15-18 ವಯಸ್ಸಿನ ಮಕ್ಕಳಿಗೆ ಕೋವಿಡ್‌ ಲಸಿಕೆ, 60 ವರ್ಷ ಮೇಲ್ಪಟ್ಟವರಿಗೆ ಬೂಸ್ಟರ್ ಡೋಸ್ ರೋಲ್‌ಔಟ್‌ಗಾಗಿ ಮಾರ್ಗಸೂಚಿ ಬಿಡುಗಡೆ ಮಾಡಿದ ಆರೋಗ್ಯ ಸಚಿವಾಲಯ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಹದಿಹರೆಯದವರಿಗೆ ಕೋವಿಡ್‌-19 ಲಸಿಕೆ ನೀಡುವುದನ್ನು ಘೋಷಣೆ ಮಾಡಿದ ಹಾಗೂ ಆರೋಗ್ಯ ಕಾರ್ಯಕರ್ತರು ಮತ್ತು 60 ವರ್ಷಕ್ಕಿಂತ ಮೇಲ್ಪಟ್ಟವರು ಮತ್ತು ಕೊಮೊರ್ಬಿಡಿಟಿಗಳೊಂದಿಗೆ ಬೂಸ್ಟರ್ ಡೋಸ್ಪಡೆಯಲು ಅನುಮತಿಸಿದ ಎರಡು ದಿನಗಳ ನಂತರ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಸೋಮವಾರ ಲಸಿಕೆ ಪಡೆಯಲು ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಹೇಳಿಕೆಯಲ್ಲಿ, ಆರೋಗ್ಯ ಸಚಿವಾಲಯವು … Continued

2022ರ ಐದು ರಾಜ್ಯಗಳ ವಿಧಾನಸಭೆ ಚುನಾವಣೆ ಹಿನ್ನೆಲೆ: ಈ ರಾಜ್ಯಗಳಲ್ಲಿ ಗರಿಷ್ಠ ಕೋವಿಡ್ ಲಸಿಕೆಗಳನ್ನು ನೀಡುವಂತೆ ಸೂಚಿಸಿದ ಚುನಾವಣಾ ಆಯೋಗ

ನವದೆಹಲಿ: ಚುನಾವಣೆಗೆ ಒಳಪಡುವ ಐದು ರಾಜ್ಯಗಳಲ್ಲಿ ಕೋವಿಡ್-19 ಲಸಿಕೆಯನ್ನು ಪೂರ್ಣಗೊಳಿಸುವಂತೆ ಭಾರತದ ಚುನಾವಣಾ ಆಯೋಗವು ಕೇಂದ್ರ ಆರೋಗ್ಯ ಸಚಿವಾಲಯಕ್ಕೆ ನಿರ್ದೇಶನ ನೀಡಿದೆ. ಐದು ಚುನಾವಣಾ ರಾಜ್ಯಗಳಲ್ಲಿ ವ್ಯಾಕ್ಸಿನೇಷನ್ ಸ್ಥಿತಿಯ ಬಗ್ಗೆ, ವಿಶೇಷವಾಗಿ ಮೊದಲ ಡೋಸ್ ಬಗ್ಗೆ ಆರೋಗ್ಯ ಸಚಿವಾಲಯದಿಂದ ಚುನಾವಣಾ ಆಯೋಗ ಮಾಹಿತಿ ಕೇಳಿದೆ ಎಂದು ಮೂಲಗಳು ತಿಳಿಸಿವೆ ಎಂದು ರಿಪಬ್ಲಿಕ್‌ ಟಿವಿ ವರದಿ ಮಾಡಿದೆ. … Continued

ರಾಯ್‌ಪುರ ಧರಮ್ ಸಂಸದ್‌ನಲ್ಲಿ ಮಹಾತ್ಮ ಗಾಂಧಿ ವಿರುದ್ಧ ಅವಹೇಳನಕಾರಿ ಪದ ಬಳಕೆ: ಕಾಳಿಚರಣ್ ಮಹಾರಾಜ್ ವಿರುದ್ಧ ಪ್ರಕರಣ ದಾಖಲು

