ಗಣರಾಜ್ಯದಿನದ ಕೆಂಪುಕೋಟೆ ಹಿಂಸಾಚಾರ ಪ್ರಕರಣ: ನಟ ದೀಪ್ ಸಿಧುಗೆ ಜಾಮೀನು

ನವ ದೆಹಲಿ: ಜನವರಿ 26ರ ದೆಹಲಿ ಕೆಂಪುಕೋಟೆ ಹಿಂಸಾಚಾರ ಪ್ರಕರಣದ ಆರೋಪಿ ನಟ ದೀಪ್ ಸಿಧುಗೆ ದೆಹಲಿ ನ್ಯಾಯಾಲಯ ಜಾಮೀನು ನೀಡಿದೆ. ಕಳೆದ ವಿಚಾರಣೆಯ ವೇಳೆ, ಜನವರಿ 26ರಂದು ಕೆಂಪು ಕೋಟೆಗೆ ಹೋಗುವಂತೆ ಪ್ರತಿಭಟನೆ ನಡೆಸುತ್ತಿದ್ದ ರೈತರಿಗೆ ನಾನು ಯಾವುದೇ ಕರೆ ನೀಡಿಲ್ಲ ಎಂದು ದೀಪ್ ಸಿಧು ನ್ಯಾಯಾಲಯಕ್ಕೆ ತಿಳಿಸಿದ್ದರು. ಸಿಧು ಅವರು ಪ್ರತಿಭಟನೆಗಾಗಿ ಕರೆ … Continued

ಕೋವಿಡ್ -19 ವಿರುದ್ಧದ ಹೋರಾಟ ಬಲಪಡಿಸಲು ಕುಂಭಮೇಳ ಈಗ ಸಾಂಕೇತಿಕವಾಗಿರಬೇಕು ಎಂದ ಪ್ರಧಾನಿ ಮೋದಿ

ನವ ದೆಹಲಿ: ಹರಿದ್ವಾರದ ಕುಂಭಮೇಳ ಪ್ರದೇಶದಿಂದ ಅಪಾರ ಸಂಖ್ಯೆಯ ಕೊರೊನಾ ಸೋಂಕಿಗೆ ಒಳಗಾಗುತ್ತಿರುವ ಮಧ್ಯೆ, ಪ್ರಧಾನಿ ನರೇಂದ್ರ ಮೋದಿ ಶನಿವಾರ ಬೆಳಿಗ್ಗೆ ವಾರಗಳ ಕಾಲ ನಡೆಯುವ ಧಾರ್ಮಿಕ ಹಬ್ಬವು “ಈಗ ಮಾತ್ರ ಸಾಂಕೇತಿಕವಾಗಿರಬೇಕು” ಎಂದು ಹೇಳಿದ್ದಾರೆ. ಕೋವಿಡ್ -19 ಸಾಂಕ್ರಾಮಿಕ ರೋಗದ ವಿರುದ್ಧ ಭಾರತದ ಹೋರಾಟಕ್ಕೆ ಇದು ಉತ್ತೇಜನ ನೀಡುತ್ತದೆ ಎಂದು ಪ್ರಧಾನಿ ಮೋದಿ ಒತ್ತಿ … Continued

ಮತ್ತೊಂದು ಆಘಾತಕಾರಿ ಸುದ್ದಿ..ಕೊರೊನಾ ಪ್ರಧಾನವಾಗಿ ಹರಡುವುದೇ ಗಾಳಿಯ ಮೂಲಕ ಎಂದ ಅಧ್ಯಯನ ವರದಿ..!!

