ಉಪಹಾರ್ ಚಿತ್ರಮಂದಿರ ದುರಂತ: ಅನ್ಸಲ್ ಸಹೋದರರಿಗೆ 7 ವರ್ಷ ಜೈಲು, 2.25 ಕೋಟಿ ರೂ.ದಂಡ ವಿಧಿಸಿದ ದೆಹಲಿ ಕೋರ್ಟ್‌

ನವದೆಹಲಿ: ಉಪಹಾರ್ ಸಿನಿಮಾ ಅಗ್ನಿ ದುರಂತ ಪ್ರಕರಣದಲ್ಲಿ ಸಾಕ್ಷ್ಯಾಧಾರಗಳನ್ನು ತಿರುಚಿದ್ದಕ್ಕಾಗಿ ಕಳೆದ ತಿಂಗಳು ನ್ಯಾಯಾಲಯದಿಂದ ದೋಷಿಗಳೆಂದು ತೀರ್ಮಾನಿಸಲ್ಪಟ್ಟ ಉದ್ಯಮಿ ಸುಶೀಲ್ ಅನ್ಸಲ್ ಮತ್ತು ಗೋಪಾಲ್ ಅನ್ಸಲ್ ಅವರಿಗೆ ದೆಹಲಿ ನ್ಯಾಯಾಲಯ ಸೋಮವಾರ 7 ವರ್ಷಗಳ ಜೈಲು ಶಿಕ್ಷೆ ಮತ್ತು ತಲಾ 2.25 ಕೋಟಿ ರೂ.ಗಳ ದಂಡ ವಿಧಿಸಿದೆ. ಶಿಕ್ಷೆಯನ್ನು ವಿಧಿಸುವ ವೇಳೆ ಮುಖ್ಯ ಮೆಟ್ರೋಪಾಲಿಟನ್‌ ಮ್ಯಾಜಿಸ್ಟ್ರೇಟ್‌ … Continued

ಶ್ರೀನಗರದಲ್ಲಿ ಮುಂದುವರಿದ ನಾಗರಿಕರ ಹತ್ಯೆ; ಫಾರ್ಮಸಿ ಉದ್ಯೋಗಿಯನ್ನು ಗುಂಡಿಕ್ಕಿ ಕೊಂದ ಉಗ್ರರು

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಮುಗ್ಧ ನಾಗರಿಕರ ಹತ್ಯೆ ಮುಂದುವರಿದಿದೆ. ಸೋಮವಾರ ಸಂಜೆ ಶ್ರೀನಗರದ ಬೊಹ್ರಿ ಕಡಾಲ್​ ಎಂಬ ಏರಿಯಾದಲ್ಲಿರುವ ಅಂಗಡಿಯೊಂದರ ಹೊರಗೆ ನಾಗರಿಕನೊಬ್ಬನಿಗೆ ಭಯೋತ್ಪಾದಕರು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಮೃತನನ್ನು ಮೊಹಮ್ಮದ್​ ಇಬ್ರಾಹಿಂ ಖಾನ್​ ಎಂದು ಗುರುತಿಸಲಾಗಿದ್ದು, ಮೂಲತಃ ಬಂಡಿಪೋರಾದವರು ಎನ್ನಲಾಗಿದೆ. ಅವರು ಸೇಲ್ಸ್​ಮ್ಯಾನ್​ ಆಗಿ ಕೆಲಸ ಮಾಡುತ್ತಿದ್ದರು. ಉಗ್ರರು ಇಬ್ರಾಹಿಂ ಖಾನ್​​ರ ಹೊಟ್ಟೆಗೆ … Continued

ಮಕ್ಕಳಿಗೆ ಝೈಕೋವ್-ಡಿ ಕೋವಿಡ್ ಲಸಿಕೆ: ಸರ್ಕಾರಕ್ಕೆ 1 ಡೋಸಿನ ಬೆಲೆ 265 ರೂ.

