ವಿದ್ಯಾರ್ಥಿಗಳಿಗೆ ಒಳ್ಳೆಯ ಸುದ್ದಿ…ಶೈಕ್ಷಣಿಕ ಸಾಲದ ಗ್ಯಾರಂಟಿ ಮಿತಿ 10 ಲಕ್ಷ ರೂ.ಗಳಿಗೆ ಹೆಚ್ಚಿಸಲು ಚಿಂತನೆ, ಶೀಘ್ರ ಅಧಿಸೂಚನೆ ಸಾಧ್ಯತೆ : ವರದಿ

ನವದೆಹಲಿ: ಶಿಕ್ಷಣ ಸಾಲದ ಗ್ಯಾರಂಟಿ ಮಿತಿಯನ್ನು 7.5 ಲಕ್ಷದಿಂದ 10 ಲಕ್ಷ ರೂ.ಗಳಿಗೆ ಹೆಚ್ಚಿಸಲು ಭಾರತ ಸರ್ಕಾರ ಚಿಂತನೆ ನಡೆಸಿದೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ. ಈ ಕ್ರಮವು ಮಂಜೂರಾತಿ ಮತ್ತು ಸಾಲದ ಅರ್ಜಿಗಳ ತಿರಸ್ಕಾರದ ವಿಳಂಬದ ದೂರುಗಳ ನಡುವೆಯೂ ಸಹ ವಿತರಣೆಯನ್ನು ಹೆಚ್ಚಿಸಲು ಸಾರ್ವಜನಿಕ ವಲಯದ ಬ್ಯಾಂಕುಗಳಿಗೆ (PSBs) ಒತ್ತು ನೀಡುವ ಪ್ರಯತ್ನ … Continued

ದೆಹಲಿ ಮಹಿಳಾ ಆಯೋಗದ ಕಚೇರಿಯಲ್ಲಿ ಗುಜರಾತ್ ಎಎಪಿ ಮುಖ್ಯಸ್ಥ ಗೋಪಾಲ್ ಇಟಾಲಿಯಾ ಬಂಧನ

ನವದೆಹಲಿ: ಎಎಪಿ ಗುಜರಾತ್ ಮುಖ್ಯಸ್ಥ ಗೋಪಾಲ್ ಇಟಾಲಿಯಾ ಅವರನ್ನು ದೆಹಲಿ ಪೊಲೀಸರು ಗುರುವಾರ ರಾಷ್ಟ್ರೀಯ ಮಹಿಳಾ ಆಯೋಗದ (ಎನ್‌ಸಿಡಬ್ಲ್ಯೂ) ಕಚೇರಿಯಿಂದ ಬಂಧಿಸಿದ್ದಾರೆ. ಪ್ರಧಾನಿ ಮೋದಿಯವರಿಗೆ ಅವಹೇಳನಕಾರಿ ಭಾಷೆಯನ್ನು ಬಳಸುತ್ತಿರುವ ವೀಡಿಯೊಗೆ ಸಂಬಂಧಿಸಿದಂತೆ ಎನ್‌ಸಿಡಬ್ಲ್ಯು ಇಟಾಲಿಯಾಗೆ ಸಮನ್ಸ್ ನೀಡಿತ್ತು. ಇಟಾಲಿಯಾ ಬಂಧನವನ್ನು ದೃಢೀಕರಿಸಿದ ದೆಹಲಿ ಪೋಲೀಸ್ ಮೂಲ “ನಾವು ಅವರ ವಿರುದ್ಧ ರಾಷ್ಟ್ರೀಯ ಮಹಿಳಾ ಆಯೋಗದಿಂದ ದೂರು … Continued

ಮತ್ತೊಂದು ಶಂಕಿತ ನರಬಲಿ ಪ್ರಕರಣ ಬೆಳಕಿಗೆ: ದಂಪತಿ ನವರಾತ್ರಿಯಂದು 14 ವರ್ಷದ ಮಗಳನ್ನೇ ‘ಬಲಿʼ ನೀಡಿದ ಶಂಕೆ…!