ಕೆಮ್ಮದ ಅಥವಾ ಸೀನದ ಜನರಿಂದಲೂ ಕೋವಿಡ್‌-19 ಕನಿಷ್ಠ ಶೇ.40ರಷ್ಟು ಹರಡುತ್ತದೆ ನವ ದೆಹಲಿ: ಕೋವಿಡ್‌-19 ಸಾಂಕ್ರಾಮಿಕದ ಹಿಂದಿರುವ SARS-CoV-2 ವೈರಸ್ ಪ್ರಧಾನವಾಗಿ ಗಾಳಿಯ ಮೂಲಕ ಹರಡುತ್ತದೆ ಎಂದು ಸಾಬೀತು ಪಡಿಸಲು ಸ್ಥಿರವಾದ, ಬಲವಾದ ಪುರಾವೆಗಳಿವೆ ಎಂದು ದಿ ಲ್ಯಾನ್ಸೆಟ್ ಜರ್ನಲ್‌ನಲ್ಲಿ ಶುಕ್ರವಾರ ಪ್ರಕಟವಾದ ಹೊಸ ಅಧ್ಯಯನ ಹೇಳಿದೆ. ಬ್ರಿಟನ್‌, ಅಮೆರಿಕ ಮತ್ತು ಕೆನಡಾದ ಆರು ತಜ್ಞರ … Continued

ಭಾರತದಲ್ಲಿ ಮುಂದುವರಿದ ದೈನಂದಿನ ಕೊರೊನಾ ಸೋಂಕಿನ ದಾಖಲೆ ಏರಿಕೆ ಗ್ರಾಫ್‌..ಸಾವಿನ ಸಂಖ್ಯೆಯೂ ಏರಿಕೆ..!

ನವ ದೆಹಲಿ: ಭಾರತದಲ್ಲಿ ಕಳೆದ ಇಪ್ಪತ್ನಾಲ್ಕು ತಾಸಿನಲ್ಲಿ ದಾಖಲೆಯ ದೈನಂದಿನ 2,34,692 ಕೊರೊನಾ ಸೋಂಕು ದಾಖಲಾಗಿದೆ, ಮತ್ತು 1,341 ಸಾವುಗಳು ವರದಿಯಾಗಿವೆ. ಭಾರತದ ಕೋವಿಡ್ -19 ಸಂಖ್ಯೆ 1,45,26,609 ಕ್ಕೆ ಏರಿದ್ದು, ಮತ್ತು ಮೃತಪಟ್ಟವರ ಸಂಖ್ಯೆ 1,75,649 ಕ್ಕೆ ತಲುಪಿದೆ ಎಂದು ಆರೋಗ್ಯ ಸಚಿವಾಲಯ ಶನಿವಾರ ತಿಳಿಸಿದೆ. . ದೇಶದಲ್ಲಿ ಸಕ್ರಿಯ ಕಕೊರೊನಾ ವೈರಸ್ ಪ್ರಕರಣಗಳ … Continued

 ಹೃದಯಾಘಾತದಿಂದ ದಕ್ಷಿಣ ಭಾರತದ ಖ್ಯಾತ ಹಾಸ್ಯನಟ ವಿವೇಕ ನಿಧನ

ಚೆನ್ನೈ: ಹೃದಯಾಘಾತದಿಂದ ಆಸ್ಪತ್ರೆಗೆ ದಾಖಲಾಗಿದ್ದ ದಕ್ಷಿಣ ಭಾರತದ ಹಿರಿಯ ಹಾಸ್ಯನಟ ವಿವೇಕ್ ( 59 ವರ್ಷ) ಶನಿವಾರ ಬೆಳಿಗ್ಗೆ ಚೆನ್ನೈನಲ್ಲಿ ನಿಧನರಾದರು. ವಿಶೇಷವಾಗಿ ತಮಿಳು ಹಾಗೂ ತೆಲುಗು ಸೇರಿದಂತೆ 220 ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದ ನಟ ವಿವೇಕ್‌ ಶನಿವಾರ ಮುಂಜಾನೆ 4.35 ಕ್ಕೆ ಹೃದಯ ಸ್ತಂಭನದ ನಂತರ ನಿಧನರಾದರು. ವೈದ್ಯರ ಪ್ರಕಾರ, ನಟನಿಗೆ ಎಲ್ಎಡಿ … Continued