ರಾಯ್ಪುರ: ಮಹಾತ್ಮಾ ಗಾಂಧಿ ವಿರುದ್ಧ ಅವಹೇಳನಕಾರಿ ಪದಗಳನ್ನು ಬಳಸಿದ ಮತ್ತು ರಾಷ್ಟ್ರಪಿತನನ್ನು ಕೊಂದ ನಾಥುರಾಮ್ ಗೋಡ್ಸೆಯನ್ನು ಹೊಗಳಿದ್ದಕ್ಕಾಗಿ ರಾಯ್ಪುರದ ಪೊಲೀಸರು ಕಾಳಿಚರಣ್ ಮಹಾರಾಜ್ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ. ರಾಯ್‌ಪುರದ ಮಾಜಿ ಮೇಯರ್ ಪ್ರಮೋದ್ ದುಬೆ ಅವರ ದೂರಿನ ಮೇರೆಗೆ ಕಾಳಿಚರಣ್ ಮಹಾರಾಜ್ ವಿರುದ್ಧ ರಾಯ್‌ಪುರದ ತಿಕ್ರಪಾರಾ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಕಾಳಿಚರಣ್ ಮಹಾರಾಜ್‌ ವಿರುದ್ಧ … Continued

ಓಮಿಕ್ರಾನ್‌ಗಿಂತ ಚುನಾವಣೆಗೆ ಆದ್ಯತೆ’: ರಾತ್ರಿ ಕರ್ಫ್ಯೂ ವಿಧಿಸಿ ಹಗಲಿಗೆ ಸಮಾವೇಶ, ಸಿಎಂ ಯೋಗಿ ತರಾಟೆಗೆ ತೆಗೆದುಕೊಂಡ ವರುಣ್‌ ಗಾಂಧಿ

ನವದೆಹಲಿ: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿರುದ್ಧ ನೇರವಾಗಿ ವಾಗ್ದಾಳಿ ನಡೆಸಿದ ಬಿಜೆಪಿ ಸಂಸದ ವರುಣ್ ಗಾಂಧಿ, ಲಕ್ನೋದಲ್ಲಿ ಹಗಲಿನಲ್ಲಿ ಕಿಕ್ಕಿರಿದ ಸಮಾವೇಶ ನಡೆಸಿ ರಾತ್ರಿ ಕರ್ಫ್ಯೂ ಹೇರಿದ ಉತ್ತರ ಪ್ರದೇಶದ ಸರ್ಕಾರದ ನಡೆ ಬಗ್ಗೆ ಪ್ರಶ್ನಿಸಿದ್ದಾರೆ. ಓಮಿಕ್ರಾನ್‌ನ ಉದಯದ ಮಧ್ಯೆ ಇಂತಹ ಸಮಾವೇಶಗಳನ್ನು ನಡೆಸುವ ಮೂಲಕ ಉತ್ತರ ಪ್ರದೇಶ ಸರ್ಕಾರವು ಓಮಿಕ್ರಾನ್ ಅನ್ನು … Continued

ಚಂಡೀಗಢ ಮುನ್ಸಿಪಲ್ ಚುನಾವಣೆ: ಮೊದಲ ಪ್ರಯತ್ನದಲ್ಲೇ 14 ಸೀಟು ಗೆದ್ದು ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ ಆಮ್‌ ಆದ್ಮಿ ಪಕ್ಷ

ಚಂಡೀಗಢ: ಪಂಜಾಬ್‌ ವಿಧಾನಸಭೆ ಚುನಾವಣೆಗೂ ಮುನ್ನ ಆಮ್‌ ಆದ್ಮಿ ಪಾರ್ಟಿ ಬಹುದೊಡ್ಡ ಗೆಲುವು ಸಾಧಿಸಿದೆ. ಆಮ್‌ ಆದ್ಮಿ ಪಕ್ಷವು ಚಂಡೀಗಢ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ ಮೊದಲ ಬಾರಿಗೆ ಸ್ಪರ್ಧಿಸಿದ್ದು, 14 ಸ್ಥಾನಗಳಲ್ಲಿ ಗೆಲ್ಲುವ ಮೂಲಕ 35 ವಾರ್ಡುಗಳ ಫಲಿತಾಂಶದಲ್ಲಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. 1996 ರಿಂದ, ಚಂಡೀಗಢ ಮುನ್ಸಿಪಲ್ ಕಾರ್ಪೊರೇಶನ್‌ನಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ … Continued

15-18 ವರ್ಷ ವಯಸ್ಸಿನವರು ಜನವರಿ 1ರಿಂದ ಕೊ-ವಿನ್ (CoWIN )ಪೋರ್ಟಲ್‌ನಲ್ಲಿ ನೋಂದಾಯಿಸಿಕೊಳ್ಳಬಹುದು..ಮಾಹಿತಿ ಇಲ್ಲಿದೆ..

