ಬ್ಯಾಟ್‌ನಲ್ಲಿ ಬುಂ..ಬುಂ.. ಬುಮ್ರಾ…: ENG vs IND ಟೆಸ್ಟ್- ಒಂದೇ ಓವರ್‌ನಲ್ಲಿ 35 ರನ್ ಚಚ್ಚಿ ಲಾರಾ ದಾಖಲೆ ಮುರಿದ ಜಸ್ಪ್ರೀತ್ ಬುಮ್ರಾ | ವೀಕ್ಷಿಸಿ

ಎಡ್ಜ್‌ಬಸ್ಟನ್ (ಇಂಗ್ಲಂಡ್‌): ಶನಿವಾರ ಎಡ್ಜ್‌ಬಾಸ್ಟನ್‌ನಲ್ಲಿ ನಡೆದ ಐದನೇ ಟೆಸ್ಟ್‌ನ 2ನೇ ದಿನದಂದು ಇಂಗ್ಲೆಂಡ್ ವೇಗಿ ಸ್ಟುವರ್ಟ್ ಬ್ರಾಡ್ ಬೌಲಿಂಗ್‌ನಲ್ಲಿ ಭರ್ಜರಿ ಬ್ಯಾಟ್‌ ಬೀಸಿದ ಭಾರತ ತಂಡದ ನಾಯಕ ಜಸ್ಪ್ರೀತ್ ಬುಮ್ರಾ ಅವರು ಹಲವು ವರ್ಷಗಳ ಹಿಂದಿನ ಬ್ರಿಯಾನ್ ಲಾರಾ ಅವರ ಟೆಸ್ಟ್ ದಾಖಲೆಯನ್ನು ಮುರಿದಿದ್ದಾರೆ. ಬ್ರಾಡ್ ಅವರ ಒಂದು ಓವರ್‌ನಲ್ಲಿ ಬುಮ್ರಾ 35 ರನ್ ಚಚ್ಚಿದ್ದಾರೆ. … Continued

ನೂಪುರ್ ಶರ್ಮಾ ಬೆಂಬಲಿಸಿ ಪೋಸ್ಟ್‌ ಮಾಡಿದ್ದಕ್ಕೆ ಮತ್ತೊಂದು ಶಂಕಿತ ಹತ್ಯೆ ಪ್ರಕರಣ ಬೆಳಕಿಗೆ: ಪ್ರಕರಣದ ತನಿಖೆ ಎನ್‌ಐಎಗೆ

ಮುಂಬೈ: ಉದಯಪುರದಲ್ಲಿ ಟೈಲರ್ ಕನ್ಹಯ್ಯಾಲಾಲ್ ತೇಲಿಯನ್ನು ಕೊಲ್ಲುವ ಒಂದು ವಾರದ ಮೊದಲು, ಜೂನ್ 21 ರಂದು ಮಹಾರಾಷ್ಟ್ರದ ಅಮರಾವತಿ ಜಿಲ್ಲೆಯಲ್ಲಿ 54 ವರ್ಷದ ಕೆಮಿಸ್ಟ್‌ ಉಮೇಶ್ ಪ್ರಹ್ಲಾದರಾವ್ ಕೊಲ್ಹೆ ಕೊಲೆಯಾಗಿದ್ದು, ಟಿವಿ ಚರ್ಚೆಯಲ್ಲಿ ಪ್ರವಾದಿಯ ಬಗ್ಗೆ ವಿವಾದಾತ್ಮಕ ಕಾಮೆಂಟ್‌ ಮಾಡಿದ ಬಿಜೆಪಿಯ ನೂಪುರ್ ಶರ್ಮಾ ಅವರನ್ನು ಬೆಂಬಲಿಸುವ ಸಾಮಾಜಿಕ ಮಾಧ್ಯಮ ಪೋಸ್ಟ್‌ಗೆ ಪ್ರತೀಕಾರವಾಗಿ ಕೊಲ್ಹೆಯನ್ನು ಕೊಲ್ಲಲಾಗಿದೆ … Continued

