ಐ ಎಫ್‌ ಎಫ್‌ ಐ 2023: ವೆಬ್ ಸರಣಿಗಳಿಗೆ ಹೊಸದಾಗಿ ಪ್ರಶಸ್ತಿ ಘೋಷಿಸಿದ ಅನುರಾಗ ಠಾಕೂರ್

ನವದೆಹಲಿ : ಈ ವರ್ಷದಿಂದ ಅತ್ಯುತ್ತಮ ವೆಬ್ ಸರಣಿ ತಯಾರಕರಿಗೆ ಪ್ರಶಸ್ತಿ ನೀಡಲಾಗುವುದು ಎಂದು ಕೇಂದ್ರ ಸಚಿವ ಅನುರಾಗ ಠಾಕೂರ್ ಪ್ರಕಟಿಸಿದ್ದಾರೆ. ನವೆಂಬರ್ 20 ರಿಂದ ನಡೆಯಲಿರುವ ಗೋವಾ ಚಿತ್ರೋತ್ಸವದಲ್ಲಿ ಈ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ. ಈ ಪ್ರಶಸ್ತಿಯನ್ನು ಒಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ಮೂಲತಃ ಭಾರತೀಯ ಭಾಷೆಯಲ್ಲಿ ಚಿತ್ರೀಕರಿಸಲಾದ ಮೂಲ ವೆಬ್ ಸರಣಿಗೆ … Continued

ಬಸ್ಸಿನಲ್ಲಿ ಪೊಲೀಸರ ಕಸ್ಟಡಿಯಲ್ಲಿದ್ದ ಗ್ಯಾಂಗ್‌ಸ್ಟರನ ಸಿನಿಮೀಯ ರೀತಿಯಲ್ಲಿ ಹತ್ಯೆ ; ವಿಡಿಯೋ ವೈರಲ್

ಜೈಪುರ: ತುಂಬಿತುಳುಕುತ್ತಿದ್ದ ಬಸ್ಸಿನಲ್ಲಿ ಪೊಲೀಸರ ಸಮ್ಮುಖದಲ್ಲಿಯೇ ಗ್ಯಾಂಗ್‌ಸ್ಟರ್ ಮತ್ತು ಆತನ ಸಹವರ್ತಿಯ ಮೇಲೆ ದುಷ್ಕರ್ಮಿಗಳ ಗುಂಪು ದಾಳಿ ನಡೆಸಿದ್ದ ಸಿನಿಮೀಯ ಘಟನೆಯ ವೀಡಿಯೊ ಈಗ ವೈರಲ್ ಆಗಿದೆ. ಈ ಘಟನೆ ರಾಜಸ್ಥಾನದಲ್ಲಿ ನಡೆದಿದೆ. ಜುಲೈ 12ರಂದು ಆರೋಪಿಗಳನ್ನು ಆರು ಮಂದಿ ಪೊಲೀಸ್ ಸಿಬ್ಬಂದಿ ನ್ಯಾಯಾಲಯದ ವಿಚಾರಣೆಗಾಗಿ ಕರೆದೊಯ್ಯುವಾಗ ಈ ಘಟನೆ ನಡೆದಿದೆ. ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿರುವ … Continued

ವಿಪಕ್ಷಗಳ ಒಕ್ಕೂಟಕ್ಕೆ ʼಇಂಡಿಯಾʼ ಎಂದು ಹೆಸರಿಡಲು ಬಿಹಾರ ಸಿಎಂ ನಿತೀಶಕುಮಾರ ವಿರೋಧಿಸಿದ್ದು ಏಕೆ…?

