ಮದುವೆಯಿಂದ ವಾಪಸ್ಸಾಗುತ್ತಿದ್ದ ವೇಳೆ ವಾಹನ ಕಂದಕಕ್ಕೆ ಬಿದ್ದು 11 ಮಂದಿ ಸಾವು

ರುದ್ರಾಪುರ: ಮದುವೆ ಸಮಾರಂಭದಲ್ಲಿ ಭಾಗವಹಿಸಿ ವಾಪಸ್ಸಾಗುತ್ತಿದ್ದ ವೇಳೆ ವಾಹನ ಕಮರಿಗೆ ಬಿದ್ದು 11 ಮಂದಿ ಮೃತಪಟ್ಟ ದಾರುಣ ಘಟನೆ ಸೋಮವಾರ ರಾತ್ರಿ ಚಂಪಾವತ್ ಜಿಲ್ಲೆಯಲ್ಲಿ ನಡೆದಿದೆ ಎಂದು ವರದಿಯಾಗಿದೆ. ಪೊಲೀಸರು ಮತ್ತು ರಕ್ಷಣಾ ತಂಡಗಳು ಪ್ರಸ್ತುತ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯನ್ನು ನಡೆಸುತ್ತಿವೆ. ಇಲ್ಲಿ ರಸ್ತೆ ಅಪಘಾತದಲ್ಲಿ 11 ಮಂದಿ ಮೃತಪಟ್ಟಿದ್ದು, ಅಪಘಾತ ನಡೆದ ಸ್ಥಳದಲ್ಲಿ … Continued

ರಷ್ಯಾ-ಉಕ್ರೇನ್ ಬಿಕ್ಕಟ್ಟು ಉಲ್ಬಣ: ಪೂರ್ವ ಉಕ್ರೇನ್‌ಗೆ ತೆರಳಲು ರಷ್ಯಾ ಸೈನ್ಯಕ್ಕೆ ಅಧ್ಯಕ್ಷ ಪುಟಿನ್‌ ಆದೇಶ, ಹೆಚ್ಚಿದ ಯುದ್ಧದ ಭಯ

ನವದೆಹಲಿ: ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಪೂರ್ವ ಉಕ್ರೇನ್‌ನ ಎರಡು ಮಾಸ್ಕೋ ಬೆಂಬಲಿತ ಬಂಡಾಯ ಪ್ರದೇಶಗಳಾದ ಡೊನೆಟ್ಸ್ಕ್ ಮತ್ತು ಲುಗಾನ್ಸ್ಕ್ ಅನ್ನು ಡೊನೆಟ್ಸ್ಕ್ ಪೀಪಲ್ಸ್ ರಿಪಬ್ಲಿಕ್ ಮತ್ತು ಲುಹಾನ್ಸ್ಕ್ ಪೀಪಲ್ಸ್ ರಿಪಬ್ಲಿಕ್ ಎಂದು ಮಾನ್ಯತೆ ನೀಡಿದ್ದಾರೆ ಮತ್ತು ನಂತರ ಪ್ರತ್ಯೇಕತಾವಾದಿಗಳ ಹಿಡಿತದಲ್ಲಿರುವ ಪ್ರದೇಶಗಳಲ್ಲಿ ಸೈನ್ಯದ ನಿಯೋಜನೆಗೆ ಆದೇಶಿಸಿದ್ದಾರೆ. ಇದು ಸ ರಷ್ಯಾದ ಆಕ್ರಮಣದ ಭಯಕ್ಕೆ … Continued