ನವದೆಹಲಿ: ಸರ್ಕಾರವು 15-18 ವರ್ಷ ವಯಸ್ಸಿನವರಿಗೆ ಜನವರಿ 3 ರಿಂದ ಕೋವಿಡ್‌ ಲಸಿಕೆಗಳನ್ನು ನೀಡಲು ಸಜ್ಜಾಗಿದ್ದು, ಜನವರಿ 1 ರಿಂದ CoWIN ಆ್ಯಪ್‌ನಲ್ಲಿ 15-18 ವರ್ಷ ವಯಸ್ಸಿನವರಿಗೆ ನೋಂದಾವಣೆ ಸಾಧ್ಯವಾಗಲಿದೆ. ಮಾಧ್ಯಮಗಳೊಂದಿಗೆ ಮಾತನಾಡಿದ CoWIN ಪ್ಲಾಟ್‌ಫಾರ್ಮ್ ಮುಖ್ಯಸ್ಥ ಡಾ.ಆರ್.ಎಸ್.ಶರ್ಮಾ ಸೋಮವಾರ ಈ ಬಗ್ಗೆ ತಿಳಿಸಿದ್ದು, CoWIN ಪೋರ್ಟಲ್‌ನಲ್ಲಿ ನೋಂದಾಯಿಸಲು, ಮಕ್ಕಳು 10ನೇ ತರಗತಿಯ ಗುರುತಿನ ಚೀಟಿಯನ್ನು … Continued

ಹದಿಹರೆಯದವರ ರಕ್ಷಿಸುವ ಅಗತ್ಯವಿದೆ, ಯಾಕೆಂದರೆ ಮೂರನೇ ಎರಡರಷ್ಟು ಮಕ್ಕಳ ಕೋವಿಡ್ ಸಾವುಗಳು 12-18 ವಯಸ್ಸಿನವರಲ್ಲಿಯೇ ಸಂಭವಿಸಿದೆ : ಕೋವಿಡ್‌ ಕಾರ್ಯಪಡೆ ಮುಖ್ಯಸ್ಥ

ನವದೆಹಲಿ: 15-18 ವರ್ಷದೊಳಗಿನ ಮಕ್ಕಳಿಗೆ ಕೊರೊನಾ ವಿರುದ್ಧ ಲಸಿಕೆಯನ್ನು ಜನವರಿ 3 ರಿಂದ ಪ್ರಾರಂಭಿಸಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ ಒಂದು ದಿನದ ನಂತರ, ಹೇಳಿದ್ದಾರೆ. ಅವರು ಓಡಾಡುವುದರಿಂದ ವೈರಸ್‌ನಿಂದ ಸೋಂಕಿಗೆ ಒಳಗಾಗುವ ಅಪಾಯವು ಹೆಚ್ಚಾಗಿರುತ್ತದೆ. ಹೀಗಾಗಿ ಹದಿಹರೆಯದವರ ರಕ್ಷಣೆ ಮುಖ್ಯವಾಗುತ್ತದೆ ಎಂದು ಕೋವಿಡ್ ಟಾಸ್ಕ್ ಫೋರ್ಸ್ ವರ್ಕಿಂಗ್ ಗ್ರೂಪ್ ಎನ್‌ಟಿಎಜಿಐ ಅಧ್ಯಕ್ಷ ಡಾ. … Continued

ಅದು ವಿಷಕಾರಿ ಹಾವು, ನನಗೆ ಮೂರು ಬಾರಿ ಕಚ್ಚಿದೆ: ಹಾವು ಕಚ್ಚಿದ ಬಗ್ಗೆ ತಿಳಿಸಿದ ಬಾಲಿವುಡ್‌ ಸೂಪರ್‌ ಸ್ಟಾರ್‌ ಸಲ್ಮಾನ್ ಖಾನ್

ಮುಂಬೈ: ನಟ ಸಲ್ಮಾನ್ ಖಾನ್ ತಮ್ಮ 56ನೇ ಜನ್ಮದಿನದ ಮೊದಲು ಪನ್ವೆಲ್‌ನಲ್ಲಿರುವ ತಮ್ಮ ಫಾರ್ಮ್‌ಹೌಸ್‌ನಲ್ಲಿ ಹಾವು ಕಚ್ಚಿದ ಬಗ್ಗೆ ಮೌನ ಮುರಿದಿದ್ದಾರೆ. ತನ್ನ ಜನ್ಮದಿನದ ಮುನ್ನಾದಿನ ಪತ್ರಿಕಾಗೋಷ್ಠಿಯಲ್ಲಿ, ನಟ ಸಲ್ಮಾನ್‌ ಖಾನ್‌ ತನಗೆ ಕಚ್ಚಿದ್ದು ವಿಷಕಾರಿ ಹಾವು ಎಂದು ಬಹಿರಂಗಪಡಿಸಿದರು ಮತ್ತು ಅದನ್ನು ಹಿಡಿದಿಡಲು ಪ್ರಯತ್ನಿಸುವಾಗ ಅದು ಮೂರು ಬಾರಿ ಕಚ್ಚಿದೆ. ಈಗ ತಾನು ಆರೋಗ್ಯವಾಗಿರುವುದಾಗಿ … Continued