ಚೆಕ್‌ ಬೌನ್ಸ್‌ ಪ್ರಕರಣಗಳ ಶೀಘ್ರ ವಿಲೇವಾರಿಗೆ ಕೇಂದ್ರಕ್ಕೆ ಸುಪ್ರಿಂ ಕೋರ್ಟ್‌ ನೊಟೀಸ್‌ ‌

ನವದೆಹಲಿ:ಚೆಕ್ ಬೌನ್ಸ್ ಕೇಸುಗಳ ಶೀಘ್ರ ವಿಲೇವಾರಿಗೆ ಆದೇಶ ಹೊರಡಿಸಿರುವ ಸುಪ್ರೀಂ ಕೋರ್ಟ್, ಒಬ್ಬ ವ್ಯಕ್ತಿಯ ವಿರುದ್ಧ ಒಂದು ವರ್ಷದೊಳಗೆ ದಾಖಲಾಗುವ ಪ್ರಕರಣಗಳಲ್ಲಿ ವಿಚಾರಣೆಗಳನ್ನು ಒಟ್ಟುಗೂಡಿಸಿ ವಿಚಾರಣೆಗಳ ಶೀಘ್ರ ವಿಲೇವಾರಿ ಮಾಡಬೇಕೆಂದು ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿದೆ. ಈ ಸಂಬಂಧ ಎಲ್ಲಾ ಹೈಕೋರ್ಟ್ ಗಳಿಗೆ ಆದೇಶ ಹೊರಡಿಸಿರುವ ಸುಪ್ರೀಂ ಕೋರ್ಟ್, ಚೆಕ್ ಬೌನ್ಸ್ ಕೇಸುಗಳನ್ನು ನಿಭಾಯಿಸುವಂತೆ ವಿಚಾರಣಾಧೀನ … Continued

ಕೊರೊನಾ ಔಷಧಿ ರೆಮ್‌ಡಿಸಿವಿರ್‌ ಬೆಲೆ ಇಳಿಕೆ

ನವದೆಹಲಿ: ಕೊರೊನಾ ಪೀಡಿತರ ಚಿಕಿತ್ಸೆಗೆ ಬಳಕೆ ಮಾಡುವ “ರೆಮ್‌ಡಿಸಿವಿರ್‌ʼ ಔಷಧಿಯ ಬೆಲೆಯನ್ನು ಇಳಿಕೆ ಮಾಡಲಾಗಿದೆ ಎಂದು ರಾಸಾಯನಿಕ ಹಾಗೂ ರಸಗೊಬ್ಬರ ಸಚಿವ ಸದಾನಂದಗೌಡ ತಿಳಿಸಿದ್ದಾರೆ. ಅವರು ಟ್ವೀಟ್‌ನಲ್ಲಿ, ಕೇಂದ್ರ ಸರಕಾರದ ಮಧ್ಯ ಪ್ರವೇಶದಿಂದಾಗಿ ರೆಮ್‌ಡಿಸಿವಿರ್‌ ಬೆಲೆಯನ್ನು ಎಪ್ರಿಲ್‌ ೧೫ರಿಂದ ಅನ್ವಯವಾಗುವಂತೆ ಉತ್ಪಾದಕರು ೫೪೦೦ರೂ.ಗಳಿಂದ ೩೫೦೦ಗಳಿಗೆ ಇಳಿಕೆ ಮಾಡಿದ್ದಾರೆ. ಇದರಿಂದ ಕೊವಿಡ್‌ ವಿರುದ್ಧದ ಪ್ರಧಾನಿ ಹೋರಾಟಕ್ಕೆ ಬೆಂಬಲ … Continued

ಈವೆರಗಿನ ಗರಿಷ್ಠ ದೈನಂದಿನ ಪ್ರಕರಣಕ್ಕೆ ಸಾಕ್ಷಿಯಾದ ಉತ್ತರ ಪ್ರದೇಶ..!

ಲಕ್ನೋ: ಉತ್ತರಪ್ರದೇಶದ ಕೊರೊನಾ ಎರಡನೇ ಅಲೆಗೆ ತತ್ತರಿಸುತ್ತಿದೆ. ಶುಕ್ರವಾರ ಉತ್ತರ ಪ್ರದೇಶದಲ್ಲಿ ಅತಿ ಹೆಚ್ಚು ದೈನಂದಿನ ಕೊರೊನಾ ಸೋಂಕು 27,426 ಸಕ್ರಿಯ ಪ್ರಕರಣಗಳು ದಾಖಲಾಗಿದ್ದು, 103 ಸಾವುಗಳು ವರದಿಯಾಗಿವೆ. ಶುಕ್ರವಾರದ ಸಕ್ರಿಯ ಪ್ರಕರಣಗಳ ಸಂಖ್ಯೆ ಗುರುವಾರ 22,439ಕ್ಕಿಂತ5,000 ಹೆಚ್ಚಾಗಿದೆ. ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ ರಾಜ್ಯದಾದ್ಯಂತ 1.5 ಲಕ್ಷ ದಾಟಿದೆ. ರಾಜ್ಯದ ರಾಜಧಾನಿ ಲಕ್ನೋ ಅತ್ಯಂತ … Continued