ಭಾರತೀಯರನ್ನು ಕರೆತರಲು ಉಕ್ರೇನ್‌ಗೆ ಹೊರಟ ಏರ್‌ ಇಂಡಿಯಾ ವಿಮಾನ

ನವದೆಹಲಿ: ಉಕ್ರೇನ್‌ ಮೇಲೆ ರಷ್ಯಾದ ಸಂಭವನೀಯ ದಾಳಿ ಭೀತಿಯ ಹಿನ್ನೆಲೆಯಲ್ಲಿ ಭಾರತದ ಪ್ರಜೆಗಳನ್ನು ಮೂರು ವಿಶೇಷ ವಿಮಾನಗಳ ಮೂಲಕ ಕರೆತರಲು ಸರ್ಕಾರ ಮುಂದಾಗಿದೆ. ಹದಗೆಡುತ್ತಿರುವ ರಷ್ಯಾ-ಉಕ್ರೇನ್ ಬಿಕ್ಕಟ್ಟಿನ ಮಧ್ಯೆ, ಸಿಲುಕಿರುವ ಭಾರತೀಯ ಪ್ರಜೆಗಳನ್ನು ಮರಳಿ ಕರೆತರಲು ಉಕ್ರೇನ್‌ಗೆ ಇಂದು (ಫೆಬ್ರವರಿ 22) ಮತ್ತು ಶನಿವಾರ (ಫೆಬ್ರವರಿ 26) ನಡುವೆ ಮೂರು ವಿಮಾನಗಳನ್ನು ನಿರ್ವಹಿಸುವುದಾಗಿ ಟಾಟಾ ಒಡೆತನದ … Continued

ರಾಷ್ಟ್ರಧ್ವಜದ ಬಗ್ಗೆ ವಿವಾದಾತ್ಮಕ ಹೇಳಿಕೆ: ಈಶ್ವರಪ್ಪನವರಿಗೆ ಕರೆ ಮಾಡಿ ಛೀಮಾರಿ ಹಾಕಿದ್ದೇನೆ ಎಂದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ

ನವದೆಹಲಿ: ಕೇಸರಿ ಧ್ವಜದ ಕುರಿತು ಸಚಿವ ಕೆ. ಎಸ್. ಈಶ್ವರಪ್ಪ ಅವರ ಹೇಳಿಕೆಯ ಕುರಿತು ಕರ್ನಾಟಕದಲ್ಲಿ ರಾಜಕೀಯ ಜಿದ್ದಾಜಿದ್ದಿನ ನಡುವೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ವಿವಾದಾತ್ಮಕ ಹೇಳಿಕೆ ಬಗ್ಗೆ ಈಶ್ವರಪ್ಪ ಅವರಿಗೆ ಛೀಮಾರಿ ಹಾಕಿದ್ದೇನೆ ಎಂದು ಹೇಳಿದ್ದಾರೆ. ಇಂಡಿಯಾ ಟುಡೆಗೆ ನೀಡಿದ ವಿಶೇಷ ಸಂದರ್ಶನದಲ್ಲಿ ನಡ್ಡಾ … Continued

12-18 ವರ್ಷ ವಯಸ್ಸಿನ ಮಕ್ಕಳ ತುರ್ತು ಬಳಕೆಗೆ ಕೊರ್ಬೆವ್ಯಾಕ್ಸ್‌ ಕೋವಿಡ್‌-19 ಲಸಿಕೆಗೆ ಡಿಸಿಜಿಐ ಅನುಮೋದನೆ

ನವದೆಹಲಿ: ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (DCGI) 12-18 ವರ್ಷ ವಯಸ್ಸಿನ ಮಕ್ಕಳಿಗೆ ಬಳಸಲು ಬಯೋಲಾಜಿಕಲ್ ಇ ಕಂಪನಿಯ ಕೊರ್ಬೆವ್ಯಾಕ್ಸ್‌ (Corbevax) ಕೋವಿಡ್‌-19 ಲಸಿಕೆಗೆ ತುರ್ತು ಬಳಕೆಯ ಅಧಿಕಾರವನ್ನು ನೀಡಿದೆ. ಮಕ್ಕಳ ಮೇಲೆ ಬಳಸಲು ಅನುಮೋದಿಸಲಾದ ಎರಡನೇ ಲಸಿಕೆ ಇದಾಗಿದ್ದು, ಕಳೆದ ವರ್ಷ ಡಿಸೆಂಬರ್ ಅಂತ್ಯದಲ್ಲಿ 12 ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳಿಗೆ ಬಳಸಲು ಡಿಸಿಜಿಐ … Continued

ಕುಟುಂಬ ಸದಸ್ಯರಿಗೆ ತಡವಾಗಿ ಊಟ ಬಡಿಸಿದ್ದಕ್ಕೆ ಕೋಪಗೊಂಡ ಮದುಮಗ ಮದುವೆ ಬೇಡವೆಂದು ಮಂಟಪದಿಂದ ಪರಾರಿ..!