ಭಾರತದಲ್ಲಿ ಓಮಿಕ್ರಾನ್ ಪ್ರಕರಣಗಳು 578 ಕ್ಕೆ ಏರಿಕೆ; ದೆಹಲಿಯಲ್ಲಿ 63 ಪ್ರಕರಣಗಳ ದೊಡ್ಡ ಏರಿಕೆ

ನವದೆಹಲಿ: ಭಾರತದಲ್ಲಿ ಓಮಿಕ್ರಾನ್ ಪ್ರಕರಣಗಳ ಸಂಖ್ಯೆ 578 ಕ್ಕೆ ಏರಿದೆ. ದೆಹಲಿಯಲ್ಲಿ 142 ಪ್ರಕರಣಗಳು ವರದಿಯಾಗಿದ್ದು, ಮಹಾರಾಷ್ಟ್ರದಲ್ಲೂ 142 ಪ್ರಕರಣಗಳು ಪತ್ತೆಯಾಗಿವೆ. ನಂತರ ಕೇರಳದಲ್ಲಿ 57, ಗುಜರಾತಿನಲ್ಲಿ 49 ಮತ್ತು ರಾಜಸ್ಥಾನದಲ್ಲಿ 43 ಪ್ರಕರಣಗಳು ದಾಖಲಾಗಿವೆ. ಬಿಡುಗಡೆಯಾದ ಓಮಿಕ್ರಾನ್ ರೋಗಿಗಳ ಒಟ್ಟು ಸಂಖ್ಯೆ 151ರಷ್ಟಿದೆ. ಮಧ್ಯಪ್ರದೇಶ ಮತ್ತು ಹಿಮಾಚಲ ಪ್ರದೇಶವು ಭಾನುವಾರ ಮೊದಲ ಬಾರಿಗೆ ಓಮಿಕ್ರಾನ್ … Continued

ಧರ್ಮ ಸಂಸದ್ ವಿವಾದ: ‘ಜನಾಂಗೀಯ ನಿರ್ಮೂಲನೆ’ ಕರೆಗಳ ಕುರಿತು 76 ಸುಪ್ರೀಂ ಕೋರ್ಟ್ ವಕೀಲರಿಂದ ಸಿಜೆಐಗೆ ಪತ್ರ

ನವದೆಹಲಿ: ಸುಪ್ರೀಂ ಕೋರ್ಟ್‌ನ 76 ವಕೀಲರು ಭಾರತದ ಮುಖ್ಯ ನ್ಯಾಯಮೂರ್ತಿ ಎನ್‌.ವಿ. ರಮಣ ಅವರಿಗೆ ಪತ್ರ ಬರೆದಿದ್ದು, ಇತ್ತೀಚೆಗೆ ದೆಹಲಿ ಮತ್ತು ಹರಿದ್ವಾರದಲ್ಲಿ ನಡೆದ ಎರಡು ಧಾರ್ಮಿಕ ಕಾರ್ಯಕ್ರಮಗಳಲ್ಲಿ ‘ದ್ವೇಷ ಭಾಷಣ’ ಮತ್ತು ‘ಜನಾಂಗೀಯ ನಿರ್ಮೂಲನೆ’ಯ ಕರೆಗಳನ್ನು ಸ್ವಯಂಪ್ರೇರಿತವಾಗಿ ತೆಗೆದುಕೊಳ್ಳುವಂತೆ ಕೋರಿದ್ದಾರೆ. ತೃಣಮೂಲ ಕಾಂಗ್ರೆಸ್ ಸಂಸದ ಮಹುವಾ ಮೊಯಿತ್ರಾ ಅವರು ಟ್ವಿಟರ್‌ನಲ್ಲಿ ಪತ್ರವನ್ನು ಹಂಚಿಕೊಂಡಿದ್ದಾರೆ ಮತ್ತು … Continued