ನಮ್ಮದೇ ನಿಜವಾದ ಜೆಡಿಎಸ್ : ಯಾವ ಕಾರಣಕ್ಕೂ ಎನ್‌ಡಿಎ ಮೈತ್ರಿಕೂಟದ ಜೊತೆ ಹೋಗಲ್ಲ : ಸಿ.ಎಂ.ಇಬ್ರಾಹಿಂ

ಬೆಂಗಳೂರು : ಲೋಕಸಭೆ ಚುಣಾವಣೆಯಲ್ಲಿ ಬಿಜೆಪಿ ಜೊತೆಗೆ ಮೈತ್ರಿ ಮಾಡಿಕೊಂಡಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿರುವ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ ಅವರು ಈಗ ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡ ಮತ್ತು ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಅವರಿಗೇ ಸಡ್ಡು ಹೊಡೆದಿದ್ದಾರೆ. ನಮ್ಮದೇ ಅಸಲಿ ಜೆಡಿಎಸ್. ನಾವು ಯಾವುದೇ ಕಾರಣಕ್ಕೂ ಎನ್‌ಡಿಎ ಮೈತ್ರಿಕೂಟದ ಜೊತೆ ಹೋಗುವುದಿಲ್ಲ ಎಂದು ಸಿಎಂ … Continued

ವಿಶ್ವಸಂಸ್ಥೆಗೆ ಭಾರತದ ಮುಂದಿನ ಕಾಯಂ ಪ್ರತಿನಿಧಿಯಾಗಿ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ನೇಮಕ

ನವದೆಹಲಿ: ವಿದೇಶಾಂಗ ವ್ಯವಹಾರಗಳ ಸಚಿವಾಲಯದ (MEA) ವಕ್ತಾರ ಅರಿಂದಮ್ ಬಾಗ್ಚಿ ಅವರನ್ನು ವಿಶ್ವಸಂಸ್ಥೆಗೆ ಭಾರತದ ಮುಂದಿನ ಖಾಯಂ ಪ್ರತಿನಿಧಿಯಾಗಿ ನೇಮಿಸಲಾಗಿದೆ ಎಂದು ಸಚಿವಾಲಯ ಸೋಮವಾರ ಪ್ರಕಟಿಸಿದೆ. ಪ್ರಸ್ತುತ, ರುಚಿರಾ ಕಾಂಬೋಜ್ ಅವರು ಕಾರ್ಯನಿರ್ವಹಿಸುತ್ತಿದ್ದಾರೆ. ಬಾಗ್ಚಿ ಶೀಘ್ರದಲ್ಲೇ ನೇಮಕಾತಿಯನ್ನು ತೆಗೆದುಕೊಳ್ಳುವ ನಿರೀಕ್ಷೆಯಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ (MEA) ತಿಳಿಸಿದೆ. ಅವರು 1995 ರಲ್ಲಿ ಭಾರತೀಯ ವಿದೇಶಾಂಗ … Continued

26 ವಾರಗಳ ಭ್ರೂಣದ ಗರ್ಭಪಾತಕ್ಕೆ ವಿವಾಹಿತ ಮಹಿಳೆಯ ಮನವಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್

ನವದೆಹಲಿ: ವೈದ್ಯಕೀಯ ಗರ್ಭಪಾತ ಕಾಯಿದೆ- 1971ರ ಪ್ರಕಾರ (ಎಂಟಿಪಿ ಕಾಯಿದೆ) ವಿಧಿಸಲಾದ 24 ವಾರಗಳ ಮಿತಿ ದಾಟಿ ಬೆಳೆದಿರುವ ಭ್ರೂಣದ ಗರ್ಭಪಾತ ಮಾಡಬೇಕೆಂಬ ವಿವಾಹಿತ ಮಹಿಳೆಯ ಮನವಿಯನ್ನು ಸುಪ್ರೀಂ ಕೋರ್ಟ್‌ನ ತ್ರಿಸದಸ್ಯ ಪೀಠ ವೈದ್ಯಕೀಯ ವರದಿ ಆಧಾರದ ಮೇಲೆ ಸೋಮವಾರ ತಿರಸ್ಕರಿಸಿದೆ. ಸೆಪ್ಟೆಂಬರ್ 2022 ರಲ್ಲಿ ಮಹಿಳೆಯು ಹಿಂದಿನ ಹೆರಿಗೆಯ ನಂತರ ಪ್ರಸವಾನಂತರದ ಮನೋರೋಗದಿಂದ ಬಳಲುತ್ತಿದ್ದರು. … Continued

