ಜಮ್ಮು-ಕಾಶ್ಮೀರದಲ್ಲಿ ರಾಷ್ಟ್ರಪತಿ ಆಡಳಿತ ಹಿಂತೆಗೆತ ; ನೂತನ ಸರ್ಕಾರದ ರಚನೆಗೆ ಹಾದಿ ಸುಗಮ

ನವದೆಹಲಿ: ಕೇಂದ್ರ ಸರ್ಕಾರವು ಜಮ್ಮು ಮತ್ತು ಕಾಶ್ಮೀರದಲ್ಲಿನ ರಾಷ್ಟ್ರಪತಿ ಆಳ್ವಿಕೆಯನ್ನು ಭಾನುವಾರ ಹಿಂಪಡೆದಿದೆ. ಹೀಗಾಗಿ ಕೇಂದ್ರಾಡಳಿತ ಪ್ರದೇಶದಲ್ಲಿ ಈಗ ಹೊಸ ಸರ್ಕಾರ ರಚನೆಗೆ ಹಾದಿ ಸುಗಮವಾಗಿದೆ. ಕೇಂದ್ರ ಗೃಹ ಸಚಿವಾಲಯ ಈ ಕುರಿತು ಗೆಜೆಟ್ ಅಧಿಸೂಚನೆ ಹೊರಡಿಸಿದೆ. ನ್ಯಾಷನಲ್ ಕಾನ್ಫರೆನ್ಸ್ ನಾಯಕ ಒಮರ್ ಅಬ್ದುಲ್ಲಾ ಅವರು ಶುಕ್ರವಾರ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರನ್ನು ಭೇಟಿಯಾದ … Continued

ಗುಜರಾತಿನಲ್ಲಿ 5,000 ಕೋಟಿ ರೂ. ಮೌಲ್ಯದ 518 ಕೆಜಿ ಕೊಕೇನ್ ವಶ…

ನವದೆಹಲಿ: ಭಾನುವಾರ ವಿಶೇಷ ಜಂಟಿ ಕಾರ್ಯಾಚರಣೆಯಲ್ಲಿ ಗುಜರಾತಿನ ಅಂಕಲೇಶ್ವರ ನಗರದಲ್ಲಿ 5,000 ಕೋಟಿ ರೂಪಾಯಿ ಮೌಲ್ಯದ ಕೊಕೇನ್ ವಶಪಡಿಸಿಕೊಳ್ಳಲಾಗಿದೆ. ದೆಹಲಿ ಪೊಲೀಸರು ಮತ್ತು ಗುಜರಾತ್ ಪೊಲೀಸರ ಜಂಟಿ ತಂಡ ಅಂಕಲೇಶ್ವರದಲ್ಲಿರುವ ಆವ್ಕಾರ್ ಡ್ರಗ್ಸ್ ಲಿಮಿಟೆಡ್ ಕಂಪನಿಯ ಆವರಣದ ಮೇಲೆ ದಾಳಿ ನಡೆಸಿದ್ದು, ಈ ವೇಳೆ 518 ಕೆಜಿ ಡ್ರಗ್ಸ್ ಪತ್ತೆಯಾಗಿದೆ. ವಶಪಡಿಸಿಕೊಂಡ ಮಾದಕ ವಸ್ತುಗಳ ಮಾರುಕಟ್ಟೆ … Continued