ದೇಶೀಯ ಕೋವಿಡ್‌ ಲಸಿಕೆ ಉತ್ಪಾದನೆ ಹೆಚ್ಚಳಕ್ಕೆ ಭಾರತ್ ಬಯೋಟೆಕ್‌ ಸೇರಿ ನಾಲ್ಕು ಸಂಸ್ಥೆಗಳಿಗೆ ಕೇಂದ್ರದಿಂದ ಆರ್ಥಿಕ ನೆರವು

ನವ ದೆಹಲಿ: ಸ್ಥಳೀಯವಾಗಿ ಅಭಿವೃದ್ಧಿ ಹೊಂದಿದ ಕೋವಿಡ್ -19 ಲಸಿಕೆ ಕೋವಾಕ್ಸಿನ್ ಉತ್ಪಾದನೆ ಹೆಚ್ಚಿಸಲು ಜೈವಿಕ ತಂತ್ರಜ್ಞಾನ ಇಲಾಖೆ (ಡಿಬಿಟಿ) ಶುಕ್ರವಾರ ಭಾರತ್ ಬಯೋಟೆಕ್ ಇಂಟರ್ನ್ಯಾಷನಲ್ ಮತ್ತು ಹ್ಯಾಫ್ಕೈನ್ ಬಯೋಫಾರ್ಮಾಸ್ಯುಟಿಕಲ್ ಕಾರ್ಪೊರೇಶನ್ ಲಿಮಿಟೆಡ್ ಸೇರಿದಂತೆ ನಾಲ್ಕು ಸಂಸ್ಥೆಗಳಿಗೆ ಆರ್ಥಿಕ ನೆರವು ಪ್ರಕಟಿಸಿದೆ. ಅನುದಾನದಲ್ಲಿ, ಲಸಿಕೆಯ ಸಹ-ಡೆವಲಪರ್ ಭಾರತ್ ಬಯೋಟೆಕ್ ತನ್ನ ಹೊಸ ಬೆಂಗಳೂರು ಸೌಲಭ್ಯವನ್ನು ಕೋವಾಕ್ಸಿನ್ … Continued

ಮಹಾರಾಷ್ಟ್ರದಲ್ಲಿ ಶುಕ್ರವಾರ ಈವರೆಗಿನ ಅತಿಹೆಚ್ಚು ದೈನಂದಿನ ಕೊರೊನಾ ಸೋಂಕು ದಾಖಲು..!

ಮುಂಬೈ: 63,729 ಹೊಸ ಕೋವಿಡ್‌ -19 ಪ್ರಕರಣಗಳೊಂದಿಗೆ, ಮಹಾರಾಷ್ಟ್ರವು ಶುಕ್ರವಾರ (ಏಪ್ರಿಲ್ 16) ಸಾಂಕ್ರಾಮಿಕ ರೋಗದ ನಂತರದ ಅತಿ ಹೆಚ್ಚು ಏಕದಿನ ಉಲ್ಬಣ ದಾಖಲಿಸಿದೆ. ಹಿಂದಿನ ಏಕದಿನ ಗರಿಷ್ಠ 63,294 ಆಗಿದ್ದು, ಇದು ಏಪ್ರಿಲ್ 11 ರಂದು ದಾಖಲಾಗಿತ್ತು. ಇದೇ ಅವಧಿಯಲ್ಲಿ 398 ಕೋವಿಡ್‌-19 ಸಾವುಗಳು ದಾಖಲಾಗಿದ್ದು, ಸಾವಿನ ಸಂಖ್ಯೆ 59,551 ಕ್ಕೆ ತಲುಪಿದೆ. ಈ … Continued