ಬೆಂಗಳೂರು : ಬಿಹಾರದ ಮುಖ್ಯಮಂತ್ರಿ ನಿತೀಶಕುಮಾರ ಅವರು ವಿರೋಧ ಪಕ್ಷಗಳ ಮೈತ್ರಿಕೂಟವನ್ನು ‘ಇಂಡಿಯಾ’ (Indian National Developmental Inclusive Alliance) ಎಂದು ಹೆಸರಿಡಲು ಉತ್ಸುಕರಾಗಿರಲಿಲ್ಲ ಎಂದು ವರದಿಗಳು ತಿಳಿಸಿವೆ. ಏಕೆಂದರೆ ಅದರಲ್ಲಿ ‘ಎನ್‌ಡಿಎ’ ಇದೆ. ಬೆಂಗಳೂರಿನಲ್ಲಿ ಸೋಮವಾರ ಸಂಜೆ ನಡೆದ ಅನೌಪಚಾರಿಕ ಸಭೆಯಲ್ಲಿ ಈ ಹೆಸರನ್ನು ಮೊದಲು ಬಳಸಲಾಯಿತು ಎಂದು ಮೂಲಗಳು ತಿಳಿಸಿವೆ. ಎಲ್ಲ ಪಕ್ಷಗಳಿಂದಲೂ … Continued

ನಕಾರಾತ್ಮಕ ಗ್ರಹಿಕೆಯಿಂದ ರಚಿಸಲಾದ ಮೈತ್ರಿಕೂಟಗಳು ಯಾವಾಗಲೂ ವಿಫಲಗೊಳ್ಳುತ್ತವೆ : ಎನ್‌ಡಿಎ ಸಭೆಯಲ್ಲಿ ಪ್ರಧಾನಿ ಮೋದಿ

ನವದೆಹಲಿ: ನಕಾರಾತ್ಮಕ ಗ್ರಹಿಕೆಗಳ ಮೇಲೆ ನಿರ್ಮಿಸಲಾದ ಮೈತ್ರಿಗಳು ಯಾವಾಗಲೂ ವಿಫಲಗೊಳ್ಳುತ್ತವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ದೆಹಲಿಯಲ್ಲಿ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ (ಎನ್‌ಡಿಎ) ಸಭೆಯಲ್ಲಿ ಮಾತನಾಡಿದ ಅವರು, ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟವನ್ನು (ಎನ್‌ಡಿಎ) ಎದುರಿಸಲು 26 ವಿರೋಧ ಪಕ್ಷಗಳ ನಾಯಕರು ಮಂಗಳವಾರ ಬೆಂಗಳೂರಿನಲ್ಲಿ ಭೇಟಿಯಾಗಿ ತಮ್ಮ ಮೈತ್ರಿಕೂಟಕ್ಕೆ ಇಂಡಿಯಾ – ಭಾರತೀಯ … Continued

ಭೋಪಾಲ್‌ನಲ್ಲಿ ತುರ್ತು ಲ್ಯಾಂಡಿಂಗ್‌ ಮಾಡಿದ ರಾಹುಲ್ ಗಾಂಧಿ, ಸೋನಿಯಾ ಗಾಂಧಿಯಿದ್ದ ವಿಮಾನ

ನವದೆಹಲಿ: ಮಂಗಳವಾರ ಸಂಜೆ ಹವಾಮಾನ ವೈಪರೀತ್ಯದಿಂದಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ತಾಯಿ ಸೋನಿಯಾ ಪ್ರಯಾಣಿಸುತ್ತಿದ್ದ ಬೆಂಗಳೂರು-ದೆಹಲಿ ವಿಮಾನವನ್ನು ಭೋಪಾಲ್ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಲಾಯಿತು. ಬೆಂಗಳೂರಿನಲ್ಲಿ 26 ಪಕ್ಷಗಳು ಭಾಗವಹಿಸಿದ್ದ ಎರಡು ದಿನಗಳ ಚಿಂತನ-ಮಂಥನ ಸಭೆಯ ನಂತರ ಅವರು ಹಿಂತಿರುಗುತ್ತಿದ್ದರು. ಘಟನೆಯು ಮಂಗಳವಾರ ರಾತ್ರಿ 7:45 ರ ಸುಮಾರಿಗೆ ಸಂಭವಿಸಿದೆ. 2024 … Continued

ಅಮೆರಿಕದ ಪೆಂಟಗನ್ ಕಟ್ಟಡ ಮೀರಿಸಿ ವಿಶ್ವದ ಅತಿದೊಡ್ಡ ಕಚೇರಿ ಕಟ್ಟಡವಾಗಿ ಹೊರಹೊಮ್ಮಿದ ಭಾರತದ ಈ ಕಟ್ಟಡ