ಶಂಕಿತ ‘ನರಬಲಿ’ ಪ್ರಕರಣದಲ್ಲಿ ಗುಜರಾತಿನ , ಗಿರ್ ಸೋಮನಾಥ್ ಜಿಲ್ಲೆಯ ಧಾರಾ ಗಿರ್ ಗ್ರಾಮದ ಕುಟುಂಬವೊಂದರ ಮೇಲೆ ತಮ್ಮ 14 ವರ್ಷದ ಮಗಳನ್ನು ಬಲಿ ನೀಡಿದ ಆರೋಪ ಕೇಳಿಬಂದಿದೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ. ನವರಾತ್ರಿಯ ಆಥಂ (ಅಕ್ಟೋಬರ್ 3) ರಂದು ಆರ್ಥಿಕ ಲಾಭಕ್ಕಾಗಿ ಕುಟುಂಬವು ತಮ್ಮ ಮಗಳನ್ನು ‘ಬಲಿ’ ಕೊಟ್ಟಿದೆ ಎಂದು ಗ್ರಾಮಸ್ಥರು ಪೊಲೀಸರಿಗೆ … Continued

ಉತ್ತರಾಖಂಡದಲ್ಲಿ ನಡೆದ ಉತ್ತರ ಪ್ರದೇಶ ಪೊಲೀಸರು-ಗಣಿಗಾರಿಕೆ ಮಾಫಿಯಾ ನಡುವೆ ಗುಂಡಿನ ಚಕಮಕಿ ವೇಳೆ ಬಿಜೆಪಿ ನಾಯಕನ ಪತ್ನಿ ಸಾವು

ಉತ್ತರಾಖಂಡದ ಜಸ್ಪುರ್‌ನಲ್ಲಿ ಬುಧವಾರ ನಡೆದ ಕ್ರಾಸ್‌ಫೈರಿಂಗ್‌ನಲ್ಲಿ ಭಾರತೀಯ ಜನತಾ ಪಕ್ಷದ (ಬಿಜೆಪಿ) ನಾಯಕ ಗುರ್ತಾಜ್ ಭುಲ್ಲರ್ ಅವರ ಪತ್ನಿ ಗುರುಪ್ರೀತ್ ಕೌರ್ ಅವರು ಸಾವಿಗೀಡಾಗಿದ್ದಾರೆ. ಗಣಿಗಾರಿಕೆ ಮಾಫಿಯಾ ಜಾಫರ್‌ನನ್ನು ಹಿಡಿಯಲು ಉತ್ತರ ಪ್ರದೇಶ ಪೊಲೀಸರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಯುತ್ತಿದೆ. ಮೊರಾದಾಬಾದ್ ಪೊಲೀಸರು ಜಾಫರ್‌ನನ್ನು ಹಿಡಿಯಲು ಜಸ್ಪುರ್‌ಗೆ ತೆರಳಿದಾಗ ಗುಂಡಿನ ಚಕಮಕಿ ನಡೆದಿದೆ. ಇದು ಇಬ್ಬರು ಪೊಲೀಸ್ … Continued

ವಾಟ್ಸಾಪ್ ಗ್ರೂಪ್‌ನಲ್ಲಿ ಶೀಘ್ರದಲ್ಲೇ 1,024 ಜನರನ್ನು ಸೇರಿಸಲು ಅವಕಾಶ: ವರದಿ

ಮೆಟಾ-ಮಾಲೀಕತ್ವದ ತ್ವರಿತ ಸಂದೇಶ ಕಳುಹಿಸುವ ಅಪ್ಲಿಕೇಶನ್ ವಾಟ್ಸ್‌ಆಪ್‌ (WhatsApp) ಶೀಘ್ರದಲ್ಲೇ ತನ್ನ ಬಳಕೆದಾರರಿಗೆ ದೊಡ್ಡ ಗ್ರೂಪ್‌ಗಳನ್ನು ಕ್ರಿಯೇಟ್ ಮಾಡಲು ಅನುಮತಿಸುತ್ತದೆ ಎಂದು ವರದಿಯಾಗಿದೆ. ಈ ಸಂಖ್ಯೆಯನ್ನು 1024 ಗೆ ಹೆಚ್ಚಿಸಲು ಈಗ ವಾಟ್ಸಾಪ್ ಸಂಸ್ಥೆ ಕೆಲಸ ಮಾಡುತ್ತಿದೆ. WaBetaInfo ವರದಿಯ ಪ್ರಕಾರ, ವಾಟ್ಸ್‌ಆಪ್‌ ಬಳಕೆದಾರರು ಭವಿಷ್ಯದಲ್ಲಿ ಪ್ರತಿಗುಂಪಿನಲ್ಲಿ 1,024 ಸದಸ್ಯರನ್ನು ಸೇರಿಸಲು ಸಾಧ್ಯವಾಗುತ್ತದೆ. ಈ ವರ್ಷದ … Continued

