“ಬೇಗ ಹೊರಡಿ”: ರಷ್ಯಾ-ಉಕ್ರೇನ್‌ ಯುದ್ಧ ಉಲ್ಬಣಗೊಳ್ಳುತ್ತಿದ್ದಂತೆ ಉಕ್ರೇನ್‌ನಲ್ಲಿರುವ ತನ್ನ ನಾಗರಿಕರಿಗೆ ಸೂಚಿಸಿದ ಭಾರತ

ನವದೆಹಲಿ: ಉಕ್ರೇನ್‌ನಲ್ಲಿ ಭದ್ರತಾ ಪರಿಸ್ಥಿತಿ ಹದಗೆಟ್ಟಿರುವ ಕಾರಣ ಉಕ್ರೇನ್‌ಗೆ ಪ್ರಯಾಣಿಸುವುದನ್ನು ತಪ್ಪಿಸುವಂತೆ ಭಾರತ ತನ್ನ ಎಲ್ಲಾ ನಾಗರಿಕರಿಗೆ ಬುಧವಾರ ಸಲಹೆ ನೀಡಿದೆ. ಪ್ರಸ್ತುತ ಉಕ್ರೇನ್‌ನಲ್ಲಿರುವ ವಿದ್ಯಾರ್ಥಿಗಳು ಸೇರಿದಂತೆ ಭಾರತೀಯ ನಾಗರಿಕರು ಲಭ್ಯವಿರುವ ವಿಧಾನಗಳ ಮೂಲಕ ಉಕ್ರೇನ್‌ನಿಂದ ಬೇಗನೆ ಹೊರಡುವಂತೆ ಸೂಚಿಸಲಾಗಿದೆ” ಎಂದು ಉಕ್ರೇನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ತಮ್ಮ ಟ್ವಿಟರ್ ಹ್ಯಾಂಡಲ್‌ನಲ್ಲಿ ಪ್ರಕಟಿಸಿದ ಹೇಳಿಕೆಯಲ್ಲಿ ತಿಳಿಸಿದೆ. … Continued

ಸ್ಟಾಫ್ ಸೆಲೆಕ್ಷನ್ ಕಮಿಷನ್: 990 ಸೈಟಿಂಸ್ಟ್​ ಹುದ್ದೆಗೆ ಅರ್ಜಿ ಆಹ್ವಾನ

ಸ್ಟಾಫ್ ಸೆಲೆಕ್ಷನ್ ಕಮಿಷನ್ 990 ಸೈಟಿಂಸ್ಟ್​ ಸಹಾಯಕ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಭಾರತೀಯ ಹವಾಮಾನ ಇಲಾಖೆಯಲ್ಲಿ (IMD) ಈ ನೇಮಕಾತಿ ನಡೆಯಲಿದ್ದು, ಇವುಗಳು ಗ್ರೂಪ್​​ ಬಿ ನಾನ್​ ಗೆಜೆಟ್​ ಹುದ್ದೆಗಳಾಗಿವೆ. ಡಿಪ್ಲೊಮಾ ಮತ್ತು ಪದವೀಧರ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದ್ದು, ಅರ್ಜಿಯನ್ನು ಆನ್​ಲೈನ್​ ಮೂಲಕ ಸಲ್ಲಿಸಬೇಕು. ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ ಅಕ್ಟೋಬರ್​ 18. … Continued

