ಅಂತಾರಾಷ್ಟ್ರೀಯ ಪುಸ್ತಕ ಮೇಳದಲ್ಲಿ ಪಿಕ್​ ಪಾಕೆಟ್​ ಮಾಡಿ ಸಿಕ್ಕಿಬಿದ್ದ ನಟಿ..! ವ್ಯಾನಿಟಿ ಬ್ಯಾಗ್ ನಲ್ಲಿ ಸಿಕ್ಕಿತು ಹಲವರ ಪರ್ಸ್

ಕೋಲ್ಕತ್ತಾ: ಪಿಕ್​ ಪಾಕೆಟ್​ ಮಾಡಿದ ಆರೋಪದ ಮೇಲೆ ಪಶ್ಚಿಮ ಬಂಗಾಳದ ನಟಿ ರೂಪಾ ದತ್ತ ಅವರನ್ನು ಕೋಲ್ಕತ್ತಾ ಪೊಲೀಸರು ಬಂಧಿಸಿದ್ದಾರೆ. ಅಂತಾರಾಷ್ಟ್ರೀಯ ಕೋಲ್ಕತ್ತಾ ಪುಸ್ತಕ ಮೇಳದ ಸ್ಥಳದಲ್ಲಿ ಕಳ್ಳತನ ಮಾಡಿದ ಆರೋಪದ ಮೇಲೆ ನಟಿ ರೂಪಾ ದತ್ತಾ ಅವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕೋಲ್ಕತ್ತಾದ ಬಿಧನ್ ​ನಗರ ಉತ್ತರ ಪೊಲೀಸ್​ ಠಾಣೆಯ ಪ್ರಕಾರ, ಕಸದ … Continued

ಕೆನಡಾದಲ್ಲಿ ರಸ್ತೆ ಅಪಘಾತದಲ್ಲಿ ಐವರು ಭಾರತೀಯ ವಿದ್ಯಾರ್ಥಿಗಳ ಸಾವು

ನವದೆಹಲಿ: ಸ್ಥಳೀಯ ಕಾಲಮಾನ ಶನಿವಾರ ಮುಂಜಾನೆ 3:45ಕ್ಕೆ ಕೆನಡಾದ ಟೊರೊಂಟೊ ಬಳಿ ನಡೆದ ರಸ್ತೆ ಅಪಘಾತದಲ್ಲಿ ಐವರು ಭಾರತೀಯ ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ. ಇನ್ನಿಬ್ಬರು ವಿದ್ಯಾರ್ಥಿಗಳು ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕೆನಡಾದ ಸುದ್ದಿ ವಾಹಿನಿ CP24 ಪ್ರಕಾರ, ವಿದ್ಯಾರ್ಥಿಗಳು ಪ್ರಯಾಣಿಸುತ್ತಿದ್ದ ಪ್ಯಾಸೆಂಜರ್ ವ್ಯಾನ್ ಒಂಟಾರಿಯೊದಲ್ಲಿನ ಹೆದ್ದಾರಿಯಲ್ಲಿ ಟ್ರಾಕ್ಟರ್-ಟ್ರೇಲರ್‌ಗೆ ಡಿಕ್ಕಿ ಹೊಡೆದಿದೆ. ಮೃತರನ್ನು ಹರ್‌ಪ್ರೀತ್ ಸಿಂಗ್, ಜಸ್ಪಿಂದರ್ … Continued

ಸಿಸಿಎಸ್ ಸಭೆ: ಉಕ್ರೇನ್‌ನಲ್ಲಿ ಹತ್ಯೆಗೀಡಾದ ಭಾರತೀಯ ವಿದ್ಯಾರ್ಥಿ ಮೃತದೇಹ ಮರಳಿ ತರಲು ಸರ್ವ ಪ್ರಯತ್ನಕ್ಕೆ ಪ್ರಧಾನಿ ಸೂಚನೆ

