ಇಂದಿನಿಂದ ಭಕ್ತರ ದರ್ಶನಕ್ಕೆ ತೆರೆದ ಬದರೀನಾಥ ದೇವಸ್ಥಾನ : 15 ಕ್ವಿಂಟಾಲ್ ಹೂಗಳಿಂದ ದೇಗುಲಕ್ಕೆ ಸಿಂಗಾರ | ವೀಕ್ಷಿಸಿ

ಡೆಹ್ರಾಡೂನ್: ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿ ಇರುವ ಬದರೀನಾಥ ದೇಗುಲ ಇಂದು, ಗುರುವಾರ (ಏಪ್ರಿಲ್‌ 27) ಬೆಳಿಗ್ಗೆ 7:10 ಕ್ಕೆ ಧಾರ್ಮಿಕ ವಿಧಿ ವಿಧಾನಗಳು ನಡೆದ ನಂತರ ಭಕ್ತರಿಗೆ ತೆರೆಯಲಾಯಿತು. ಚಳಿಗಾಲದ ಹಿನ್ನೆಲೆಯಲ್ಲಿ ಮುಚ್ಚಲಾಗಿದ್ದ ಬದರೀನಾಥ ದೇಗುಲದ ಬಾಗಿಲುಗಳನ್ನು ಮಂತ್ರಘೋಷಗಳೊಂದಿಗೆ ತೆರೆಯಲಾಯ್ತು. ಇಂದು, ಗುರುವಾರ ದೇಗುಲದ ಬಾಗಿಲು ತೆರೆಯುವ ಹಿನ್ನೆಲೆಯಲ್ಲಿ ಇಡೀ ದೇವಸ್ಥಾನವನ್ನು 15 ಕ್ವಿಂಟಲ್ ವಿವಿಧ … Continued

ಗಿಫ್ಟ್‌ ಅಂದ್ರೆ ಇದಪ್ಪಾ..: ತನ್ನ ಆಪ್ತ ಸ್ನೇಹಿತನಿಗೆ 1500 ಕೋಟಿ ಮೌಲ್ಯದ ಆಸ್ತಿಯನ್ನೇ ಉಡುಗೊರೆ ನೀಡಿದ ರಿಲಯನ್ಸ್‌ ಮುಖ್ಯಸ್ಥ ಮುಖೇಶ ಅಂಬಾನಿ ; ಯಾರು ಈ ಆಪ್ತ ಸೇಹಿತ..?

ಮುಂಬೈ: ಮುಖೇಶ್ ಅಂಬಾನಿ, ಭಾರತದ ವ್ಯಾಪಾರ ಜಗತ್ತಿನ ಐಕಾನ್‌, ದೇಶದ ಅತ್ಯಮೂಲ್ಯ ಕಂಪನಿಗಳ ಹಿಂದಿರುವ ಮಾಸ್ಟರ್‌ಮೈಂಡ್, ಮತ್ತು ಫೋರ್ಬ್ಸ್ ಪ್ರಕಾರ, ಮುಖೇಶ ಅಂಬಾನಿ ಪ್ರಸ್ತುತ ಭಾರತ ಮತ್ತು ಏಷ್ಯಾದ ಶ್ರೀಮಂತ ವ್ಯಕ್ತಿಯಾಗಿದ್ದು, ಸುಮಾರು 7 ಲಕ್ಷ ಕೋಟಿ ನಿವ್ವಳ ಮೌಲ್ಯವನ್ನು ಹೊಂದಿದ್ದಾರೆ. ಮುಂಬೈನಲ್ಲಿರುವ ಅವರ ವಿಸ್ತಾರವಾದ ಮಹಲಿನಿಂದ ಹಿಡಿದು ವಿಶಾಲವಾದ ವ್ಯವಹಾರಗಳ ಸಾಮ್ರಾಜ್ಯದವರೆಗೆ, ಅವರು ಭಾರತ … Continued