4ನೇ ಕೋವಿಡ್ ಅಲೆ..?: ಭಾರತದಲ್ಲಿ 17 ಸಾವಿರ ದಾಟಿದ ದೈನಂದಿನ ಕೊರೊನಾ ಸೋಂಕು, ಕೇರಳ, ಮಹಾರಾಷ್ಟ್ರದಲ್ಲಿ ಹೆಚ್ಚು ದಾಖಲು

ನವದೆಹಲಿ: ಭಾರತದಲ್ಲಿ ಶನಿವಾರ ಕಳೆದ 24 ಗಂಟೆಗಳಲ್ಲಿ 17,092 ಹೊಸ ಕೋವಿಡ್ -19 ಪ್ರಕರಣಗಳು ಮತ್ತು 29 ಸಾವುಗಳು ವರದಿಯಾಗಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಮಾಹಿತಿ ತಿಳಿಸಿದೆ. ದೇಶದಲ್ಲಿ ಈಗ ಸಕ್ರಿಯ ಪ್ರಕರಣಗಳ ಸಂಖ್ಯೆ 1,09,568 ಆಗಿದೆ. ಕೇಂದ್ರ ಆರೋಗ್ಯ ಸಚಿವಾಲಯವು ಶನಿವಾರ (ಜುಲೈ 2) ಹಂಚಿಕೊಂಡ ಅಂಕಿಅಂಶಗಳ ಪ್ರಕಾರ, ಕಳೆದ 24 ಗಂಟೆಗಳಲ್ಲಿ … Continued

ಭಾರತದಲ್ಲಿ ಮುಂಬೈ, ದೆಹಲಿ ಅತ್ಯಂತ ದುಬಾರಿ ಮಹಾ ನಗರಗಳು, ಕೋಲ್ಕತ್ತಾ ಕಡಿಮೆ ವೆಚ್ಚದ ಮಹಾ ನಗರ: ಮರ್ಸರ್ ಅಧ್ಯಯನ

ನವದೆಹಲಿ: ವಲಸಿಗರಿಗೆ ಮುಂಬೈ ಮತ್ತು ದೆಹಲಿ ಮಹಾನಗರಗಳು ಏಷ್ಯಾದ ಟಾಪ್ 40 ಅತ್ಯಂತ ದುಬಾರಿ ನಗರಗಳಲ್ಲಿ ಸ್ಥಾನ ಪಡೆದಿವೆ ಮತ್ತು ಕೋಲ್ಕತ್ತಾ ಕಡಿಮೆ ವೆಚ್ಚದ ನಗರವಾಗಿದೆ ಎಂದು ವರದಿಯೊಂದು ಹೇಳುತ್ತದೆ. ಮರ್ಸರ್‌ನ 2022 ರ ಜೀವನ ವೆಚ್ಚ ಸಮೀಕ್ಷೆಯ ಪ್ರಕಾರ, ಮುಂಬೈ (127) ಶ್ರೇಯಾಂಕದಲ್ಲಿ ಜೀವನ ವೆಚ್ಚಗಳು ಮತ್ತು ವಸತಿ ವೆಚ್ಚಗಳೆರಡರಲ್ಲೂ ಭಾರತದ ಅತ್ಯಂತ ದುಬಾರಿ … Continued

ಮಣಿಪುರದಲ್ಲಿ ಭೂ ಕುಸಿತ: ಸಾವಿನ ಸಂಖ್ಯೆ 24ಕ್ಕೆ ಏರಿಕೆ, 38 ಮಂದಿ ನಾಪತ್ತೆ

ಗುವಾಹತಿ: ಮಣಿಪುರದ ನೋನಿ ಜಿಲ್ಲೆಯಲ್ಲಿ ರೈಲ್ವೆ ನಿರ್ಮಾಣ ಸ್ಥಳದಲ್ಲಿ ಸಂಭವಿಸಿದ ಭೂಕುಸಿತದಲ್ಲಿ ಮೃತಪಟ್ಟವರ ಸಂಖ್ಯೆ ಶನಿವಾರ 24ಕ್ಕೆ ಏರಿಕೆಯಾಗಿದೆ ಹಾಗೂ 38 ಮಂದಿ ನಾಪತ್ತೆಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯನ್ನು ಹೆಚ್ಚಿಸಲು ಟುಪುಲ್‌ನ ಸ್ಥಳದಲ್ಲಿ ಹೆಚ್ಚಿನ ತಂಡಗಳನ್ನು ನಿಯೋಜಿಸಲಾಗಿದೆ ಎಂದು ಅವರು ಹೇಳಿದರು. ಸೇನೆ, ಅಸ್ಸಾಂ ರೈಫಲ್ಸ್, ಟೆರಿಟೋರಿಯಲ್ ಆರ್ಮಿ, ಎಸ್‌ಡಿಆರ್‌ಎಫ್ … Continued