ನವದೆಹಲಿ: ಉಕ್ರೇನ್‌ನಲ್ಲಿ ನಡೆಯುತ್ತಿರುವ ಸಂಘರ್ಷದ ಸಂದರ್ಭದಲ್ಲಿ ಭಾರತದ ಭದ್ರತಾ ಸನ್ನದ್ಧತೆ ಮತ್ತು ಚಾಲ್ತಿಯಲ್ಲಿರುವ ಜಾಗತಿಕ ಸನ್ನಿವೇಶವನ್ನು ಪರಿಶೀಲಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಭದ್ರತಾ ಕ್ಯಾಬಿನೆಟ್ (ಸಿಸಿಎಸ್) ಸಭೆಯ ಅಧ್ಯಕ್ಷತೆ ವಹಿಸಿದ್ದರು ಎಂದು ಅಧಿಕೃತ ಪ್ರಕಟಣೆ ಭಾನುವಾರ ತಿಳಿಸಿದೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ವಿದೇಶಾಂಗ ಸಚಿವ ಎಸ್ … Continued

ಸೋನಿಯಾ ಗಾಂಧಿ ಎಐಸಿಸಿ ಅಧ್ಯಕ್ಷರಾಗಿ ಮುಂದುವರಿಕೆ…: 4 ತಾಸುಗಳ ಪೋಸ್ಟ್‌ ಮಾರ್ಟಮ್‌ ನಂತರ ಕಾಂಗ್ರೆಸ್ ನಿರ್ಧಾರ

ನವದೆಹಲಿ: ಇತ್ತೀಚೆಗೆ ನಡೆದ ರಾಜ್ಯ ಚುನಾವಣೆಯಲ್ಲಿ ಪಕ್ಷದ ಹೀನಾಯ ಸೋಲಿನ ದೃಷ್ಟಿಯಿಂದ ನಾಯಕತ್ವ ಬದಲಾವಣೆಯ ಬೇಡಿಕೆಗಳ ನಡುವೆ ಇಂದು, ಭಾನುವಾರ ಸಂಜೆ ನಾಲ್ಕೂವರೆ ಗಂಟೆಗಳ ಕಾಲ ನಡೆದ ಬೃಹತ್ ಸಭೆಯ ನಂತರ ಸೋನಿಯಾ ಗಾಂಧಿ ಅವರು ಪಕ್ಷದ ಅಧ್ಯಕ್ಷರಾಗಿ ಉಳಿಯಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಪಕ್ಷವು ಶೀಘ್ರದಲ್ಲೇ ಚಿಂತನ ಶಿಬಿರ ನಡೆಸಲಿದೆ ಹಾಗೂ ಕಾಂಗ್ರೆಸ್ ಹಂಗಾಮಿ … Continued

ಉಕ್ರೇನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಪೋಲೆಂಡ್‌ಗೆ ತಾತ್ಕಾಲಿಕ ಸ್ಥಳಾಂತರ

ನವದೆಹಲಿ: ಯುಕ್ರೇನ್‌ನ ಯುದ್ಧಪೀಡಿತ ದೇಶದಲ್ಲಿ ಭದ್ರತಾ ಪರಿಸ್ಥಿತಿ ವೇಗವಾಗಿ ಹದಗೆಡುತ್ತಿರುವ ಹಿನ್ನೆಲೆಯಲ್ಲಿ ಭಾರತವು ತನ್ನ ರಾಯಭಾರ ಕಚೇರಿಯನ್ನು ಅಲ್ಲಿಂದ ತಾತ್ಕಾಲಿಕವಾಗಿ ಪೋಲೆಂಡ್‌ಗೆ ಸ್ಥಳಾಂತರಿಸಲು ನಿರ್ಧರಿಸಿದೆ. ಉಕ್ರೇನಿಯನ್ ರಾಜಧಾನಿ ಕೀವ್ ಮತ್ತು ಇತರ ಹಲವಾರು ಪ್ರಮುಖ ನಗರಗಳ ಮೇಲೆ ರಷ್ಯಾದ ದಾಳಿಗಳು ಹೆಚ್ಚುತ್ತಿರುವ ಮಧ್ಯೆ ಈ ನಿರ್ಧಾರವು ಬಂದಿದೆ. ದೇಶದ ಪಶ್ಚಿಮ ಭಾಗಗಳಲ್ಲಿನ ದಾಳಿಗಳು ಸೇರಿದಂತೆ ಉಕ್ರೇನ್‌ನಲ್ಲಿ … Continued