ನದಿಗೆ ಬಿದ್ದ ಕುದುರೆ ರಕ್ಷಿಸಲು ಹೋಗಿ ಕುದುರೆ ಸಹಿತ ನೀರು ಪಾಲಾದ ಇಬ್ಬರು ಯುವಕರು

ಹೈದರಾಬಾದ್: ಹೃದಯ ವಿದ್ರಾವಕ ಘಟನೆಯೊಂದರಲ್ಲಿ, ಕಿಸ್ಮತ್‌ಪುರದಲ್ಲಿನ ತೆಲಂಗಾಣ ಹಾರ್ಸ್ ರೈಡಿಂಗ್ ಅಕಾಡೆಮಿಯಲ್ಲಿ ಕೆಲಸ ಮಾಡುತ್ತಿದ್ದ ರಾಜಸ್ಥಾನದ 19 ವರ್ಷದ ಕುದುರೆ ತರಬೇತುದಾರ ಅಶು ಸಿಂಗ್ ಮತ್ತು ಅವರ ಸಹೋದ್ಯೋಗಿ ಮೊಹಮ್ಮದ್ ಸೈಫ್ (20) ಅಕಾಡೆಮಿ ಕುದುರೆಯನ್ನು ರಕ್ಷಿಸಲು ಪ್ರಯತ್ನಿಸುವ ವೇಳೆಗ ನೀರು ಪಾಲಾಗಿದ್ದಾರೆ. ಬುಧವಾರ ತಡರಾತ್ರಿ ಹರ್ಕ್ಯುಲಸ್ ಎಂಬ ಕುದುರೆ ಈಸಾ ನದಿಗೆ ಕುದುರೆ ಜಾರಿ … Continued

ಡೊನಾಲ್ಡ್ ಟ್ರಂಪ್ ನನ್ನ ಮೇಲೆ ಅತ್ಯಾಚಾರವೆಸಗಿದ್ದರು : ಮೊಕದ್ದಮೆಯ ವಿಚಾರಣೆಯಲ್ಲಿ ಲೇಖಕಿಯ ಆರೋಪ

ನ್ಯೂಯಾರ್ಕ್‌ : ಡೊನಾಲ್ಡ್ ಟ್ರಂಪ್ ಸುಮಾರು 30 ವರ್ಷಗಳ ಹಿಂದೆ ತನ್ನ ಮೇಲೆ ಹೇಗೆ ಅತ್ಯಾಚಾರವೆಸಗಿದ್ದಾರೆಂದು ಬರಹಗಾರರೊಬ್ಬರು ಬುಧವಾರ ಗ್ರಾಫಿಕ್ ಮೂಲಕ ನ್ಯಾಯಾಲಯದ ಮುಂದೆ ವಿವರವಾಗಿ ವಿವರಿಸಿದ್ದಾರೆ. ಡೊನಾಲ್ಡ್ ಟ್ರಂಪ್ ನನ್ನ ಮೇಲೆ ಅತ್ಯಾಚಾರವೆಸಗಿದ್ದರಿಂದ ನಾನು ಇಲ್ಲಿದ್ದೇನೆ, ಮತ್ತು ನಾನು ಅದರ ಬಗ್ಗೆ ಬರೆದಾಗ, ಆತ ಅದು ಸುಳ್ಳು ಹೇಳಿದ್ದಾನೆ ಮತ್ತು ಅದು ಸಂಭವಿಸಲಿಲ್ಲ ಎಂದು … Continued

ಅಂಗಿತಾ ದತ್ತಾ ಪ್ರಕರಣ : ಭಾರತೀಯ ಯೂತ್ ಕಾಂಗ್ರೆಸ್ ಅಧ್ಯಕ್ಷ ಶ್ರೀನಿವಾಸಗೆ ಸಿಗದ ಮಧ್ಯಂತರ ಪರಿಹಾರ

ಗುವಾಹತಿ: ಅಸ್ಸಾಂ ಯೂತ್ ಕಾಂಗ್ರೆಸ್‌ನ ಮಾಜಿ ಮುಖ್ಯಸ್ಥೆ ಅಂಗಿತಾ ದತ್ತಾ ಅವರು ತಮ್ಮ ವಿರುದ್ಧ ಸಲ್ಲಿಸಿರುವ ಕಿರುಕುಳದ ದೂರುಗಳನ್ನು ರದ್ದುಗೊಳಿಸುವಂತೆ ಕೋರಿ ಭಾರತೀಯ ಯೂತ್ ಕಾಂಗ್ರೆಸ್ ಅಧ್ಯಕ್ಷ ಬಿ.ವಿ.ಶ್ರೀನಿವಾಸ ಅವರ ಸಲ್ಲಿಸಿದ್ದ ಮನವಿ ಅರ್ಜಿಯನ್ನು ಬುಧವಾರ ವಿಚಾರಣೆ ನಡೆಸಿದ ಗುವಾಹತಿ ಹೈಕೋರ್ಟ್ ಮಧ್ಯಂತರ ಪರಿಹಾರ ನೀಡಲಿಲ್ಲ. ನ್ಯಾಯಾಲಯವು ಮೇ 2 ರಂದು ವಿಚಾರಣೆಗೆ ಪಟ್ಟಿ ಮಾಡಿದೆ. … Continued