ನವದೆಹಲಿ: ಔಷಧ ತಯಾರಕ ಸಂಸ್ಥೆ ಝೈಡಸ್ ಕ್ಯಾಡಿಲಾ ತಾನು ಸರ್ಕಾರಕ್ಕೆ ಒಂದು ಕೋಟಿ ಡೋಸ್ ಗಳನ್ನು ಪ್ರತಿ ಡೋಸ್ ಗೆ 265 ರೂ.ಗಳಿಗೆ ಪೂರೈಕೆ ಮಾಡುತ್ತಿರುವುದಾಗಿ ಹೇಳಿದೆ. ವಿಶ್ವದ ಮೊದಲ ಪ್ಲಾಸ್ಮಿಡ್ ಡಿಎನ್ಎ ಲಸಿಕೆಯಾಗಿದ್ದು ಒಂದು ಕೋಟಿ ಡೋಸ್ ಗಳನ್ನು ಪೂರೈಕೆ ಮಾಡುವುದಕ್ಕೆ ಸರ್ಕಾರದಿಂದ ಆರ್ಡರ್ ಬಂದಿದೆ ಎಂದು ಕಂಪನಿ ತಿಳಿಸಿದೆ. ಸೂಜಿ-ಮುಕ್ತ ಲಸಿಕೆ ಜಿಎಸ್ … Continued

ಪೇಜಾವರ ಶ್ರೀ, ತುಳಸಿ ಗೌಡ, ಮಂಜಮ್ಮ ಜೋಗತಿ, ಹಾಜಬ್ಬ, ವಿಜಯ ಸಂಕೇಶ್ವರ ಸೇರಿ 119 ಸಾಧಕರಿಗೆ 2020ನೇ ಸಾಲಿನ ಪದ್ಮ ಪ್ರಶಸ್ತಿ ಪ್ರದಾನ

ನವದೆಹಲಿ : ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ವಿವಿಧ ಸಾಧನೆಗಳನ್ನು ಮಾಡಿದ 2020 ನೇ ಸಾಲಿನ ಪದ್ಮ ಪ್ರಶಸ್ತಿಗಳನ್ನು ಸೋಮವಾರ 119 ಸಾಧಕರಿಗೆ ಪ್ರದಾನ ಮಾಡಿದರು. 7 ಪದ್ಮವಿಭೂಷಣ, 10 ಪದ್ಮಭೂಷಣ ಮತ್ತು 102 ಪದ್ಮಶ್ರೀ ಪ್ರಶಸ್ತಿಗಳನ್ನು ನೀಡಲಾಯಿತು, ಪ್ರಶಸ್ತಿ ಪುರಸ್ಕೃತರಲ್ಲಿ 29 ಮಹಿಳೆಯರು, 16 ಮರಣೋತ್ತರ ಪ್ರಶಸ್ತಿ ಪುರಸ್ಕೃತರು ಸೇರಿದ್ದಾರೆ. ರಾಷ್ಟ್ರಪತಿ ಭವನದಲ್ಲಿ ನಡೆದ … Continued

ಲಖಿಂಪುರ ಖೇರಿ ಪ್ರಕರಣ: ಉತ್ತರ ಪ್ರ.ದೇಶದ ನ್ಯಾಯಾಂಗ ಆಯೋಗದಲ್ಲಿ ವಿಶ್ವಾಸವಿಲ್ಲ ಎಂದ ಸುಪ್ರೀಂಕೋರ್ಟ್, ಬೇರೆ ರಾಜ್ಯದ ನ್ಯಾಯಮೂರ್ತಿಗಳ ಮೇಲ್ವಿಚಾರಣೆಗೆ ಒಲವು

ನವದೆಹಲಿ: ಲಖಿಂಪುರ್ ಖೇರಿ ಹತ್ಯಾಕಾಂಡ ಘಟನೆಗೆ ಸಂಬಂಧಿಸಿದಂತೆ ಎಸ್‌ಐಟಿ ನಡೆಸುತ್ತಿರುವ ತನಿಖೆಯ ಮೇಲ್ವಿಚಾರಣೆಗಾಗಿ ಉತ್ತರ ಪ್ರದೇಶ ಸರ್ಕಾರ ನೇಮಿಸಿರುವ ನ್ಯಾಯಾಂಗ ಆಯೋಗದ ಬಗ್ಗೆ ತಮಗೆ ವಿಶ್ವಾಸವಿಲ್ಲ ಎಂದು ಸುಪ್ರೀಂಕೋರ್ಟ್‌ ಸೋಮವಾರ ಹೇಳಿದೆ. ಘಟನೆಯಲ್ಲಿ ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ರೈತರ ಮೇಲೆ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ ತೇನಿ ಅವರ … Continued

ಟವೆಲ್ ನೀಡಲು ತಡ ಮಾಡಿದ್ದಕ್ಕೆ ಪತ್ನಿಯನ್ನೇ ಕೊಂದ ಪತಿ ಮಹಾಶಯ..!

