ಸೈನ್ಯ ಸೇರಲು ಮಧ್ಯರಾತ್ರಿ ಓಡುವ 19 ವರ್ಷದ ಹುಡುಗನ ವೀಡಿಯೊ ವೈರಲ್ ಆದ ನಂತರ ಸಹಾಯಕ್ಕೆ ಮುಂದೆ ಬಂದ ನಿವೃತ್ತ ಲೆಫ್ಟಿನೆಂಟ್‌ ಜನರಲ್

ನವದೆಹಲಿ: ಸೈನ್ಯಕ್ಕೆ ಸೇರುವ ಸಲುವಾಗಿ ಮಧ್ಯ ರಾತ್ರಿ ಪ್ರತಿದಿನ ತನ್ನ ಕೆಲಸ ಶಿಫ್ಟ್‌ ಮುಗಿಸಿಕೊಂಡು ನೋಯ್ಡಾದ ರಸ್ತೆಯಲ್ಲಿ ಹತ್ತು ಕಿಮೀ ಓಡುವ ಉತ್ತರಾಖಂಡದ 19 ವರ್ಷದ ಹದಿಹರೆಯದ ಹುಡುಗನ ಸ್ಫೂರ್ತಿದಾಯಕ ವೀಡಿಯೊ ಸೋಮವಾರ, ಮಾರ್ಚ್ 21ರಂದು ಇಡೀ ದೇಶವು ಸಾಮಾಜಿಕ ಮಾಧ್ಯಮದಲ್ಲಿ ಕಾಳ್ಗಿಚ್ಚಿನಂತೆ ಹರಡಿ ಲಕ್ಷಾಂತರ ಜನರನ್ನು ತಲುಪಿದೆ. ನಿನ್ನೆಯವರೆಗೆ, ಉತ್ತರಾಖಂಡದ ಅಲ್ಮೋರಾದ ಹುಡುಗ ಪ್ರದೀಪ್ … Continued

ಪ್ರಧಾನಿ ಮೋದಿ- ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮಾರಿಸನ್ ಶೃಂಗಸಭೆಗೆ ಮೊದಲು ಆಸ್ಟ್ರೇಲಿಯಾದಿಂದ ಮರಳಿ ಭಾರತಕ್ಕೆ ಬಂದ 29 ಪುರಾತನ ವಸ್ತುಗಳು

ಸೋಮವಾರ ಪ್ರಧಾನಿ ಮೋದಿ ಮತ್ತು ಆಸ್ಟ್ರೇಲಿಯನ್ ಪ್ರಧಾನಿ ಸ್ಕಾಟ್ ಮಾರಿಸನ್ ನಡುವಿನ ವರ್ಚುವಲ್ ಸಭೆಯ ಮೊದಲು, ಭಾರತದ 29 ಪುರಾತನ ವಸ್ತುಗಳನ್ನು ಆಸ್ಟ್ರೇಲಿಯಾದಿಂದ ಭಾರತಕ್ಕೆ ವಾಪಸ್‌ ಕಳುಹಿಸಲಾಗಿದೆ. ಪುರಾತನ ವಸ್ತುಗಳಲ್ಲಿ ಶಿವ ಮತ್ತು ಅವನ ಶಿಷ್ಯರು, ಶಕ್ತಿ, ಭಗವಾನ್ ವಿಷ್ಣು ಮತ್ತು ಅವನ ರೂಪಗಳು, ಜೈನ ಸಂಪ್ರದಾಯಗಳು, ಭಾವಚಿತ್ರಗಳು ಮತ್ತು ಅಲಂಕಾರಿಕ ವಸ್ತುಗಳು ಸೇರಿವೆ. ಈ … Continued

ನೋಯ್ಡಾದಲ್ಲಿ ಮಧ್ಯರಾತ್ರಿಯಲ್ಲಿ ಪ್ರತಿದಿನ ರಸ್ತೆಯಲ್ಲಿ ಈ ಹುಡುಗ 10 ಕಿಮೀ ಓಡ್ತಾನೆ…! ಕಾರಣ ಕೇಳಿದ್ರೆ ನೀವೇ ಅಚ್ಚರಿ ಪಡ್ತೀರಾ..ವೀಕ್ಷಿಸಿ