ಪಿಸ್ತೂಲ್, ಪೆಟ್ರೋಲ್ ಬಾಂಬ್ ಹಿಡಿದುಕೊಂಡು ಶಾಲೆಗೆ ಪ್ರವೇಶಿಸಿದ ವ್ಯಕ್ತಿ : ವಿದ್ಯಾರ್ಥಿಗಳ ಒತ್ತೆಯಾಳು ಪ್ರಯತ್ನ ವಿಫಲ | ವೀಕ್ಷಿಸಿ

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಮಾಲ್ಡಾದ ಶಾಲೆಯೊಂದಕ್ಕೆ ಪ್ರವೇಶಿಸಿದ ಬಂದೂಕು ಹಿಡಿದ ವ್ಯಕ್ತಿಯೊಬ್ಬ ಮಕ್ಕಳನ್ನು ಒತ್ತೆಯಾಳಾಗಿ ಇರಿಸಿಕೊಳ್ಳಲು ಪ್ರಯತ್ನಿಸಿದ ಘಟನೆ ವರದಿಯಾಗಿದೆ. ಆದರೆ ನಂತರ ಪೊಲೀಸರು ಆತನ ಯತ್ನವನ್ನು ವಿಫಲಗೊಳಿಸಿದ್ದಾರೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ. ಮಾಲ್ಡಾದ ಮುಚಿಯಾ ಚಂದ್ ಕಾಲೇಜಿನಲ್ಲಿ ಈ ಘಟನೆ ನಡೆದಿದೆ. ಪೊಲೀಸರ ಪ್ರಕಾರ, ವ್ಯಕ್ತಿ ಗನ್ ಹಿಡಿದು ತರಗತಿಗೆ ಪ್ರವೇಶಿಸಿ, ಕುಳಿತು … Continued

ದೆಹಲಿ ವಿಮಾನ ನಿಲ್ದಾಣಕ್ಕೆ ಬಂದಿಳಿದ ಯುದ್ಧ ಪೀಡಿತ ಸುಡಾನ್‌ನಿಂದ ರಕ್ಷಿಸಲ್ಪಟ್ ಭಾರತೀಯರ ಮೊದಲ ಬ್ಯಾಚ್‌

ನವದೆಹಲಿ : ಸುಡಾನ್‌ನಿಂದ ರಕ್ಷಿಸಲ್ಪಟ್ಟ 360 ಭಾರತೀಯರನ್ನು ಹೊತ್ತ ವಾಣಿಜ್ಯ ವಿಮಾನವು ಬುಧವಾರ ಸಂಜೆ ನವದೆಹಲಿಯಲ್ಲಿ ಬಂದಿಳಿಯಿತು. ಸೌದಿ ಅರೇಬಿಯನ್ ಏರ್‌ಲೈನ್ಸ್ ವಿಮಾನವು ಜೆಡ್ಡಾ ಕಿಂಗ್ ಅಬ್ದುಲ್ ಅಜೀಜ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮಧ್ಯಾಹ್ನ 1:56 ಕ್ಕೆ ಹೊರಟು ರಾತ್ರಿ 9 ಗಂಟೆಗೆ ದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ತಲುಪಿತು. ಸುಡಾನ್ ಸೈನ್ಯ ಮತ್ತು … Continued