ನೋಟು ಅಮಾನ್ಯೀಕರಣ : ಈ ಬಗ್ಗೆ ಅಫಿಡವಿಟ್ ಸಲ್ಲಿಸಲು ಕೇಂದ್ರ, ಆರ್‌ಬಿಐಗೆ ಸೂಚಿಸಿದ ಸುಪ್ರೀಂಕೋರ್ಟ್

ನವದೆಹಲಿ: 500 ಮತ್ತು 1,000 ರೂಪಾಯಿ ನೋಟುಗಳ ಅಮಾನ್ಯೀಕರಣದ ನಿರ್ಧಾರದ ಬಗ್ಗೆ ಅಫಿಡವಿಟ್ ಸಲ್ಲಿಸಲು ಕೇಂದ್ರ ಮತ್ತು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಗೆ ಸುಪ್ರೀಂ ಕೋರ್ಟ್ ಸಂವಿಧಾನ ಪೀಠ ಬುಧವಾರ ಸೂಚಿಸಿದ್ದು, ಆರ್‌ಬಿಐ (RBI) ಕಾಯಿದೆಯ ಸೆಕ್ಷನ್ 26 ಅಡಿಯಲ್ಲಿ ಸರ್ಕಾರಕ್ಕೆ ಹಾಗೆ ಮಾಡಲು ಅಧಿಕಾರವಿದೆಯೇ ಎಂದು ಪರಿಶೀಲಿಸುವುದಾಗಿ ಹೇಳಿದೆ. ನ್ಯಾಯಮೂರ್ತಿಗಳಾದ ಎಸ್‌ಎ ನಜೀರ್, … Continued

ಕಾಶಿ ದೇವಸ್ಥಾನದಲ್ಲಿ ಗಿಟಾರ್‌ನೊಂದಿಗೆ ಹನುಮಾನ್ ಚಾಲೀಸಾ ಪಠಣ ಮಾಡುತ್ತಿರುವ ವಿದೇಶಿಯರು | ವೀಕ್ಷಿಸಿ

ಹನುಮಾನ್ ಚಾಲೀಸಾವನ್ನು ಪಠಿಸುವುದರಿಂದ ಹನುಮಂತನ ಕೃಪಾಶೀರ್ವಾದ ಪಡೆಯಲು ಹಾಗೂ ದುಷ್ಟಶಕ್ತಿಗಳು ಮತ್ತು ನಕಾರಾತ್ಮಕ ಶಕ್ತಿಯನ್ನು ದೂರವಿಡಲು ಸಹಾಯ ಮಾಡುತ್ತದೆ ಎಂದು ನಂಬಲಾಗಿದೆ. ಹನುಮಾನ್ ಚಾಲೀಸಾವನ್ನು ಅತ್ಯಂತ ಸಮರ್ಪಣೆಯಿಂದ ಓದುವವರು ತಮ್ಮ ಪ್ರಯತ್ನಗಳಲ್ಲಿ ಅಡೆತಡೆಗಳನ್ನು ನಿವಾರಿಸುವ ಭಗವಾನ್ ಹನುಮಂತನ ದಿವ್ಯ ರಕ್ಷಣೆಯನ್ನು ಆಹ್ವಾನಿಸುತ್ತಾರೆ ಎಂದು ನಂಬಲಾಗಿದೆ. ಭಾರತೀಯ ಸಂಪ್ರದಾಯಗಳು, ಸಂಸ್ಕೃತಿ ಮತ್ತು ಧಾರ್ಮಿಕ ನಂಬಿಕೆಗಳು ಅನೇಕ ವಿದೇಶಿಯರನ್ನು … Continued

ಎಎಪಿಗೆ ಹಿನ್ನಡೆ: ಬಿಜೆಪಿಯ ತಜೀಂದರ್ ಬಗ್ಗಾ, ಕುಮಾರ ವಿಶ್ವಾಸ್ ವಿರುದ್ಧದ ಎಫ್‌ಐಆರ್‌ ರದ್ದುಗೊಳಿಸಿದ ಪಂಜಾಬ್-ಹರಿಯಾಣ ಹೈಕೋರ್ಟ್