ನವದೆಹಲಿ: ಮಧ್ಯರಾತ್ರಿ ನೋಯ್ಡಾ ರಸ್ತೆಯಲ್ಲಿ 19 ವರ್ಷದ ಹುಡುಗನೊಬ್ಬ ಓಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಲಕ್ಷಾಂತರ ವೀಕ್ಷಣೆಗೆ ಒಳಗಾಗಿದೆ. ಪ್ರತಿದಿನ ಖಾಲಿ ಇರುವ ನೋಯ್ಡಾ ಬೀದಿಯಲ್ಲಿ ಹುಡುಗ ಓಡುವುದರ ಹಿಂದಿನ ಕಾರಣವೇನು ಎಂದು ತಿಳಿದರೆ ಅದು ಸ್ಫೂರ್ತಿದಾಯಕವಾಗಿದೆ. ನಮ್ಮ ಜೀವನದಲ್ಲಿನ ಸಣ್ಣದೊಂದು ಅಸ್ವಸ್ಥತೆಯ ಬಗ್ಗೆ ನಾವು ಹೇಳಿಕೊಳ್ಳುತ್ತಿರುವಾಗ, ಇಲ್ಲಿ ಉತ್ತರಾಖಂಡದ ಹುಡುಗ ಪ್ರದೀಪ್ ಮೆಹ್ರಾ ತನ್ನ … Continued

ಜಮ್ಮು-ಕಾಶ್ಮೀರದ ಲೆಫ್ಟಿನೆಂಟ್‌ ಗವರ್ನರ್‌ ಸಲಹೆಗಾರ ಫಾರೂಕ್ ಖಾನ್ ರಾಜೀನಾಮೆ, ಬಿಜೆಪಿಯಲ್ಲಿ ಪ್ರಮುಖ ಹುದ್ದೆ ನೀಡುವ ಸಾಧ್ಯತೆ

ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್‌ ಗವರ್ನರ್‌ ಅವರ ಸಲಹೆಗಾರ ಫಾರೂಕ್ ಖಾನ್ ರಾಜೀನಾಮೆ ನೀಡಿದ್ದು, ಬಿಜೆಪಿಯಲ್ಲಿ ಅವರು ದೊಡ್ಡ ಜವಾಬ್ದಾರಿ ಪಡೆಯುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ. ಜಮ್ಮು ಮತ್ತು ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರ ಸಲಹೆಗಾರ ಫಾರೂಕ್ ಖಾನ್ ಭಾನುವಾರ ಸಂಜೆ ರಾಜೀನಾಮೆ ಸಲ್ಲಿಸಿದ್ದಾರೆ. 1990ರ ದಶಕದಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ … Continued

ಯುರೋಪಿನ ಅತಿ ದೊಡ್ಡ ಉಕ್ಕಿನ ಘಟಕ ರಷ್ಯಾ-ಉಕ್ರೇನ್ ಯುದ್ಧದಲ್ಲಿ ನಾಶ…ವೀಕ್ಷಿಸಿ

ಕೀವ್‌ (ಉಕ್ರೇನ್): ಯುರೋಪ್‌ನ ಅತಿದೊಡ್ಡ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಗಳಲ್ಲಿ ಒಂದಾದ ಅಜೋವ್‌ಸ್ಟಾಲ್, ಉಕ್ರೇನ್ ಬಂದರು ನಗರವಾದ ಮರಿಯುಪೋಲ್‌ಗೆ ರಷ್ಯಾದ ಪಡೆಗಳು ಮುತ್ತಿಗೆ ಹಾಕಿದ್ದರಿಂದ ತೀವ್ರವಾಗಿ ಹಾನಿಗೊಂಡಿದೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ. ಯುರೋಪ್‌ನಲ್ಲಿನ ಅತಿದೊಡ್ಡ ಲೋಹ ಘಟಕಗಳಲ್ಲಿ ಒಂದು ನಾಶವಾಗಿದೆ. ಉಕ್ರೇನ್‌ಗೆ ಆರ್ಥಿಕವಾಗಿ ನಷ್ಟವು ದೊಡ್ಡದಾಗಿದೆ. ಸುತ್ತಮುತ್ತಲಿನ ಪರಿಸರವು ಧ್ವಂಸಗೊಂಡಿದೆ ಎಂದು ಉಕ್ರೇನಿಯನ್ ಶಾಸಕಿ … Continued