ಇದೇ ಮೊದಲ ಬಾರಿಗೆ ಡಾಲರ್‌ ಎದುರು ಸಾರ್ವಕಾಲಿಕ ಕನಿಷ್ಠ ಮಟ್ಟಕ್ಕೆ ಕುಸಿದ ರೂಪಾಯಿ

ನವದೆಹಲಿ: ಬುಧವಾರ ಡಾಲರ್ ವಿರುದ್ಧ ರೂಪಾಯಿಯು ಕನಿಷ್ಠ ಮಟ್ಟಕ್ಕೆ ಕುಸಿಯಿತು. ಬುಧವಾರ ಮುಕ್ತಾಯದ ವೇಳೆಗೆ ಪ್ರತಿ ಡಾಲರ್‌ಗೆ 83.02 ರೂ.ಗಳಿಗೆ ಈವರೆಗಿನ ಕನಿಷ್ಠ ಮಟ್ಟಕ್ಕೆ ಕುಸಿಯಿತು. 82.3062 ನಲ್ಲಿ ಪ್ರಾರಂಭವಾದ ನಂತರ ಡಾಲರ್ ಎದುರು ರೂಪಾಯಿ ತನ್ನ ಹಿಂದಿನ 82.36 ಕ್ಕೆ ಹೋಲಿಸಿದರೆ ಬುಧವಾರದ ವಹಿವಾಟಿನಲ್ಲಿ ಗ್ರೀನ್‌ಬ್ಯಾಕ್ ವಿರುದ್ಧ ದೇಶೀಯ ಕರೆನ್ಸಿ ಹೊಸ ಇಂಟ್ರಾ-ಡೇ ದಾಖಲೆಯ … Continued

ಮೊಬೈಲ್ ಫೋನ್ ಮೂಲಕ ಅರ್ಜಿದಾರಳ ಅಹವಾಲು ಕೇಳಿದ ಸುಪ್ರೀಂಕೋರ್ಟ್

ನವದೆಹಲಿ: ಅರ್ಜಿದಾರರೊಬ್ಬರ ಅಹವಾಲನ್ನು ಸುಪ್ರೀಂಕೋರ್ಟ್‌ ಮೊಬೈಲ್‌ ಫೋನ್‌ ಮೂಲಕ ಬುಧವಾರ ಆಲಿಸಿತು. ಪ್ರಕರಣ ಸಂಬಂಧ ಯಾವುದೇ ಪರಿಹಾರ ನೀಡಲು ನ್ಯಾಯಮೂರ್ತಿಗಳಾದ ಡಿ ವೈ ಚಂದ್ರಚೂಡ್ ಹಾಗೂ ಹಿಮಾ ಕೊಹ್ಲಿ ಅವರಿದ್ದ ಪೀಠ ನಿರಾಕರಿಸಿತು. ಅರ್ಜಿದಾರೆಯು ದೂರವಾಣಿ ಮುಖೇನ ವಿಚಾರಣೆಯಲ್ಲಿ ಪಾಲ್ಗೊಂಡರು ಎಂದು ಬಾರ್‌ & ಬೆಂಚ್‌ ವರದಿ ಮಾಡಿದೆ. ಪ್ರಸಕ್ತ ಸಾಲಿನ ರಾಷ್ಟ್ರೀಯ ಅರ್ಹತೆ ಮತ್ತು … Continued

ಕರ್ನಾಟಕದ ಮಲ್ಲಿಕಾರ್ಜುನ ಖರ್ಗೆ ಕಾಂಗ್ರೆಸ್‌ನ ನೂತನ ಅಧ್ಯಕ್ಷ

ನವದೆಹಲಿ: ಕರ್ನಾಟಕದ ಮಲ್ಲಿಕಾರ್ಜುನ ಖರ್ಗೆ ಅವರು ಕಾಂಗ್ರೆಸ್ ಪಕ್ಷದ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಬುಧವಾರ ನಡೆದ ಮತ ಎಣಿಕೆಯ ನಂತರ ಈ ಘೋಷಣೆ ಮಾಡಲಾಗಿದೆ. 24 ವರ್ಷಗಳ ನಂತರ ಅವರು ಕಾಂಗ್ರೆಸ್‌ಗೆ ಗಾಂಧಿಯೇತರ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಅವರು ಆಯ್ಕೆಯಾಗುವುದು ಬಹುತೇಕ ಖಚಿತವಾಗಿತ್ತು. ಮಲ್ಲಿಕಾರ್ಜುನ ಖರ್ಗೆ 7,897 ಮತಗಳನ್ನು ಪಡೆದರೆ, ಶಶಿ ತರೂರ್ 1,072 … Continued

ಪಾಕಿಸ್ತಾನ ಮೂಲದ ಎಲ್‌ಇಟಿ ಉಗ್ರರ ಸಂಘಟನೆ ನಾಯನನ್ನು ಜಾಗತಿಕ ಭಯೋತ್ಪಾದಕ ಪಟ್ಟಿಗೆ ಸೇರಿಸುವ ಭಾರತ, ಅಮೆರಿಕದ ಪ್ರಸ್ತಾವಕ್ಕೆ ಚೀನಾ ತಡೆ