ಭಾರತದ ವಿಭಜನೆ ʼಐತಿಹಾಸಿಕ ಪ್ರಮಾದʼ, ಇದಕ್ಕೆ ದೇಶ ವಿಭಜನೆ ಸಮಯದ ಎಲ್ಲ ನಾಯಕರೂ ಹೊಣೆ: ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ

ಹೈದರಾಬಾದ್‌ : ಭಾರತದ ವಿಭಜನೆ “ಐತಿಹಾಸಿಕ ಪ್ರಮಾದ” ಎಂದು ಬಣ್ಣಿಸಿದ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಸೋಮವಾರ (ಅಕ್ಟೋಬರ್ 16) ದೇಶವನ್ನು ಎಂದಿಗೂ ವಿಭಜಿಸಬಾರದಿತ್ತು ಎಂದು ಹೇಳಿದ್ದಾರೆ. ಭಾರತವು ಐತಿಹಾಸಿಕವಾಗಿ ಒಂದು ರಾಷ್ಟ್ರವಾಗಿದೆ ಮತ್ತು ದೇಶದ ವಿಭಜನೆ ನಡೆಯಬಾರದಿತ್ತು ಎಂದು ಓವೈಸಿ ಹೇಳಿದರು. ಅವರು 1947 ರಲ್ಲಿ ವಿಭಜನೆಯ ಸಮಯದಲ್ಲಿ ಲಭ್ಯವಿರುವ ಎಲ್ಲಾ ನಾಯಕರು ದೇಶದ … Continued

1900ರ ನಂತರ ಇದೇ ಮೊದಲ ಬಾರಿಗೆ 2028ರ ಒಲಿಂಪಿಕ್ ಗೇಮ್ಸ್ ಗೆ ಕ್ರಿಕೆಟ್ ಸೇರ್ಪಡೆ

ಮುಂಬೈ: ಕ್ರಿಕೆಟ್ ಮತ್ತೆ ಒಲಿಂಪಿಕ್ ಕ್ರೀಡೆಯಾಗಿದೆ. ಫ್ಲ್ಯಾಗ್ ಫುಟ್ಬಾಲ್ ಮೊದಲ ಬಾರಿಗೆ ಪ್ರವೇಶಿಸುತ್ತಿದೆ. ಕ್ರಿಕೆಟ್ , ಬೇಸ್‌ಬಾಲ್-ಸಾಫ್ಟ್‌ಬಾಲ್, ಲ್ಯಾಕ್ರೋಸ್ ಮತ್ತು ಸ್ಕ್ವ್ಯಾಷ್‌ ಸೇರಿದಂತೆ ಐದು ಆಟಗಳನ್ನು ಸೋಮವಾರ ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿಯು 2028 ರ ಲಾಸ್ ಏಂಜಲೀಸ್ ಒಲಿಂಪಿಕ್ ಗೇಮ್ಸ್‌ಗೆ ಸೇರಿಸಿದೆ. ಒಂದು ವಾರದ ಹಿಂದೆ ಲಾಸ್ ಏಂಜಲೀಸ್ ಅಧಿಕಾರಿಗಳು ಪ್ರಸ್ತಾಪಿಸಿದ ಮತ್ತು ಐಒಸಿ ಕಾರ್ಯಕಾರಿ … Continued

ನಿತಾರಿ ಹತ್ಯೆ : ಗಲ್ಲು ಶಿಕ್ಷೆಗೆ ಗುರಿಯಾಗಿದ್ದ ಸುರೇಂದ್ರ ಕೋಲಿಯನ್ನು 12 ಪ್ರಕರಣಗಳಲ್ಲಿ, ಮೊನೀಂದರ್ ಪಂಧೇರನನ್ನು 2 ಪ್ರಕರಣಗಳಲ್ಲಿ ಖುಲಾಸೆಗೊಳಿಸಿದ ಅಲಹಾಬಾದ್ ಹೈಕೋರ್ಟ್