ತೈಲ ರಾಜತಾಂತ್ರಿಕತೆಯ ನಂತರ, ರಷ್ಯಾದಿಂದ ಈಗ ಭಾರತೀಯ ಔಷಧೀಯ ಕಂಪನಿಗಳಿಗೆ ಉತ್ತೇಜನ

ನವದೆಹಲಿ: ನವದೆಹಯಲ್ಲಿರುವ ರಷ್ಯಾದ ರಾಯಭಾರಿ ಡೆನಿಸ್ ಅಲಿಪೋವ್ ಅವರು ಮಾಸ್ಕೋದಿಂದ ಹೊರಡುವ ಪಾಶ್ಚಿಮಾತ್ಯ ತಯಾರಕರ ಸ್ಥಾನವನ್ನು ಭಾರತೀಯ ಔಷಧ ಕಂಪನಿಗಳು ಬದಲಿಸಬಹುದು ಹೇಳಿದ್ದಾರೆ ಎಂದು  ವರದಿಗಳು ತಿಳಿಸಿವೆ. ರಷ್ಯಾದ ಮಾರುಕಟ್ಟೆಯಿಂದ ಅನೇಕ ಪಾಶ್ಚಿಮಾತ್ಯ ಕಂಪನಿಗಳ ಹಿಂತೆಗೆದುಕೊಳ್ಳುವಿಕೆಯಿಂದಾಗಿ ಖಾಲಿಯಾದ ಆ ಜಾಗವನ್ನು ವಾಸ್ತವವಾಗಿ ಅನೇಕ ಕೈಗಾರಿಕೆಗಳಲ್ಲಿ, ನಿರ್ದಿಷ್ಟವಾಗಿ, ಔಷಧೀಯ ಕಂಪನಿಗಳನ್ನು ಭಾರತೀಯ ಕಂಪನಿಗಳು ಬದಲಿಸಬಹುದು ಎಂದು ರಷ್ಯಾದ … Continued

ಬೃಹತ್ ಬಳಕೆದಾರರಿಗೆ ಡೀಸೆಲ್ ಬೆಲೆ ಲೀಟರ್‌ಗೆ 25 ರೂ.ಗಳಷ್ಟು ಹೆಚ್ಚಳ

ನವದೆಹಲಿ: ಮುಂಬಯಿ : ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆಯಲ್ಲಿ ಶೇಕಡಾ 40 ರಷ್ಟು ಏರಿಕೆಗೆ ಅನುಗುಣವಾಗಿ ಬೃಹತ್ ಬಳಕೆದಾರರಿಗೆ ಸಗಟು ಬಳಕೆದಾರರಿಗೆ ಮಾರಾಟವಾಗುವ ಡೀಸೆಲ್ ಬೆಲೆಯನ್ನು ಲೀಟರ್‌ಗೆ ಸುಮಾರು 25 ರೂಪಾಯಿಗಳಷ್ಟು ಹೆಚ್ಚಿಸಲಾಗಿದೆ, ಆದರೆ ಪೆಟ್ರೋಲ್ ಬಂಕ್ ಗಳಲ್ಲಿ ಚಿಲ್ಲರೆ ದರಗಳು ಬದಲಾಗದೆ ಉಳಿದಿವೆ ಎಂದು ಮೂಲಗಳು ತಿಳಿಸಿವೆ. ಈ ಹಿಂದೆಯೇ ಸುಳಿವು ಇದ್ದಂತೆ ತೈಲ … Continued

ಕಾಂಗ್ರೆಸ್ ಸೇರಿದಂತೆ ಎಲ್ಲ ರಾಜಕೀಯ ಪಕ್ಷಗಳಿಂದಲೂ ಸಮಾಜದಲ್ಲಿ ಒಡಕು ಸೃಷ್ಟಿ: ಕಾಂಗ್ರೆಸ್‌ ನಾಯಕ ಗುಲಾಂ ನಬಿ ಆಜಾದ್