ವಿಶ್ವಸಂಸ್ಥೆ : ಲಷ್ಕರ್-ಎ-ತೊಯ್ಬಾ ನಾಯಕ ಶಾಹಿದ್ ಮಹಮೂದ್‌ನನ್ನು ಜಾಗತಿಕ ಭಯೋತ್ಪಾದಕ ಎಂದು ಪಟ್ಟಿ ಮಾಡುವಂತೆ ವಿಶ್ವಸಂಸ್ಥೆಯಲ್ಲಿ ಭಾರತ ಮತ್ತು ಅಮೆರಿಕದ ಪ್ರಸ್ತಾವನೆಯನ್ನು ಚೀನಾ ತಡೆಹಿಡಿದಿದೆ. ಪಾಕಿಸ್ತಾನ ಮೂಲದ ಭಯೋತ್ಪಾದಕರನ್ನು ಕಪ್ಪು ಪಟ್ಟಿಗೆ ಸೇರಿಸಲು ವಿಶ್ವಸಂಸ್ಥೆಯಲ್ಲಿ ಚೀನಾ ತಡೆದಿದ್ದು ಇದು ನಾಲ್ಕನೇ ನಿದರ್ಶನವಾಗಿದೆ. ವಿಶ್ವಸಂಸ್ಥೆ ಭದ್ರತಾ ಮಂಡಳಿಯ 1267 ಅಲ್ ಖೈದಾ ನಿರ್ಬಂಧಗಳ ಸಮಿತಿಯ ಅಡಿಯಲ್ಲಿ 42 … Continued

ಗಾಜಿಯಾಬಾದ್‌ನಲ್ಲಿ ನಿರ್ಭಯಾ ಮಾದರಿ ದುಷ್ಕೃತ್ಯ: ದೆಹಲಿ ಮಹಿಳೆ ಅಪಹರಿಸಿ 2 ದಿನ ಸಾಮೂಹಿಕ ಅತ್ಯಾಚಾರ, ಚಿತ್ರಹಿಂಸೆ; ಶರೀರದೊಳಕ್ಕೆ ಇತ್ತು ಕಬ್ಬಿಣದ ರಾಡ್‌..!

ನವದೆಹಲಿ: ಗಾಜಿಯಾಬಾದ್‌ನ 38 ವರ್ಷದ ಮಹಿಳೆಯನ್ನು ಅಪಹರಿಸಿದ ಐವರು ದುಷ್ಕರ್ಮಿಗಳ ಗುಂಪು, ಆಕೆ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ, ಎರಡು ದಿನಗಳ ಕಾಲ ಕ್ರೂರವಾಗಿ ಚಿತ್ರಹಿಂಸೆ ನೀಡಿದೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ. ಮಹಿಳೆಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ. ನಿರ್ಭಯಾ ಅತ್ಯಾಚಾರ ಮಾದರಿಯ ಈ ಕೃತ್ಯ ದೆಹಲಿಯ ಜನತೆಯಲ್ಲಿ ಮತ್ತೆ ಆತಂಕ … Continued

ಕಾಶ್ಮೀರ ಪ್ರತ್ಯೇಕ ದೇಶ ಎಂದು ಉಲ್ಲೇಖಿಸಿದ ಬಿಹಾರದ 7ನೇ ತರಗತಿ ಅರ್ಧ ವಾರ್ಷಿಕ ಪರೀಕ್ಷೆ ಪ್ರಶ್ನೆ ಪತ್ರಿಕೆ…!