ಅಲಹಾಬಾದ್‌ : ನೋಯ್ಡಾದಲ್ಲಿ 2005-2006ರಲ್ಲಿ ನಡೆದ ನಿಥಾರಿ ಹತ್ಯೆಗಳಿಗೆ ಸಂಬಂಧಿಸಿದ ಕೆಲವು ಪ್ರಕರಣಗಳಲ್ಲಿ ಆರೋಪಿ ಮೊನಿಂದರ್ ಸಿಂಗ್ ಪಂಧೇರ್ ಮತ್ತು ಅವರ ಮನೆಯ ಸಹಾಯಕ ಸುರೇಂದ್ರ ಕೋಲಿ ಅವರನ್ನು ಅಲಹಾಬಾದ್ ಹೈಕೋರ್ಟ್ ಸೋಮವಾರ ಖುಲಾಸೆಗೊಳಿಸಿದೆ, ಈ ಪ್ರಕರಣಗಳಲ್ಲಿ ಈ ಹಿಂದೆ ವಿಚಾರಣಾ ನ್ಯಾಯಾಲಯವು ಅವರಿಗೆ ಮರಣದಂಡನೆ ವಿಧಿಸಿತ್ತು. ಗಮನಾರ್ಹವಾಗಿ, ನ್ಯಾಯಾಲಯವು ಕೋಲಿಯನ್ನು 12 ಪ್ರಕರಣಗಳಲ್ಲಿ ಮತ್ತು … Continued

ಮಾಜಿ ಮುಖ್ಯ ಚುನಾವಣಾ ಆಯುಕ್ತ ಎಂ.ಎಸ್. ಗಿಲ್ ನಿಧನ

ನವದೆಹಲಿ: ಭಾರತದ ಮಾಜಿ ಮುಖ್ಯ ಚುನಾವಣಾ ಆಯುಕ್ತ (CEC) ಮತ್ತು ಮಾಜಿ ಕೇಂದ್ರ ಸಚಿವ ಮನೋಹರ್ ಸಿಂಗ್ ಗಿಲ್ (86) ಭಾನುವಾರ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಅವರು ಪತ್ನಿ ಹಾಗೂ ಮೂವರು ಪುತ್ರಿಯರನ್ನು ಅಗಲಿದ್ದಾರೆ. ಅವರ ಕುಟುಂಬ ಸದಸ್ಯರ ಪ್ರಕಾರ, ಇಂದು ಸೋಮವಾರ ಸೋಮವಾರ ಮಧ್ಯಾಹ್ನ 3 ಗಂಟೆಗೆ ಲೋದಿ ರಸ್ತೆಯ ಸ್ಮಶಾನದಲ್ಲಿ ಗಿಲ್ ಅವರ … Continued

ಕ್ರಿಕೆಟ್‌ ವಿಶ್ವಕಪ್ 2023 : ಇಂಗ್ಲೆಂಡಿಗೆ ಆಘಾತ, ಅಫ್ಘಾನಿಸ್ತಾನದ ವಿರುದ್ಧ ಹೀನಾಯವಾಗಿ ಸೋತ ಹಾಲಿ ವಿಶ್ವ ಚಾಂಪಿಯನ್….!

