಬಲ್‌ಗಳಾಗಿ ನೇಮಕ ಮಾಡಲಾಗಿದೆ. … Continued