ಪಾಟ್ನಾ: ಬಿಹಾರದ ಪುರ್ನಿಯಾದಲ್ಲಿ ತನ್ನ ಕುಟುಂಬ ಸದಸ್ಯರಿಗೆ ತಡವಾಗಿ ಊಟ ಬಡಿಸಿದ ಕಾರಣಕ್ಕೆ ವರ ಮಹಾಶಯ ಮದುವೆಯಾಗಲು ನಿರಾಕರಿಸಿದ ಘಟನೆ ನಡೆದಿದೆ ಎಂದು ವರದಿಯಾಗಿದೆ..! ವರದಿಯ ಪ್ರಕಾರ, ತಡವಾಗಿ ಊಟ ಬಡಿಸಿದ ವಿಷಯವು ಉಲ್ಬಣಗೊಂಡಿತು ಮತ್ತು ವರನು ವಧುವಿನ ತಂದೆಯಿಂದ ಪಡೆದ ಎಲ್ಲಾ ಉಡುಗೊರೆಗಳನ್ನು ಹಿಂದಿರುಗಿಸಿ ಮದುವೆ ಮಂಟಪದಿಂದ ಜಾಗ ಖಾಲಿ ಮಾಡಿದ್ದಾನೆ ಎಂದು ಇಂಡಿಯಾ … Continued

ಡೊರಾಂಡಾ ಮೇವು ಹಗರಣ: ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್‌ಗೆ 5 ವರ್ಷ ಜೈಲು ಶಿಕ್ಷೆ

ರಾಂಚಿ: ಮೇವು ಹಗರಣಕ್ಕೆ ಸಂಬಂಧಿಸಿದ ಡೊರಾಂಡಾ ಖಜಾನೆ ಪ್ರಕರಣದಲ್ಲಿ ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ ಯಾದವ್ ಅವರಿಗೆ ಐದು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ಅಲ್ಲದೆ, 60 ಲಕ್ಷ ರೂ.ಗಳ ಶುಲ್ಕವನ್ನೂ ಪಾವತಿಸಬೇಕು ಎಂದು ನ್ಯಾಯಾಲಯ ಸೋಮವಾರ ತೀರ್ಪು ನೀಡಿದೆ. ವಿಶೇಷ ಕೇಂದ್ರೀಯ ತನಿಖಾ ದಳ (ಸಿಬಿಐ) ನ್ಯಾಯಾಲಯವು ಇಂದು ಸೋಮವಾರ ಶಿಕ್ಷೆಯ ಪ್ರಮಾಣವನ್ನು … Continued

ಕಣ್ಣೂರಿನಲ್ಲಿ ಸಿಪಿಐ(ಎಂ) ಕಾರ್ಯಕರ್ತನ ಹತ್ಯೆ

ಕಣ್ಣೂರು: ಉತ್ತರ ಕೇರಳ ಜಿಲ್ಲೆಯ ಕಣ್ಣೂರಿನ ಪುನ್ನೋಲ್‌ನಲ್ಲಿ ಸೋಮವಾರ ಮುಂಜಾನೆ ಸಿಪಿಐ(ಎಂ) ಕಾರ್ಯಕರ್ತನೊಬ್ಬನನ್ನು ಹತ್ಯೆ ಮಾಡಲಾಗಿದೆ. ಕೊರಂಬಿಲ್ ಹರಿದಾಸನ್ (54) ಅವರು ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದಾಗ ಬೆಳಗಿನ ಜಾವ 1:30ರ ಸುಮಾರಿಗೆ ಅವರ ಮನೆಯ ಮುಂದೆ ದುಷ್ಕರ್ಮಿಗಳ ಗುಂಪೊಂದು ದಾಳಿ ನಡೆಸಿದೆ. ಶಬ್ದ ಕೇಳಿ ಸ್ಥಳಕ್ಕಾಗಮಿಸಿದ ಕೆಲವು ಸ್ಥಳೀಯರು ಅವರನ್ನು ತಲಶ್ಶೇರಿಯ ಆಸ್ಪತ್ರೆಗೆ ಕರೆದೊಯ್ದರೂ … Continued