ನವದೆಹಲಿ: ಭಾನುವಾರ ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆದ ವಿಶ್ವಕಪ್‌ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ 69 ರನ್‌ಗಳ ಅಂತರದಿಂದ ಗೆಲ್ಲುವ ಮೂಲಕ ಅಫ್ಘಾನಿಸ್ತಾನ ತಂಡವು ವಿಶ್ವಕಪ್ ಇತಿಹಾಸದಲ್ಲಿ ಅತಿ ದೊಡ್ಡ ಬುಡಮೇಲು ಫಲಿತಾಂಶವನ್ನು ದಾಖಲಿಸಿದೆ. ಬ್ಯಾಟಿಂಗ್ ಆಗಿರಲಿ ಅಥವಾ ಬೌಲಿಂಗ್ ಆಗಿರಲಿ, ಎಲ್ಲದರಲ್ಲಿಯೂ ಅಫ್ಘಾನಿಸ್ತಾನ ತಂಡವು ಇಂಗ್ಲಿಷ್ ತಂಡಕ್ಕೆ ಪುನರಾಗಮನಕ್ಕೆ ಅವಕಾಶವನ್ನೇ ನೀಡಲಿಲ್ಲ. ಅಫ್ಘಾನಿಸ್ತಾನದ 284 … Continued

ಸಂಸತ್ತಿನಲ್ಲಿ ಪ್ರಶ್ನೆ ಕೇಳಲು ಸಂಸದೆ ಮಹುವಾ ಮೊಯಿತ್ರಾ ಲಂಚ ಪಡೆದಿದ್ದಾರೆ: ಬಿಜೆಪಿ ಸಂಸದನ ಗಂಭೀರ ಆರೋಪ

ನವದೆಹಲಿ: ಅದಾನಿ ಗುಂಪು ಮತ್ತು ಪ್ರಧಾನಿ ನರೇಂದ್ರ ಮೋದಿ ಅವರನ್ನು ಟಾರ್ಗೆಟ್‌ ಮಾಡಲು ಉದ್ಯಮಿ ದರ್ಶನ್ ಹಿರಾನಂದಾನಿ ಅವರಿಂದ ಸಂಸತ್ತಿನಲ್ಲಿ “ಪ್ರಶ್ನೆ ಕೇಳಲು ಲಂಚ ಪಡೆದಿದ್ದಾರೆ” ಎಂದು ಆರೋಪಿಸಿ ತೃಣಮೂಲ ಕಾಂಗ್ರೆಸ್ ಸಂಸದ ಮಹುವಾ ಮೊಯಿತ್ರಾ ಅವರನ್ನು ತಕ್ಷಣವೇ ಅಮಾನತುಗೊಳಿಸಬೇಕು ಎಂದು ಬಿಜೆಪಿಯ ನಿಶಿಕಾಂತ ದುಬೆ ಒತ್ತಾಯಿಸಿದ್ದಾರೆ. ಈ ಬಗ್ಗೆ ದುಬೆ ಅವರು ಲೋಕಸಭೆಯ ಸ್ಪೀಕರ್ … Continued

ಮಧ್ಯಪ್ರದೇಶ ವಿಧಾನಸಭಾ ಚುನಾವಣೆ : ಸಿಎಂ ಶಿವರಾಜ್ ಸಿಂಗ್ ವಿರುದ್ಧ ‘ರಾಮಾಯಣ’ ನಟನನ್ನು ಕಣಕ್ಕಿಳಿಸಿದ ಕಾಂಗ್ರೆಸ್

ಭೋಪಾಲ್: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ವಿರುದ್ಧ ಕಾಂಗ್ರೆಸ್ ಪಕ್ಷವು ಜನಪ್ರಿಯ ನಟ ವಿಕ್ರಮ್ ಮಸ್ತಲ್ ಅವರನ್ನು ಕಣಕ್ಕಿಳಿಸಿದೆ. ಆನಂದ್ ಸಾಗರ್ ಅವರ 2008 ರ ದೂರದರ್ಶನ ಧಾರಾವಾಹಿ ರಾಮಾಯಣದಲ್ಲಿ ಹನುಮಾನ್ ಪಾತ್ರದ ಮೂಲಕ ಮಸ್ತಲ್ ಅವರು ಹೆಚ್ಚು ಹೆಸರುವಾಸಿಯಾಗಿದ್ದಾರೆ. ಮಧ್ಯಪ್ರದೇಶ, ಛತ್ತೀಸ್‌ಗಢ ಮತ್ತು ತೆಲಂಗಾಣ ವಿಧಾನಸಭಾ ಚುನಾವಣೆಗೆ ಪಕ್ಷವು … Continued