ಮಣಿಪುರದಲ್ಲಿ ಬಿಜೆಪಿ ಸರ್ಕಾರ ರಚನೆಗೆ ಜೆಡಿಯು ಬೆಂಬಲ

ಇಂಫಾಲ: ಮಣಿಪುರದ ನಡೆದ ಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿ ಗೆಲುವು ಸಾಧಿಸಿರುವ ಬಿಜೆಪಿಗೆ ಜೆಡಿಯು ಬೆಂಬಲ ಘೋಷಿಸಿದೆ. ನಾಗಾ ಪೀಪಲ್ಸ್ ಫ್ರಂಟ್ (ಎನ್‌ಪಿಎಫ್) ಜೊತೆ ಬಿಜೆಪಿ ಮೈತ್ರಿಯನ್ನು ಮುಂದುವರೆಸಲಿದೆ ಎಂದು ಹಾಲಿ ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ ತಿಳಿಸಿದ್ದಾರೆ. ಈ ನಡುವೆ ಮಣಿಪುರದಲ್ಲಿ ಶೇ 10.77ರಷ್ಟು ಮತ ಗಳಿಕೆ ಮೂಲಕ 6 ಸ್ಥಾನ ಗೆದ್ದಿರುವ ಜನತಾ ದಳ(ಸಂಯುಕ್ತ) … Continued

ಭೋಪಾಲ್‌ನಲ್ಲಿ 4 ಶಂಕಿತ ಭಯೋತ್ಪಾದಕರ ಬಂಧನ, ಸ್ಫೋಟಕಗಳು ವಶ

ಭೋಪಾಲ: ಗುಪ್ತಚರ ಮಾಹಿತಿಯ ಆಧಾರದ ಮೇಲೆ ಭಾನುವಾರ ಭೋಪಾಲ್‌ನಲ್ಲಿ ಕೇಂದ್ರ ಏಜೆನ್ಸಿಗಳು ಮತ್ತು ಮಧ್ಯಪ್ರದೇಶದ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಜಂಟಿ ಭದ್ರತಾ ಕಾರ್ಯಾಚರಣೆಯಲ್ಲಿ ಕನಿಷ್ಠ 4 ಭಯೋತ್ಪಾದಕರನ್ನು ಬಂಧಿಸಲಾಗಿದೆ. ಸಂಪೂರ್ಣ ಗೌಪ್ಯತೆಯನ್ನು ಕಾಪಾಡಿಕೊಂಡು ಕಾರ್ಯಾಚರಣೆ ನಡೆಸಲಾಗಿದ್ದು, ಶಂಕಿತರನ್ನು ಅಜ್ಞಾತ ಸ್ಥಳದಲ್ಲಿ ವಿಚಾರಣೆ ನಡೆಸಲಾಗುತ್ತಿದೆ. ಭೋಪಾಲ್‌ನ ಐಶ್‌ಬಾಗ್ ಪೊಲೀಸ್ ಠಾಣೆಯಿಂದ 200 ಮೀಟರ್ ದೂರದಲ್ಲಿರುವ ಫಾತಿಮಾ … Continued