ಚಂಡೀಗಡ: ಮಾಜಿ ಎಎಪಿ ನಾಯಕ ಕುಮಾರ ವಿಶ್ವಾಸ ಮತ್ತು ಬಿಜೆಪಿ ನಾಯಕ ತಜೀಂದರ್ ಪಾಲ್ ಸಿಂಗ್ ಬಗ್ಗಾ ವಿರುದ್ಧ ದಾಖಲಾಗಿದ್ದ ಎರಡು ಪ್ರತ್ಯೇಕ ಎಫ್‌ಐಆರ್‌ಗಳನ್ನು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಬುಧವಾರ ರದ್ದುಗೊಳಿಸಿದೆ. ಬಗ್ಗಾ ವಿರುದ್ಧದ ಕ್ರಿಮಿನಲ್ ಮೊಕದ್ದಮೆಯನ್ನು ಮುಂದುವರಿಸುವುದು ‘ಕಾನೂನಿನ ಪ್ರಕ್ರಿಯೆಯ ದುರುಪಯೋಗ’ ಎಂದು ನ್ಯಾಯಾಲಯ ಹೇಳಿದೆ. ಎಎಪಿ ಸಂಚಾಲಕ ಅರವಿಂದ್ ಕೇಜ್ರಿವಾಲ್ ವಿರುದ್ಧ … Continued

ಕರ್ನಾಟಕ ಹಿಜಾಬ್ ನಿಷೇಧ : ನಾಳೆ ಸುಪ್ರೀಂಕೋರ್ಟ್ ತೀರ್ಪು ಪ್ರಕಟ ಸಾಧ್ಯತೆ

ನವದೆಹಲಿ: ಹಿಜಾಬ್ ನಿಷೇಧ ಕುರಿತ ತೀರ್ಪನ್ನು ಸುಪ್ರೀಂ ಕೋರ್ಟ್‌ ತೀರ್ಪು ಗುರುವಾರ (ಅಕ್ಟೋಬರ್ 13) ಪ್ರಕಟವಾಗುವ ಸಾಧ್ಯತೆ ಇದೆ ಎಂದು ವರದಿಗಳು ತಿಳಿಸಿವೆ. ಕರ್ನಾಟಕ ಸರ್ಕಾರವು ರಾಜ್ಯದ ಶಾಲೆ – ಕಾಲೇಜುಗಳಲ್ಲಿ ಹಿಜಾಬ್ ನಿಷೇಧಿಸಿ ಆದೇಶ ಹೊರಡಿಸಿತ್ತು. ಕರ್ನಾಟಕ ಸರ್ಕಾರದ ನಿರ್ಧಾರವನ್ನು ಕರ್ನಾಟಕ ಹೈಕೋರ್ಟ್‌ ಎತ್ತಿ ಹಿಡಿದಿತ್ತು. ಬಳಿಕ ಹೈಕೋರ್ಟ್‌ ಆದೇಶ ಪ್ರಶ್ನಿಸಿ ವಿದ್ಯಾರ್ಥಿನಿಯರು ಸುಪ್ರೀಂಕೋರ್ಟ್‌ … Continued

ಎಲ್‌ಪಿಜಿ ಮಾರಾಟದಲ್ಲಿ ನಷ್ಟ: 3 ತೈಲ ಮಾರಾಟ ಕಂಪನಿಗಳಿಗೆ ₹22,000 ಕೋಟಿ ಪರಿಹಾರ ನೀಡಿದ ಕೇಂದ್ರ ಸರ್ಕಾರ

ನವದೆಹಲಿ: ಕಳೆದ ಎರಡು ವರ್ಷಗಳಲ್ಲಿ ಗೃಹಬಳಕೆಯ ಅಡುಗೆ ಅನಿಲ ಸಿಲಿಂಡರ್‌ ಮಾರಾಟದಿಂದ ಇಂಧನ ಚಿಲ್ಲರೆ ಮಾರಾಟ ಸಂಸ್ಥೆಗಳಿಗೆ ಉಂಟಾಗಿರುವ ನಷ್ಟ ಸರಿದೂಗಿಸಲು ಕೇಂದ್ರ ಸರ್ಕಾರ ತೀರ್ಮಾನಿಸಿದ್ದು, ಸರ್ಕಾರಿ ಸ್ವಾಮ್ಯದ ಮೂರು ಕಂಪನಿಗಳಿಗೆ 22,000 ಕೋಟಿ ರೂ.ಗಳನ್ನು ಒಂದು ಸಲದ ಅನುದಾನವಾಗಿ ನೀಡಲು ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ಮಾಹಿತಿ ಮತ್ತು ಪ್ರಸಾರ ಸಚಿವ ಅನುರಾಗ್ ಠಾಕೂರ್ … Continued