ಇಂತಹ ಕಾನೂನು ದುರ್ಬಲಗೊಳಿಸುವಿಕೆ ನಿರ್ಭಯಕ್ಕೆ ಕಾರಣವಾಗುತ್ತದೆ”: ಐಎಎಸ್‌ ಅಧಿಕಾರಿ ಹತ್ಯೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅಪರಾಧಿ-ಗ್ಯಾಂಗ್‌ಸ್ಟರ್‌ ಬಿಡುಗಡೆಗೆ ಐಎಎಸ್ ಸಂಘ

ನವದೆಹಲಿ: ದಲಿತ ಐಎಎಸ್‌ ಅಧಿಕಾರಿ ಹತ್ಯೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಗ್ಯಾಂಗ್‌ಸ್ಟರ್‌-ರಾಜಕಾರಣಿ ಆನಂದ್‌ ಮೋಹನ್‌ ಸಿಂಗ್‌ ಬಿಡುಗಡೆಗೆ ಅನುಕೂಲವಾಗಲಿರುವ ಬಿಹಾರದ ನಿಯಮಗಳ ಬದಲಾವಣೆಯ ವಿರುದ್ಧ ದೇಶದ ಉನ್ನತಾಧಿಕಾರಿಗಳು ತೀವ್ರ ಪ್ರತಿಭಟನೆ ನಡೆಸಿದ್ದಾರೆ. “ಇಂತಹ ಕಾನೂನು ದುರ್ಬಲಗೊಳಿಸುವಿಕೆ ನಿರ್ಧಾರವು ನಿರ್ಭಯಕ್ಕೆ ಕಾರಣವಾಗುತ್ತದೆ, ಸಾರ್ವಜನಿಕ ಸೇವಕರ ನೈತಿಕತೆ ಕುಗ್ಗಿಸುತ್ತದೆ, ಸಾರ್ವಜನಿಕ ಸುವ್ಯವಸ್ಥೆಯನ್ನು ದುರ್ಬಲಗೊಳಿಸುತ್ತದೆ ಮತ್ತು ನ್ಯಾಯದ ಆಡಳಿತವನ್ನು … Continued

ಪಂಜಾಬ್ ಮಾಜಿ ಸಿಎಂ-ಅಕಾಲಿದಳದ ಮುಖ್ಯಸ್ಥ ಪ್ರಕಾಶ ಸಿಂಗ್ ಬಾದಲ್ ನಿಧನ

ನವದೆಹಲಿ: ಪಂಜಾಬಿನ ಮಾಜಿ ಮುಖ್ಯಮಂತ್ರಿ ಮತ್ತು ಶಿರೋಮಣಿ ಅಕಾಲಿದಳದ (ಎಸ್‌ಎಡಿ) ಮಾಜಿ ಮುಖ್ಯಸ್ಥ ಪ್ರಕಾಶ ಸಿಂಗ್ ಬಾದಲ್ (95) ಮೊಹಾಲಿಯ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು ಎಂದು ಪಕ್ಷದ ಮೂಲಗಳು ತಿಳಿಸಿವೆ. ರಾತ್ರಿ 8 ಗಂಟೆ ಸುಮಾರಿಗೆ ಅವರು ಕೊನೆಯುಸಿರೆಳೆದರು. ವರದಿಗಳ ಪ್ರಕಾರ, ಬಾದಲ್ ಅವರು ಕಳೆದ ಕೆಲವು ದಿನಗಳಿಂದ ಆಸ್ಪತ್ರೆಗೆ ದಾಖಲಾಗಿದ್ದರು ಮತ್ತು ಉಸಿರಾಟದ ತೊಂದರೆಯಿಂದ … Continued

ಉತ್ತರಾಖಂಡದ ವಾಸ್ತವ ನಿಯಂತ್ರಣ ರೇಖೆ ಬಳಿ ಇರುವ ಈ ಸ್ಥಳವು ಈಗ ‘ಭಾರತದ ಮೊದಲ ಗ್ರಾಮ’

ನವದೆಹಲಿ: ಕೇಂದ್ರ ಸರ್ಕಾರವು ಮಂಗಳವಾರ ಉತ್ತರಾಖಂಡದ ಮಾಣಾ ಗ್ರಾಮದ ಪ್ರವೇಶ ದ್ವಾರದಲ್ಲಿ ವಾಸ್ತವ ನಿಯಂತ್ರಣ ರೇಖೆ ಬಳಿ ‘ಭಾರತದ ಮೊದಲ ಗ್ರಾಮ’ ಎಂಬ ಫಲಕವನ್ನು ಹಾಕಿದೆ. ಇದು ಚಮೋಲಿ ಜಿಲ್ಲೆಯ ಬದರಿನಾಥ ಬಳಿ ಇರುವ ಪ್ರವಾಸಿ ತಾಣವಾಗಿದೆ. ಸರ್ಕಾರದ ‘ವೈಬ್ರೆಂಟ್ ವಿಲೇಜ್’ ಯೋಜನೆಯ ಭಾಗವಾಗಿ ‘ಭಾರತದ ಮೊದಲ ಗ್ರಾಮ’ ಮರುನಾಮಕರಣ ಮಾಡಲಾಗಿದೆ, ಇದನ್ನು ಸಂಸತ್ತಿನಲ್ಲಿ ಹಣಕಾಸು … Continued