ವೀಡಿಯೊ…| ಕುಮಟಾ : ಬರ್ಗಿ ಬಳಿ ಬೃಹತ್‌ ಗಾತ್ರದ ಕಾಳಿಂಗ ಸರ್ಪ ಸೆರೆ

ಕುಮಟಾ : ಮನೆ ಆವರಣದ ಬಳಿಯೇ ಇದ್ದ ಮಾವಿನ ಗಿಡ ಏರಿ ಕುಳಿತು ಕೆಲಕಾಲ ಆತಂಕ ಉಂಟು ಮಾಡಿದ್ದ ಬೃಹತ್‌ ಕಾಳಿಂಗ ಸರ್ಪವನ್ನು ಯಶಸ್ವಿಯಾಗಿ ಸೆರೆ ಹಿಡಿಯಲಾಗಿದೆ ಎಂದು ವರದಿಯಾಗಿದೆ. ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಬರ್ಗಿ ಗ್ರಾಮದ ಮನೆಯೊಂದರ ಆವರಣದಲ್ಲಿದ್ದ ಮಾವಿನ ಗಿಡದ ಏರಿದ್ದ ಬೃಹತ್‌ ಕಾಳಿಂಗ ಸರ್ಪವನ್ನು ಉರಗ ತಜ್ಞ ಅಶೋಕ … Continued

ಎನ್‌ ಸಿಪಿ ನಾಯಕ ಬಾಬಾ ಸಿದ್ದಿಕ್ ಹತ್ಯೆ ಹೊಣೆ ಹೊತ್ತುಕೊಂಡ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್

ಮುಂಬೈ: ಮಹಾರಾಷ್ಟ್ರದ ಮಾಜಿ ಸಚಿವ ಮತ್ತು ಎನ್‌ಸಿಪಿ (ಅಜಿತ್ ಪವಾರ್)ನಾಯಕ ಬಾಬಾ ಸಿದ್ದಿಕ್ ಹತ್ಯೆಯಾದ ಕೆಲವೇ ಗಂಟೆಗಳ ನಂತರ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಈ ಹತ್ಯೆಯ ಹೊಣೆಯನ್ನು ಹೊತ್ತುಕೊಂಡಿದೆ. 66 ವರ್ಷದ ಬಾಬಾ ಸಿದ್ದಿಕ್ ಅವರನ್ನು ಶನಿವಾರ ರಾತ್ರಿ ಮುಂಬೈನ ಬಾಂದ್ರಾ ಪೂರ್ವದಲ್ಲಿರುವ ಅವರ ಮಗ ಜೀಶನ್ ಸಿದ್ದಿಕ್ ಅವರ ಕಚೇರಿಯ ಹೊರಗೆ ಗುಂಡು ಹಾರಿಸಿ … Continued

ವೀಡಿಯೊ…| ಹೆಬ್ಬಾವು ಇಡಿಯಾಗಿ ನುಂಗಿದ್ದ ನೀಲಗಾಯ್ ಕರುವನ್ನು ರಕ್ಷಿಸಲು ಯತ್ನಿಸಿದ ಸ್ಥಳೀಯರು..ಆದರೆ

ಹಿಮಾಚಲ ಪ್ರದೇಶದ ಉನಾ ಜಿಲ್ಲೆಯಲ್ಲಿ ನಡೆದ ಘಟನೆಯೊಂದರಲ್ಲಿ ಹೆಬ್ಬಾವು ನುಂಗಿದ ನೀಲಗಾಯ್ ಕರುವನ್ನು ರಕ್ಷಿಸಲು ಯತ್ನಿಸಿದ ಸ್ಥಳೀಯರು ವಿವಾದದ ಕೇಂದ್ರಬಿಂದುವಾಗಿದ್ದಾರೆ. ಘಟನೆಯ ದೃಶ್ಯಾವಳಿಗಳು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಪ್ರಸಾರವಾಗಿದ್ದು, ಹೆಬ್ಬಾವಿನ ಹೊಟ್ಟೆಯೊಳಗೆ ಸಿಕ್ಕಿಬಿದ್ದ ಕರುವನ್ನು ಬಿಡಿಸಲು ಸ್ಥಳೀಯರು ಹಾವನ್ನು ಅಲುಗಾಡಿಸುತ್ತಿರುವುದನ್ನು ತೋರಿಸುತ್ತದೆ. ಈ ವೀಡಿಯೊವನ್ನು ಭಾರತೀಯ ಅರಣ್ಯ ಸೇವೆ (ಐಎಫ್‌ಎಸ್) ಅಧಿಕಾರಿ ಪರ್ವೀನ್ ಕಸ್ವಾನ್ ಅವರು … Continued