ವಿಶ್ವದ ಶೇಕಡ 90 ರಷ್ಟು ವಜ್ರಗಳನ್ನು ತಯಾರಿಸುವ ಗುಜರಾತಿನ ಸೂರತ್, ಈಗ ತನ್ನ ಅಭಿವೃದ್ಧಿ ಹೊಂದುತ್ತಿರುವ ಉದ್ಯಮಕ್ಕೆ ಅವಕಾಶ ಕಲ್ಪಿಸಲು ಗಮನಾರ್ಹವಾದ ಕಟ್ಟಡವನ್ನು ಹೊಂದಿದೆ. ನಗರದಲ್ಲಿ ಇತ್ತೀಚೆಗೆ ಉದ್ಘಾಟನೆಗೊಂಡ ಸೂರತ್ ಡೈಮಂಡ್ ಬೋರ್ಸ್ ಕಟ್ಟಡವು ಕಟ್ಟರ್, ಪಾಲಿಷರ್ ಮತ್ತು ವ್ಯಾಪಾರಿಗಳು ಸೇರಿದಂತೆ 65,000 ಕ್ಕೂ ಹೆಚ್ಚು ವಜ್ರದ ವೃತ್ತಿಪರರಿಗೆ ಸಮಗ್ರ ಕೇಂದ್ರವಾಗಿದೆ. CNN ವರದಿಯ ಪ್ರಕಾರ, … Continued

ವಿಪಕ್ಷಗಳ ಮೈತ್ರಿಕೂಟಕ್ಕೆ ʼಇಂಡಿಯಾʼ ಎಂಬ ಹೆಸರು ಪ್ರಸ್ತಾಪಿಸಿದ ರಾಹುಲ್‌ ಗಾಂಧಿ : ಅನುಮೋದಿಸಿದ ಮಮತಾ ಬ್ಯಾನರ್ಜಿ, ಸ್ಟಾಲಿನ್‌

ಬೆಂಗಳೂರು : ಮಂಗಳವಾರ (ಜುಲೈ 18) ಬೆಂಗಳೂರಿನಲ್ಲಿ 26 ಪಕ್ಷಗಳ ವಿರೋಧ ಪಕ್ಷದ ಮೈತ್ರಿಕೂಟಕ್ಕೆ “ಇಂಡಿಯಾ” ಎಂದು ಹೆಸರಿಸಲಾಯಿತು, ಇದನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರಸ್ತಾಪಿಸಿದರು ಎಂದು ಮೂಲಗಳು ತಿಳಿಸಿವೆ. ಹೆಸರನ್ನು ಆಯ್ಕೆ ಮಾಡುವ ಚರ್ಚೆಯಲ್ಲಿ ಇಂಡಿಯಾ ಎಂದು ಕರೆಯೋಣ, ಇದು ಭಾರತ ಮತ್ತು ಬಿಜೆಪಿ ನಡುವಿನ ಹೋರಾಟವಾಗಿದೆ ಎಂದು ರಾಹುಲ್ ಗಾಂಧಿ‌ ಅವರು … Continued

ಪಬ್‌ ಜೀ ಮೂಲಕ ಅನೇಕ ಸಂಪರ್ಕಗಳು, ನಿರರ್ಗಳ ಇಂಗ್ಲಿಷ್ : ಸೀಮಾ ಹೈದರಳ ಪಾಕಿಸ್ತಾನ ಸೇನೆ, ಐಎಸ್‌ಐ ಸಂಪರ್ಕದ ನಿಗೂಢತೆ ತೀವ್ರ..?