800 ಭಾರತೀಯರನ್ನು ಉಕ್ರೇನ್‌ನಿಂದ ವಾಪಸ್ ಕರೆತಂದ ಮಹಿಳಾ ಪೈಲಟ್‌

ಕೊಲ್ಕತ್ತಾ: ಯುದ್ಧ ಪೀಡಿತ ಉಕ್ರೇನ್‌ನಿಂದ ಭಾರತೀಯರನ್ನು ಕರೆತರುವ ’ಆಪರೇಷನ್ ಗಂಗಾ’ ಕಾರ್ಯಾಚರಣೆಯಲ್ಲಿ ಕೋಲ್ಕತ್ತಾದ ಯುವ ಮಹಿಳಾ ಪೈಲೆಟ್ ಮಹಾಶ್ವೇತ ಚಕ್ರವರ್ತಿ ಗಮನ ಸೆಳೆದಿದ್ದು ಉಕ್ರೇನ್‌ನಿಂದ ಸುಮಾರು ೮೦೦ ಭಾರತೀಯರನ್ನು ದೇಶಕ್ಕೆ ಕರೆ ತಂದಿದ್ದಾರೆ. ಆಪರೇಷನ್ ಗಂಗಾ ಕಾರ್ಯಾಚರಣೆಯ ವಿಮಾನದ ಪೈಲೆಟ್ ಆಗಿರುವ ೨೪ ವರ್ಷದ ಮಹಾಶ್ವೇತ ಚಕ್ರವರ್ತಿ ಪಶ್ಚಿಮ ಬಂಗಾಳದ ಬಿಜೆಪಿ ಮಹಿಳಾ ಮೋರ್ಚಾದ ಮುಖ್ಯಸ್ಥೆ … Continued

ಶಾಲೆಯಲ್ಲಿ ಇನ್ನೂ ಕಸ ಗುಡಿಸುವ ಕೆಲಸ ಮಾಡುತ್ತಿರುವ ಪಂಜಾಬ್ ಸಿಎಂ ಚನ್ನಿ ಸೋಲಿಸಿದ ಎಎಪಿ ಶಾಸಕರ ತಾಯಿ..!

ಬರ್ನಾಲಾ (ಪಂಜಾಬ್): ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ನಿರ್ಗಮಿತ ಮುಖ್ಯಮಂತ್ರಿ ಚರಂಜಿತ್ ಸಿಂಗ್ ಚನ್ನಿ ಅವರನ್ನು ಸೋಲಿಸಿದ ಆಮ್ ಆದ್ಮಿ ಪಕ್ಷದ ಶಾಸಕ ಲಾಭ್‌ ಸಿಂಗ್ ಉಗೋಕೆ ಅವರ ತಾಯಿ ಬಲದೇವ್ ಕೌರ್ ಅವರು ತಮ್ಮ ಮಗ ಗೆದ್ದ ನಂತರವೂ ಶನಿವಾರ ಸರ್ಕಾರಿ ಶಾಲೆಯಲ್ಲಿ ಸ್ವೀಪರ್ ಆಗಿ ಕೆಲಸ ಮುಂದುವರೆಸಿದ್ದಾರೆ. ಭಾದೌರ್ ಕ್ಷೇತ್ರದಿಂದ ಚನ್ನಿ ಅವರನ್ನು 37,550 … Continued

ಭಾರತದ ಗಡಿಯಲ್ಲಿ ಹೆಪ್ಪುಗಟ್ಟಿದ ಹಿಮದಲ್ಲಿ ಕಬಡ್ಡಿ ಆಡಿದ ಸೈನಿಕರು: ವೀಡಿಯೋ ವೈರಲ್

ಶಿಮ್ಲಾ: ಇಂಡೋ-ಟಿಬೆಟಿಯನ್ ಗಡಿಯಲ್ಲಿ ಪೊಲೀಸ್ (ಐಟಿಬಿಪಿ) ಸಿಬ್ಬಂದಿ ತಮ್ಮ ಬಿಡುವಿನ ಸಮಯದಲ್ಲಿ ಕಬಡ್ಡಿ ಆಡಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಈ ವೀಡಿಯೋದಲ್ಲಿ ಹಿಮಾಚಲ ಪ್ರದೇಶದ ಹಿಮಾಲಯ ಪರ್ವತಗಳ ಬಾಋತದ ಗಡಿಯಲ್ಲಿ ದೇಶ ಕಾಯುವ ಯೋಧರು ದಪ್ಪ ಉಣ್ಣೆಯ ಬಟ್ಟೆ ಧರಿಸಿ ಕಬಡ್ಡಿ ಆಡುತ್ತಿರುವುದನ್ನು ಕಾಣಬಹುದಾಗಿದೆ. ಈ ವೀಡಿಯೋವನ್ನು ಐಟಿಬಿಪಿ ತನ್ನ ಟ್ವಿಟ್ಟರ್ ಖಾತೆಯಲ್ಲಿ … Continued