ಮೋದಿ ಉಪನಾಮ ಮಾನಹಾನಿ ಪ್ರಕರಣ: ಗುಜರಾತ್‌ ಹೈಕೋರ್ಟ್‌ ಮೆಟ್ಟಿಲೇರಿದ ರಾಹುಲ್‌ ಗಾಂಧಿ

ನವದೆಹಲಿ: ಕ್ರಿಮಿನಲ್‌ ಮಾನಹಾನಿ ಪ್ರಕರಣದಲ್ಲಿ ತಮ್ಮನ್ನು ದೋಷಿ ಎಂದು ಸೂರತ್‌ನ ಮಾಜಿಸ್ಟ್ರೇಟ್‌ ನ್ಯಾಯಾಲಯವು ನೀಡಿರುವ ತೀರ್ಪಿಗೆ ತಡೆ ಕೋರಿ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ಈಗ ಗುಜರಾತ್‌ ಹೈಕೋರ್ಟ್‌ ಮೆಟ್ಟಿಲೇರಿದ್ದಾರೆ ಸೂರತ್‌ನ ಸತ್ರ ನ್ಯಾಯಾಲಯದ ತೀರ್ಪು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲಾಗಿದ್ದು, ಹೈಕೋರ್ಟ್‌ನ ಏಕಸದಸ್ಯ ಪೀಠವು ಅರ್ಜಿ ವಿಚಾರಣೆ ನಡೆಸಲಿದೆ ಎಂದು ರಾಹುಲ್‌ ಗಾಂಧಿ ಪರ … Continued

ಗಾಲ್ವಾನ್ ಸಂಘರ್ಷದ ನಂತರ ಮೊದಲ ಬಾರಿಗೆ ಗುರುವಾರ ಭಾರತ- ಚೀನಾ ರಕ್ಷಣಾ ಸಚಿವರ ಭೇಟಿ

ನವದೆಹಲಿ: ಮೇ 2020 ರಲ್ಲಿ ಪೂರ್ವ ಲಡಾಖ್‌ನ ಗಾಲ್ವಾನ್ ಕಣಿವೆಯಲ್ಲಿ ಭಾರತ-ಚೀನಾ ಸೈನಿಕರು ಹಿಂಸಾತ್ಮಕ ಘರ್ಷಣೆ ನಡೆಸಿದ ನಂತರ ಚೀನಾದ ರಕ್ಷಣಾ ಸಚಿವ ಜನರಲ್ ಲಿ ಶಾಂಗ್‌ಫು ಅವರು ಇದೇ ಮೊದಲ ಬಾರಿಗೆ ಗುರುವಾರ ಭಾರತದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರನ್ನು ಭೇಟಿಯಾಗಲಿದ್ದಾರೆ. ಇಬ್ಬರು ರಕ್ಷಣಾ ಸಚಿವರ ಸಭೆಯ ನಂತರ ಪೂರ್ವ ಲಡಾಖ್ ಪ್ರದೇಶದಲ್ಲಿನ … Continued

ಡ್ರಗ್ಸ್‌ ಒಯ್ದ ಆರೋಪದಲ್ಲಿ ಬಾಲಿವುಡ್ ನಟಿ ಶಾರ್ಜಾದಲ್ಲಿ ಬಂಧನ: ನಟಿ ತಾಯಿ ವಿರುದ್ಧದ ಸೇಡಿಗೆ ನಟಿ ವಿರುದ್ಧ ಸಂಚು ರೂಪಿಸಿ ಡ್ರಗ್ಸ್‌ ಇರಿಸಿದ್ದ ಇಬ್ಬರ ಬಂಧನ..!

ಮುಂಬೈ: ನಾಯಿ, ಟ್ರೋಫಿ ಮತ್ತು ಡ್ರಗ್ಸ್ ಒಳಗೊಂಡ ಪಿತೂರಿ ಯುಎಇಯಲ್ಲಿ ಬಾಲಿವುಡ್ ನಟಿಯೊಬ್ಬರನ್ನು ಜೈಲಿಗೆ ತಳ್ಳಿದೆ. ಆಕೆಯ ಬಳಿಯಿದ್ದ ಟ್ರೋಫಿಯಲ್ಲಿ ಡ್ರಗ್ಸ್ ಅಡಗಿಸಿರುವುದು ಪತ್ತೆಯಾದ ನಂತರ ನಟಿ ಕ್ರಿಸಾನ್‌ ಪೆರೇರಾ ಅವರನ್ನು ಶಾರ್ಜಾದಲ್ಲಿ ಅಧಿಕಾರಿಗಳು ಈ ತಿಂಗಳ ಆರಂಭದಲ್ಲಿ ಬಂಧಿಸಿದ್ದರು. ಪ್ರಸ್ತುತ ಶಾರ್ಜಾ ಸೆಂಟ್ರಲ್ ಜೈಲಿನಲ್ಲಿರುವ ನಟಿ ಕ್ರಿಸಾನ್ ಪಿರೇರಾ ಅವರನ್ನು ಏಪ್ರಿಲ್ 1 ರಂದು … Continued

ಗೇಮ್ ಆಡುವಾಗ ಸ್ಫೋಟಗೊಂಡ ಮೊಬೈಲ್ ; 8 ವರ್ಷದ ಬಾಲಕಿ ಸಾವು….!