ನವದೆಹಲಿ: ತನ್ನ ಪ್ರೇಮಿ ಸಚಿನ್ ಮೀನಾ ಜೊತೆ ಇರಲು ಅಕ್ರಮವಾಗಿ ಭಾರತವನ್ನು ಪ್ರವೇಶಿಸಿದ ಪಾಕಿಸ್ತಾನಿ ಮಹಿಳೆ ಸೀಮಾ ಹೈದರ್, ಈ ಹಿಂದೆ ಆನ್‌ಲೈನ್ ಗೇಮ್ PUBG ಮೂಲಕ ಭಾರತದ ಹಲವಾರು ಜನರೊಂದಿಗೆ ಸಂಪರ್ಕದಲ್ಲಿದ್ದಳು ಎಂದು ಉತ್ತರ ಪ್ರದೇಶದ ಭಯೋತ್ಪಾದನಾ ನಿಗ್ರಹ ದಳದ (ATS) ಮೂಲಗಳು ತಿಳಿಸಿವೆ. ಪಾಕಿಸ್ತಾನ ಸೇನೆ ಮತ್ತು ದೇಶದ ಗುಪ್ತಚರ ಸಂಸ್ಥೆ ಇಂಟರ್-ಸರ್ವೀಸಸ್ … Continued

ವೀಡಿಯೊ… | ತಾನು ಸತ್ತರೆ ಮಕ್ಕಳ ಕಾಲೇಜ್‌ ಫೀ ಕಟ್ಟಲು ಪರಿಹಾರದ ಹಣ ಸಿಗುತ್ತದೆಂದು ಚಲಿಸುತ್ತಿದ್ದ ಬಸ್‌ ಮುಂದೆ ಹೋಗಿ ಆತ್ಮಹತ್ಯೆ ಮಾಡಿಕೊಂಡ ತಾಯಿ…!

ತಮಿಳುನಾಡಿನ ಸೇಲಂನಲ್ಲಿ ನಡೆದ ಹೃದಯ ವಿದ್ರಾವಕ ಘಟನೆಯೊಂದರಲ್ಲಿ, 39 ವರ್ಷದ ಮಹಿಳೆಯೊಬ್ಬರು ತನ್ನ ಸಾವಿನಿಂದ ತನ್ನ ಮಕ್ಕಳಿಗೆ ಸರ್ಕಾರದಿಂದ ಆರ್ಥಿಕ ಸಹಾಯ ಸಿಗುತ್ತದೆ ಎಂದು ಭಾವಿಸಿ ಚಲಿಸುತ್ತಿದ್ದ ಬಸ್ಸಿನ ಮುಂದೆ ನಡೆದುಕೊಂಡು ಹೋಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಜೂನ್ 28 ರಂದು ನಡೆದ ಈ ಘಟನೆಯ ವೀಡಿಯೊ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. … Continued

ಲೋಕಸಭೆ ಚುನಾವಣೆಯಲ್ಲಿ ಇಂಡಿಯಾ vs ಎನ್‌ ಡಿಎ : ಬೆಂಗಳೂರು ವಿರೋಧ ಪಕ್ಷಗಳ ಒಗ್ಗಟ್ಟಿನ ಸಭೆಯಲ್ಲಿ ಮಹಾಮೈತ್ರಿಕೂಟಕ್ಕೆ ‘INDIA’ ಎಂದು ಹೆಸರಿಟ್ಟ ನಾಯಕರು

ಬೆಂಗಳೂರು : ಬೆಂಗಳೂರಿನಲ್ಲಿ ವಿಪಕ್ಷಗಳ ಸಭೆಯ ಎರಡನೇ ದಿನದ ನಂತರ ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟವನ್ನು (ಎನ್‌ಡಿಎ) ಎದುರಿಸಲು ವಿರೋಧ ಪಕ್ಷಗಳು ತಮ್ಮ ಮಹಾಮೈತ್ರಿಕೂಟಕ್ಕೆ ಹೊಸ ಹೆಸರನ್ನು ನಾಮಕರಣ ಮಾಡಿವೆ. ಇದಕ್ಕೆ ಇಂಡಿಯಾ (ಇಂಡಿಯನ್ ನ್ಯಾಷನಲ್ ಡೆವಲಪ್‌ಮೆಂಟ್ ಇನ್‌ಕ್ಲೂಸಿವ್ ಅಲೈಯನ್ಸ್) ಎಂದು ಹೊಸ ಹೆಸರು ಇಡಲಾಗಿದೆ. ಬೆಂಗಳೂರಿನಲ್ಲಿ ವಿರೋಧ ಪಕ್ಷದ ನಾಯಕರು ಬೆಂಗಳೂರಿನಲ್ಲಿ ಮೈತ್ರಿಗೆ … Continued