ಎನ್‌ ಸಿಪಿ ನಾಯಕ ಬಾಬಾ ಸಿದ್ದಿಕ್ ಶೂಟರ್‌ಗಳು ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ ನವರು: ಮೂಲಗಳು

ಮುಂಬೈ: ಮಹಾರಾಷ್ಟ್ರದ ಮಾಜಿ ಸಚಿವ ಬಾಬಾ ಸಿದ್ದಿಕ್ ಹತ್ಯೆ ಪ್ರಕರಣದಲ್ಲಿ ಬಂಧಿತರಾಗಿರುವ ಇಬ್ಬರು ಶಂಕಿತರು ತಾವು ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ಗೆ ಸೇರಿದವರು ಎಂದು ಹೇಳಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಆದರೆ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ ಹತ್ಯೆಯ ಹೊಣೆಗಾರಿಕೆಯನ್ನು ಇನ್ನೂ ಒಪ್ಪಿಕೊಳ್ಳದಿರುವಾಗ ಪೊಲೀಸರು ಈ ಬಗ್ಗೆ ಪರಿಶೀಲಿಸಿಲ್ಲ. ಈ ಘಟನೆ ಮಹಾರಾಷ್ಟ್ರ ರಾಜ್ಯ ಚುನಾವಣೆಗೆ ಮುನ್ನ ಭದ್ರತಾ … Continued

ಮುಂಬೈ | ಎನ್‌ಸಿಪಿ ನಾಯಕ ಬಾಬಾ ಸಿದ್ದಿಕ್ ಗುಂಡಿಕ್ಕಿ ಹತ್ಯೆ ; ಇಬ್ಬರ ಬಂಧನ : ಬಾಬಾ ಸಿದ್ದಿಕ್ ಯಾರು..?

ಮುಂಬೈ: ಮಹಾರಾಷ್ಟ್ರದ ಮಾಜಿ ಸಚಿವ ಮತ್ತು ಅಜಿತ್ ಪವಾರ್ ನೇತೃತ್ವದ ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ಹಿರಿಯ ನಾಯಕ ಬಾಬಾ ಸಿದ್ದಿಕ್ ಅಪರಿಚಿತರ ಗುಂಡಿನ ದಾಳಿಯಲ್ಲಿ ಸಾವಿಗೀಡಾಗಿದ್ದಾರೆ. ಮುಂಬೈನ ಬಾಂದ್ರಾ ಪೂರ್ವದಲ್ಲಿ ಶನಿವಾರ ಸಂಜೆ ಈ ಘಟನೆ ನಡೆದಿದ್ದು, ಗುಂಡಿನ ದಾಳಿಯಿಂದ ತೀವ್ರವಾಗಿ ಗಾಯಗೊಂಡ ಅವರನ್ನು ತಕ್ಷಣವೇ ಲೀಲಾವತಿ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಚಿಕಿತ್ಸೆ ಫಲಿಸದೆ ಅವರು … Continued

ವೀಡಿಯೊ..| ದಿಢೀರನೆ ಕುಸಿದು ರಸ್ತೆ ಮೇಲೆ ಬಿದ್ದ ಕಟ್ಟಡ ; ಕೂದಲೆಳೆ ಅಂತರದಿಂದ ಪಾರಾದ ಇಬ್ಬರು ಪುಟ್ಟ ಮಕ್ಕಳು