ಬಾಲಾಘಾಟ್: ಸ್ನಾನ ಮುಗಿದ ಬಳಿಕ ಮೈ ಒರೆಸಿಕೊಳ್ಳಲು ಟವೆಲ್ ಕೊಡಲು ತಡ ಮಾಡಿದ ಕ್ಷುಲ್ಲಕ ಕಾರಣಕ್ಕೆ ಪತ್ನಿಯನ್ನು ಭೀಕರವಾಗಿ ಹತ್ಯೆ ಮಾಡಿದ ಘಟನೆ ಮಧ್ಯ ಪ್ರದೇಶದ ಕಿರಣಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಬಗ್ಗೆ ವರದಿಯಾಗಿದೆ. ಅರಣ್ಯ ಇಲಾಖೆಯಲ್ಲಿ ದಿನಗೂಲಿ ನೌಕರರಾಗಿರುವ ಬಾಲಾಘಾಟ್ ಜಿಲ್ಲೆಯ ಹಿರಾಪುರ ಗ್ರಾಮದ ರಾಜಕುಮಾರ್ ಬಹೆ (50) ಎಂಬವರು ಈ ಕೃಯವೆಸಗಿದವರು … Continued

ಸಮೀರ್ ವಾಂಖೇಡೆ ಸಲ್ಲಿಸಿದ ಮಾನನಷ್ಟ ಮೊಕದ್ದಮೆ: ಸಚಿವ ನವಾಬ್ ಮಲಿಕ್‌ಗೆ ಪ್ರತಿಕ್ರಿಯೆ ನೀಡಲು ಬಾಂಬೆ ಹೈಕೋರ್ಟ್ ಸೂಚನೆ

ಮುಂಬೈ: ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋದ (NCB) ಮುಂಬೈ ವಲಯ ನಿರ್ದೇಶಕ ಸಮೀರ್ ವಾಂಖೇಡೆ ಅವರ ತಂದೆ ಧ್ಯಾನ್‌ದೇವ್ ವಾಂಖೇಡೆ ಅವರು ಸಲ್ಲಿಸಿರುವ ಮಾನನಷ್ಟ ಮೊಕದ್ದಮೆಗೆ ಪ್ರತಿಕ್ರಿಯೆಯಾಗಿ ಅಫಿಡವಿಟ್ ಸಲ್ಲಿಸುವಂತೆ ಮಹಾರಾಷ್ಟ್ರ ಸಚಿವ ಮತ್ತು ಎನ್‌ಸಿಪಿ ನಾಯಕ ನವಾಬ್ ಮಲಿಕ್ ಅವರಿಗೆ ಬಾಂಬೆ ಹೈಕೋರ್ಟ್ ಸೋಮವಾರ ಸೂಚಿಸಿದೆ. ನ್ಯಾಯಮೂರ್ತಿ ಮಾಧವ್ ಜಾಮ್ದಾರ್ ಅವರ ರಜಾಕಾಲದ ಪೀಠವು ಮಂಗಳವಾರದೊಳಗೆ … Continued

ಛತ್ ಪೂಜಾ ಉತ್ಸವ ಆರಂಭವಾಗುತ್ತಿದ್ದಂತೆ ವಿಪರೀತ ನೊರೆಯ ವಿಷಯುಕ್ತ ಯಮುನಾ ನೀರಿನಲ್ಲೇ ಭಕ್ತರಿಂದ ಸ್ನಾನ: ನೋಡಿದ್ರೆ ಗಾಬರಿಯಾಗ್ತೀರಿ-ವೀಕ್ಷಿಸಿ