ಛತ್ತೀಸ್‌ಗಢದ ದಾಂತೇವಾಡದಲ್ಲಿ ಮಾವೋವಾದಿಗಳಿಂದ ವಾಹನ ಸ್ಫೋಟ : 10 ಪೊಲೀಸರು, ಚಾಲಕ ಸಾವು

ರಾಯ್ಪುರ: ಛತ್ತೀಸ್‌ಗಢದ ಬಸ್ತಾರ್ ಜಿಲ್ಲೆಯಲ್ಲಿ ಸುಧಾರಿತ ಸ್ಫೋಟಕ ಸಾಧನದಿಂದ (ಐಇಡಿ) ವಾಹನವನ್ನು ಸ್ಫೋಟಿಸಿದ ಪರಿಣಾಮ ಹತ್ತು ಪೊಲೀಸರು ಮತ್ತು ಚಾಲಕ ಬುಧವಾರ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಗುಪ್ತಚರ ಮಾಹಿತಿಯ ನಂತರ ಪ್ರಾರಂಭವಾದ ಮಾವೋವಾದಿ ವಿರೋಧಿ ಕಾರ್ಯಾಚರಣೆ ನಂತರ ಪೊಲೀಸರು ಹಿಂತಿರುಗುತ್ತಿದ್ದಾಗ ಈ ದುರ್ಘಟನೆ ಎಂದು ಅಧಿಕಾರಿಗಳು ಹೇಳಿದ್ದಾರೆ. ದಾಂತೇವಾಡದ ಅರ್ನಾಪುರ ಪ್ರದೇಶದಲ್ಲಿ ನಕ್ಸಲೀಯರು ಇದ್ದಾರೆ … Continued

ಆಪರೇಶನ್‌ ಕಾವೇರಿ : ಯುದ್ಧಪೀಡಿತ ಸುಡಾನ್‌ನಿಂದ ಈವರೆಗೆ 530 ಭಾರತೀಯರ ಸ್ಥಳಾಂತರ

ನವದೆಹಲಿ: ಆಂತರಿಕ ಯುದ್ಧ ಪೀಡಿತ ಸುಡಾನ್‌ನಿಂದ ಈವರೆಗೆ 530 ಭಾರತೀಯರನ್ನು ಸ್ಥಳಾಂತರಿಸಲಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಸುಡಾನ್‌ನಲ್ಲಿ ಸಿಲುಕಿರುವ ಭಾರತೀಯರ ರಕ್ಷಣೆಗೆ ‘ಆಪರೇಷನ್ ಕಾವೇರಿ’ ಯೋಜನೆಗೆ ಕೇಂದ್ರ ಸರ್ಕಾರ ಚಾಲನೆ ನೀಡಿತ್ತು. ಹಾಗೂ ಇದಕ್ಕಾಗಿ ನೌಕಾ ಪಡೆಯ ಐಎನ್‌ಎಸ್‌ ಸುಮೇಧಾ ಹಡಗಿ ಹಾಗೂ ವಾಯುಸೇನಯ ವಿಮಾನಗಳನ್ನು ನಿಯೋಜಿಸಲಾಗಿತ್ತು. ಈಗ ಸುಡಾನ್‌ನಲ್ಲಿ ಸಿಕ್ಕಿಬಿದ್ದಿರುವ ಭಾರತೀಯರನ್ನು ಕರೆತರಲು … Continued

ದೇಶದಲ್ಲಿ ಹೊಸದಾಗಿ 9,629 ಸೋಂಕು ಪತ್ತೆ, 29 ಮಂದಿ ಸಾವು

ನವದೆಹಲಿ: ಭಾರತದಲ್ಲಿ ಕೊರೊನಾ ಸೋಂಕಿನ ಪ್ರಕರಣಗಳು ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ಕಳೆದ 24 ಗಂಟೆಗಳ ಅವಧಿಯಲ್ಲಿ 9,629 ಹೊಸ ಪ್ರಕರಣಗಳು ಪತ್ತೆಯಾಗಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ. ಆರೋಗ್ಯ ಸಚಿವಾಲಯ ಬಿಡುಗಡೆ ಮಾಡಿರುವ ಅಂಕಿ ಅಂಶಗಳ ಪ್ರಕಾರ, ಸಕ್ರಿಯ ಪ್ರಕರಣಗಳ ಸಂಖ್ಯೆ 62,293ಕ್ಕೆ ತಲುಪಿದೆ. ಕೇರಳದಲ್ಲಿ 9, ದೆಹಲಿಯಲ್ಲಿ 6, ಮಹಾರಾಷ್ಟ್ರ … Continued