ನವದೆಹಲಿ: ಕಾಂಗ್ರೆಸ್ ಸೇರಿದಂತೆ ರಾಜಕೀಯ ಪಕ್ಷಗಳು ವಿವಿಧ ಕಾರಣಗಳಿಗಾಗಿ ಜನರಲ್ಲಿ ಒಡಕು ಮೂಡಿಸುತ್ತವೆ ಎಂದು ಹೇಳಿದ ಮಾಜಿ ಕೇಂದ್ರ ಸಚಿವ ಹಾಗೂ ಕಾಂಗ್ರೆಸ್‌ ಜಿ 23 ಗುಂಪಿನ ನಾಯಕ ಗುಲಾಂ ನಬಿ ಆಜಾದ್ ಭಾನುವಾರ ಹೇಳಿದ್ದಾರೆ. 1990ರ ಕಾಶ್ಮೀರಿ ಪಂಡಿತರ ವಲಸೆ ಮತ್ತು ಹತ್ಯೆಗಳನ್ನು ಉಲ್ಲೇಖಿಸಿ, ಇದಕ್ಕೆ ಪಾಕಿಸ್ತಾನ ಮತ್ತು ಕಣಿವೆಯಲ್ಲಿ ನಡೆದ ಭಯೋತ್ಪಾದನೆ ಕಾರಣ … Continued

ಕೋವಿಶೀಲ್ಡ್ ಲಸಿಕೆ ಮೊದಲ ಡೋಸ್‌ ಪಡೆದ 8-16 ವಾರಗಳ ನಡುವೆ 2ನೇ ಡೋಸ್‌ ತೆಗೆದುಕೊಳ್ಳಬಹುದೆಂದು ಶಿಫಾರಸು: ವರದಿ

ನವದೆಹಲಿ: ಕೋವಿಶೀಲ್ಡ್‌ ಲಸಿಕೆ ಎರಡು ಡೋಸ್‌ಗಳ ನಡುವಿನ ಅವಧಿ ಕಡಿಮೆ ಮಾಡುತ್ತಾ, ಇಮ್ಯುನೈಸೇಶನ್‌ ರಾಷ್ಟ್ರೀಯ ತಾಂತ್ರಿಕ ಸಲಹಾ ಗುಂಪು (NTAGI) ಕೋವಿಡ್ -19 ಲಸಿಕೆಯ ಎರಡನೇ ಡೋಸ್ ಅನ್ನು ಈಗ ಮೊದಲ ಡೋಸ್‌ ತೆಗೆದುಕೊಂಡ 8ರಿಂದ 16 ವಾರಗಳ ನಂತರ ತೆಗೆದುಕೊಳ್ಳಬಹುದು ಎಂದು ಹೇಳಿದೆ. ರಾಷ್ಟ್ರೀಯ ಕೋವಿಡ್-19 ವ್ಯಾಕ್ಸಿನೇಷನ್ ಸ್ಟ್ರಾಟಜಿ ಅಡಿಯಲ್ಲಿ ಪ್ರಸ್ತುತ, ಕೋವಿಶೀಲ್ಡ್‌ನ ಎರಡನೇ … Continued

ವಿಷ ಪ್ರಾಶನದ ಭಯ: 1,000 ವೈಯಕ್ತಿಕ ಸಿಬ್ಬಂದಿ ವಜಾ ಮಾಡಿದ ರಷ್ಯಾ ಅಧ್ಯಕ್ಷ ಪುತಿನ್..!

ಮಾಸ್ಕೋ; ಉಕ್ರೇನ್ ಮೇಲೆ ಯುದ್ಧ ಸಾರಿರುವ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುತಿನ್ ಗೆ ಸ್ವತಃ ಪ್ರಾಣದ ಹೆಸರಿಕೆ ಇರುವಂತೆ ತೋರುತ್ತಿದ್ದು, ಇದೇ ಕಾರಣಕ್ಕೆ ಅವರು ಕಳೆದ ಒಂದು ತಿಂಗಳ ಅವಧಿಯಲ್ಲಿ ಅವರು 1,000 ರ ವೈಯುಕ್ತಿಕ ಸಿಬ್ಬಂದಿ ಬದಲಿಸಿದ್ದಾರೆ ಎಂದು ವರದಿಗಳು ತಿಳಿಸಿವೆ. ಒಂದು ವರದಿಯ ಪ್ರಕಾರ, ವ್ಲಾದಿಮಿರ್ ಪುತಿನ್ ಅವರಿಗೆ ತನ್ನ ಭವಿಷ್ಯದ ಕ್ರಮಗಳು … Continued