ಪಾಟ್ನಾ: ಬಿಹಾರದ ಶಿಕ್ಷಣ ವ್ಯವಸ್ಥೆಗೆ ಭಾರೀ ಮುಖಭಂಗವಾಗಿದ್ದು, 7ನೇ ತರಗತಿಯ ಪರೀಕ್ಷೆಯ ಪತ್ರಿಕೆಯು ಕಾಶ್ಮೀರವನ್ನು ಪ್ರತ್ಯೇಕ ದೇಶವನ್ನಾಗಿ ಮಾಡಿಬಿಟ್ಟಿದೆ…! ಬಿಹಾರ ಎಜುಕೇಶನ್ ಪ್ರಾಜೆಕ್ಟ್ ಕೌನ್ಸಿಲ್ 7ನೇ ತರಗತಿಯ ವಿದ್ಯಾರ್ಥಿಗಳಿಗೆ ನಡೆಸಿದ ಪರೀಕ್ಷೆಯಲ್ಲಿ, ಚೀನಾ, ನೇಪಾಳ, ಇಂಗ್ಲೆಂಡ್, ಕಾಶ್ಮೀರ ಮತ್ತು ಭಾರತ — ಐದು ದೇಶಗಳ ಜನರನ್ನು ಏನು ಕರೆಯುತ್ತಾರೆ ಎಂದು ವಿದ್ಯಾರ್ಥಿಗಳಿಗೆ ಪ್ರಶ್ನೆಗಳನ್ನು ಕೇಳಲಾಗಿದೆ. ಈ … Continued

ಮುಂದಿನ ವರ್ಷದ ಆರಂಭದಲ್ಲಿ ಭಾರತಕ್ಕೆ ಭೇಟಿ ನೀಡಲಿರುವ ಫ್ರೆಂಚ್ ಅಧ್ಯಕ್ಷ ಮ್ಯಾಕ್ರನ್: ಕಾರ್ಯಸೂಚಿಯಲ್ಲಿ ಜೈತಾಪುರ

ನವದೆಹಲಿ: ಮಹಾರಾಷ್ಟ್ರದ ಜೈತಾಪುರದಲ್ಲಿ ಪರಮಾಣು ಶಕ್ತಿ ರಿಯಾಕ್ಟರ್‌ಗಳ ನಿರ್ಮಾಣದ ಪುನಶ್ಚೇತನದ ಮಧ್ಯೆ ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರೋನ್ ಮುಂದಿನ ವರ್ಷದ ಆರಂಭದಲ್ಲಿ ಭಾರತಕ್ಕೆ ಭೇಟಿ ನೀಡಲಿದ್ದಾರೆ. ಫ್ರಾನ್ಸ್ ಸಚಿವ ಕ್ರಿಸೌಲಾ ಜಚರೋಪೌಲೌ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಜಿತೇಂದ್ರ ಸಿಂಗ್ ಅವರೊಂದಿಗಿನ ಸಭೆಯ ಸಂದರ್ಭದಲ್ಲಿ, ಮ್ಯಾಕ್ರನ್ ಅವರು “2023 ರ ಆರಂಭದಲ್ಲಿ” ಭಾರತಕ್ಕೆ ಭೇಟಿ ನೀಡಲಿದ್ದಾರೆ … Continued

ಜಿಯೋಫೈಬರ್ ಡಬಲ್ ಫೆಸ್ಟಿವಲ್ ಬೋನಾಂಜಾ ಆಫರ್: 100% ವಾಲ್ಯೂ ಬ್ಯಾಕ್ + ಉಚಿತ 15 ದಿನಗಳ ಹೆಚ್ಚುವರಿ ವ್ಯಾಲಿಡಿಟಿ

ಭಾರತದ ಅತಿದೊಡ್ಡ ಟೆಲಿಕಾಂ ಮತ್ತು ಬ್ರಾಡ್‌ಬ್ಯಾಂಡ್ ಪೂರೈಕೆದಾರರಾದ ರಿಲಯನ್ಸ್ ಜಿಯೋ, ತನ್ನ ಗ್ರಾಹಕರಿಗೆ ಹೊಸ ಆಫರ್ ಗಳನ್ನು ನೀಡುತ್ತಿದೆ. ಅಕ್ಟೋಬರ್ 18 ಮತ್ತು ಅಕ್ಟೋಬರ್ 28, 2022 ರ ನಡುವೆ ಜಿಯೋಫೈಬರ್ ಡಬಲ್ ಫೆಸ್ಟಿವಲ್ ಬೋನಾಂಜಾ ಆಫರ್ (JioFiber Double Festival Bonanza) ಅನ್ನು ಲಾಂಚ್ ಮಾಡಿದೆ. ಈ ಆಫರ್ ಸೀಮಿತ ಅವಧಿಗೆ ಮಾತ್ರ ಲಭ್ಯವಿರುತ್ತದೆ. … Continued