ವ್ಯಕ್ತಿಯ ಹೊಟ್ಟೆಯಲ್ಲಿತ್ತು ಟೀ ಗ್ಲಾಸ್‌…! ಅನ್ನನಾಳ ಬಹಳ ಚಿಕ್ಕದು, ಅದು ಹೊಟ್ಟೆಯೊಳಗೆ ಹೇಗೆ ಹೋಯ್ತು ಎಂದು ವೈದ್ಯರಿಗೇ ಆಶ್ವರ್ಯ..!!

ಮುಜಾಫರ್‌ಪುರ (ಬಿಹಾರ): ತೀವ್ರ ಮಲಬದ್ಧತೆ ಮತ್ತು ಹೊಟ್ಟೆ ನೋವಿನಿಂದ ಬಳಲುತ್ತಿದ್ದ 55 ವರ್ಷದ ವ್ಯಕ್ತಿಯೊಬ್ಬರಿಗೆ ಭಾನುವಾರ ಬಿಹಾರದ ಮುಜಾಫರ್‌ಪುರದಲ್ಲಿ ವೈದ್ಯರ ತಂಡ ಶಸ್ತ್ರಚಿಕಿತ್ಸೆ ನಡೆಸಿ ಅವರ ಕರುಳಿನಿಂದ ಗಾಜಿನ ಗ್ಲಾಸ್‌ ಅನ್ನು ಹೊರತೆಗೆದಿದೆ. ಪಟ್ಟಣದ ಮಾದಿಪುರ ಪ್ರದೇಶದ ಆಸ್ಪತ್ರೆ ವೈದ್ಯಕೀಯ ತಜ್ಞರು ಗಾಜಿನ ಗ್ಲಾಸ್‌ ರೋಗಿಯ ಹೊಟ್ಟೆಯೊಳಗೆ ಹೇಗೆ ಹೋಯಿತು ಎಂದು ಆಶ್ಚರ್ಯ ಪಡುತ್ತಿದ್ದಾರೆ. ಶಸ್ತ್ರಚಿಕಿತ್ಸಕರ … Continued

ಹಿಜಾಬ್‌ ವಿವಾದ: ಎಲ್ಲ ಧರ್ಮಗಳ ವಿದ್ಯಾರ್ಥಿಗಳು ಕಡ್ಡಾಯವಾಗಿ ಶಾಲಾ- ಕಾಲೇಜುಗಳು ಸೂಚಿಸಿದ ಡ್ರೆಸ್ ಕೋಡ್ ಪಾಲಿಸಬೇಕು ಎಂದ ಅಮಿತ್ ಶಾ

ನವದೆಹಲಿ: ವಿದ್ಯಾರ್ಥಿಗಳು ಯಾವುದೇ ಧರ್ಮದವರಾದರೂ ಶಾಲೆಗಳು ಮತ್ತು ಕಾಲೇಜುಗಳು ಸೂಚಿಸಿದ ಡ್ರೆಸ್ ಕೋಡ್ ಅನ್ನು ಎಲ್ಲಾ ವಿದ್ಯಾರ್ಥಿಗಳು ತ ಅನುಸರಿಸಬೇಕು ಎಂದು ಗೃಹ ಸಚಿವ ಅಮಿತ್ ಶಾ ಸೋಮವಾರ ಹೇಳಿದ್ದಾರೆ. ಸಿಎನ್‌ಎನ್ ನ್ಯೂಸ್ 18 ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅಮಿತ್‌ ಶಾ, ಶಾಲಾ-ಕಾಲೇಜುಗಳಲ್ಲಿ ಮಕ್ಕಳನ್ನು ಧರ್ಮಕ್ಕಿಂತ ಮಿಗಿಲಾಗಿ ನೋಡಬೇಕು. ತಮ್ಮ ತಮ್ಮ ಧರ್ಮ ಯಾವುದೇ … Continued