ಉತ್ತರ ಪ್ರದೇಶದ ಮೀರತ್‌ನ ಸದರ್ ಬಜಾರ್ ಪ್ರದೇಶದಲ್ಲಿ ಶುಕ್ರವಾರ ಕಟ್ಟಡ ಕುಸಿತದಿಂದ ಅವಶೇಷಗಳ ಅಡಿಗೆ ಸಿಲುಕುವುದರಿಂದ ಇಬ್ಬರು ಪುಟ್ಟ ಮಕ್ಕಳು ಸ್ವಲ್ಪದರಲ್ಲೇ ಪಾರಾಗಿದ್ದಾರೆ. ಈ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕಿರಿದಾದ ರಸ್ತೆ ಮೂಲಕ ಸ್ಕೂಟರ್ ಹಾದುಹೋಗುವುದರೊಂದಿಗೆ ವೀಡಿಯೊ ಪ್ರಾರಂಭವಾಗುತ್ತದೆ, ನಂತರ ಬೈಸಿಕಲ್ ಮೇಲೆ ಮಗು ಹೋಗುತ್ತದೆ. ನಂತರ ಮಹಿಳೆ ನಡೆದುಕೊಂಡು … Continued

ಭಾರತದ ಶ್ರೀಮಂತರ ಪಟ್ಟಿಯಲ್ಲಿ ಮುಖೇಶ ಅಂಬಾನಿ ಮತ್ತೊಮ್ಮೆ ನಂ.1 ; ಅವರ ಸಂಪತ್ತು ಎಷ್ಟು ಹೆಚ್ಚಾಗಿದೆ ಗೊತ್ತೆ..?

ರಿಲಯನ್ಸ್ ಇಂಡಸ್ಟ್ರೀಸ್‌ ಅಧ್ಯಕ್ಷ ಮುಖೇಶ್ ಅಂಬಾನಿ 2024ರ ಫೋರ್ಬ್ಸ್‌ ಪಟ್ಟಿಯಲ್ಲಿ (Forbes List) ಮತ್ತೊಮ್ಮೆ ಭಾರತದ ಶ್ರೀಮಂತ (Richest Indian) ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿದ್ದಾರೆ. ಅವರ ಆದಾಯದ ನಿವ್ವಳ ಮೌಲ್ಯ 119.5 ಶತಕೋಟಿ ಡಾಲರ್ ಆಗಿದೆ ಎಂದು ಫೋರ್ಬ್ಸ್‌ ಹೇಳಿದೆ. ಕಳೆದ ವರ್ಷದಲ್ಲಿ ಅವರ ಸಂಪತ್ತು 27.5 ಶತಕೋಟಿ ಡಾಲರ್ ಗಳಷ್ಟು ಅಂದರೆ ಭಾರತೀಯ ರೂಪಾಯಿ … Continued

ವೀಡಿಯೊ..| ಸಹಾರಾ ಮರುಭೂಮಿಯಲ್ಲಿ 50 ವರ್ಷಗಳಲ್ಲಿ ಭಾರಿ ಮಳೆಯಿಂದ ಮೊದಲ ಪ್ರವಾಹ…!

ಅಪರೂಪದ ಮತ್ತು ನಾಟಕೀಯ ವಿದ್ಯಮಾನದಲ್ಲಿ ಮಳೆಯೆಂದರೆ ಅಪರುಪವಾಗಿರುವ ಸಹಾರಾ ಮರುಭೂಮಿಯ ಭಾಗಗಳು ಎರಡು ದಿನಗಳ ಧಾರಾಕಾರ ಮಳೆ ಹಾಗೂ ಭಾರಿ ಪ್ರವಾಹಕ್ಕೆ ಸಾಕ್ಷಿಯಾಯಿತು. ವಿಶ್ವದ ಅತಿದೊಡ್ಡ ಬಿಸಿ ಮರುಭೂಮಿಯಾದ ಸಹಾರಾ ಉತ್ತರ ಆಫ್ರಿಕಾದಲ್ಲಿದೆ, ಇದು ಪ್ರಪಂಚದ ಅತ್ಯಂತ ಶುಷ್ಕ ಸ್ಥಳಗಳಲ್ಲಿ ಒಂದಾಗಿದೆ ಮತ್ತು ಬೇಸಿಗೆಯ ಕೊನೆಯಲ್ಲಿ ಮಳೆ ಅಪರೂಪವಾಗಿ ಬರುತ್ತದೆ. ಆದರೆ ಈ ವರ್ಷದ ಮಳೆಯು … Continued