ನವದೆಹಲಿ: ಕಾಳಿಂದಿ ಕುಂಜ್ ಬಳಿಯ ಯಮುನಾ ನದಿಯಲ್ಲಿ ಭಕ್ತರು ಸ್ನಾನ ಮಾಡುವ ಮೂಲಕ ಛತ್ ಪೂಜೆಯ ಮೊದಲ ದಿನ ಸೋಮವಾರ ಪ್ರಾರಂಭವಾಯಿತು. ಆದಾಗ್ಯೂ, ರಾಷ್ಟ್ರ ರಾಜಧಾನಿಯಲ್ಲಿ ಹೆಚ್ಚುತ್ತಿರುವ ಮಾಲಿನ್ಯದ ಮಟ್ಟದಿಂದಾಗಿ ನದಿಯ ಮೇಲ್ಮೈಯಲ್ಲಿ ವಿಷಕಾರಿ ನೊರೆಯ ದಟ್ಟವಾದ ಪದರವು ಕಂಡುಬರುವುದರಿಂದ ಭಕ್ತರು ನದಿಯಲ್ಲಿನ ನೀರಿನ ಗುಣಮಟ್ಟದ ಬಗ್ಗೆ ಕಳವಳ ವ್ಯಕ್ತಪಡಿಸಿದರು. ಆದರೂ ಅದೇ ವಿಷಯುಕ್ತ ನೊರೆ … Continued

ಬಾಂಬ್‌ ಸ್ಫೋಟಿಸಿ ಪ್ರಧಾನಿ ಮೋದಿ, ಸಿಎಂ ಯೋಗಿ ಆದಿತ್ಯನಾಥ ಹತ್ಯೆ ಮಾಡುವ ಬೆದರಿಕೆ..!

ಲಕ್ನೋ: ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಮತ್ತೊಮ್ಮೆ ಬಾಂಬ್ ಬೆದರಿಕೆ ಬಂದಿದೆ. ದೀಪಕ್ ಶರ್ಮಾ ಎಂಬ ಹೆಸರಿನ ಟ್ವಿಟರ್ ಖಾತೆಯಿಂದ ಉತ್ತರ ಪ್ರದೇಶದ 112 ಕಂಟ್ರೋಲ್ ರೂಮ್‌ನ ಟ್ವಿಟರ್ ಹ್ಯಾಂಡಲ್‌ನಲ್ಲಿ ದೀಪಾವಳಿ ದಿನದಂದು ಈ ಬೆದರಿಕೆ ಹಾಕಲಾಗಿದೆ. ಈ ಬಗ್ಗೆ ಮಾಹಿತಿ ಸಿಕ್ಕಿದ್ದು, ಪೊಲೀಸ್ ಇಲಾಖೆಯಲ್ಲಿ ಸಂಚಲನ ಮೂಡಿದೆ. ಕ್ರೈಂ … Continued

ಮಹಾಮಳೆಗೆ ಚೆನ್ನೈ ತತ್ತರ..: ಅಗತ್ಯ ಸೇವೆ ಹೊರತುಪಡಿ ಸರ್ಕಾರಿ ಕಚೇರಿಗಳಿಗೆ, ಶಾಲಾ- ಕಾಲೇಜುಗಳಿಗೆ ರಜೆ ಘೋಷಣೆ, ಖಾಸಗಿ ಕಂಪನಿ ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ಮಾಡಲು ಮನವಿ

ಚೆನ್ನೈ: ಮಹಾಮಳೆಗೆ ತಮಿಳುನಾಡು ತತ್ತರಿಸಿದೆ. ರಾತ್ರಿಯಿಡೀ ಸುರಿದ ಭಾರೀ ಮಳೆಗೆ ಚೆನ್ನೈ ಸೇರಿದಂತೆ ಹಲವು ನಗರಗಳು ಜಲಾವೃತವಾಗಿದೆ. ತಮಿಳುನಾಡಿನ ರಾಜಧಾನಿಯಾದ ಚೆನ್ನೈನಲ್ಲಿ 2015 ರ ನಂತರ ಇದೇ ಮೊದಲ ಭಾರಿಗೆ ಅತೀ ಹೆಚ್ಚು ಮಳೆಯಾಗಿದೆ.ಅಗತ್ಯ ಸೇವೆಗಳನ್ನು ಒದಗಿಸುವ ಇಲಾಖೆಗಳನ್ನು ಹೊರತುಪಡಿಸಿ ರಾಜ್ಯವು ಸರ್ಕಾರಿ ಕಚೇರಿಗಳಿಗೆ ರಜೆ ಘೋಷಿಸಿದೆ. ಶಾಲಾ-ಕಾಲೇಜುಗಳಿಗೆ ಎರಡು ರಜೆ ಘೋಷಿಸಲಾಗಿದೆ. ತಮಿಳುನಾಡಿನಲ್ಲಿ ಇನ್ನೂ … Continued