ಶಿವಸೇನೆಯ ಪರಂಪರೆಯ ಯುದ್ಧದ ನಡುವೆ ಏಕನಾಥ್ ಶಿಂಧೆಯನ್ನು ‘ಸೇನಾ ನಾಯಕ’ ಸ್ಥಾನದಿಂದ ತೆಗೆದುಹಾಕಿದ ಉದ್ಧವ್ ಠಾಕ್ರೆ

ಮುಂಬೈ : ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂಧೆ ಮತ್ತು ಮಾಜಿ ಮುಖ್ಯಮಂತ್ರಿ ಉದ್ಧಬ್ ಠಾಕ್ರೆ ನಡುವಿನ ಶಿವಸೇನೆ ಪರಂಪರೆಯ ಯುದ್ಧದ ನಡುವೆ, ಶುಕ್ರವಾರ ಉದ್ಧಬ್ ಠಾಕ್ರೆ ಪಕ್ಷ ಸಂಘಟನೆಯಲ್ಲಿನ ಶಿವಸೇನಾ ನಾಯಕ ಸ್ಥಾನದಿಂದ ಏಕನಾಥ ಶಿಂಧೆ ಅವರನ್ನು ತೆಗೆದುಹಾಕಿದ್ದಾರೆ. ಪಕ್ಷವು ನೀಡಿದ ಪತ್ರದಲ್ಲಿ ಉದ್ಧವ್ ಠಾಕ್ರೆ, ಶಿಂಧೆ ಅವರು “ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ” ತೊಡಗಿಸಿಕೊಂಡಿದ್ದಾರೆ ಮತ್ತು … Continued

ಸಂಜಯ್ ರಾವತ್ ಅವರನ್ನು 10 ಗಂಟೆಗಳ ಕಾಲ ಪ್ರಶ್ನಿಸಿದ ಇಡಿ

ನವದೆಹಲಿ: ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಸೇನಾ ಸಂಸದ ಸಂಜಯ್ ರಾವತ್ ಅವರನ್ನು ಜಾರಿ ನಿರ್ದೇಶನಾಲಯ (ಇಡಿ) ಗುರುವಾರ ಸುಮಾರು 10 ಗಂಟೆಗಳ ಕಾಲ ವಿಚಾರಣೆ ನಡೆಸಿದೆ. ಸಂಜಯ್ ರಾವತ್ ಅವರು ದಕ್ಷಿಣ ಮುಂಬೈನ ಬಲ್ಲಾರ್ಡ್ ಎಸ್ಟೇಟ್‌ನಲ್ಲಿರುವ ಇಡಿ ಕಚೇರಿಯನ್ನು ಬೆಳಿಗ್ಗೆ 11:30 ರ ಸುಮಾರಿಗೆ ತಲುಪಿದರು. ಅವರು ರಾತ್ರಿ 9:30 ರ ಸುಮಾರಿಗೆ … Continued