ತ್ರಿಶೂರು : ಕೇರಳದ ತ್ರಿಶೂರು ಜಿಲ್ಲೆಯ ತಿರುವಿಲ್ವಾಮಲದಲ್ಲಿ ಎಂಟು ವರ್ಷದ ಬಾಲಕಿಯೊಬ್ಬಳು ತನ್ನ ಮನೆಯಲ್ಲಿ ಮೊಬೈಲ್‌ನಲ್ಲಿ ನೋಡುತ್ತಿದ್ದಾಗ ಕೈಯಲ್ಲಿದ್ದ ಮೊಬೈಲ್ ಫೋನ್ ಸ್ಫೋಟಗೊಂಡು ಪ್ರಾಣ ಕಳೆದುಕೊಂಡಿರುವ ದಾರುಣ ಘಟನೆ ನಡೆದಿದೆ. ಮೃತ ಬಾಲಕಿ ಆದಿತ್ಯಶ್ರೀ (8) ತಿರುವಿಲವಾಮಲ ಕ್ರೈಸ್ಟ್ ನ್ಯೂ ಲೈಫ್ ಶಾಲೆಯಲ್ಲಿ ಮೂರನೇ ತರಗತಿ ವಿದ್ಯಾರ್ಥಿನಿ. ಹಾಗೂ ಹಳೆಯನ್ನೂರು ಬ್ಲಾಕ್ ಪಂಚಾಯತ್ ಮಾಜಿ ಸದಸ್ಯ … Continued

‘ಆಪರೇಷನ್ ಕಾವೇರಿ’ ಅಡಿ ಸ್ಥಳಾಂತರ ಕಾರ್ಯಾಚರಣೆ: ಯುದ್ಧಪೀಡಿತ ಸುಡಾನಿನಿಂದ ಹೊರಟ ಭಾರತೀಯರ ಮೊದಲ ಬ್ಯಾಚ್

ನವದೆಹಲಿ: ಸುಡಾನ್‌ನಲ್ಲಿ ಸಿಲುಕಿರುವ ಭಾರತೀಯರ ಸ್ಥಳಾಂತರ ಆರಂಭವಾಗಿದ್ದು, ಮೊದಲ ಬ್ಯಾಚ್‌ ಬಾರತೀಯ ನೌಕಾಪಡೆಯ ಯುದ್ಧನೌಕೆಯಲ್ಲಿ ಸೌದಿ ಅರೇಬಿಯಾದ ಜೆಡ್ಡಾಕ್ಕೆ ಹೊರಟಿದೆ ಎಂದು ವಿದೇಶಾಂಗ ಸಚಿವಾಲಯ ಇಂದು, ಸೋಮವಾರ ತಿಳಿಸಿದೆ. ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಅವರು ಐಎನ್‌ಎಸ್ ಸುಮೇಧಾ ಹಡಗಿನಲ್ಲಿರುವ ಭಾರತೀಯರ ಫೋಟೋಗಳನ್ನು ಟ್ವೀಟ್ ಮಾಡಿದ್ದಾರೆ. ಕೆಲವರು ತಮ್ಮ ತೆರವಿಗೆ ವ್ಯವಸ್ಥೆ ಮಾಡಿದ್ದಕ್ಕಾಗಿ ಸರ್ಕಾರಕ್ಕೆ … Continued

ಆರೋಪ ಗಂಭೀರವಾದದ್ದು….: ಭಾರತ ಕುಸ್ತಿ ಒಕ್ಕೂಟದ ಅಧ್ಯಕ್ಷರ ವಿರುದ್ಧದ ಲೈಂಗಿಕ ಕಿರುಕುಳದ ದೂರು ವಿಚಾರಣೆಗೆ ಸುಪ್ರೀಂ ಕೋರ್ಟ್‌ ಸಮ್ಮತಿ

ನವದೆಹಲಿ: ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ ಭಾರತ ಕುಸ್ತಿ ಒಕ್ಕೂಟದ (ಡಬ್ಲ್ಯುಎಫ್‌ಐ) ಅಧ್ಯಕ್ಷ ಮತ್ತು ಬಿಜೆಪಿ ಸಂಸದ ಬ್ರಿಜ್‌ ಭೂಷಣ್‌ ಶರಣ್‌ ಸಿಂಗ್‌ ವಿರುದ್ಧ ಎಫ್‌ಐಆರ್‌ ದಾಖಲಿಸುವಂತೆ ಕೋರಿ ಕುಸ್ತಿಪಟುಗಳು ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್‌ ಮಂಗಳವಾರ ಸಮ್ಮತಿಸಿದೆ. ಮನವಿಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ವಿಚಾರಣೆ ನಡೆಸಲಿದೆ. ಕುಸ್ತಿಪಟುಗಳು … Continued