ಉದಯಪುರ ಟೈಲರ್ ಹತ್ಯೆ ಪ್ರಕರಣ: ಮತ್ತಿಬ್ಬರನ್ನು ಬಂಧಿಸಿದ ಪೊಲೀಸರು

ಉದಯಪುರ (ರಾಜಸ್ಥಾನ): ಉದಯಪುರ ಟೈಲರ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತಿಬ್ಬರನ್ನು ಬಂಧಿಸಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೂ ಇಬ್ಬರನ್ನು ಬಂಧಿಸಲಾಗಿದೆ. ಅವರು ಸಂಪೂರ್ಣ ಅಪರಾಧದ ಹಿಂದೆ ಸಂಚು ಮತ್ತು ತಯಾರಿಯಲ್ಲಿ ಭಾಗಿಯಾಗಿದ್ದಾರೆ” ಎಂದು ಐಜಿ ಪ್ರಫುಲ್ಲ ಕುಮಾರ್ ತಿಳಿಸಿದ್ದಾರೆ. ಗುರುವಾರ ಪ್ರಫುಲ್ಲ ಕುಮಾರ್ ಅವರನ್ನು ಉದಯಪುರ ಐಜಿಯಾಗಿ ನೇಮಿಸಲಾಗಿದೆ. ಅಮಾನತುಗೊಂಡ ಬಿಜೆಪಿ ನಾಯಕಿನೂಪುರ್ ಶರ್ಮಾ ಅವರನ್ನು … Continued

ಮಹಾರಾಷ್ಟ್ರ: ಜುಲೈ 4ರಂದು ಏಕನಾಥ್ ಶಿಂಧೆ ಸರ್ಕಾರದ ವಿಶ್ವಾಸಮತ ಪರೀಕ್ಷೆ

ಮುಂಬೈ: ಮಹಾರಾಷ್ಟ್ರದಲ್ಲಿ ಶಿವಸೇನೆ-ಬಿಜೆಪಿ ಸರ್ಕಾರವು ಜುಲೈ 4 ರಂದು ವಿಶ್ವಾಸಮತ ಪರೀಕ್ಷೆಯನ್ನು ಎದುರಿಸಲಿದೆ ಎಂದು ಅಧಿಕಾರಿಯೊಬ್ಬರು ಶುಕ್ರವಾರ ತಿಳಿಸಿದ್ದಾರೆ. ವಿಧಾನಸಭೆ ಸ್ಪೀಕರ್ ಹುದ್ದೆಗೆ ಬಿಜೆಪಿ ಶಾಸಕ ರಾಹುಲ್ ನಾರ್ವೇಕರ್ ಶುಕ್ರವಾರ ನಾಮಪತ್ರ ಸಲ್ಲಿಸಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ. ಸದನದ ವಿಶೇಷ ಎರಡು ದಿನಗಳ ಅಧಿವೇಶನ ಪ್ರಾರಂಭವಾಗುವ ಜುಲೈ 3 ರಂದು ಅಗತ್ಯವಿದ್ದಲ್ಲಿ ಈ ಸ್ಥಾನಕ್ಕೆ ಚುನಾವಣೆ … Continued

2611 : ಈ ಬೈಕ್ ಸಂಖ್ಯೆಗಾಗಿ ₹ 5,000 ಹೆಚ್ಚುವರಿ ಹಣ ನೀಡಿದ್ದ ಉದಯಪುರ ಟೈಲರ್‌ ಹಂತಕರು…!

ಉದಯಪುರ: ಪಾಕಿಸ್ತಾನ ಮೂಲದ ಭಯೋತ್ಪಾದಕ ಗುಂಪಿನೊಂದಿಗೆ ಉದಯ್‌ಪುರ ಹಂತಕರ ಸಂಪರ್ಕವನ್ನು ರಾಜಸ್ಥಾನ ಪೊಲೀಸರು ಬಹಿರಂಗಪಡಿಸಿದ ಕೆಲವೇ ದಿನಗಳ ನಂತರ ಇಂದು ಪೊಲೀಸರು ಪ್ರಕರಣದಲ್ಲಿ ಮತ್ತೊಂದು ಸಂಚಲನವನ್ನು ಬಹಿರಂಗಪಡಿಸಿದ್ದಾರೆ. ಹಂತಕರಲ್ಲಿ ಒಬ್ಬನಾದ ರಿಯಾಜ್ ಅಖ್ತರಿ ತನ್ನ ಮೋಟಾರ್‌ಸೈಕಲ್‌ಗೆ 2611 ಎಂದು ಬರೆದ ನಂಬರ್ ಪ್ಲೇಟ್ ಪಡೆಯಲು ಹೆಚ್ಚುವರಿ ಹಣವನ್ನು ಪಾವತಿಸಿದ್ದಾನೆ. ಮುಂಬೈ ತನ್ನ ಭೀಕರ ಭಯೋತ್ಪಾದನಾ ದಾಳಿ … Continued